HOME » NEWS » State » BENGALURU URBAN LABOUR MINISTER SHIVARAM HEBBAR GAVE FITTING REPLY TO ESHWARAPPA KVD

ಹೊರಗಿನಿಂದ ಬಂದವರಿಂದಲೇ ಗೊಂದಲ: ಈಶ್ವರಪ್ಪ ಹೇಳಿಕೆಗೆ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ತಿರುಗೇಟು!

7ನೇ ತರಗತಿ ಓದುತ್ತಿರುವ ಹುಡುಗನನ್ನು ಕೇಳಿದರೂ ಹೇಳುತ್ತಾನೆ, ಬಿಜೆಪಿ ಸರ್ಕಾರಕ್ಕೆ ವಲಸೆ ಬಂದ 17 ಮಂದಿಯೇ ಕಾರಣ ಅಂತ. ಆದರೆ ಈಶ್ವರಪ್ಪನಂತ ಹಿರಿಯ ಮುಖಂಡರೇ ಹೀಗೆ ಹೇಳಿಕೆ ನೀಡಿರುವುದು ನೋವನ್ನುಂಟು ಮಾಡಿದೆ

Kavya V | news18-kannada
Updated:June 16, 2021, 7:17 PM IST
ಹೊರಗಿನಿಂದ ಬಂದವರಿಂದಲೇ ಗೊಂದಲ: ಈಶ್ವರಪ್ಪ ಹೇಳಿಕೆಗೆ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ತಿರುಗೇಟು!
ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್
  • Share this:
ಬೆಂಗಳೂರು: ಸಿಎಂ ಬಿ.ಎಸ್​.ಯಡಿಯೂರಪ್ಪ ನಾಯಕತ್ವ ಬದಲಾವಣೆ ವಿಚಾರ ರಾಜಕೀಯ ಮೇಲಾಟ ಬೆನ್ನಲ್ಲೇ ಮೂಲ ಬಿಜೆಪಿಗರು ಹಾಗೂ ವಲಸಿಗರ ಮಧ್ಯೆ ತಿಕ್ಕಾಟ ಶುರುವಾಗಿದೆ. ಬಿಜೆಪಿ ಹಿರಿಯ ಮುಖಂಡ ಸಚಿವ ಕೆ.ಎಸ್​.ಈಶ್ವರಪ್ಪ ಹೊರಗಿನಿಂದ ಬಂದು ಸಚಿವರಾಗಿರುವವರಿಂದಲೇ ಇಷ್ಟೆಲ್ಲಾ ಗೊಂದಲ ಎಂದು ದೂರಿದ್ದಾರೆ. ಸರ್ಕಾರ ರಚನೆಗೆ ಕಾರಣರಾದವರನ್ನೇ ದೂರುತ್ತಿರುವುದಕ್ಕೆ ಕಾರ್ಮಿಕ ಸಚಿವ ಶಿವರಾಮ್​​ ಹೆಬ್ಬಾರು ತಿರುಗೇಟು ನೀಡಿದ್ದಾರೆ. 7ನೇ ತರಗತಿ ಓದುತ್ತಿರುವ ಹುಡುಗನನ್ನು ಕೇಳಿದರೂ ಹೇಳುತ್ತಾನೆ, ಬಿಜೆಪಿ ಸರ್ಕಾರಕ್ಕೆ ವಲಸೆ ಬಂದ 17 ಮಂದಿಯೇ ಕಾರಣ ಅಂತ. ಆದರೆ ಈಶ್ವರಪ್ಪನಂತ ಹಿರಿಯ ಮುಖಂಡರೇ ಹೀಗೆ ಹೇಳಿಕೆ ನೀಡಿರುವುದು ನೋವನ್ನುಂಟು ಮಾಡಿದೆ ಎಂದು ಹೆಬ್ಬಾರ್​ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ನ್ಯೂಸ್​ 18 ಕನ್ನಡದೊಂದಿಗೆ ಮಾತನಾಡಿದ ಅವರು, ನಾವು ಎಲ್ಲಿಯೂ ಯಡಿಯೂರಪ್ಪ ನಾಯಕತ್ವದ ಬಗ್ಗೆ ಮಾತನಾಡಿಲ್ಲ. ಹೇಳಿಕೆ ನೀಡಿರುವ ಈಶ್ವರಪ್ಪನವರು ಆತ್ಮಾವಲೋಕನ ಮಾಡಿಕೊಳ್ಳಲಿ. ನಾಯಕತ್ವ ಗೊಂದಲಕ್ಕೆ ವಲಸೆ ಬಂದವರು ಕಾರಣರಲ್ಲ ಎಂದು ಸ್ಪಷ್ಟಪಡಿಸಿದರು. ಬಿಜೆಪಿ ಪಕ್ಷದಿಂದ ಚುನಾವಣೆಗೆ ನಿಂತು ಗೆದ್ದು ಸಚಿವರಾಗಿದ್ದೇವೆ. ನಾವೂ ಬಿಜೆಪಿ ಪಕ್ಷಕ್ಕೆ ನಿಷ್ಠರಾಗಿದ್ದೇವೆ, ಯಡಿಯೂರಪ್ಪ ನಾಯಕತ್ವದಲ್ಲಿ ನಂಬಿಕೆ ಹೊಂದಿದ್ದೇವೆ. ಎಲ್ಲಾ ಪಕ್ಷಗಳಲ್ಲಿ ಇರುವಂತೆ ನಮ್ಮ ಪಕ್ಷದಲ್ಲೂ ಸಣ್ಣಪುಟ್ಟ ಅಸಮಾಧಾನ ಇರಬಹುದು. ಅದನ್ನು 4 ಗೋಡೆಗಳ ನಡುವೆ ಇತ್ಯರ್ಥ ಮಾಡಿಕೊಳ್ಳುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯಕ್ಕೆ ಬಂದಿರುವ ಬಿಜೆಪಿ ಉಸ್ತುವಾರಿ ಅರುಣ್​ ಸಿಂಗ್​ ಅವರು 17 ಜನರನ್ನು ಕರೆದು ಕೇಳಲಿ. ನಾವು ಯಡಿಯೂರಪ್ಪ ನಾಯಕತ್ವದ ಬಗ್ಗೆ ಅಸಮಾಧಾನವಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತೇವೆ. ಆಗ ಈಶ್ವರಪ್ಪನವರ ಆರೋಪಕ್ಕೆ ಪ್ರತ್ಯುತ್ತರ ಸಿಗುತ್ತೆ. ಹೈಕಮಾಂಡ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರು ಈ ಬಗ್ಗೆ ಸ್ಪಷ್ಟ ನಿರ್ದೇಶನ ಕೊಡುತ್ತಾರೆ,. ಕೊಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Youtube Video


ಇನ್ನು ಈಶ್ವರಪ್ಪ ಅವರ ಹೇಳಿಕೆಗೆ ಡಿಸಿಎಂ ಅಶ್ವಥ್​ ನಾರಾಯಣ ಅವರು ಸಹ ಪರೋಕ್ಷವಾಗಿ ಟಾಂಗ್​ ಕೊಟ್ಟಿದ್ದಾರೆ. ಬಿಜೆಪಿಯಲ್ಲಿ ಒಳಗೆ ಹೊರಗೆ ಅನ್ನೋದು ಯಾವುದು ಇಲ್ಲ. ಕೋರ್ಟ್​ಗೆ ಹೋಗಿ ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸಿ ಸಚಿವರಾಗಿರಬೇಕಾದರೆ ಹೊರಗಿನವರು ಎಂದು ಹೇಳುವುದು ಸರಿ ಬರಲ್ಲ ಎಂದು ಈಶ್ವರಪ್ಪ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇನ್ನು ಇಂದು ಸಂಜೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್​ ಸಿಂಗ್ ಬೆಂಗಳೂರಿಗೆ ಆಗಮಿಸಿದ್ದು, ನಾಯಕರೊಂದಿಗೆ ಸಭೆಗಳ ಮೇಲೆ ಸಭೆಗಳನ್ನು ಮಾಡುತ್ತಿದ್ದಾರೆ.
Published by: Kavya V
First published: June 16, 2021, 7:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories