Karnataka Politics: ರಾಜ್ಯ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ? ಯಾರು ಇನ್? ಯಾರು ಔಟ್?

ಮುಂದಿನ ವಾರವೇ ಸಿಎಂ ಬೊಮ್ಮಾಯಿ ದೆಹಲಿ ಪ್ರವಾಸ ಕೈಗೊಳ್ಳಲು ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ದೆಹಲಿಯಲ್ಲಿ ಹೈಕಮಾಂಡ್ ಒಪ್ಪಿಗೆ ನೀಡಿದ್ರೆ ಎರಡ್ಮೂರು ವಾರದೊಳಗೆ ಸಂಪುಟಕ್ಕೆ ಮೇಜರ್ ಸರ್ಜರಿ ಆಗಲಿದೆ.

ಸಿಎಂ ಬೊಮ್ಮಾಯಿ

ಸಿಎಂ ಬೊಮ್ಮಾಯಿ

  • Share this:
ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದಲ್ಲಿ (Five State Election Results) ಬಿಜೆಪಿ (BJP) ಗೆಲುವಿನ ನಗೆ ಬೀರಿದ್ದು, ಉತ್ತರ ಪ್ರದೇಶದಲ್ಲಿ (Uttar Pradesh) ಎರಡನೇ  ಬಾರಿಗೆ ಅಧಿಕಾರ ಹಿಡಿದುಕೊಳ್ಳುವ ಮೂಲಕ ಭಾಜಪ ಹೊಸ ದಾಖಲೆ ಬರೆದಿದೆ. ಪಂಜಾಬ್ (Punjab Election) ಹೊರತುಪಡಿಸಿ ಉಳಿದ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಕಮಾಲ್ ಮಾಡಿದೆ. ಇದೀಗ ಗೆಲುವಿನ ಹುಮ್ಮಸ್ಸಿನಲ್ಲಿರುವ ಬಿಜೆಪಿ ಕರ್ನಾಟಕ(Karnataka)ದತ್ತ ಮುಖ ಮಾಡುತ್ತಿದೆ. ಕಾರಣ ಮುಂದಿನ ವರ್ಷವೇ ವಿಧಾನಸಭಾ ಚುನಾವಣೆ (Karnataka Assembly Election 2023) ನಡೆಯಲಿದೆ. ಈ ಹಿನ್ನೆಲೆ ರಾಜ್ಯ ಸಚಿವ ಸಂಪುಟಕ್ಕೆ (Cabinet) ಮೇಜರ್ ಸರ್ಜರಿ ನಡೆಸಲು ಬಿಜೆಪಿ ಹೈಕಮಾಂಡ್ (BJP High command) ನಿರ್ಧರಿಸದಂತೆ ಕಾಣಿಸುತ್ತಿದೆ. ಮಾರ್ಚ್ ಕೊನೆಯ ವಾರ ಅಥವಾ ಏಪ್ರಿಲ್ ಮೊದಲ ವಾರದಲ್ಲಿಯೇ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಆಗುವ ಸಾಧ್ಯತೆಗಳಿವೆ ಎಂಬ ಮಾತುಗಳು ಬಿಜೆಪಿ ಅಂಗಳದಲ್ಲಿ ಕೇಳಿ ಬರುತ್ತಿವೆ.

ಸಿಎಂ ಬಸವರಾಜ್ ಬೊಮ್ಮಾಯಿ ಸಂಪುಟ ವಿಸ್ತರಣೆ ಆಥವಾ ಪುನಾರಚನೆಯ ಕುರಿತು ಮಾಜಿ ಸಿಎಂ ಬಿ.ಎಸ್.ಯಡಿಯೂಪ್ಪ ಅವರ ಜೊತೆ ಒಂದು ಸುತ್ತಿನ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ ದೆಹಲಿ ಪ್ರವಾಸ ಮತ್ತು ಹೈಕಮಾಂಡ್ ನಾಯಕರ ಭೇಟಿಯ ಕುರಿತು ಮಾತುಕತೆ ನಡೆದಿದೆ ಎಂದು ತಿಳಿದು ಬಂದಿದೆ.

ಮುಂದಿನ ವಾರವೇ ಸಿಎಂ ಬೊಮ್ಮಾಯಿ ದೆಹಲಿ ಪ್ರವಾಸ ಕೈಗೊಳ್ಳಲು ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ದೆಹಲಿಯಲ್ಲಿ ಹೈಕಮಾಂಡ್ ಒಪ್ಪಿಗೆ ನೀಡಿದ್ರೆ ಎರಡ್ಮೂರು ವಾರದೊಳಗೆ ಸಂಪುಟಕ್ಕೆ ಮೇಜರ್ ಸರ್ಜರಿ ಆಗಲಿದೆ.

ಇದನ್ನೂ ಓದಿ:  Karnataka Assembly: "ಕಾಂಗ್ರೆಸ್‌ ನಡಿಗೆ ಈಗ ಇಟಲಿ ಕಡೆಗೆ!" ಪಂಚರಾಜ್ಯಗಳ ಚುನಾವಣೆಯಲ್ಲಿ 'ಕೈ' ಸೋಲಿಗೆ ಯತ್ನಾಳ್ ವ್ಯಂಗ್ಯ

ರಾಜ್ಯದಲ್ಲಿ ತಂತ್ರಗಾರಿಕೆ ರೂಪಿಸುವ ಬಗ್ಗೆ ಸಮಾಲೋಚನೆ

ಸಿಎಂ ಮತ್ತು ಮಾಜಿ ಸಿಎಂ ನಾಲ್ಕು ರಾಜ್ಯಗಳ ಗೆಲುವಿನ ಉತ್ಸಾಹದೊಂದಿಗೆ ರಾಜ್ಯದಲ್ಲಿ ತಂತ್ರಗಾರಿಕೆ ರೂಪಿಸುವ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಜಿಲ್ಲೆಗಳಲ್ಲಿ ಸಚಿವರ ಕಾರ್ಯ ಹೆಚ್ಚಿಸಲು ಸೂಚನೆ ನೀಡುವುದು. ಸರ್ಕಾರಗಳ ಕಾರ್ಯಕ್ರಮ ಜನರಿಗೆ ತಲುಪಿಸಲು ಸಚಿವರುಗಳು ಕೆಲಸ ಮಾಡಿಸುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.

ಹೊಸಬರಿಗೆ ಅವಕಾಶ ಸಾಧ್ಯತೆ

ಕೆಲ ಉಸ್ತುವಾರಿ ಸಚಿವರಿಂದ ಆ ಜಿಲೆಯಲ್ಲಿ ಪಕ್ಷ ಸಂಘಟನೆ ಸವಾಲು ಎದುರಾಗಿರುವ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ. ಹೀಗಾಗಿ ಆ ಜಿಲ್ಲೆಗಳಲ್ಲಿ ಸಮರ್ಥ ಪಕ್ಷ ಸಂಘಟಿಸುವ ಬಗ್ಗೆ ಮಾತುಕತೆ ನಡೆದಿರುವ ಬಗ್ಗೆ ತಿಳಿದು ಬಂದಿದೆ. ಇದೇ ವೇಳೆ ಹಿರಿಯರಿಗೆ ಸಂಪುಟದಿಂದ ಕೈ ಬಿಟ್ಟು, ಹೊಸ ಮುಖಗಳಿಗೆ ಅವಕಾಶ ನೀಡುವ ಸಾಧ್ಯತೆಗಳು ದಟ್ಟವಾಗಿವೆ.

ರಾಜ್ಯದಲ್ಲೂ ಮತ್ತೆ ಬರಲಿದೆ ಬಿಜೆಪಿ ಸರ್ಕಾರ: ಸಿಎಂ ಬೊಮ್ಮಾಯಿ

ಈ ಗೆಲುವು ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿದ್ದು, ಪಕ್ಷ ಇನ್ನಷ್ಟು ಶಕ್ತಿ ಶಾಲಿಯಾಗಿ ಮುನ್ನಡೆಯಲಿದೆ. ನಮ್ಮ ಸರ್ಕಾರ ಈಗಾಗಲೇ ಬಜೆಟ್ ನಲ್ಲಿ ಈಗಾಗಲೇ ನೀಡಿರುವ ಉತ್ತಮ ಕಾರ್ಯಕ್ರಮಗಳ ಅನುಷ್ಠಾನ ಮಾಡುವ ಮುಖಾಂತರ ಸುಭಿಕ್ಷ, ಸುಭದ್ರವಾದ, ನವ ಕರ್ನಾಟಕ ವನ್ನು ಒಂದು ವರ್ಷದಲ್ಲಿ ಪರಿಣಾಮಕಾರಿಯಾಗಿ ಸಾಧಿಸಿ ತೋರಿಸಿ ಜನರ ವಿಶ್ವಾಸವನ್ನು ಗಳಿಸಿ 2023 ರಲ್ಲಿ ಇಂದು ಫಲಿತಾಂಶ ಬಂದಂತೆಯೇ ಕರ್ನಾಟಕದ ಮತ್ತೆ ರಾಜ್ಯದಲ್ಲಿ ಬಿಜೆಪಿಗೆ ಬಹುಮತ ನೀಡಲಿದ್ದು, ಅಧಿಕಾರ ನಡೆಸಲು ಅವಕಾಶ ನೀಡಲಿದ್ದಾರೆ ಎಂಬ ವಿಶ್ವಾಸ ಇದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:  ನಾವು ಕುಡುಕ ಗಂಡನ್ನ ಮದುವೆ ಆಗಿದ್ದೇವೆ, ಬಿಡಂಗಿಲ್ಲ ಇತ್ತ ಸಂಸಾರನೂ ಮಾಡಂಗಿಲ್ಲ: Pramod Muthalik

ಏಪ್ರಿಲ್ ನಲ್ಲಿ ಪ್ರಧಾನಿಗಳು ಕರ್ನಾಟಕಕ್ಕೆ:

ಏಪ್ರಿಲ್ ನಲ್ಲಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಬರಲಿದ್ದಾರೆ. ಬರುವ ಸಂದರ್ಭದಲ್ಲಿ ಒಂದು ವರ್ಷದ ಎಲ್ಲಾ ಕಾರ್ಯಕ್ರಮಗಳನ್ನು ಜನರ ಮುಂದೆ ಅವರ ಮುಖಾಂತರ ಅನಾವರಣ ಮಾಡುವ ಕೆಲಸವನ್ನು ಮಾಡಲಿದ್ದೇವೆ ಎಂದರು
Published by:Mahmadrafik K
First published: