Mallikarjun Kharge: ಲೋಕಸಭೆ ಚುನಾವಣೆಯಲ್ಲಿ ನನ್ನ ಸೋಲಿಗೆ RSS ಕಾರಣ: ಮಲ್ಲಿಕಾರ್ಜುನ ಖರ್ಗೆ ಆರೋಪ

Kharge V/S RSS: RSS ವಿರುದ್ದ ಹೋರಾಡಿದ್ದಕ್ಕೆ ನಾನು ಚುನಾವಣೆ ಸೋಲಬೇಕಾಯ್ತು. ಅವರು ಮನುಸ್ಮೃತಿಯಲ್ಲಿ ನಂಬಿಕೆ ಇಟ್ಟವರು ಎಂದು ಖರ್ಗೆ ಆರೋಪಿಸಿದರು.

ಮಲ್ಲಿಕಾರ್ಜುನ ಖರ್ಗೆ

ಮಲ್ಲಿಕಾರ್ಜುನ ಖರ್ಗೆ

  • Share this:
ಬೆಂಗಳೂರು: RSS ಕುರಿತು ಜೆಡಿಎಸ್​-ಕಾಂಗ್ರೆಸ್​​ ಹಾಗೂ ಬಿಜೆಪಿಗರ ನಡುವೆ ನಡೆಯುತ್ತಿರುವ ವಾಕ್ಸಮರ ಮುಂದುವರೆದಿದೆ. ಕಾಂಗ್ರೆಸ್​​ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ಆರ್​​ಎಸ್​ಎಸ್​-ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ನನ್ನ ಸೋಲಿಗೆ ಆರ್ ಎಸ್ ಎಸ್ ಕೂಡ ಒಂದು ಕಾರಣ ಎಂದು ಆರೋಪಿಸಿದರು. ಆರ್ ಎಸ್ ಎಸ್ ಮನುಸ್ಮೃತಿಯನ್ನ ಪ್ರತಿಪಾದಿಸುತ್ತಿದೆ. RSS ವಿರುದ್ದ ನಾವು ಹೋರಾಡ್ತೇವೆ, RSS ವಿರುದ್ದ ಹೋರಾಡಿದ್ದಕ್ಕೆ ನಾನು ಚುನಾವಣೆ ಸೋಲಬೇಕಾಯ್ತು. ಅವರು ಮನುಸ್ಮೃತಿಯಲ್ಲಿ ನಂಬಿಕೆ ಇಟ್ಟವರು. ಗೋಳವಲ್ಕರ್ ಗುರುಜಿ ಪುಸ್ತಕಗಳನ್ನು ಓದಿದವರು. ನಾವು RSS ವಿರುದ್ದವೇ ಹೋರಾಡಿಕೊಂಡು ಬಂದವರು, ಇಂಥದ್ದನ್ನು ಬಹಳ ನೋಡಿದ್ದೇವೆ ಎಂದು ಟೀಕಿಸಿದರು.

ಪ್ರಿಯಾಂಕಾ ಗಾಂಧಿನ ಮೊದಲು ರಿಲೀಸ್​ ಮಾಡಿ

ಇನ್ನು ಲಖೀಂಪುರ್​​ ಖೇರ್​ ಹಿಂಸಾಚಾರ ಸಂಬಂಧ ಉತ್ತರ ಪ್ರದೇಶದ ಸಿಎಂ ಯೋಗಿ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಕೈಕೊಂಡಿರುವ ಕ್ರಮಗಳ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು. ಹರ್ಯಾಣ ಸಿಎಂ, ಕೇಂದ್ರ ಸಚಿವರ ಹೇಳಿಕೆ ಸರಿಯಲ್ಲ. ಅವರ ಹೇಳಿಕೆ ಆಧಾರದ ಮೇಲೆ ಕೇಸ್ ಹಾಕಬೇಕು, ರಾಜದ್ರೋಹದ ಕೇಸ್ ದಾಖಲಿಸಬೇಕು. ಆದರೆ ಸಾಮಾನ್ಯರ ಮೇಲೆ ಇಂತಹ‌ ಕೇಸ್ ಹಾಕ್ತಿದ್ದಾರೆ. ಬಂಧನಕ್ಕೊಳಗಾಗಿರುವ ಕಾಂಗ್ರೆಸ್​​ ನಾಯಕಿ ಪ್ರಿಯಾಂಕಾ ಗಾಂಧಿಯನ್ನ ತಕ್ಷಣ ಬಿಡುಗಡೆ ಮಾಡಬೇಕು. ಸುಪ್ರೀಂ ಕೋರ್ಟ್​​​ ಜಡ್ಜ್​​​ ನೇತೃತ್ವದಲ್ಲಿ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಮಂತ್ರಿ ಮಗನನ್ನು ಇನ್ನೂ ಏಕೆ ಬಂಧಿಸಿಲ್ಲ..?

ಈ ಘಟನೆಗೆ ಮರ್ಡರ್ ಕೇಸ್ ದಾಖಲಿಸಲಾಗಿದೆ, ಇಲ್ಲಿಯವರೆಗೆ ಮಂತ್ರಿ ಪುತ್ರನನ್ನ ಬಂಧಿಸಿಲ್ಲ. ಸಾಂತ್ವನ ಹೇಳುವವರನ್ನ ಅರೆಸ್ಟ್ ಮಾಡಿದ್ದಾರೆ. ಕೆಲವರ ಭೇಟಿಗೆ ಅವಕಾಶ ಕೊಟ್ಟಿದ್ದಾರೆ, ಆದರೆ ಕಾಂಗ್ರೆಸ್ ನಾಯಕರ ಭೇಟಿಗೆ ಅವಕಾಶ ನೀಡ್ತಿಲ್ಲ. ಅಜಯ್ ಮಿಶ್ರಾರನ್ನ ಸಚಿವ ಸ್ಥಾನದಿಂದ ಕೆಳಗಿಳಿಸಬೇಕು. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಸ್ಥಾನದಿಂದ ಕೆಳಗಿಳಿಸಬೇಕು, ಎಸ್ ಯುವಿ ಕಾರಿನಲ್ಲಿ ‌ಮಂತ್ರಿ ಮಗ ಇದ್ದ. ಅಲ್ಲಿನ ರೈತರೇ ಅದನ್ನ ಹೇಳಿದ್ದಾರೆ, ಆದರೆ ನನ್ನ ಮಗ ಅಲ್ಲಿರಲಿಲ್ಲ ಅಂತ ಅಜಯ್ ಮಿಶ್ರಾ ವಾದಿಸುತ್ತಿದ್ದಾರೆ. ಪ್ರಿಯಾಂಕ ಗಾಂಧಿಯವರದ್ದು ಯಾವುದೇ ತಪ್ಪಿಲ್ಲ, ಆದರೆ ಯಾಕೆ ಅವರನ್ನ ಬಂಧಿಸಿದ್ದು ಎಂದು ಕೇಂದ್ರ ಸರ್ಕಾರಕ್ಕೆ‌ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ ಮಾಡಿದರು.

ಇದನ್ನೂ ಓದಿ: Siddaramaiah| ಕುತೂಹಲ ಮೂಡಿಸಿದ್ದ ಸಿದ್ದು-ಸೋನಿಯಾ ಗಾಂಧಿ ಭೇಟಿ; ಮಾತುಕತೆಯ ಸಂಪೂರ್ಣ ಮಾಹಿತಿ ನ್ಯೂಸ್18ಗೆ ಲಭ್ಯ!

ಘಟನಾ ಸ್ಥಳಕ್ಕೆ ಖರ್ಗೆ ಭೇಟಿ ನೀಡ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾವು ಈಗಾಗಲೇ ಹೋರಾಟ ಆರಂಭಿಸಿದ್ದೇವೆ. ರಾಜ್ಯದಲ್ಲೂ‌ ಹೋರಾಟ ನಡೆದಿದೆ. ಎಲ್ಲಾ ಕಡೆಗಳಲ್ಲೂ ಪಕ್ಷದ ಕಡೆಯಿಂದ ಪ್ರತಿಭಟನೆ ನಡೆದಿದೆ. ರೈತ ವಿರೋಧಿ ಕಾಯ್ದೆ ಚರ್ಚೆಗೆ ಅವಕಾಶ ಕೊಡಲಿಲ್ಲ. ನೋಟಿಸ್​​​ ಕೊಟ್ರೂ ಅವಕಾಶ ಕೊಡ್ಲಿಲ್ಲ, ಕಲಾಪವನ್ನೇ ಮೊಟಕು‌ ಮಾಡಿದ್ರು. ಚರ್ಚೆಗೆ ಎಲ್ಲಿ ಅವಕಾಶ ಕೊಟ್ರು, ರಾಜ್ಯಸಭೆ-ಲೋಕಸಭೆಯಲ್ಲಿ ಅವಕಾಶ ಕೊಟ್ರಾ ಎಂದು ಕಿಡಿಕಾರಿದರು.

ಎಚ್​ಡಿಕೆ-ಸಿದ್ದರಾಮಯ್ಯಗೆ ಸಚಿವ ಪ್ರಭು ಚೌಹಾಣ್ ತಿರುಗೇಟು

ಇನ್ನು ಆರ್.ಎಸ್.ಎಸ್ ವಿರುದ್ಧ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಹೇಳಿಕೆ ವಿಚಾರ ಪ್ರತಿಕ್ರಿಯಿಸಿದ ಸಚಿವ ಪ್ರಭು ಚೌಹಾಣ್ , ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಅದನ್ನ ಸಹಿಸಲು ಆಗದೇ ಹೀಗೆಲ್ಲಾ ಮಾತಾಡ್ತಿದ್ದಾರೆ ಎಂದು ತಿರುಗೇಟು ನೀಡಿದರು. ಆರ್‌ಎಸ್ಎಸ್‌ ಅಂದ್ರೆ ದೇಶಭಕ್ತಿ ಸಂಸ್ಥೆ, ದೇಶದ ಪರ ಕೆಲಸ ಮಾಡ್ತಿದೆ. ಆರ್.ಎಸ್.ಎಸ್. ಇಲ್ಲವೆಂದಿದ್ದರೆ ಭಾರತ ಪಾಕಿಸ್ತಾನ ಆಗ್ತಿತ್ತು. ಪಾಕಿಸ್ತಾನ, ತಾಲಿಬಾನ್ ಎಲ್ಲವೂ ಕಾಂಗ್ರೆಸ್ ಅವರೇ.. ನಾವು ದೇಶಭಕ್ತರು. ಪ್ರಧಾನಿ ಮೋದಿ ನಾವೆಲ್ಲ ಒಂದು ಅಂತಿದ್ದಾರೆ. ಇದನ್ನ ‌ಎಲ್ಲರೂ ಅರ್ಥ ಮಾಡಿಕೊಳ್ಳಲಿ ಎಂದು ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ವಿರುದ್ದ ಪ್ರಭು ಚೌಹಾಣ್ ವಾಗ್ದಾಳಿ ನಡೆಸಿದರು. ಮಾಜಿ ಮುಖ್ಯಮಂತ್ರಿ ಆದವರು ಹೇಗೆ ಮಾತಾಡಬೇಕು ಅಂತ ಅರ್ಥ ಮಾಡಿಕೊಳ್ಳಬೇಕು. ಆರ್.ಎಸ್.ಎಸ್. ಏನು ಅಂತ ಜನತೆಗೆ ಗೊತ್ತಿದೆ. ಕುಮಾರಸ್ವಾಮಿ, ಸಿದ್ದರಾಮಯ್ಯ ಹೇಳಿಕೆಯನ್ನ ಖಂಡಿಸುತ್ತೇನೆ. ಆರ್.ಎಸ್.ಎಸ್.‌ಇರೋದಕ್ಕೆ ದೇಶ ಇದೆ ಎಂದು ಪ್ರತಿಪಾದಿಸಿದರು.
Published by:Kavya V
First published: