ಮೇಕೆದಾಟು ಬಳಿ ಹೋಟೆಲ್​​ಗಳಿಗೆ ನಿರ್ಬಂಧ ಹಾಕಿದ್ದಾರೆ, ನಾವು ನದಿ ಪಕ್ಕ ಮಲಗ್ತೀವಿ: DK Shivakumar

ಹೆದರಿಸಿ, ಬೆದರಿಸಿ ಹೋಟೆಲ್​ಗಳಿಗೆ ನಿರ್ಬಂಧ ಹಾಕಿದ್ದಾರೆ. ಅವರು ಜಾಗ ಕೊಡದೇ ಇದ್ರು ಪರವಾಗಿಲ್ಲ. ಹೊಳೆ-ನದಿ ಪಕ್ಕ ಮಲಗಿಕೊಳ್ಳುತ್ತೇವೆ. ಎಲ್ಲೋ ಒಂದು ಕಡೆ ನಾವು ಮಲ್ಕೊತ್ತೀವಿ.

ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್

  • Share this:
ಬೆಂಗಳೂರು: ರಾಜ್ಯದಲ್ಲಿ ಕೋವಿಡ್​ (Covid) ಸಂಬಂಧ ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ತಂದಿರುವುದರಿಂದ ಜ.9ರಂದ ಕಾಂಗ್ರೆಸ್​(Congress) ಕೈಗೊಳ್ಳಲು ನಿಯೋಜಿಸಿದ್ದ ಮೇಕೆದಾಟು ಪಾದಯಾತ್ರೆಗೆ (Mekedatu Padayatra) ಹಿನ್ನಡೆಯಾಗಿದೆ. ಇದರಿಂದ ಕೆರಳಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(DK Shivakumar), ಸರ್ಕಾರದ ವಿರುದ್ಧ ಕಿಡಿನುಡಿಯನ್ನು ಮುಂದುವರೆಸಿದ್ದಾರೆ. ರಾಜ್ಯ ಸರ್ಕಾರ ತಮ್ಮದೇ ಆದ ನಿಯಮ ಜಾರಿ ಮಾಡಿದೆ. ನೀರಿಗೋಸ್ಕರ ನಡೆಯುವ ಕಾರ್ಯಕ್ರಮ ಇತ್ತು, ಅದಕ್ಕೆ ಸಿಗುವ ವ್ಯಾಪಕ ಬೆಂಬಲ ತಡೆಯೋಕೆ ಆಗದೇ ಈ ರೀತಿ ಮಾಡಿದ್ದಾರೆ. ಚುನಾವಣೆಯಲ್ಲಿ ಸೋಲನ್ನು ಅರಗಿಸಿಕೊಳ್ಳೊಕೆ ಆಗದೆ, ಇವತ್ತು ನಮ್ಮ ಯಾತ್ರೆ ತಡೆಯಲು ದೊಡ್ಡ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದರು.

ಪ್ರಧಾನಿಗಳ ಸಭೆ-ಕಾರ್ಯಕ್ರಮ ಎಂದಿನಂತೆ ಇದೆ

ಅನೇಕ ರಾಷ್ಟ್ರಗಳಲ್ಲಿ ಲಕ್ಷಗಟ್ಟಲೆ ಕೋವಿಡ್ ಇದ್ರು, ಕೂಡ ಯಾವ ನಿರ್ಬಂಧವೂ ಇಲ್ಲ. ಅಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ನಡೆಯುತ್ತಿದೆ. ಇಡೀ ದೇಶದಲ್ಲಿ ಪ್ರಧಾನಿಗಳ ಸಭೆ-ಕಾರ್ಯಕ್ರಮ ಎಂದಿನಂತೆ ನಡೆಯುತ್ತಿದೆ. ನಮ್ಮ ರಾಜ್ಯದಲ್ಲಿ ಮಾತ್ರ ಸ್ಪೆಷಲ್ ಬಿಜೆಪಿ ಕರ್ಫ್ಯೂ ಮಾಡಿದ್ದಾರೆ. ಇಡೀ ವರ್ತಕರ ಸಮಾಜಕ್ಕೆ ತೊಂದರೆ ಕೊಡುವ ಕಾರ್ಯಕ್ರಮ ರೂಪಿಸುತ್ತಿದ್ದಾರೆ. ನಮ್ಮ ಕಾರ್ಯಕ್ರಮ ಮೊಟಕು ಮಾಡಲು, ನಮ್ಮ ಜಿಲ್ಲೆಗಳಲ್ಲಿ ಹೋಟೆಲ್ ಮುಚ್ಚಿಸುವ ಆದೇಶ ಮಾಡಿದ್ದಾರೆ. ಇದನ್ನು ಇಡೀ ರಾಜ್ಯಕ್ಕೆ ಮಾಡಿಸಿದ್ದಾರೆ ಎಂದು ಟೀಕಿಸಿದರು.

ಇದನ್ನೂ ಓದಿ: ಡಿಕೆಶಿ, ಸಿದ್ದರಾಮಯ್ಯ ಇಬ್ಬರೇ ಮೇಕೆದಾಟು ಪಾದಯಾತ್ರೆ ಹೊರಡುತ್ತಾರಾ..? ಹಠಕ್ಕೆ ಬಿದ್ದ Congress ನಾಯಕರು

ಇಂತಹ ಕ್ಷುಲ್ಲಕ ರಾಜಕಾರಣ ಬೇಡ

ನಮ್ಮ ರಾಮನಗರ ಡಿಸಿಗೆ ಹೇಳಿ ಮೇಕೆದಾಟು ಅಕ್ಕಪಕ್ಕದ ಲಾಡ್ಜ್ ಗಳಿಗೆ‌ ನಿರ್ಬಂಧ ಹೇರಿದ್ದಾರೆ. ನಾನು ಕೂಡ ಈಗಾಗಲೇ ಸಿಎಂ ಗೆ ಪತ್ರ ಬರೆದು ಕಳುಹಿಸಿದ್ದೇನೆ. ರಾಜಕಾರಣ ಮಾಡೋಣ, ಆದರೆ ಇಂತಹ ಕ್ಷುಲ್ಲಕ ರಾಜಕಾರಣ ಬೇಡ. ಇಡೀ ರಾಜ್ಯವನ್ನೇ ಲಾಕ್ ಡೌನ್ ಮಾಡಿದ್ದೀರಲ್ಲ, ಇದು ಬಿಜೆಪಿ ಲಾಕ್ ಡೌನ್. ವ್ಯಾಪಾರ ವಹಿವಾಟಿಗಳಿಗೆ ಅವಕಾಶ ಕೊಡಿ ಎಂದು ಪತ್ರ ಬರದಿದ್ದೇನೆ ಎಂದು ತಿಳಿಸಿದರು.

ಹೊಳೆ-ನದಿ ಪಕ್ಕ ಮಲಗಿಕೊಳ್ಳುತ್ತೇವೆ

ಒಂದು ತಿಂಗಳ ಮುಂಚೆಯೇ ನಮಗೆ ಹೋಟೆಲ್, ರೆಸ್ಟೋರೆಂಟ್ ಎಲ್ಲ ಕೊಟ್ಟಿದ್ದಾರೆ. ನಾವು, ಸಿದ್ದರಾಮಯ್ಯ, ಶಾಸಕರು ಎಲ್ಲರು,  ನಿವಾರವೇ ಅಲ್ಲಿಗೆ ಹೋಗಲು ತೀರ್ಮಾನ ಮಾಡಿದ್ದೇವೆ. ಆದರೆ ಇವಾಗ ಅವರಿಗೆ ಹೆದರಿಸಿ, ಬೆದರಿಸಿ ಹೋಟೆಲ್ ನಿರ್ಬಂಧ ಹಾಕಿದ್ದಾರೆ. ಅವರು ಜಾಗ ಕೊಡದೇ ಇದ್ರು ಪರವಾಗಿಲ್ಲ, ಹೊಳೆ-ನದಿ ಪಕ್ಕ ಮಲಗಿಕೊಳ್ಳುತ್ತೇವೆ. ನೀವು ಕೊಡದೆ ಇದ್ರು ಎಲ್ಲೋ ಒಂದು ಕಡೆ ನಾವು ಮಲ್ಕೊತ್ತೀವಿ. ಯಾರು ಬೇಕಾದರೂ ಅರೆಸ್ಟ್ ಮಾಡಿಕೊಳ್ಳಲಿ. ಆದರೆ ನಾವಂತೂ ನಡಿದೆ ನಡೀತ್ತಿವೆ. ಕೊನೆಗೆ ಯಾರು ಇಲ್ಲ ಅಂದರೆ ನಾವು ಇಬ್ರೇ ನಡೀತ್ತೀವಿ ಎಂದು ಪಾದಯಾತ್ರೆ ಮಾಡಿಯೇ ಸಿದ್ಧ ಎಂದು ಸ್ಪಷ್ಟಪಡಿಸಿದರು.

ನಮ್ಮ ಪ್ರಾಣ ಹೋದರು ಪರವಾಗಿಲ್ಲ 

ನೀವು ಒಂದು ದಿನ ನಿರ್ಬಂಧ ಹಾಕಬಹುದು, ಆದರೆ ಎರಡೇ ದಿನವೂ ನಾವು ಕೂಡ ನಡೀತ್ತೀವಿ. ನನ್ನೂರು, ನನ್ನ ಮನೆ, ನನ್ನ ಕ್ಷೇತ್ರ, ನನ್ನ ರಾಜ್ಯ. ನನ್ನ ಕ್ಷೇತ್ರದ ಜನರು ಎಲ್ಲರು ಕೂಡ ನಡೀತ್ತಾರೆ. ಅದೇನು ಮಾಡ್ರೀರೋ ಮಾಡಿ ನೋಡೋಣ. ನಮ್ಮ ಪ್ರಾಣ ಹೋದರು ಪರವಾಗಿಲ್ಲ, ನಾವು ನೀರಿಗಾಗಿ ನಡೆದೆ ನಡೀತ್ತೀವಿ ಎಂದು ಸರ್ಕಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಸವಾಲು ಹಾಕಿದರು.

ಇದನ್ನೂ ಓದಿ: ಪಟ್ಟು ಬಿಡದೆ ಪಾದಯಾತ್ರೆಗೆ ಮುಂದಾಗಿರುವ Congress ನಾಯಕರಿಗೆ ಮೃದುವಾಗೇ ವಾರ್ನಿಂಗ್ ಕೊಟ್ಟ CM

ಬೊಮ್ಮಾಯಿಗೆ ಡಿಕೆಶಿ ತಿರುಗೇಟು

ನಾಟಕದ ಡೈಲಾಗ್ ಎಂಬ ಸಿಎಂ ಬಸವರಾಜ್ ಬೊಮ್ಮಾಯಿಗೆ ಡಿಕೆಶಿ ತಿರುಗೇಟು ಕೊಟ್ಟರು. ಮುಖ್ಯಮಂತ್ರಿಗಳೇ ಗುಬ್ಬಿ ವೀರಣ್ಣ ನಾಟಕ ಆಡಿಸುತ್ತಿದ್ದಾರೆ. ಇವರದ್ದೇ ದೊಡ್ಡ ನಾಟಕದ ಕಂಪನಿ. ಇವತ್ತು ಪದಗ್ರಹಣ ಅಂತಾ ಯಾಕೆ ಅಷ್ಟು ಜನ ಸೇರಿದ್ರು. ಅವರ ಮೇಲೆ ಯಾಕೆ ಕೇಸ್ ಬುಕ್ ಮಾಡಿಲ್ಲ. ನೀವು ಏನು ಬೇಕಿದ್ರು ನಿರ್ಬಂಧ ಹಾಕೊಳ್ಳಿ. ನಾವಂತೂ ಈ ಕಾರ್ಯಕ್ರಮ ಅಂತೂ ನಿಲ್ಲಿಸಲ್ಲ. ನಮ್ಮನ್ನು ಎಲ್ಲಿ ಅರೆಸ್ಟ್ ಮಾಡ್ತೀರೋ, ಅಲ್ಲಿಂದಲೇ ನಾವು ಮತ್ರೆ ಪಾದಯಾತ್ರೆ ಶುರು ಮಾಡ್ತೀವಿ ಎಂದರು.

ಇನ್ನು ಎಚ್​.ಡಿ.ಕುಮಾರಸ್ವಾಮಿ ಟೀಕೆಗೂ ವ್ಯಂಗ್ಯವಾಗೇ ಪ್ರತಿಕ್ರಿಯಿಸಿದರು. ಅವರು ನಮ್ಮ ಅಣ್ಣ ಅಲ್ವಾ..? ಅಣ್ಣ ತಮ್ಮನಿಗೆ ಹೊಡೆಯಬಹುದು. ಹಾಗಂತ ತಮ್ಮ ಅಣ್ಣನಿಗೆ ಹೊಡೆಯೋಕೆ ಆಗುತ್ತಾ..? ಅವರು ಹೊಡೀತ್ತೀರಲಿ, ನಾನು ಹೊಡೆಸಿಕೊಳ್ತಾ ಇರ್ತೇನೆ. ನನ್ನ ಮೇಲೆ ಪ್ರೀತಿ ಅವರಿಗೆ ಅದಕ್ಕೆ ಮಾತಾಡಲಿ. ಅಣ್ಣ ಮಾತಾಡಿದ್ರೆ ತಮ್ಮ ಆದ ಚಿಕ್ಕವನು ಕೇಳಿಸಿಕೊಂಡು ಸುಮ್ಮನೆ ಇರಬೇಕು ಎಂದು ಟಾಂಗ್​ ಕೊಟ್ಟರು.
Published by:Kavya V
First published: