Bengaluru: ಕಲರ್‌ ಕಲರ್‌ ಕೋಣೆಯೊಳಗೆ ನಶೆ ಲೋಕ! 8 ಕೋಟಿ ಡ್ರಗ್ಸ್ ಡೀಲ್‌ ಹಿಂದೆ ಖತರ್ನಾಕ್ ಲವರ್ಸ್

ಮನೆ ಹೊರಕ್ಕೆ ಅವರಿಬ್ಬರೂ ಪ್ರೇಮಿಗಳು, ಆದ್ರೆ ಕೋಣೆಯೊಳಗೆ ಡ್ರಗ್ಸ್ ಡೀಲರ್ಸ್! ಕಾಲೇಜ್‌ ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡ್ತಿದ್ದ ಈ ಪ್ರೇಮಿಗಳು ಸ್ಫೋಟಕ ಮಾಹಿತಿಗಳನ್ನು ಬಾಯ್ಬಿಟ್ಟಿದ್ದಾರೆ.

ಬಂಧಿತ ವಿಷ್ಣುಪ್ರಿಯ ಮತ್ತು ಸಿಗಿಲ್ ವರ್ಗಿಸ್

ಬಂಧಿತ ವಿಷ್ಣುಪ್ರಿಯ ಮತ್ತು ಸಿಗಿಲ್ ವರ್ಗಿಸ್

  • Share this:
ಬೆಂಗಳೂರು: ಈ ಹಿಂದೆ ಡ್ರಗ್ಸ್ (Drugs) ವಿಚಾರದಲ್ಲಿ ಬೆಂಗಳೂರು (Bengaluru) ಭಾರೀ ಸುದ್ದಿ (News) ಮಾಡಿತ್ತು. ಸ್ಯಾಂಡಲ್‌ವುಡ್ (Sandalwod) ಜೊತೆ ಡ್ರಗ್ಸ್ ವಿಚಾರ ಥಳುಕು ಹಾಕಿಕೊಂಡು, ನಟಿಯರಿಬ್ಬರು (Heroines) ಜೈಲಿಗೆ (Jail) ಹೋಗಿ ಬಂದಿದ್ದೂ ಆಗಿತ್ತು. ಅದಾದ ಮೇಲೆ ಆಗಾಗ ಬೆಂಗಳೂರು ಡ್ರಗ್ಸ್ ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ಬೆಂಗಳೂರಿನ ಡ್ರಗ್ಸ್ ಮಾಫಿಯಾ (Mafia) ಮತ್ತೆ ಸದ್ದು ಮಾಡುತ್ತಿದೆ. ಇದೀಗ ಬೆಂಗಳೂರಿನ ಹುಳಿಮಾವು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಬರೋಬ್ಬರಿ 8 ಕೋಟಿ (8 Crore) ಮೌಲ್ಯದ ಹ್ಯಾಶಿಶ್ ಆಯಿಲ್ (Hashish Oil), ಗಾಂಜಾವನ್ನು (Ganja) ವಶಕ್ಕೆ ಪಡೆದಿದ್ದಾರೆ. ಇಬ್ಬರು ಪ್ರೇಮಿಗಳು (Lovers) ಸೇರಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಇದೀಗ ಪ್ರೇಮಿಗಳ ವಿಚಾರಣೆ (Enquiry) ಬಳಿಕ ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿವೆ.

8 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ

ಬೆಂಗಳೂರಿನ ಹುಳಿಮಾವು ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಬರೋಬ್ಬರಿ 8 ಕೋಟಿ ಮೌಲ್ಯದ ಹ್ಯಾಶಿಶ್ ಆಯಿಲ್, ಗಾಂಜಾಗಳನ್ನು ವಶಕ್ಕೆ  ಪಡೆದಿದ್ದಾರೆ. 12 ಲೀಟರ್‌ನ 940 ಗ್ರಾಂ ಹ್ಯಾಶಿಶ್ ಆಯಿಲ್, 26 ಕೆಜಿ 250 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದು, ಇದರ ಮೌಲ್ಯ ಬರೋಬ್ಬರಿ 8 ಕೋಟಿಯಾಗಿದೆ.

ಬಲೆಗೆ ಬಿದ್ದ ಖದೀಮ ಪ್ರೇಮಿಗಳು

ಡ್ರಗ್ಸ್ ಡೀಲ್‌ ಕೇಸ್‌ಗೆ ಸಂಬಂಧ ಪಟ್ಟಂತೆ ಪೊಲೀಸರು ವಿಷ್ಣು ಪ್ರಿಯ ಹಾಗೂ ಸಿಗಿಲ್ ವರ್ಗಿಸ್ ಎಂಬುವರನ್ನು ಬಂಧಿಸಿದ್ದಾರೆ. ಬಂಧಿತರಿಬ್ಬರೂ ಕೇರಳ ಮೂಲದವರಾಗಿದ್ದು, ಪ್ರೇಮಿಗಳು ಎನ್ನಲಾಗಿದೆ. ಇವರ ಹಿನ್ನೆಲೆ, ಇವರು ಡ್ರಗ್ಸ್ ಡೀಲ್ ಮಾಡುವ ರೀತಿ ಕಂಡು ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.

ಇದನ್ನೂ ಓದಿ: Bengaluru: ಪೊಲೀಸಪ್ಪನ Bikeನ್ನೇ ಎಗರಿಸಿದ ಐನಾತಿ ಕಳ್ಳ: ನಮ್ಮ ಮೆಟ್ರೋ ಎಂಡಿ ಹೆಸರಿನಲ್ಲಿ ವಂಚನೆ; ಹುಡುಗಿ ವಿಚಾರಕ್ಕೆ ಕೊಲೆ

ನಶಾ ಪಾರ್ಟಿಗೆ ಅಂತನೇ ರೂಮ್ ಡೆಕೋರೇಷನ್

ಬಂಧಿತ ವಿಷ್ಣು ಪ್ರಿಯ ಹಾಗೂ ಸಿಗಿಲ್ ವರ್ಗಿಸ್ ಇಬ್ಬರೂ ಬೆಂಗಳೂರು ನಗರದ ಕೊತ್ತನೂರು ದಿನ್ನೆಯ ಪ್ಲಾಟ್ ಒಂದರಲ್ಲಿ ವಾಸವಾಗಿದ್ದರು. ಮಾದಕ ವಸ್ತು ಸೇವನೆಗೆಂದೇ ಪ್ಲಾಟ್‌ ಅನ್ನು ಕಲರ್ ಫುಲ್ ಲೈಂಟಿನ್‌ನಿಂದ ಈ ಜೋಡಿ ಡೆಕೋರೇಟ್ ಮಾಡಿತ್ತು. ಟ್ಯಾಟೂ ಆರ್ಟಿಸ್ಟ್ ಆಗಿದ್ದ ವಿಷ್ಣುಪ್ರಿಯಾ ರೂಮ್ ನಲ್ಲೂ ಡಿಸೈನ್ ಮಾಡಿದ್ಲು. ಬೆಂಗಳೂರಿನಲ್ಲಿ ಡ್ರಗ್ಸ್ ಗೆ ಹೆಚ್ಚು ಬೇಡಿಕೆ ಹಾಗೂ ಮೋಜು ಮಸ್ತಿಗೆ ಹಾಟ್ ಸ್ಪಾಟ್ ಎಂದು ಸಿಟಿಗೆ ಬಂದು ಈ ಜೋಡಿ ಸೆಟ್ಲ್ ಆಗಿತ್ತು. ಇಲ್ಲೇ ಡ್ರಗ್ಸ್ ಡೀಲ್ ಮಾಡುತ್ತಾ ಇದ್ದರು.

ಪ್ರತಿ ದಿನ ಮನೆಯಲ್ಲೇ ಡ್ರಗ್ಸ್ ಪಾರ್ಟಿ

ಈ ಜೋಡಿ ಡ್ರಗ್ಸ್  ಅಡಿಕ್ಟ್ ಆಗಿದ್ದರು. ಪ್ರತಿದಿನ ಮನೆಯಲ್ಲಿಯೇ ಡ್ರಗ್ಸ್ ನಶೆಯಲ್ಲಿ ತೇಲುತ್ತಿದ್ದರು. ಡ್ರಗ್ಸ್ ತೆಗೆದುಕೊಂಡು ಕಲರ್ ಲೈಟಿಂಗ್ಸ್ ಹಾಕಿದ್ರೆ ನಶೆ ಏರುತ್ತೆ ಎಂದು ಈ ರೀತಿ ಕೋಣೆಯನ್ನು ಡಿಸೈನ್ ಮಾಡಿಕೊಂಡಿದ್ದರು. ಮೊಬೈಲ್ ಮೇಲೆ ಡ್ರಗ್ಸ್ ಹಾಕಿ ಸೇವನೆ ಮಾಡೋದು, ರೂಮ್ ನಲ್ಲಿ ಲೈಟಿಂಗ್ಸ್ ಹಾಕಿ ಮೋಜು ಮಸ್ತಿ ಮಾಡೋದನ್ನ ಈ ಪ್ರೇಮಿಗಳು ವಿಡಿಯೋ ಮಾಡಿಕೊಳ್ತಿದ್ರು.

ಕೇರಳ ಮೂಲದ ವಿದ್ಯಾರ್ಥಿಗಳೇ ಟಾರ್ಗೆಟ್

ಈ ಖತರ್ನಾಕ್ ಜೋಡಿ ಕೇರಳ ಮೂಲದ ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ, ಡ್ರಗ್ಸ್ ಡೀಲ್‌ಗೆ ಬಳಸಿಕೊಳ್ಳುತ್ತಾ ಇದ್ದರು.  ಐಷಾರಾಮಿ ಲೈಫ್ ಗೆ ಡ್ರಗ್ಸ್ ಸಪ್ಲೈ ಮಾಡೋದನ್ನೇ ವೃತ್ತಿ ಮಾಡಿಕೊಂಡಿದ್ದರು. ಆಂಧ್ರದ ವಿಶಾಖಪಟ್ಟಣಂಗೆ ಬಸ್‌ನಲ್ಲೇ ಹೋಗಿ ಆಶಿಶ್ ಆಯಿಲ್ ತರುತ್ತಾ ಇದ್ದರು ಎನ್ನಲಾಗಿದೆ. ಬಸ್ ನಲ್ಲಿ ಸಪ್ಲೈ ಮಾಡಿದ್ರೆ ಪೊಲೀಸ್ರಿಗೆ ಸಿಗಲ್ಲವೆಂದು ಪ್ಲಾನ್ ಮಾಡಿ ಮಾರಾಟ ಮಾಡುತ್ತಿದ್ದರು.

ಇದನ್ನೂ ಓದಿ: Murder: "ಮನೆಗೆ ಬಾ" ಅಂತ ಕರೆಸಿಕೊಂಡಳು ಆಂಟಿ! ಅಲ್ಲಿ ಅವಳೊಬ್ಬಳೇ ಇರಲಿಲ್ಲ! ಮುಂದೇನಾಯ್ತು ಗೊತ್ತಾ?

 ದಾಬಸ್‌ ಪೇಟೆ ಪೊಲೀಸರಿಂದ ಗಾಂಜಾ ವಶ

ಮತ್ತೊಂದು ಪ್ರಕರಣದಲ್ಲಿ  ಹೊರ ರಾಜ್ಯದ ಕಾರ್ಮಿಕರಿಗೆ ಗಾಂಜಾ ಸಪ್ಲೈ ಮಾಡುತ್ತಿದ್ದ ಅರೋಪಿಯನ್ನು ದಾಬಸ್ ಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಬನಶಂಕರಿಯ ಮಧು ಎಂದು ಗುರುತಿಸಲಾಗಿದೆ.

ದಾಬಸ್ ಪೇಟೆ ಕೈಗಾರಿಕಾ ಪ್ರದೇಶದಲ್ಲಿ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ಮಾಡಿ, ಆರೋಪಿಯನ್ನು ಬಂಧಿಸಿದ್ದಾರೆ. ಇನ್ನು ಬಂಧಿತನಿಂದ 2 ಕೆಜಿಯಷ್ಟು ಗಾಂಜಾ ಹಾಗೂ ನಗದು ಹಣ, ಮೊಬೈಲ್ ಜಪ್ತಿ ಮಾಡಿಕೊಳ್ಳಲಾಗಿದೆ.
Published by:Annappa Achari
First published: