Mysore Gang Rape: ಕಾಂಗ್ರೆಸ್​ನವರು ರೇಪ್​ ಮಾಡಿದ್ರೆ ಬಂಧಿಸಿ; ಗೃಹ ಸಚಿವರ ಮಾತಿಗೆ ಕಿಡಿಕಾರಿದ ಡಿಕೆ ಶಿವಕುಮಾರ್​​

ಗೃಹ ಸಚಿವರ ಮೇಲೆ ರೇಪ್​ ಮಾಡಿದವರು ಯಾರು? ಉಗ್ರಪ್ಪ, ಎಚ್​ಎಂ ರೇವಣ್ಣ, ಸಿದ್ದರಾಮಯ್ಯ ಮಾಡಿದ್ದರಾ ಅಥವಾ ನಾನಾ ಯಾರೇ ಮಾಡಲಿ ಅವರನ್ನು ಬಂಧಿಸಲಿ

ಡಿಕೆ ಶಿವಕುಮಾರ್.

ಡಿಕೆ ಶಿವಕುಮಾರ್.

 • Share this:
  ಬೆಂಗಳೂರು (ಆ. 26): ಮೈಸೂರು ವಿದ್ಯಾರ್ಥಿನಿ ಸಾಮೂಹಿಕ ಅತ್ಯಾಚಾರ (Mysore ganga Rape)  ಪ್ರಕರಣ ಸಂಬಂಧ ಕಾಂಗ್ರೆಸ್​ ಟೀಕೆಗಳಿಗೆ ಉತ್ತರಿಸಲು ಹೋಗಿ ಗೃಹ ಸಚಿವ ಅರಗ ಜ್ಞಾನೇಂದ್ರ (araga jnanendra) ಹೊಸ ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ. ಕಾಂಗ್ರೆಸ್​ನವರು ನನ್ನ ಮೇಲೆ ರೇಪ್​ ಮಾಡುತ್ತಿದ್ದಾರೆ ಎಂಬ ಅವರ ಹೇಳಿಕೆ ಈಗ ವಿಪಕ್ಷ ನಾಯಕರ ಆಕ್ರೋಶಕ್ಕೆ ತುತ್ತಾಗಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar)​, ರೇಪ್ ಎನ್ನುವುದು ಗೃಹ ಸಚಿವರಿಗೆ ಪದ ಅವರಿಗೆ ಪ್ರಿಯವಾದ ಪದ. ಆ ಪದವನ್ನ ಗೌರವದಿಂದ ಕಾಣುತ್ತಿದ್ದಾರೆ . ಕಾಂಗ್ರೆಸ್ ರೇಪ್ ಮಾಡುತ್ತಿದ್ದಾರೆ ಎಂದು ಹೇಳಿದರೆ ಏನರ್ಥ. ಈ ಬಗ್ಗೆ ಬಿಜೆಪಿ ನಾಯಕರು ಸ್ಪಷ್ಟನೆ ನೀಡಬೇಕು. ಗೃಹ ಸಚಿವರ ಮೇಲೆ ಅತ್ಯಾಚಾರವಾಗಿದ್ದಾರೆ, ದೂರು ದಾಖಲಿಸಲು, ಆರೋಪಿಗಳನ್ನು ಡಿಜಿಯವರು ಕೂಡಲೇ ಬಂಧಿಸಬೇಕು. ಅಷ್ಟೇ ಅಲ್ಲದೇ, ಗೃಹ ಸಚಿವರ ಮೇಲೆ ರೇಪ್​ ಮಾಡಿದವರು ಯಾರು? ಉಗ್ರಪ್ಪ, ಎಚ್​ಎಂ ರೇವಣ್ಣ, ಸಿದ್ದರಾಮಯ್ಯ ಮಾಡಿದ್ದರಾ ಅಥವಾ ನಾನಾ ಯಾರೇ ಮಾಡಲಿ ಅವರನ್ನು ಬಂಧಿಸಲಿ ಎಂದರು.

  ಗೃಹ ಸಚಿವರು ತಮ್ಮ ಮೇಲೆ ಕಾಂಗ್ರೆಸ್​ ನವರು ರೇಪ್ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದನ್ನು ನಾನು ಕಣ್ಣಿಂದ ನೋಡಿ, ಕೇಳಿದ್ದೇನೆ. ಹೋಂ ಮಿನಿಸ್ಟರ್ ಅವರನ್ನ ರೇಪ್ ಮಾಡಿದರೆ ಬಂಧಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

  ಪೋಲೀಸರಿಗೆ ನಾನು‌ ಮೊದಲೇ ಸಲಹೆ ನೀಡಿದ್ದೆ. ರಾಜಕೀಯ ಒತ್ತಡಕ್ಕೆ ಮಣಿಯಬೇಡಿ ಎಂದಿದ್ದೆ ಮೈಸೂರಿನಲ್ಲಿ‌ನಡೆದಿರುವ ಘಟನೆ ಖಂಡನೀಯ. ಗೃಹ ಸಚಿವರು ಹೊಸದಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಕಾಂಗ್ರೆಸ್ ನವರು ನನ್ನನ್ನ ರೇಪ್ ಮಾಡ್ತಿದ್ದಾರೆ ಎಂದಿದ್ದಾರೆ. ಕಾಂಗ್ರೆಸ್ ನವರು ಅವರನ್ನ ರೇಪ್ ಮಾಡಿದ್ದೀವಂತೆ.  ರೇಪ್ ಮಾಡಿರುವ ಕಾಂಗ್ರೆಸ್ ನವರ ಮೇಲೆ ಹಾಕಿಕೊಳ್ಳಲಿ ಎಂದು ಸವಾಲ್​ ಹಾಕಿದರು.

  ಇದನ್ನು ಓದಿ: ಗಂಡು ಮಗುವಿನ ತಾಯಿಯಾದ ಸ್ಟಾರ್​ ಸಂಸದೆ ನುಸ್ರತ್​ ಜಹಾನ್​

  ಕಾಂಗ್ರೆಸ್​ನಿಂದಲೂ ತನಿಖೆ

  ಮೈಸೂರು ಘಟನೆ ಕುರಿತು ನಮ್ಮ ಪಕ್ಷದಿಂದ ಕೂಡ ತನಿಖೆ ಪ್ರಯತ್ನ ನಡೆಸುತ್ತೇವೆ. ನಮಗೆ ಸರ್ಕಾರದ ಮೇಲೆ ನಂಬಿಕೆಯಿಲ್ಲ. ಹಾಗಾಗಿ ಈ ಸಮಿತಿಯನ್ನ ರಚನೆ ಮಾಡಿದ್ದೇವೆ. ಉಗ್ರಪ್ಪ ನೇತೃತ್ವದಲ್ಲಿ ಸಮಿತಿ ಮಾಡಿದ್ದೇವೆ. ಈ ತಂಡ ಮೈಸೂರಿಗೆ ಹೋಗಲಿದೆ. ಅಲ್ಲಿನ ವಾಸ್ತವ ಸ್ಥಿತಿಯನ್ನ ಅರಿಯಲಿದೆ. ರಾಜ್ಯದ ಜನರಿಗೆ ಮಾಹಿತಿಯನ್ನ ನೀಡಲಿದೆ. ಸೈಬರ್ ಕ್ರೈಂ ಟೆಲಿಫೋನ್ ಟವರ್ ಎಲ್ಲವೂ ಇದೆ. ಚಾಮುಂಡಿಬೆಟ್ಟದಡಿ ಟವರ್ ಇದೆ. ಎಷ್ಟು ಪೋನ್ ಸಂಭಾಷಣೆ ಆಗಿದೆ ಎಂಬುದನ್ನು ಪತ್ತೆ ಮಾಡಬಹುದು.

  ಈ ಘಟನೆ ನಡೆದ ಒಂದು ಗಂಟೆಯಲ್ಲಿ ಪೊಲೀಸರು ಈ ಫೋನ್​ಗಳ ಟ್ರೇಸ್ ಮಾಡಬಹುದು. ಅದಕ್ಕೆ 48 ಗಂಟೆ ಸಮಯ ಬೇಕಿರಲಿಲ್ಲ. ಪೊಲೀಸರು ಪ್ರಕರಣ ಮುಚ್ಚಿದರೂ ನಾವು ಬಿಡಲ್ಲ. ಸತ್ಯವನ್ನ ಶೋಧನೆ ಮಾಡುತ್ತೇವೆ ಎಂದರು.

  ಈ ಕೃತ್ಯಕ್ಕೆ ರಾಜ್ಯಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಪೊಲೀಸ್ ಇಲಾಖೆಯು ಸಹ ತ್ವರಿತ ಗತಿಯಲ್ಲಿ ತನಿಖೆ ನಡೆಸುತ್ತಿದ್ದು, ಕಾಮುಕರ ಹೆಡೆಮುರಿ ಕಟ್ಟಲು ಯತ್ನಿಸುತ್ತಿದ್ದಾರೆ. ಈ ನಡುವೆಯೇ ರಾಷ್ಟ್ರೀಯ ಮಹಿಳಾ ಆಯೋಗವು ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಗ್ಯಾಂಗ್​ ರೇಪ್​ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಿ ಎಂದು ಕರ್ನಾಟಕ ಡಿಜಿಪಿಗೆ ಪತ್ರ ಬರೆದಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು
  Published by:Seema R
  First published: