Water Supply: ಬೆಂಗಳೂರಿನ ಹಲವು ಪ್ರದೇಶದಲ್ಲಿ ಇಂದು ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ, ನಿಮ್ಮ ಏರಿಯಾ ಈ ಲಿಸ್ಟ್​​ನಲ್ಲಿ ಇದ್ಯಾ ನೋಡಿ

Water Shutdown: ಕೆಆರ್ ಪುರಂ ಹಾಗೂ ತಿಪ್ಪಗೊಂಡನಹಳ್ಳಿ ವ್ಯಾಪ್ತಿಯಲ್ಲಿ ಬರುವ ಕಾವೇರಿ ನೀರು ಪೂರೈಕೆಯಾಗುವ ನಗರದ ಹಲವು ಸ್ಥಳದಲ್ಲಿ ಇಂದು ಬೆಳಗಿನ ಜಾವ 3ರಿಂದ ರಾತ್ರಿ 9ರವರೆಗೆ ನೀರು ಪೂರೈಕೆಯಲ್ಲಿ ವ್ಯತ್ಯಯ ಮಾಡಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರಿನಲ್ಲಿ(Bengaluru) ಜನರಿಗೆ ಕಳೆದ ಕೆಲವು ದಿನಗಳಿಂದ ಕಾಮಗಾರಿ ಹೆಸರಲ್ಲಿ ಬೆಸ್ಕಾಂ(Bescom) ವಿದ್ಯುತ್ ಸಂಪರ್ಕ(Power Cut) ಕಡಿತ ಮಾಡುತ್ತಲೇ ಬಂದಿದೆ.. ಇದು ಸಾಲದು ಎಂಬಂತೆ ಬೆಸ್ಕಾಂ ಜೊತೆಗೆ ಸೇರಿಕೊಂಡು, ಕಾವೇರಿ ನೀರಿನ ಪೈಪ್ ಲೈನ್ ಮಾರ್ಗ ಬದಲಾವಣೆ ಕಾಮಗಾರಿ ನಡೆಸುತ್ತಿರುವ ಬೆಂಗಳೂರು ಜಲಮಂಡಳಿ(BWSSB), ಕೆಆರ್ ಪುರಂ ಹಾಗೂ ತಿಪ್ಪಗೊಂಡನಹಳ್ಳಿ ವ್ಯಾಪ್ತಿಯಲ್ಲಿ ಬರುವ ಕಾವೇರಿ ನೀರು ಪೂರೈಕೆಯಾಗುವ ನಗರದ ಹಲವು ಸ್ಥಳದಲ್ಲಿ ಇಂದು ಬೆಳಗಿನ ಜಾವ 3ರಿಂದ ರಾತ್ರಿ 9ರವರೆಗೆ ನೀರು ಪೂರೈಕೆಯಲ್ಲಿ(Water Supply) ವ್ಯತ್ಯಯ ಮಾಡಲಿದೆ.. ಅಲ್ಲದೆ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗುವುದು ಎಂದು ಬೆಂಗಳೂರು ಜಲಮಂಡಳಿ(Bengaluru Water Board) ತಿಳಿಸಿದೆ.

  ಈ ಪ್ರದೇಶದಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ

  ಯಲಹಂಕ, ಜಕ್ಕೂರು, ಬ್ಯಾಟರಾಯನಪುರ, ವಿದ್ಯಾರಣ್ಯಪುರ, ಬಿಇಎಲ್‌ ಲೇಔಟ್‌, ಎಚ್‌ಎಂಟಿ ಬಡಾವಣೆ, ದಾಸರಹಳ್ಳಿ, ಶೆಟ್ಟಿಹಳ್ಳಿ, ಮಲ್ಲಸಂದ್ರ, ಬಾಗಲಗುಂಟೆ, ಟಿ.ದಾಸರಹಳ್ಳಿ, ಪೀಣ್ಯ, ರಾಜಗೋಪಾಲ ನಗರ, ಚೊಕ್ಕಸಂದ್ರ, ಹೆಗ್ಗನಹಳ್ಳಿ, ಎಚ್‌ಎಂಟಿ ವಾರ್ಡ್‌, ನಂದಿನಿ ಲೇಔಟ್‌, ಆರ್‌ಆರ್‌ ನಗರ, ಕೆಂಗೇರಿ, ಉಲ್ಲಾಳ, ಅನ್ನಪೂರ್ಣೇಶ್ವರಿ ನಗರ, ಪಾಪರೆಡ್ಡಿಪಾಳ್ಯ, ಮಲ್ಲತ್ತಹಳ್ಳಿ, ಕೆಂಗುಂಟೆ, ಜಗಜ್ಯೋತಿ ಬಡಾವಣೆ, ಜ್ಞಾನಭಾರತಿ ಲೇಔಟ್‌, ಐಡಿಯಲ್‌ ಹೋಮ್ಸ್‌, ಬಿಇಎಂಎಲ್‌ ಲೇಔಟ್‌, ಪಟ್ಟಣಗೆರೆ, ಚೆನ್ನಸಂದ್ರ, ಕೊತ್ತನೂರು ದಿಣ್ಣೆ, ಜೆಪಿ ನಗರ 6, 7 ಮತ್ತು 8ನೇ ಹಂತ, ವಿಜಯ ಬ್ಯಾಂಕ್‌ ಲೇಔಟ್‌, ಕೂಡ್ಲು, ಅಂಜನಾಪುರ, ಬೊಮ್ಮನಹಳ್ಳಿ..

  ಇದನ್ನೂ ಓದಿ: 40 ವರ್ಷಗಳ ನಂತರ ಡಿಸೆಂಬರ್ ನಲ್ಲಿ ಭರ್ತಿಯಾದ ಜಲಾಶಯ: ಯಾವ ರಾಜ್ಯಕ್ಕೆ ಎಷ್ಟು ನೀರು ಹಂಚಿಕೆ?

  ಆರ್‌.ಪುರಂ, ರಾಮಮೂರ್ತಿ ನಗರ, ಮಹದೇವಪುರ, ಎ.ನಾರಾಯಣಪುರ, ಮಾರತ್ತಹಳ್ಳಿ, ಹೂಡಿ, ವೈಟ್‌ಫೀಲ್ಡ್‌, ನಾಗರಬಾವಿ, ಜಿಕೆವಿಕೆ, ಸಂಜಯನಗರ, ನ್ಯೂ ಬಿಇಎಲ್‌ ರಸ್ತೆ, ಎಚ್‌ಎಸ್‌ಆರ್‌ ಲೇಔಟ್‌, ಎಚ್‌ಬಿಆರ್‌ ಲೇಔಟ್‌, ದೊಮ್ಮಲೂರು, ಬನ್ನೇರುಘಟ್ಟರಸ್ತೆ, ಜಂಬೂಸವಾರಿ ದಿಣ್ಣೆ, ಲಗ್ಗೆರೆ, ಶ್ರೀಗಂಧದ ಕಾವಲ್‌, ಟೆಲಿಕಾಂ ಲೇಔಟ್‌, ಶ್ರೀನಿವಾಸ ನಗರ, ಬಾಹುಬಲಿ ನಗರ, ಜಾಲಹಳ್ಳಿ, ಓಎಂಬಿಆರ್‌, ಬೊಮ್ಮನಹಳ್ಳಿ, ಅರಕೆರೆ, ಬಿಎಚ್‌ಇಎಲ್‌ ಲೇಔಟ್‌.
  ಸುಂಕದಕಟ್ಟೆ, ಬ್ಯಾಡರಹಳ್ಳಿ, ಸರ್‌ ಎಂ.ವಿಶ್ವೇಶ್ವರಯ್ಯ ಲೇಔಟ್‌, ಕೊಟ್ಟಿಗೆಪಾಳ್ಯ, ಎಲ್‌ಐಸಿ ಬಡಾವಣೆ, ನಾಗದೇವನಹಳ್ಳಿ, ಮೈಸೂರು ರಸ್ತೆ, ಶಿರ್ಕೆ, ಚಿಕ್ಕಗೊಲ್ಲರಹಟ್ಟಿ, ಸುಬ್ಬಣ್ಣ ಗಾರ್ಡನ್‌, ನಾಯಂಡನಹಳ್ಳಿ, ಕಾಮಾಕ್ಷಿಪಾಳ್ಯ, ರಂಗನಾಥಪುರ, ಗೋವಿಂದರಾಜ ನಗರ, ಕೆಎಚ್‌ಬಿ ಕಾಲೋನಿ, ಮೂಡಲಪಾಳ್ಯ, ಆದರ್ಶ ನಗರ, ಬಿಡಿಎ ಲೇಔಟ್‌, ಮುನೇಶ್ವರ ನಗರ, ಕೊಡಿಗೇಹಳ್ಳಿ, ಅಮೃತಹಳ್ಳಿ, ಕೋಗಿಲು, ಜೆಪಿ ಪಾರ್ಕ್, ಯಶವಂತಪುರ, ಸದ್ದಗುಂಟೆ ಪಾಳ್ಯ, ಕಸವನಹಳ್ಳಿ, ಕೊನೇನ ಅಗ್ರಹಾರ, ಸುಧಾಮ ನಗರ, ಮುರುಗೇಶ್‌ ಪಾಳ್ಯ, ಎಚ್‌ಆರ್‌ಬಿಆರ್‌ ಲೇಔಟ್‌, ನಾಗವಾರ, ಬಾಲಾಜಿ ಲೇಔಟ್‌, ಬಿಜಿಎಸ್‌ ಲೇಔಟ್‌, ಎಸ್‌ಬಿಎಂ ಕಾಲೋನಿ, ಬಿಟಿಎಸ್‌ ಬಡಾವಣೆ.

  ಸಾರ್ವಭೌಮ ನಗರ, ಹುಳಿಮಾವು, ಬಂಡೆಪಾಳ್ಯ, ಸರಸ್ವತಿಪುರಂ, ರಾಘವೇಂದ್ರ ಲೇಔಟ್‌, ಸಿಂಡಿಕೇಟ್‌ ಬ್ಯಾಂಕ್‌ ಕಾಲೋನಿ, ರಾಮಯ್ಯ ಲೇಔಟ್‌, ಪ್ರಗತಿ ಬಡಾವಣೆ, ಸಿಲ್ಕ್‌ಬೋರ್ಡ್‌ ಕಾಲೋನಿ, ಮಂಗಮ್ಮನಪಾಳ್ಯ, ಸಿಂಗಸಂದ್ರ, ದೇವರಚಿಕ್ಕನಹಳ್ಳಿ, ಲಕ್ಷ್ಮೇನಾರಾಯಣಪುರ, ಸೋಮಸುಂದರ ಪಾಳ್ಯ, ದೊಡ್ಡಾನೆಕುಂದಿ, ಗರುಡಾಚಾರ್‌ಪಾಳ್ಯ, ಸಪ್ತಗಿರಿ ಲೇಔಟ್‌, ಮುನೆನಕೊಳಲು, ಇಸ್ರೋ ಲೇಔಟ್‌, ಬೃಂದಾವನ ನಗರ, ತಿಗಳರಪಾಳ್ಯ, ಅಕ್ಷಯ ನಗರ, ರಮೇಶ್‌ ನಗರ, ಅನ್ನಸಂದ್ರಪಾಳ್ಯ, ಪಟಾಲಮ್ಮ ಲೇಔಟ್‌, ಗಾಯತ್ರಿ ಬಡಾವಣೆ, ಮಂಜುನಾಥ್‌ ನಗರ, ರಾಮಾಂಜನೇಯ ಲೇಔಟ್‌, ಮಾರೇನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

  ಇದನ್ನೂ ಓದಿ: ರಾಜ್ಯದಲ್ಲಿ ದಟ್ಟವಾದ ಮಂಜು, ಅಲ್ಲಲ್ಲಿ ಮೋಡ ಕವಿದ ವಾತಾವರಣ

  ಉಚಿತ ಕಾವೇರಿ ನೀರು ಸರಬರಾಜು ಯೋಜನೆಗೆ ಸಿದ್ಧತೆ

  ದೆಹಲಿಯ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷದ ಸರ್ಕಾರ ಅಲ್ಲಿ ಜಾರಿಗೆ ತಂದಿರುವ ಬಡವರಿಗೆ ಉಚಿತ ನೀರು ಕೊಡುವ ಯೋಜನೆಯ ಮಾದರಿಯಲ್ಲಿ ಬಿಬಿಎಂಪಿ 10 ಸಾವಿರ ಲೀಟರ್‌ಗಿಂತ ಕಡಿಮೆ ನೀರು ಬಳಕೆದಾರರಿಗೆ ಉಚಿತವಾಗಿ ಕಾವೇರಿ ನೀರು ಒದಗಿಸುವುದಕ್ಕೆ 2020-21ನೇ ಸಾಲಿನ ಬಜೆಟ್‌ನಲ್ಲಿ ಒಟ್ಟು 43 ಕೋಟಿ ರು.ಗಳನ್ನು ಜಲಮಂಡಳಿಗೆ ಪಾವತಿಸಲು ಮೀಸಲಿಟ್ಟಿತ್ತು..ಈ ಯೋಜನೆಯಿಂದ ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಗೊಂಡ 110 ಹಳ್ಳಿ ಸೇರಿದಂತೆ ಸುಮಾರು 2.50 ಲಕ್ಷ ಕುಟುಂಬಗಳಿಗೆ ಅನುಕೂಲವಾಗಲಿದೆ. ನೀರಿನ ಬಳಕೆ ಮೇಲೆ ಮಿತಿ ಹೇರುವ ಉದ್ದೇಶದಿಂದ ಬಿಬಿಎಂಪಿ ಈ ತೀರ್ಮಾನ ಕೈಗೊಂಡಿದ್ದು, 10 ಸಾವಿರ ಲೀಟರ್‌ಗಿಂತ ಹೆಚ್ಚಿನ ನೀರು ಬಳಕೆ ಮಾಡಿದರೆ, ಸಂಪೂರ್ಣ ನೀರಿನ ಬಿಲ್‌ ಪಾವತಿ ಮಾಡಬೇಕಾಗುತ್ತದೆ.
  Published by:ranjumbkgowda1 ranjumbkgowda1
  First published: