ಸಿದ್ದರಾಮಯ್ಯ ಕುಡುಕ ಎಂದ ಈಶ್ವರಪ್ಪರನ್ನು DK Shivakumar ಮಹಿಷಾಸುರನಿಗೆ ಹೋಲಿಸಿದ್ದು ಏಕೆ?

ಮೈಸೂರು ಚಾಮುಂಡಿ ಬೆಟ್ಟದಲ್ಲಿ ಇದ್ಯಾಲ್ಲ ಅದೇನದು?  Mahishasura.. ಹಾ.. ಹಿಡ್ಕಂಡಿದ್ದಾರಲ್ಲ.. ಅದನ್ನೊಂದು ಕೊಟ್ಬಿಡಿ Eshwarappa ಕೈಗೆ ಎಂದು ವ್ಯಂಗ್ಯ ಮಾಡಿದರು. Siddaramaiah ಕುಡುಕ ಎಂದ ಈಶ್ವರಪ್ಪ ಮಹಿಷಾಸುರ ಎಂಬರ್ಥದಲ್ಲಿ DK Shivakumar ಕುಹಕವಾಡಿದರು.

ಡಿಕೆ ಶಿವಕುಮಾರ್​, ಈಶ್ವರಪ್ಪ

ಡಿಕೆ ಶಿವಕುಮಾರ್​, ಈಶ್ವರಪ್ಪ

  • Share this:
ಬೆಂಗಳೂರು: ಕಳೆದ ಎರಡ್ಮೂರು ದಿನಗಳಿಂದ ಸಚಿವ ಕೆ.ಎಸ್​.ಈಶ್ವರಪ್ಪ (Minister K. S. Eshwarappa) ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಮಧ್ಯೆ ವಾಕ್ಸಮರ ಜೋರಾಗಿದೆ. ಸಿದ್ದರಾಮಯ್ಯ ಕುಡುಕ ಎಂಬ ಈಶ್ವರಪ್ಪ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​​ (DK Shivakumar) ತಿರುಗೇಟು ನೀಡಿದರು. ಇಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, ಮೈಸೂರು ಚಾಮುಂಡಿ ಬೆಟ್ಟದಲ್ಲಿ ಇದ್ಯಾಲ್ಲ ಅದೇನದು?  ಮಹಿಷಾಸುರ(Mahishasura).. ಹಾ.. ಹಿಡ್ಕಂಡಿದ್ದಾರಲ್ಲ.. ಅದನ್ನೊಂದು ಕೊಟ್ಬಿಡಿ ಈಶ್ವರಪ್ಪ ಕೈಗೆ ಎಂದು ವ್ಯಂಗ್ಯ ಮಾಡಿದರು. ಸಿದ್ದರಾಮಯ್ಯ ಕುಡುಕ ಎಂದ ಈಶ್ವರಪ್ಪ ಮಹಿಷಾಸುರ ಎಂಬರ್ಥದಲ್ಲಿ ಡಿಕೆ ಶಿವಕುಮಾರ್ ಕುಹಕವಾಡಿದರು.

ಸಂಪುಟದಲ್ಲಿದ್ದಕೊಂಡೇ ಸಿಎಂ ಬದಲಾವಣೆ ಬಗ್ಗೆ ಮಾತು

ಇನ್ನು ಮುರುಗೇಶ್ ನಿರಾಣಿ ಸಿಎಂ ಆಗುತ್ತಾರೆ ಎಂಬ ಈಶ್ವರಪ್ಪ ಹೇಳಿಕೆ ಬಗ್ಗೆಯೂ ವಾಗ್ದಾಳಿ ನಡೆಸಿದರು. ಈಶ್ವರಪ್ಪ ಬಿಜೆಪಿ ಹಿರಿಯರು, ಡಿಸಿಎಂ ಆಗಿದ್ದವರು, ಬಿಜೆಪಿ ಅಧ್ಯಕ್ಷರಾಗಿದ್ದರು. . ನಿರಾಣಿ ಸಿಎಂ ಆಗುವ ಬಗ್ಗೆ ಚರ್ಚೆ ನಡೆಯುತ್ತಿರುವ ಬಗ್ಗೆ ಹೇಳಿದ್ದಾರೆ. ಒಂದು ಸಿಎಂ ಬೊಮ್ಮಾಯಿ ಅವರು ಈಶ್ವರಪ್ಪನ ಸಂಪುಟದಿಂದ ವಜಾ ಮಾಡಬೇಕು, ಇಲ್ಲವಾದಲ್ಲಿ ಸಿಎಂ ರಾಜಿನಾಮೆ ಕೊಡಬೇಕು ಎಂದು ಆಗ್ರಹಿಸಿದರು. ಸರ್ಕಾರದಲ್ಲಿ ಇದ್ದುಕೊಂಡೆ ಸಿಎಂ ಬದಲಾವಣೆ ಮಾಡ್ತೇವೆ ಎಂದು ಅವರು ಹೇಳಿದ ಮೇಲೆ ಅಮಿತ್ ಶಾ ಬಂದು ಬೊಮ್ಮಾಯಿ ಅವರ ನಾಯಕತ್ವದಲ್ಲಿ ಮುಂದಿನ ಚುನಾವಣೆ ಎಂದು ಹೇಳಿದ್ದಾರೆ. ಇಲ್ಲಿ ಸಿಎಂ ಬದಲಾವಣೆ ಮಾಡ್ತೇವೆ ಎಂದು ಹೇಳ್ತಾರೆ. ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂದರು.

ಒಮಿಕ್ರಾನ್ ಬಗ್ಗೆ ಜನಕ್ಕೆ ಭಯಪಡಿಸಬೇಡಿ

ರಾಜ್ಯಕ್ಕೆ ಮತ್ತೆ ಕೊರೊನಾ ಬರುವುದಿಲ್ಲ, ಯಾರೂ ಗಾಬರಿ ಪಡಿಸಬೇಡಿ ಎಂದು ಡಿಕೆಶಿ ಜನರಿಗೆ ಕರೆ ನೀಡಿದರು. ಸರ್ಕಾರ ಹಾಗೂ ಪೊಲೀಸ್ ಇಲಾಖೆ ಜನರಿಗೆ ಜಾಗೃತಿ ಮೂಡಿಸಬೇಕು. ಬರೀ ಕೇರಳ ಅಂತ ಇದ್ದಾರೆ, ಆದ್ರೆ ಎಲ್ಲಾ ಕಡೆ ಗಮನಹರಿಸಬೇಕು. ಜನರಿಗೆ ಗಾಬರಿಪಡಿಸುವಂಥ ಕೆಲಸ ಆಗಬಾರದು, ಸರ್ಕಾರ ಮುಂಜಾಗೃತಯವಾಗಿ ಕ್ರಮವಹಿಸಬೇಕು. ಬೆಳಗಾವಿಯಲ್ಲಿ ಪ್ರತಿಭಟನೆ ನಡೆಯುತ್ತೆ ಅದಕ್ಕೆ ಅಧಿವೇಶನ ನಡೆಯಬಾರದು ಅಂತಾರೆ ಅಷ್ಟೆ. ಒಮಿಕ್ರಾನ್ ಬಗ್ಗೆ ರಾಜ್ಯದ ಜನರು ಭಯಪಡಬೇಕಾಗಿಲ್ಲ. ನಮ್ಮ ರಾಜ್ಯಕ್ಕೆ ಇನ್ನೂ ಬಂದಿಲ್ಲ.. ಬರಲ್ಲ.. ಸರ್ಕಾರ ಜನರನ್ನ ಗಾಬರಿಗೊಳಿಸಬಾರದು. ಕೇವಲ ಕೇರಳ ಗಡಿ ಮಾತ್ರ ಬಂದ್ ಮಾಡುವುದು ಸರಿಯಲ್ಲ. ಎಲ್ಲ ರಾಜ್ಯಗಳ ಗಡಿಗಳಲ್ಲೂ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

ಅಂಕಿ ಅಂಶ ಸಮೇತ ಬರ್ತೇನೆ

ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ವ್ಯಾಕ್ಸಿನ್ ಪ್ರಮಾಣ ಕಡಿಮೆ ಆಗಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಕೆಶಿ, ಬಿಜೆಪಿಯೇತರ ರಾಜ್ಯಗಳು ಅಂತಲ್ಲ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲೂ ವ್ಯಾಕ್ಸಿನ್ ಕಾರ್ಯಕ್ರಮ ಪೂರ್ಣಗೊಂಡಿಲ್ಲ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಕೇವಲ ವ್ಯಾಕ್ಸಿನ್ ಅಷ್ಟೇ ಅಲ್ಲ.. ಟ್ಯಾಕ್ಸ್ ಕಲೆಕ್ಷನ್ ಕೂಡ ಕಡಿಮೆ ಆಗಿದೆ. ಈ ಬಗ್ಗೆ ಅಂಕಿ ಅಂಶಗಳ ಸಮೇತ ನಾನು ಮಾಧ್ಯಮಗಳ ಮುಂದೆ ಬರ್ತೇನೆ ಎಂದರು.

ಇದನ್ನೂ ಓದಿ: BJP ಸೇರ್ತಾರಾ S.R.Patil? ಪ್ರಶ್ನೆಗೆ ಚುನಾವಣೆಯಲ್ಲಿ ನಮ್ಮ ಚಡ್ಡಿ, ನಮ್ಮ ಹಿಂಬಾಲ ಇರುತ್ತೆ ಅಂದ್ರು!

ಇನ್ನು ನಿನ್ನೆ ಕೊಪ್ಪಳದಲ್ಲಿ ಅವನ್ಯಾವನೋ ಕರ್ಕೊಂಡು ಬಾ, ಅವನಿಗೆ ದುಡ್ಡು ಕೊಡು ಇದೆ ಆಯ್ತು ಎನ್ನುವ ಮೂಲಕ ಆಪರೇಷನ್​ ಕಮಲಕ್ಕೆ (Operation Kamala) ಹಣ (Money) ಕೊಡಬೇಕಾಯಿತು ಎಂಬುವುದನ್ನು ಸಚಿವ ಕೆ.ಎಸ್​.ಈಶ್ವರಪ್ಪ ಒಪ್ಪಿಕೊಂಡಿದ್ದಾರೆ. ಪರಿಷತ್​ ಚುನಾವಣೆ ಹಿನ್ನೆಲೆ ಪ್ರಚಾರದಲ್ಲಿ ತೊಡಗಿರುವ ಸಚಿವ ಈಶ್ವರಪ್ಪ ಮಾತಿನ ಮಧ್ಯೆ ಆಪರೇಷನ್​ ಕಮಲದ ಬಗ್ಗೆ ಸ್ಫೋಟಕ ಹೇಳಿಕೆಯನ್ನು ಕೊಟ್ಟಿರುವುದು ಈಗ ಎಲ್ಲರ ಹುಬ್ಬೇರಿಸಿದೆ. ಅವರ ಮಾತಿನ ವರಸೆ ಹೀಗಿತ್ತು. ರಾಜ್ಯದಲ್ಲಿ ನಾಲ್ಕು ಬಾರಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ. ಆದ್ರೆ ನಮ್ಮ ಗ್ರಹಚಾರ ಸರಿ ಇಲ್ಲ, ನಾಲ್ಕೂ ಬಾರಿ ನಮಗೆ ಪೂರ್ಣ ಬಹುಮತ ಸಿಗಲಿಲ್ಲ. 4 ಸಾಲನೂ ನಮ್ಮ ಗ್ರಹಚಾರ ಹಾಗೆ ಇತ್ತು. ನಾಲ್ಕ ಬಾರಿನೂ ಅವನ್ಯಾವನೋ ಕರಕೊಂಡು ಬಾ, ಅವನಿಗೆ ದುಡ್ಡು ಕೊಡು ಇದೆ ಆಯ್ತು ಎಂದು ಬಿಟ್ಟರು.
Published by:Kavya V
First published: