ಮಳೆ ನೀರು ಹಾರಿದ್ದಕ್ಕೆ ಫಾಲೋ ಮಾಡಿಕೊಂಡು ಬಂದು ಕಾರಿನಲ್ಲಿದ್ದವರ ಮೇಲೆ ಹಲ್ಲೆ

ಯುವಕನೊಬ್ಬ ರಸ್ತೆಯಲ್ಲಿ ಹೋಗುತ್ತಿದ್ದ ಕಾರೊಂದನ್ನು ಅಡ್ಡಗಟ್ಟಿ, ಕಾರಿನ ಬ್ಯಾನೆಟ್ ಮೇಲೆ ಕಾಲಿಟ್ಟು ದರ್ಪ ತೋರಿದ್ದಾನೆ. ಬಳಿಕ ಸೀದಾ ಚಾಲಕನ ಬಳಿ ಹೋದ ಅಸಾಮಿ ಕಾಲಿನಿಂದ ಚಾಲಕನಿಗೆ ಒದ್ದು,  ಮನಬಂದಂತೆ ಹಲ್ಲೆ ನಡೆಸಿದ್ದಾನೆ.

ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ

ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ

  • Share this:
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇತ್ತೀಚಿಗೆ ಹೊಡಿ ಬಡಿ ಪ್ರವೃತ್ತಿ ಹೆಚ್ಚಾಗುತ್ತಿದೆ. ಸಣ್ಣ ಪುಟ್ಟ ವಿಷಯಕ್ಕೂ ಪುಡಾರಿಗಳ ಗ್ಯಾಂಗ್ ಅಟ್ಯಾಕ್ ಮಾಡುತ್ತಿದ್ದು ಸಾರ್ವಜನಿಕರು ಬೆಚ್ಚಿ ಬೀಳುವಂತೆ ಮಾಡಿದೆ. ಅದೇ ರೀತಿ ಮದುವೆ ಮುಗಿಸಿ ಮನೆಗೆ ಬರುತ್ತಿದ್ದ ಫ್ಯಾಮಿಲಿ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ನಗರದಲ್ಲಿ ಪುಂಡರ ದರ್ಬಾರ್ ಗೆ ಕೊನೆಯೆ ಇಲ್ಲದಂತಾಗಿದೆ‌. ಸಣ್ಣ ಪುಟ್ಟ ವಿಚಾರಕ್ಕೂ ಹೊಡಿ ಬಡಿ ಅಂತ ಅಮಾಯಕರ ಮೇಲೆ ಹಲ್ಲೆ ನಡೆಸಿ ದರ್ಪ ತೋರುತ್ತಿದ್ದಾರೆ‌. ಹೀಗೆ ಕೆ ಜಿ ಹಳ್ಳಿಯ ಪಿಳ್ಳಣ್ಣ ಗಾರ್ಡನ್ ನಲ್ಲಿ ಕಾರು ಅಡ್ಡಗಟ್ಟಿದ ದುಷ್ಕರ್ಮಿಗಳು ಚಾಲಕ ಹಾಗೂ ಕಾರಿನಲ್ಲಿದ್ದವರ ಮೇಲೆ ಹಲ್ಲೆ ನಡೆಸಿದ್ದಾರೆ. ಕಿಡಿಗೇಡಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ನೋಡುಗರ ಮೈ ಜುಮ್ ಎನ್ನುವಂತೆ ಮಾಡಿದೆ.

ಯುವಕನೊಬ್ಬ ರಸ್ತೆಯಲ್ಲಿ ಹೋಗುತ್ತಿದ್ದ ಕಾರೊಂದನ್ನು ಅಡ್ಡಗಟ್ಟಿ, ಕಾರಿನ ಬ್ಯಾನೆಟ್ ಮೇಲೆ ಕಾಲಿಟ್ಟು ದರ್ಪ ತೋರಿದ್ದಾನೆ. ಬಳಿಕ ಸೀದಾ ಚಾಲಕನ ಬಳಿ ಹೋದ ಅಸಾಮಿ ಕಾಲಿನಿಂದ ಚಾಲಕನಿಗೆ ಒದ್ದು,  ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಹೀಗೆ ದುಷ್ಕರ್ಮಿಗಳ ಕೈಯಿಂದ ಹಲ್ಲೆಗೊಳಗಾದ ವ್ಯಕ್ತಿ ಪಿಳ್ಳಣ್ಣ ಗಾರ್ಡನ್ ನಿವಾಸಿ ಸೈಯದ್ ನೌಶದ್. ತನ್ನ ಅಕ್ಕನ ಮಗಳ ಮದುವೆ ಇದ್ದರಿಂದ ನೌಶದ್ ಕುಟುಂಬ ಸಮೇತ ಹೋಗಿ ವಾಪಸ್ ಬರ್ತಿದ್ದ. ಇನ್ನೇನು ಮನೆ ತಲುಪೋ ವೇಳೆ ರಸ್ತೆಯಲ್ಲಿ ಎದುರಾದ ಆರೇಳು ಜನ ದುಷ್ಕರ್ಮಿಗಳು ಕಾರು ತಡೆದು ನೌಶದ್ ಸೇರಿ ಕಾರಿನಲ್ಲಿದ್ದವರ ಮೇಲೆ ಹಲ್ಲೆ ನಡೆಸಿದ್ದಾರೆ.

ಇದನ್ನೂ ಓದಿ: ನೆಹರು ವಿಚಾರವಾಗಿ ಲಘುವಾಗಿ ಮಾತನಾಡೋದು ಸರಿಯಲ್ಲ: ಸಿ.ಟಿ.ರವಿಗೆ ಕುಮಾರಸ್ವಾಮಿ ತಿರುಗೇಟು

ದುಷ್ಕರ್ಮಿಗಳ ಹಲ್ಲೆಯಿಂದ ಕಾರು ಚಾಲಕ ನೌಶದ್, ಅವರ ತಂದೆ, ಮಾವ ಸೇರಿ ನಾಲ್ಕೈದು ಜನ ಗಾಯಗೊಂಡಿದ್ದಾರೆ. ಇನ್ನೂ ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿದ ಬಗ್ಗೆ ನೌಶದ್ ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಪೊಲೀಸರು ಎಫ್ಐಆರ್ ದಾಖಲು ಮಾಡಿಕೊಂಡು ಹಲ್ಲೆ ನಡೆಸಿದ ಅರ್ಜುನ್, ಏಪನ್ ಮತ್ತು ದೀನಾ ಎಂಬ ಮೂವರನ್ನ ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಸ್ಥಳೀಯ ಯುವಕರಾಗಿದ್ದು ಘಟನೆ ಬಳಿಕ ಕಾರು ಹಿಂಬಾಲಿಸಿ ಬಂದು ಅಡ್ಡಗಟ್ಟಿದ್ದರು ಎನ್ನಲಾಗಿದೆ.

ಇನ್ನೂ ಬಂಧಿತ ಆರೋಪಿಗಳನ್ನ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಘಟನೆ ಬಗ್ಗೆ ಬಾಯ್ಬಿಟ್ಟಿದ್ದು, ಅಂದು ರಾತ್ರಿ ಮಳೆ ಬೀಳುತ್ತಿದ್ದು ಕಾರಿನಲ್ಲಿ ಬರುವಾಗ ಮಳೆ ನೀರು ಆರೋಪಿಗಳ ಮೇಲೆ ಹಾರಿದ್ದರಿಂದ ಕೋಪಗೊಂಡು ಕಾರು ಪಾಲೋ ಮಾಡಿ ಬಂದಿದ್ದರಂತೆ. ಇದೇ ವಿಚಾರಕ್ಕೆ ಕಾರು ಅಡ್ಡಗಟ್ಟಿದ ದುಷ್ಕರ್ಮಿಗಳು ಮನಸೊ ಇಚ್ಚೆ ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದಾರೆ. ಸದ್ಯ ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ. ಅದೇನೇ ಮಳೆ ನೀರು ಮೈ ಮೇಲೆ ಎಗರಿಸಿದ್ರು ಅನ್ನೋ ಕಾರಣಕ್ಕೆ ವಯಸ್ಸಾದ ವ್ಯಕ್ತಿಗಳು ಸಹ ಎನ್ನದೆ ನಾಲ್ವರ ಮೇಲೆ ಹಲ್ಲೆ ನಡೆಸಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: