ಅಂಬಿ ಬಳಗ ಸಿಡಿದೇಳುತ್ತಲೇ ತಣ್ಣಗಾದರಾ ಎಚ್.ಡಿ.ಕುಮಾರಸ್ವಾಮಿ.. ಮಂಡ್ಯ ಸಂಸದೆ ಸುಮಲತಾ ಮೇಲುಗೈ?

ಕುಮಾರಸ್ವಾಮಿ ಅವರು ಟ್ವೀಟ್​ ಮಾಡಿದ್ದು, ವಾಗ್ಯುದ್ಧವನ್ನು ತಣ್ಣಗಾಗಿಸುವ ಮಾತುಗಳನ್ನು ಆಡಿದ್ದಾರೆ. ನಿನ್ನೆ ಅಂಬಿ ಬಳಗ ಸಿಡಿದೇಳುತ್ತಲೇ ಎಚ್​ಡಿಕೆ ತಣ್ಣಗಾಗಿ ವಾಗ್ಯುದ್ಧದಿಂದ ಹಿಂದೆ ಸರಿಸದರಾ ಎಂಬ ಭಾವವನ್ನು ಅವರ ಟ್ವೀಟ್​ಗಳು ವ್ಯಕ್ತಪಡಿಸುತ್ತಿವೆ.  

ಕುಮಾರಸ್ವಾಮಿ - ಸುಮಲತಾ

ಕುಮಾರಸ್ವಾಮಿ - ಸುಮಲತಾ

  • Share this:
ಬೆಂಗಳೂರು : ಕಳೆದೆರೆಡು ದಿನಗಳಿಂದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್​ ಹಾಗೂ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ನಡುವಿನ ವಾಕ್ಸಮರ ತಾರಕಕ್ಕೇರಿತ್ತು. ನಿನ್ನೆ ಎಚ್​ಡಿಕೆ ವಿರುದ್ಧ ಅಂಬಿ ಆಪ್ತರಾದ ರಾಕ್​​ಲೈನ್​​ ವೆಂಕಟೇಶ್​​, ನಟ ದೊಡ್ಡಣ್ಣ ವಾಗ್ದಾಳಿ ನಡೆಸಿದ್ದರು. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಕುಮಾರಸ್ವಾಮಿ ಅವರು ಟ್ವೀಟ್​ ಮಾಡಿದ್ದು, ವಾಗ್ಯುದ್ಧವನ್ನು ತಣ್ಣಗಾಗಿಸುವ ಮಾತುಗಳನ್ನು ಆಡಿದ್ದಾರೆ. ನಿನ್ನೆ ಅಂಬಿ ಬಳಗ ಸಿಡಿದೇಳುತ್ತಲೇ ಎಚ್​ಡಿಕೆ ತಣ್ಣಗಾಗಿ ವಾಗ್ಯುದ್ಧದಿಂದ ಹಿಂದೆ ಸರಿಸದರಾ ಎಂಬ ಭಾವವನ್ನು ಅವರ ಟ್ವೀಟ್​ಗಳು ವ್ಯಕ್ತಪಡಿಸುತ್ತಿವೆ.  

ಎಚ್​ಡಿಕೆ ಟ್ವೀಟ್​ ಮಾಡಿದ್ದು, ಕಾರ್ಯಕರ್ತ ಬಂಧುಗಳೇ, ಅಭಿಮಾನಿ ಅಣ್ಣ ತಮ್ಮಂದಿರೆ, ಅಕ್ಕ ತಂಗಿಯರೇ ನಾವು ಹೋರಾಟ ಮಾಡಬೇಕಾದ ವಿಚಾರ ಬಹಳಷ್ಟಿವೆ. ಕನ್ನಡ, ಕನ್ನಡಿಗ, ಕರ್ನಾಟಕಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನಮಗೆ ಬಹುದೊಡ್ಡ ನ್ಯಾಯ ಸಿಗಬೇಕಿದೆ. ನನ್ನ ಹೋರಾಟವನ್ನು ಈಗಾಗಲೇ ಅತ್ತ ಕೇಂದ್ರೀಕರಿಸಿದ್ದೇನೆ. ನಾಡು ನುಡಿಗಾಗಿ ಹೋರಾಡೋಣ. ಬೇರೆಲ್ಲ ವಿಷಯಗಳನ್ನು ನಾವು ಉಪೇಕ್ಷಿಸೋಣ ಎನ್ನುವ ಮೂಲಕ ಸುಮಲತಾರೊಂದಿಗಿನ ಜಟಾಪಟಿಗೆ ಅಂತ್ಯ ಹಾಡಲು ಎಚ್​ಡಿಕೆ ಮುಂದಾಗಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿವೆ.

ಪ್ರಾದೇಶಿಕ ಪಕ್ಷವಾಗಿ ನಾವು ಮಾತಾಡುವುದಿದೆ, ಮಾತಾಡೋಣ. ಪ್ರಾದೇಶಿಕ ವಿಚಾರಗಳು ಇತ್ತೀಚೆಗೆ ಗೌಣವಾಗುತ್ತಿವೆ, ಅದರ ಬಗ್ಗೆ ಮಾತಾಡೋಣ. ಒಕ್ಕೂಟ ವ್ಯವಸ್ಥೆಯಲ್ಲಿ ನಮಗೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ನಾವು ದೊಡ್ಡದಾಗಿ ಕೂಗಿ ಹೇಳೋಣ. ಪ್ರಾದೇಶಿಕ ಅಸ್ಮಿತೆಯ ವಿಚಾರವನ್ನು ಜನರೊಂದಿಗೆ ಪ್ರಸ್ತಾಪಿಸೋಣ. ಆದರೆ, ಅನಗತ್ಯ ಮಾತು ಅನಗತ್ಯವಷ್ಟೆ. ನಾವು ಸಿಡಿಯಬೇಕಾದ ಪರಿಸ್ಥಿತಿ ಇದೆ, ಸಿಡಿಯೋಣ. ಕಾವೇರಿ ಜಲದ ಯೋಜನೆಗಳಿಗೆ ತಡೆಯೊಡ್ಡುತ್ತಿರುವವರ ವಿರುದ್ಧ ಸಿಡಿಯೋಣ. ನಮ್ಮ ನೆಲದಲ್ಲಿ ನಮ್ಮ ಕನ್ನಡ ಧ್ವಜವನ್ನು ಹಾರಿಸಲು ಬಿಡಲೊಲ್ಲದ ಪಟ್ಟಭದ್ರರ ವಿರುದ್ಧ ಸಿಡಿಯೋಣ. ನಮಗೆ ನೀಡಬೇಕಾದ ಪರಿಹಾರ, ಅನುದಾನ ನೀಡದ ವ್ಯವಸ್ಥೆಯ ವಿರುದ್ಧ ಸಿಡಿಯ ಬೇಕಾಗಿದೆ ಸಿಡಿಯೋಣ. ಇದು ನಮ್ಮ ಆಯ್ಕೆಯಾಗಲಿ.

ಕೋವಿಡ್‌ ಕಾಲದಲ್ಲಿ ಜೆಡಿಎಸ್‌ ರಾಜಕೀಯ ಮಾಡಲಿಲ್ಲ. ಆದರೆ, ಜನರ ಪರ ನಿಲ್ಲುವುದನ್ನು ಮರೆಯಲಿಲ್ಲ. ಸರ್ಕಾರವನ್ನು ಎಚ್ಚರಿಸದೇ ಇರಲಿಲ್ಲ. ಕರ್ನಾಟಕ, ಕನ್ನಡಿಗರಿಗೆ ಅಪಮಾನವಾದಾಗ ಸಿಡಿಯಲು ಒಂದು ಕ್ಷಣವೂ ತಡ ಮಾಡಿಲ್ಲ. ನಾವು ರಾಜಕೀಯ ಮಾಡೋಣ, ಕರ್ನಾಟಕ ಕೇಂದ್ರಿತ ರಾಜಕಾರಣ ಮಾಡೋಣ. ನಮ್ಮ ಮೇಲಿನ ಆರೋಪಗಳನ್ನು ಜನರ ತೀರ್ಮಾನಕ್ಕೆ ಬಿಡೋಣ ಎಂದು ಕುಮಾರಸ್ವಾಮಿ ಬರೆದುಕೊಂಡಿದ್ದಾರೆ.

ಪರೋಕ್ಷವಾಗಿ ಸುಮಲತಾ ಅವರ ಆರೋಪಗಳನ್ನು ಜನರ ತೀರ್ಮಾನಕ್ಕೆ ಬಿಡುವುದಾಗಿ ಹೇಳಿದ್ದಾರೆ. ಸುಮಲತಾ ಹೆಸರು ಪ್ರಸ್ತಾಪ ಮಾಡದೆ, ಆರೋಪದ ಬಗ್ಗೆ ಪ್ರಸ್ತಾಪಿಸಿದ್ದಾರೆ. ರಾಜ್ಯದಲ್ಲಿ ಚರ್ಚೆ ಮಾಡಬೇಕಿರುವುದು ಬೇಕಾದಷ್ಟು ಇದೆ. ಹೀಗಾಗಿ ಮೊದಲು ನಾವು ಆ ಕಡೆ ಗಮನ ಕೊಡೋಣ. ಇವಾಗ ನನ್ನ ಮೇಲೆ ಬಂದ ಆರೋಪ ಗಳನ್ನು ಜನರಿಗೆ ಬಿಡೋಣ ಎಂದು ಟ್ವೀಟ್​ ಮಾಡಿದ್ದಾರೆ.

ನಿನ್ನೆ ಕುಮಾರಸ್ವಾಮಿ ವಿರುದ್ಧ ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​, ನಟ ದೊಡ್ಡಣ್ಣ ಗಂಭೀರ ಆರೋಪಗಳನ್ನು ಮಾಡಿದ್ದರು. ಅಂಬಿ ಸ್ಮಾರಕ ನಿರ್ಮಾಣಕ್ಕೆ ಮನವಿ ಸಲ್ಲಿಸಿದರೆ, ಮನವಿ ಪತ್ರವನ್ನು ಕುಮಾರಸ್ವಾಮಿ ನನ್ನ ಮುಖದ ಮೇಲೆ ಬಿಸಾಡಿದ್ದರು ಎಂದು ದೊಡ್ಡಣ್ಣ ಆರೋಪಿಸಿದ್ದರು. ನನ್ನ ಮತ್ತು ಸುಮಲತಾರ ಅಶ್ಲೀಲ ವಿಡಿಯೋ ಸೃಷ್ಟಿಸಲು ಕುಮಾರಸ್ವಾಮಿ ಯತ್ನಿಸಿದ್ದರು ಎಂದು ರಾಕ್​​ಲೈನ್​ ಗಂಭೀರ ಆರೋಪ ಮಾಡಿದ್ದರು.

ಇದನ್ನೂ ಓದಿ: ಸುಮಲತಾ ಕೊಳ್ಳೆಗಾಲದ ಮಾಟಗಾರರಂತೆ ನಾನು ಭಸ್ಮ ಆಗೋಗಲಿ ಎಂದಿದ್ದಾರೆ: ರವೀಂದ್ರ ಶ್ರೀಕಂಠಯ್ಯ ಆರೋಪ

ಸುಮಲತಾರೊಂದಿಗಿನ ಜಟಾಪಟಿಯಿಂದ ಕುಮಾರಸ್ವಾಮಿ ಹಿಂದೆ ಸರಿದಿರುವಂತೆ ಕಾಣುತ್ತಿವೆ. ಆದರೆ ಅವರ ಪಕ್ಷದ ಮುಖಂಡ ಶರವಣ ಮಾತ್ರ ಸುಮಲತಾ ಅವರ ವಿಡಿಯೋ ಬಿಡುಗಡೆ ಮಾಡುವ ಮೂಲಕ ವಾಕ್ಸಮರವನ್ನು ಮುಂದುವರಿಸಿದ್ದಾರೆ.
Published by:Kavya V
First published: