Bengaluru Resort: ರೆಸಾರ್ಟ್‌ನಲ್ಲಿ ತಿಂಗಳಾನುಗಟ್ಟಲೆ ತಂಗಿದ್ದ ವ್ಯಕ್ತಿ ₹3.2 ಲಕ್ಷ ಬಿಲ್ ಕೊಡದೇ ಪರಾರಿ..ಮುಂದೇನಾಯ್ತು?

ರೆಸಾರ್ಟ್ ಆಡಳಿತ ಮಂಡಳಿ ಪ್ರಕಾರ, ತಂಗಿದ್ದ ಅತಿಥಿ ಆಂಧ್ರಪ್ರದೇಶದ ಪುಟ್ಟಪರ್ತಿ ನಿವಾಸಿ ಕೆ ರಾಜೇಶ್ ಎಂದು ಗುರುತಿಸಲಾಗಿದೆ. ರಾಜೇಶ್‌ ಜುಲೈನಿಂದ ಇದೇ ರೆಸಾರ್ಟ್‌ ನಲ್ಲಿ ನೆಲೆಸಿದ್ದರು. ಅಲ್ಲದೇ ಸೆಪ್ಟೆಂಬರ್‌ನಲ್ಲಿ, ಉದ್ಯಮಿ ಅಲ್ಲಿಯವರೆಗಿನ ಎಲ್ಲಾ ಬಿಲ್‌ಗಳನ್ನು ಅಂದರೆ ಸುಮಾರು 8 ಲಕ್ಷ ರೂಪಾಯಿಗಳನ್ನು ಪಾವತಿಸಿದ್ದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಎಷ್ಟೋ ಶ್ರೀಮಂತ ಜನರು ಮನೆಯಿದ್ದರೂ ಕೆಲವೊಮ್ಮೆ ಬೇಜಾರು ಕಳೆಯಲು ರೆಸಾರ್ಟ್‌(Resort) ಗಳಲ್ಲಿ ವಾಸ್ತವ್ಯ ಹೂಡುತ್ತಾರೆ. ಇನ್ನು ಕೆಲವರು ಹುಟ್ಟುಹಬ್ಬ ಆಚರಿಸಿಕೊಳ್ಳಲು, ಪಿಕ್‌ ನಿಕ್‌ ಗಾಗಿ, ರೇವ್‌ ಪಾರ್ಟಿ, ಮೋಜುಮಸ್ತಿ ಮಾಡಲು ರೆಸಾರ್ಟ್‌ ಗಳನ್ನು ಆರಿಸಿಕೊಳ್ಳುವುದು ಸಹಜ, ಆದರೆ ಇಲ್ಲೋಬ್ಬ ಮಾರಾಯ ತಿಂಗಳು ಗಟ್ಟಲೇ ರೆಸಾರ್ಟ್‌ ನಲ್ಲಿ ವಾಸ್ತವ್ಯ ಹೂಡಿ ಬಿಲ್‌ ಕೊಡದೇ ಪರಾರಿಯಾಗಿದ್ದು, ರೆಸಾರ್ಟ್ ಮಾಲೀಕರಿಗೆ(Resort management,) ಲಕ್ಷಾಂತರ ರೂಪಾಯಿ ನಷ್ಟವಾದ ಹಿನ್ನಲೆಯಲ್ಲಿ ಕೊನೆಗೆ ದಾರಿ ಕಾಣದೇ ಪೊಲೀಸ್‌ ಮೊರೆ ಹೋದ ಘಟನೆ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿರುವ ಐಷಾರಾಮಿ ( Resort in Devanahalli)‌ ರೆಸಾರ್ಟ್‌ನಲ್ಲಿ ತಿಂಗಳುಗಟ್ಟಲೆ ತಂಗಿದ್ದ ಅತಿಥಿಯೊಬ್ಬರು ಇತ್ತೀಚೆಗೆ ಬಿಲ್ ಪಾವತಿಸದೆ (without paying the bill.)ಪರಾರಿಯಾಗಿರುವ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

  ಇದನ್ನು ಓದಿ:Hotel Food Price Hike: ಇಂದಿನಿಂದ ಹೋಟೆಲ್,ರೆಸ್ಟೋರೆಂಟ್ ಗಳಲ್ಲಿ ಬೆಲೆ ಏರಿಕೆ: ನಿಮ್ಮಿಷ್ಟದ ತಿಂಡಿ ಬೆಲೆ ಎಷ್ಟಾಗಿದೆ ಗೊತ್ತಾ?

  ರೂ 3.2 ಲಕ್ಷ ಬಿಲ್ ನೀಡದೇ ಪರಾರಿ
  ರೆಸಾರ್ಟ್ ಆಡಳಿತ ಮಂಡಳಿ ಪ್ರಕಾರ, ತಂಗಿದ್ದ ಅತಿಥಿ ಆಂಧ್ರಪ್ರದೇಶದ ಪುಟ್ಟಪರ್ತಿ ನಿವಾಸಿ ಕೆ ರಾಜೇಶ್ ಎಂದು ಗುರುತಿಸಲಾಗಿದೆ, ರಾಜೇಶ್‌ ಜುಲೈನಿಂದ ಇದೇ ರೆಸಾರ್ಟ್‌ ನಲ್ಲಿ ನೆಲೆಸಿದ್ದರು. ಅಲ್ಲದೇ ಸೆಪ್ಟೆಂಬರ್‌ನಲ್ಲಿ, ಉದ್ಯಮಿ ಅಲ್ಲಿಯವರೆಗಿನ ಎಲ್ಲಾ ಬಿಲ್‌ಗಳನ್ನು ಅಂದರೆ ಸುಮಾರು 8 ಲಕ್ಷ ರೂಪಾಯಿಗಳನ್ನು ಪಾವತಿಸಿದ್ದರು ಮತ್ತು ನಂತರ ಅಲ್ಲಿಯೇ ವಾಸ್ತವ್ಯ ಮುಂದುವರೆಸಿದ್ದರು. ಆದರೆ ನವೆಂಬರ್ ಎರಡನೇ ವಾರದಲ್ಲಿ ರಾಜೇಶ್ ರೆಸಾರ್ಟ್ ನಲ್ಲಿ 41 ದಿನ ತಂಗಿದ್ದಕ್ಕೆ ಸಂಬಂಧಿಸಿದ ರೂ 3.2 ಲಕ್ಷ ಬಿಲ್ ಪಾವತಿಸಿದೆ ಹಾಗೂ ಸಿಬ್ಬಂದಿಗೆ ತಿಳಿಸದೇ ಅಲ್ಲಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.

  ರಿಯಾಲ್ಟರ್ ಎಂದು ಪರಿಚಯಿಸಿಕೊಂಡ
  ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ರೆಸಾರ್ಟ್‌ನ ಮ್ಯಾನೇಜರ್ ಯಶವಂತ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ರಾಜೇಶ್ ತನ್ನನ್ನು ಆಂಧ್ರಪ್ರದೇಶ ಮತ್ತು ಬೆಂಗಳೂರಿನಲ್ಲಿ ಜಮೀನು ಹೊಂದಿರುವ ರಿಯಾಲ್ಟರ್ ಎಂದು ಪರಿಚಯಿಸಿಕೊಂಡಿದ್ದಾನೆ ಮತ್ತು ವಿವಿಧ ವ್ಯವಹಾರಗಳನ್ನು ನಡೆಸುತ್ತಿರುವುದಾಗಿ ಹೇಳಿಕೊಂಡಿದ್ದಾನೆ. ರೆಸಾರ್ಟ್ ಗೆ ರಾಜೇಶ್ 2020 ರ ಮಧ್ಯದಿಂದ ಸಾಮಾನ್ಯ ಗ್ರಾಹಕರಾಗಿದ್ದಾರೆ ಮತ್ತು ಆಗಾಗ್ಗೆ 3-4 ದಿನಗಳವರೆಗೆ ಒಂದೇ ಕೋಣೆಯಲ್ಲಿ ಇರುತ್ತಿದ್ದರು. ಒಂದೆರಡು ಬಾರಿ, ಅವರು ಒಂದು ಅಥವಾ ಎರಡು ತಿಂಗಳು ಇದ್ದರು. ಪ್ರತಿ ಬಾರಿಯೂ ಅವರು ಕೊಠಡಿಗಳಿಗೆ ಮತ್ತು ಆಹಾರದ ಬಿಲ್‌ಗಳನ್ನು ಮಿಸ್‌ ಮಾಡಿದೆ ಪಾವತಿಸುತ್ತಿದ್ದರು.

  ನ.11 ರಂದು ಕಾರಿನ ಹೊರಟ ರಾಜೇಶ್
  ಜುಲೈ 23 ರಂದು ಅವರು ದಿನದ ಬಾಡಿಗೆ 7,850 ರೂ.ವಿರುವ ಕೊಠಡಿಯ ಬಾಡಿಗೆಯ ಬಗ್ಗೆ ಕೇಳಿಕೊಂಡು, ಸೆಪ್ಟೆಂಬರ್ 30 ರವರೆಗಿನ ಎಲ್ಲಾ ಬಿಲ್ ಅನ್ನು ಕಟ್ಟಿದರು, ಮತ್ತು ವ್ಯಾಪಾರ ಉದ್ದೇಶಗಳಿಗಾಗಿ ತಮ್ಮ ವಾಸ್ತವ್ಯವನ್ನು ಮುಂದುವರೆಸುವುದಾಗಿ ಹೇಳಿದ್ದರು. ಹಳೆಯ ಗ್ರಾಹಕರಾಗಿರುವುದರಿಂದ ಮತ್ತು ಎಲ್ಲಾ ಬಿಲ್‌ ನ್ನು ಪಾವತಿ ಮಾಡಿದ್ದರಿಂದ ಯಾವುದೇ ಮುಂಗಡ ಹಣವನ್ನುಪಡೆಯದೇ ಉಳಿಯಲು ಅವರಿಗೆ ಅವಕಾಶ ನೀಡಲಾಯಿತು, ”ಎಂದು ಅವರು ತಿಳಿಸಿದರು. ಯಶವಂತ್ ಪ್ರಕಾರ, ನ.11 ರಂದು ರಾಜೇಶ್ ತನ್ನ ಕಾರಿನಲ್ಲಿ ರೆಸಾರ್ಟ್‌ನಿಂದ ಹೊರಟರು ಮತ್ತೆ ಅವರು ಹಿಂತಿರುಗಲಿಲ್ಲ ಎಂದು ಹೇಳಿದ್ದಾರೆ.

  ಇದನ್ನು ಓದಿ:Ice Cream Stick Idli: ಐಸ್​ ಕ್ರೀಂ ಕಡ್ಡಿಯಲ್ಲಿ ಇಡ್ಲಿ ತಿಂದಿದ್ದೀರಾ? ಬೆಂಗಳೂರಿನ ಹೋಟೆಲ್​ವೊಂದರ ವಿನೂತನ ಪ್ರಯೋಗ.. ಫೋಟೋ ವೈರಲ್​!

  ರೆಸಾರ್ಟ್ ಆಡಳಿತದ ದೂರಿನ ಆಧಾರದ ಮೇಲೆ, ರಾಜೇಶ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 406 ಮತ್ತು 420 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ರಾಜೇಶ್ ರೆಸಾರ್ಟ್‌ನಿಂದ ಪರಾರಿಯಾಗುವ ಮೊದಲು ಹೆಚ್ಚಿನ ಜನರಿಗೆ ವಂಚನೆ ಮಾಡಿರುವುದು ತನಿಖೆಯ ವೇಳೆ ಪೊಲೀಸರಿಗೆ ತಿಳಿದುಬಂದಿದೆ. ಕಾಲ್ ರೆಕಾರ್ಡ್ ವಿವರಗಳನ್ನು ತೆಗೆದುಕೊಂಡು, ನಾವು ಸುಮಾರು 10 ಜನರೊಂದಿಗೆ ಮಾತನಾಡಿದ್ದೇವೆ, ರೆಸಾರ್ಟ್‌ನಿಂದ ಹೊರಡುವ ಮೊದಲು ರಾಜೇಶ್ ಸಂಪರ್ಕದಲ್ಲಿದ್ದರು. ರಾಜೇಶ್ ವಿವಿಧ ರೀತಿಯಲ್ಲಿ ಹಣ ವಂಚಿಸಿದ್ದಾರೆ ಎಂದು ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.
  Published by:vanithasanjevani vanithasanjevani
  First published: