ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಶಾಸಕ ಹ್ಯಾರಿಸ್‌ ಸಂಬಂಧಿ ಬ್ಯಾಗ್‌ನಲ್ಲಿ 2 ಜೀವಂತ ಬುಲೆಟ್‌ ಪತ್ತೆ

ಬೆಳಗ್ಗೆ ಮನೆಯಿಂದ ಹೊರಡುವಾಗ ಆ ಬ್ಯಾಗ್‌ನಿಂದ 2 ಜೀವಂತ ಗುಂಡುಗಳನ್ನು ತೆಗೆದಿಡಲು ಮರೆತುಹೋಯಿತು ಎಂದು ಪೊಲೀಸರು ಹಾಗೂ CISF ಅಧಿಕಾರಿಗಳಿಗೆ ಅವರು ಸಮಜಾಯಿಷಿ ನೀಡಿದರು.

ವಿಮಾನ ನಿಲ್ದಾಣ.

ವಿಮಾನ ನಿಲ್ದಾಣ.

  • Share this:

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Bangalore Airport-  KIA) ಅಧಿಕಾರಿಗಳು ಶಾಂತಿನಗರದ ಕಾಂಗ್ರೆಸ್ ಶಾಸಕ ಎನ್‌.ಎ. ಹ್ಯಾರಿಸ್‌ (N A Harries) ಅವರ ಸಂಬಂಧಿ ಉಮರ್ ಫಾರೂಕ್ ಹ್ಯಾರಿಸ್‌ ಅವರ ಕ್ಯಾಬಿನ್‌ ಬ್ಯಾಗೇಜ್‌ನಲ್ಲಿ 2 ಜೀವಂತ ಬುಲೆಟ್‌ಗಳನ್ನು ಪತ್ತೆ ಹಚ್ಚಿದರು. ಇದರ ಪರಿಣಾಮ  ಶಾಸಕನ ಸಂಬಂಧಿಯನ್ನು ಕೆಲ ಕಾಲ ವಿಮಾನ ನಿಲ್ದಾಣದಲ್ಲಿ ತಡೆಹಿಡಿದಿದ್ದ ಘಟನೆ ನಡೆದಿದೆ. ಮಂಗಳವಾರ ಬೆಳಗ್ಗೆ 9.30ರ ಸುಮಾರಿಗೆ ಅವರು ದುಬೈಗೆ ವಿಮಾನ ಹತ್ತಲು ಹೊರಟಿದ್ದಾಗ ಸುಮಾರು 70ರ ಹರೆಯದ ಫಾರೂಕ್‌ ಬಳಿ ಅಧಿಕಾರಿಗಳು ಬುಲೆಟ್‌ಗಳನ್ನು ಪತ್ತೆ ಮಾಡಿದರು ಎಂದು ತಿಳಿದುಬಂದಿದೆ.


ನಂತರ ಶೀಘ್ರದಲ್ಲೇ, ಈ ವಿಷಯವನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಗಮನಕ್ಕೆ ತರಲಾಯಿತು. CISF ಅಧಿಕಾರಿಗಳು KIA ಠಾಣೆಯ ಸಂಬಂಧಪಟ್ಟ ಪೊಲೀಸರಿಗೆ ಅಲರ್ಟ್‌ ಮಾಡಿದರು.


ತೆಗೆದಿಡಲು ಮರೆತಿದ್ದ ಫಾರೂಕ್​

ಈ ಮಧ್ಯೆ, ಶಾಸಕ ಎನ್‌.ಎ. ಹ್ಯಾರಿಸ್‌ ಸಂಬಂಧಿ ಫಾರೂಕ್‌ ತನ್ನ ಶಸ್ತ್ರಾಸ್ತ್ರ ಪರವಾನಗಿಯ ದಾಖಲೆಗಳನ್ನು ತರಿಸುವಲ್ಲಿ ಯಶಸ್ವಿಯಾದರು.  ತಾನು ಬುಲೆಟ್‌ಗಳನ್ನು ಆ ಬ್ಯಾಗ್‌ನಲ್ಲೇ ಇಟ್ಟಿದ್ದೆ. ಬೆಳಗ್ಗೆ ಮನೆಯಿಂದ ಹೊರಡುವಾಗ ಆ ಬ್ಯಾಗ್‌ನಿಂದ 2 ಜೀವಂತ ಗುಂಡುಗಳನ್ನು ತೆಗೆದಿಡಲು ಮರೆತುಹೋಯಿತು ಎಂದು ಪೊಲೀಸರು ಹಾಗೂ CISF ಅಧಿಕಾರಿಗಳಿಗೆ ಸಮಜಾಯಿಷಿ ನೀಡಿದರು.


ಬುಲೆಟ್​ ವಶಕ್ಕೆ ಪಡೆದ ಅಧಿಕಾರಿಗಳು

ಈ ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿದ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನ ಮೂಲಗಳು, ನಾವು ಅವರ ಲೈಸೆನ್ಸ್‌ ಅನ್ನು ಕ್ರಾಸ್‌ಚೆಕ್‌ ಮಾಡಿದೆವು ಮತ್ತು ಅದರ ಸತ್ಯಾಸತ್ಯತೆಯನ್ನು ದೃಢೀಕರಿಸಿದ್ದೇವೆ. ಬಳಿಕ, ನಾವು ಅವರಿಗೆ ಪ್ರಯಾಣ ಮಾಡಲು ಅವಕಾಶ ಮಾಡಿಕೊಟ್ಟೆವು. ಆದರೆ, ಅವರ ಬಳಿಯಿದ್ದ ಬುಲೆಟ್‌ಗಳನ್ನು ಸೀಜ್‌ ಮಾಡಿದ್ದೇವೆ’’ ಎಂದು ತಿಳಿಸಿವೆ.


ಇದನ್ನು ಓದಿ: ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕ್ರಿಯಾಶೀಲರಾದ ಶ್ರದ್ಧಾ ಶೆಟ್ಟರ್​; ಹೆಬ್ಬಾಳ್ಕರ್​ ವಿರುದ್ಧ ಪೈಪೋಟಿಗೆ ಸಿದ್ದತೆ?

ಇನ್ನು, ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಈ ರೀತಿ ಘಟನೆಗಳು ವರದಿಯಾಗುತ್ತಿರುವುದು ಇದೇ ಮೊದಲನೇ ಬಾರಿಯಲ್ಲ. ಈ ಹಿಂದೆಯೂ ಇಂತಹ ಹಲವು ಪ್ರಕರಣಗಳು ನಡೆದಿವೆ. ಈ ವರ್ಷದಲ್ಲೇ ಇಂತಹ ಹಲವು ಘಟನೆಗಳು ವರದಿಯಾಗಿವೆ.


ಇದೇ ಮೊದಲಲ್ಲ ಪ್ರಕರಣ

ಮಾರ್ಚ್‌ ತಿಂಗಳಲ್ಲಿ ಬೆಂಗಳೂರಿನಿಂದ ದೆಹಲಿಗೆ ಹೋಗುತ್ತಿದ್ದ ವ್ಯಕ್ತಿಯೊಬ್ಬನ ಬ್ಯಾಗ್‌ನಲ್ಲಿ 1 ಜೀವಂತ ಬುಲೆಟ್‌ ಪತ್ತೆಯಾಗಿತ್ತು. ತನ್ನ ಬ್ಯಾಗ್‌ನಲ್ಲಿ ಗುಂಡು ಹೇಗೆ ಬಂತೆಂದು ತನಗೆ ಗೊತ್ತೇ ಇಲ್ಲ ಎಂದು ಆತ ಹೇಳಿಕೊಂಡಿದ್ದ. ಆತನ ಬಳಿ ಯಾವುದೇ ಗನ್‌ ಲೈಸೆನ್ಸ್ ಇಲ್ಲದ ಕಾರಣ CISF ಅಧಿಕಾರಿಗಳು ಆತನನ್ನು ಬೆಂಗಳೂರು ಪೊಲೀಸರಿಗೆ ಹಸ್ತಾಂತರ ಮಾಡಿದ್ದರು.


ಇದನ್ನು ಓದಿ: ಮೊಟ್ಟೆ ಗಂಟಲಲ್ಲಿ ಸಿಲುಕಿ ಮಹಿಳೆ ಸಾವು

ಈ ಹಿಂದೆ ರೈಫಲ್​ ವಶಕ್ಕೆ ಪಡೆದಿದ್ದ ಪೊಲೀಸರು

ಇದೇ ರೀತಿ, ಜನವರಿಯಲ್ಲೂ ವ್ಯಕ್ತಿಯೊಬ್ಬರ ಹ್ಯಾಂಡ್‌ಬ್ಯಾಗ್‌ನಲ್ಲಿ 10 ಜೀವಂತ ಬುಲೆಟ್‌ಗಳು ಹಾಗೂ .22 ಎಂಎಂ ರೈಫಲ್‌ ಅನ್ನು ವಶಪಡಿಸಿಕೊಂಡಿದ್ದರು. ಈತನ ಬಳಿಯೂ ಲೈಸೆನ್ಸ್ ಇಲ್ಲದ ಕಾರಣ ನಗರದ ಪೊಲೀಸರಿಗೆ ಆತನನ್ನು ಹಸ್ತಾಂತರ ಮಾಡಿದ್ದರು. ಕೆ.ಪಿ. ಪ್ರವೀಣ ಎಂಬ ಪ್ರಯಾಣಿಕ ಬೆಂಗಳೂರಿನ ನ್ಯೂ ತಿಪ್ಪಸಂದ್ರ ನಿವಾಸಿಯಾಗಿದ್ದು, ಆತ ಬೆಂಗಳೂರಿನಿಂದ ಹೊಸದಿಲ್ಲಿಗೆ ವಿಮಾನದಲ್ಲಿ ಪ್ರಯಾಣ ಮಾಡಲು ಹೊರಟಿದ್ದ. ರಾಷ್ಟ್ರ ರಾಜಧಾನಿಯಲ್ಲಿ ಟ್ರೈನಿಂಗ್‌ ಕಾರ್ಯಕ್ರಮವೊಂದಕ್ಕೆ ಹೊರಟಿದ್ದಾಗಿ ವ್ಯಕ್ತಿ ಹೇಳಿಕೊಂಡಿದ್ದರು. ಆದರೆ, ಪೊಲೀಸರು ಆತನನ್ನು ವಶಪಡಿಸಿಕೊಂಡು ವಿಚಾರಣೆ ನಡೆಸಿದ್ದರು.First published: