ಆಸ್ಪತ್ರೆಗೆ ಬರುತ್ತಿದ್ದ ಕೊರೋನಾ ಲಸಿಕೆ ಕದ್ದು ಮನೆಯಲ್ಲಿ ಮಾರಾಟ ಮಾಡುತ್ತಿದ್ದ ವೈದ್ಯೆ ಬಂಧನ

ಲಸಿಕೆ ಅಕ್ರಮದ‌ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪೊಲೀಸರು ಬೇರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಹ ಮಾಹಿತಿ ಕಲೆಹಾಕುತ್ತಿದಾರೆ. ಡಾಕ್ಟರ್ ಅರೆಸ್ಟ್ ಆದ ಬಳಿಕ ಬಿಬಿಎಂಪಿ ವೈದ್ಯರು ಪರಿಶೀಲಿಸಿದ್ದು, ಈ ಸಂದರ್ಭದಲ್ಲಿ ವ್ಯಾಕ್ಸಿನೇಷನ್ ಸರಿಯಾಗಿ ಮಾಡದಿರುವುದು ಪತ್ತೆಯಾಗಿದೆ. ಅಲ್ಲದೆ ಸಿರೀಂಜ್ ಕೂಡ ಬೇರೆಯದ್ದು ಬಳಸಿದ್ದಾರೆ. ಈ ವ್ಯಾಕ್ಸಿನೇಷನ್ ಬಗ್ಗೆ ಬಿಬಿಎಂಪಿ ಆರೋಗ್ಯಾಧಿಕಾರಿಗಳು ಕಳವಳ ವ್ಯಕ್ತಪಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೋನಾ ಲಸಿಕೆಗಾಗಿ ನಾಗರೀಕರು ಅಸ್ಪತ್ರೆಗಳ ಮುಂದೆ ಪರದಾಡುತ್ತಿದ್ದಾರೆ. ಹೊತ್ತು ಗೊತ್ತು ಇಲ್ಲದೆ ಕ್ಯೂನಲ್ಲಿ ನಿಂತು ಕೊನೆಗೆ ಲಸಿಕೆ ಸಿಗದೆ ವಾಪಸ್ ಹೋಗ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಇಲ್ಲೊಬ್ಬ ವೈದ್ಯೆ ಅಸ್ಪತ್ರೆಗೆ ಬಂದ ಲಸಿಕೆಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿ ಈ ಪೊಲೀಸರ ಅತಿಥಿಯಾಗಿದ್ದಾಳೆ.

ಹೌದು, ದಿನ ನಿತ್ಯ ಕೊರೋನಾ ಲಸಿಕೆ ಪಡೆಯಲು ಹಲವಾರು ಜನ ಅಸ್ಪತ್ರೆಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಇನ್ನೂ ಕೆಲವರು ವಾರಗಟ್ಟಲೆ ಆಸ್ಪತ್ರೆಗೆ ಅಲೆದರೂ ವ್ಯಾಕ್ಸಿನ್ ಇಲ್ಲದೆ ವಾಪಸಾಗುತ್ತಿದ್ದಾರೆ. ಆದರೆ ಬೆಂಗಳೂರಿನ ವೈದ್ಯೆಯೊಬ್ಬಳು ಕಳ್ಳ ಮಾರ್ಗದಲ್ಲಿ ವ್ಯಾಕ್ಸಿನ್ ನೀಡುತ್ತಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು ವೈದ್ಯೆ ಡಾ.ಪುಷ್ಪಿತಾ ಮತ್ತು ಸಿಬ್ಬಂದಿ ಪ್ರೇಮಾ ಅವರನ್ನು ಬಂಧಿಸಿದ್ದಾರೆ. ಡಾ. ಪುಷ್ಪಿತಾ ಮಂಜುನಾಥನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆಯಾಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಆಸ್ಪತ್ರೆಗೆ ಬರುತ್ತಿದ್ದ ಲಸಿಕೆಗಳನ್ನು ಪ್ರೇಮಾ ಮೂಲಕ ಅನ್ನಪೂರ್ಣೇಶ್ವರಿ ನಗರದಲ್ಲಿರುವ ತನ್ನ ಮನೆಯಲ್ಲಿ ದಾಸ್ತಾನು ಮಾಡಿಸುತ್ತಿದ್ದರು. ಬಳಿಕ ಮನೆಯಲ್ಲಿಯೇ ಅಕ್ರಮವಾಗಿ ಲಸಿಕೆ ನೀಡುವ ದಂಧೆ ಕೂಡ ಆರಂಭಿಸಿದ್ದರು.

ಏ.23 ರಿಂದ ಈವರೆಗೆ ಲಸಿಕೆ ಹಾಕಿರೋ ವೈದ್ಯೆ ಪುಷ್ಪಿತಾ ಒಂದು ಲಸಿಕೆಗೆ ತಲಾ 500 ರೂ. ಪಡೆಯುತ್ತಿದ್ದಳಂತೆ. ಮನೆಯಲ್ಲಿ ಅಕ್ರಮವಾಗಿ ಲಸಿಕೆ ಹಾಕುತ್ತಿರೋ‌ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ತಾವು ಕೂಡ ಲಸಿಕೆ ಪಡೆಯುವ ನೆಪದಲ್ಲಿ ಮನೆಗೆ ತೆರಳಿದ್ದಾರೆ. ಈ ವೇಳೆ ಮನೆಯಲ್ಲಿ ಅಕ್ರಮವಾಗಿ ಕೋವಿಶೀಲ್ಡ್ ಲಸಿಕೆ ಹಾಕುತ್ತಿರೋದನ್ನ ಖಚಿತ ಪಡಿಸಿಕೊಂಡ ಪೊಲೀಸರು ರೆಡ್ ಹ್ಯಾಂಡಾಗಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 1 ವ್ಯಾಕ್ಸಿನ್ ಕ್ಯಾರಿಯರ್, ಬಳಸಿದ ಹಾಗೂ ಬಳಸದ ಸಿರೀಂಜ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನು ಓದಿ: KR Pet Krishna: ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ ನಿಧನ; ಸಿಎಂ ಬಿಎಸ್​ವೈ, ಎಚ್​ಡಿಕೆ ಸೇರಿ ಹಲವು ನಾಯಕರ ಕಂಬನಿ

ಇನ್ನೂ ವ್ಯಾಕ್ಸಿನ್ ಗಾಗಿ ಮೊದಲೇ ಬುಕ್ಕಿಂಗ್ ಸಹ ನಡೆಯುತ್ತಿತ್ತಂತೆ, ಶ್ರೀಮಂತರು ಫೋನ್ ಮೂಲಕ ವ್ಯಾಕ್ಸಿನ್ ಬುಕ್ ಮಾಡಿ ಹೆಸರನ್ನು ಹೇಳುತ್ತಿದ್ದರು. ವೈದ್ಯೆ ನೋಟ್ ಬುಕ್ ಅಲ್ಲಿ ಹೆಸರು ಬರೆದುಕೊಳ್ಳುತ್ತಿದ್ದಳು. ಬಳಿಕ ವ್ಯಾಕ್ಸಿನ್​ಗಾಗಿ ಸಾಲು ನಿಂತವರಲ್ಲಿ ಇವರ ಹೆಸರು ಕೇಳಿ, ನೋಟ್ ಬುಕ್ ನಲ್ಲಿ ರಿಜಿಸ್ಟರ್ ಆಗಿದ್ದರೆ ಮಾತ್ರ ವ್ಯಾಕ್ಸಿನ್ ನೀಡಲಾಗುತ್ತಿತ್ತು. ಹೀಗಾಗಿ ಒಂದು ವಾರ ಮುಂಚೆಯೇ ವ್ಯಾಕ್ಸಿನ್ ಗೆ ಮುಂಗಡ ಬುಕ್ಕಿಂಗ್ ಮಾಡಬೇಕಿತ್ತು. ಕದ್ದು ಮುಚ್ಚಿ ವ್ಯಾಕ್ಸಿನ್ ತೆಗೆದುಕೊಳ್ಳುತ್ತಿದ್ದವರೆಲ್ಲ ಶ್ರೀಮಂತರೇ ಆಗಿದ್ದರು. ಲಸಿಕೆ ಕೊಡಲು ಹೆಸರು, ಆಧಾರ್ ನಂಬರ್ ಇಟ್ಟುಕೊಂಡು ಮನೆಯಲ್ಲಿ ವ್ಯಾಕ್ಸಿನ್ ನೀಡುತ್ತಿದ್ದರು. ಬಳಿಕ ಮರು ದಿನ ಆಸ್ಪತ್ರೆಗೆ ಹೋಗಿ ಕೋವಿನ್ ಆ್ಯಪ್ ನಲ್ಲಿ ಎಂಟ್ರಿ ಮಾಡುತಿದ್ದರು. ಜೊತೆಗೆ ಕೋವಿನ್ ಆ್ಯಪ್​ನಲ್ಲಿ ವಯಸ್ಸಿನ ಲೆಕ್ಕ ತಪ್ಪು ಹಾಕುತ್ತಿದ್ದರು. 23 ವರ್ಷದವರಿಗೆ ವ್ಯಾಕ್ಸಿನೇಷನ್ ಮಾಡಿದರೂ ವಯಸ್ಸು ಎಂಟ್ರಿ ಮಾಡುವಾಗ ಮೋಸ ಮಾಡುತ್ತಿದ್ದರು. ಪೊಲೀಸರ ತನಿಖೆಯಲ್ಲಿ  ನಿನ್ನೆ ಒಂದೇ ದಿನ 53 ಜನರಿಗೆ ವ್ಯಾಕ್ಸಿನೇಷನ್ ಮಾಡಿದ್ದು, ಕೇವಲ ಒಂದು ಗಂಟೆಯಲ್ಲಿ 53 ಜನರಿಗೆ ವ್ಯಾಕ್ಸಿನೇಷನ್ ಮಾಡಿದ್ದಾರೆ. ಪೊಲೀಸರು ದಾಳಿ ಮಾಡುವ ಮುನ್ನ 53 ಜನರಿಗೆ ವ್ಯಾಕ್ಸಿನೇಷನ್ ನಡೆದಿದ್ದು ಒಟ್ಟು 80 ಜನರಿಗೆ ವ್ಯಾಕ್ಸಿನೇಷನ್ ಮಾಡುವ ನಿರೀಕ್ಷೆಯನ್ನು ಪುಷ್ಪಲತಾ ಹೊಂದಿದ್ದಳು ಎನ್ನಲಾಗಿದೆ.

ಇನ್ನೂ ಲಸಿಕೆ ಅಕ್ರಮದ‌ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪೊಲೀಸರು ಬೇರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಹ ಮಾಹಿತಿ ಕಲೆಹಾಕುತ್ತಿದಾರೆ. ಡಾಕ್ಟರ್ ಅರೆಸ್ಟ್ ಆದ ಬಳಿಕ ಬಿಬಿಎಂಪಿ ವೈದ್ಯರು ಪರಿಶೀಲಿಸಿದ್ದು, ಈ ಸಂದರ್ಭದಲ್ಲಿ ವ್ಯಾಕ್ಸಿನೇಷನ್ ಸರಿಯಾಗಿ ಮಾಡದಿರುವುದು ಪತ್ತೆಯಾಗಿದೆ. ಅಲ್ಲದೆ ಸಿರೀಂಜ್ ಕೂಡ ಬೇರೆಯದ್ದು ಬಳಸಿದ್ದಾರೆ. ಈ ವ್ಯಾಕ್ಸಿನೇಷನ್ ಬಗ್ಗೆ ಬಿಬಿಎಂಪಿ ಆರೋಗ್ಯಾಧಿಕಾರಿಗಳು ಕಳವಳ ವ್ಯಕ್ತಪಡಿದ್ದಾರೆ. ಸರ್ಕಾರ ಲಸಿಕೆ ಕಾರ್ಯಕ್ರಮದ‌ಲ್ಲಿ ಇನ್ನಷ್ಟು ಕಠಿಣ ನಿಯಮಗಳನ್ನ ತರಬೇಕು ಅನ್ನೋದು‌ ಸಾರ್ವಜನಿಕರ ಅಭಿಪ್ರಾಯವಾಗಿದೆ.
Published by:HR Ramesh
First published: