BJP ಒಮ್ಮೆ ಅಧಿಕಾರಕ್ಕೆ ಬಂದರೆ ಮೂವರು CM ಆಗೋದು ಅವರ ಸಂಪ್ರದಾಯ: DK Shivakumar ವ್ಯಂಗ್ಯ

ಕ್ರಿಶ್ಚಿಯನ್ ಸಮುದಾಯದ ಕೊಡುಗೆ ಗೊತ್ತಾ ಅವರಿಗೆ? ಶಿಕ್ಷಣ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಕೊಡುಗೆ ದೊಡ್ಡದಿದೆ. ಯಾರ್ಯಾರು ಯಾವ ಸ್ಕೂಲ್ ,ಕಾಲೇಜು ನಲ್ಲಿ ತಮ್ಮ ಮಕ್ಕಳನ್ನು ಸೇರಿಸದ್ದಾರೆ ಎಂದು ದಾಖಲೆ ತೆಗೆಯಿರಿ ಗೊತ್ತಾಗುತ್ತದೆ.

ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್

  • Share this:
ಬೆಂಗಳೂರು: ಬಿಜೆಪಿಯವರು (BJP) ಒಮ್ಮೆ ಅಧಿಕಾರಕ್ಕೆ ಬಂದರೆ ಮೂವರು ಮುಖ್ಯಮಂತ್ರಿ (Chief Minister) ಆಗೋದು ಅವರ ಸಂಪ್ರದಾಯ. ಮೂವರನ್ನು ಸಿಎಂ ಮಾಡೋದು ಬಿಜೆಪಿಯ ಸಂಪ್ರದಾಯ, ಮೊದಲಿಂದಲೂ ಇದೇ ವಾಡಿಕೆ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(KPCC President DK Shivakumar) ​ ವ್ಯಂಗ್ಯವಾಡಿದರು. ಅವರ ಪಕ್ಷದ ಆಂತರಿಕ ವಿಚಾರದ ಬಗ್ಗೆ ಮಾತನಾಡುವುದಿಲ್ಲ. ಅವರು ಏನು ಬೇಕಾದರೂ ಮಾಡಲಿ, ನಾನು ಅದನ್ನ ಅಭಿನಂದಿಸುತ್ತೇನೆ. ಮೂವರನ್ನಾದರೂ ಮಾಡಲಿ, ಆರು ಜನರನ್ನಾದರೂ ಮಾಡಲಿ. ಒಳ್ಳೆಯ ಸರ್ಕಾರ ಅಂತೂ ಕೊಡಲಿಲ್ಲ, ಇಲ್ಲ ಜನ ಸರ್ಕಾರವನ್ನು ಕಿತ್ತುಹೊಗೆಯಲಿ ಎಂದರು.

ಪಾಲಿಗೆ ಬಂದಿದ್ದು ಪಂಚಾಮೃತ

ಇನ್ನು ಪರಿಷತ್ ಚುನಾವಣೆಯಲ್ಲಿ 15 ಸ್ಥಾನ ಗೆಲ್ತೇವೆ ಎಂಬ ಮಾಜಿ ಸಿಎಂ ಬಿಎಸ್​​ ಯಡಿಯೂರಪ್ಪ ಹೇಳಿಕೆಗೂ ಡಿಕೆಶಿ ಟಾಂಗ್​ ಕೊಟ್ಟರು. ಉಳಿದ ಸ್ಥಾನ ನಾವು ಗೆಲ್ತೇವೆ, ಅವರಿಗೆ ಎಷ್ಟು ಸ್ಥಾನ ಬೇಕೋ ಅಷ್ಟು ಇಟ್ಟುಕೊಂಡು ಮಿಕ್ಕಿದ್ದು ನಮಗೆ ಬಿಟ್ಟಿದ್ದಾರೆ. ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಭಾವಿಸುತ್ತೇವೆ ಎಂದು ಬಿಎಸ್​ವೈ ಹೇಳಿಕೆಗೆ ಡಿಕೆಶಿ ವ್ಯಂಗ್ಯವಾಡಿದರು.

ಇದನ್ನೂ ಓದಿ: ವಿದ್ಯಾರ್ಥಿಗಳ ಅನುಚಿತ ವರ್ತನೆ: ಶಿಕ್ಷಕರ ತಲೆ ಮೇಲೆ ಡಸ್ಟ್‌ಬಿನ್‌ ಇರಿಸಿ ಕುಚೇಷ್ಠೆ

ಯಾರಿಗೆ ಏನು ಆಸೆಯಿದೆ ನೋಡೋಣ

ಇನ್ನು ಕಾಂಗ್ರೆಸ್​​ ಮುಖಂಡ ಶಾಮನೂರು ಶಿವಶಂಕರಪ್ಪ ಮುಂದಿನ ಬಾರಿಗೆ ಕಾಂಗ್ರೆಸ್​​ ಅಧಿಕಾರಕ್ಕೆ ಬರುತ್ತೆ, ನಾನು ಸಿಎಂ ಆಗ್ತೇನೆ ಎಂದು ನೀಡಿರುವ ಹೇಳಿಕೆಯನ್ನು ನಾನು ನೋಡಿಲ್ಲ ಎಂದು ಡಿಕೆಶಿ ಪ್ರತಿಕ್ರಿಯಿಸಿದರು. ಯಾರಿಗೆ ಏನು ಆಸೆಯಿದೆ ನೋಡೋಣ, ಎಐಸಿಸಿ ಅವರ ಗೈಡ್ ಲೈನ್ಸ್ ಇದೆ, ಅದರ ಬಗ್ಗೆ ಮುಂದೆ  ಮಾತನಾಡೋಣ ಎಂದರು.

ಬಿಜೆಪಿ ಎರಡು ಪ್ಲ್ಯಾನ್ ಮಾಡಿಕೊಂಡಿದೆ

ಬೆಳಗಾವಿ ಅಧಿವೇಶನದಲ್ಲಿ ಮತಾಂತರ ಕಾಯ್ದೆ ಜಾರಿ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಎರಡು ಪ್ಲ್ಯಾನ್ ಹೊಂದಿದ್ದಾರೆ. ಒಂದು ಅಫೀಸಿಯಲ್ ಆಗಿ ಕಾಯ್ದೆ ಜಾರಿ ಮಾಡೋದು. ಎರಡನೇಯದ್ದು ಖಾಸಗಿಯಾಗಿ ಮಸೂದೆ  ಮಂಡನೆ‌ ಮಾಡೋದು. ಈ ಎರಡು ಪ್ಲ್ಯಾನ್ ಮಾಡಿಕೊಂಡಿರುವ ಬಿಜೆಪಿ, ಈ‌ ಬಿಲ್ ಗಳನ್ನು ಮೂವ್ ಮಾಡಲು ಹೊರಟಿದ್ದಾರೆ. ಮತಾಂತರ ಕಾಯ್ದೆ ಪಾಸ್ ಮಾಡಿಕೊಳ್ಳಲು ಮುಂದಾಗಿದ್ದಾರೆ‌. ಇದು ಪೊಲಿಟಿಕಲಿ ಎಫೆಕ್ಟ್ ಅಗುತ್ತದೆ‌, ಇದು ಕೇವಲ ರಾಜ್ಯಕ್ಕೆ ಮಾತ್ರ ಸಂಬಂಧಿಸಿದ ವಿಷಯವಲ್ಲ. ಇದು ಅಂತರಾಷ್ಟ್ರೀಯ ವಿಷಯವಾಗಿದೆ.

ಇದನ್ನೂ ಓದಿ: MLC Elections- ಯಡಿಯೂರಪ್ಪ ಬಗ್ಗೆ ಹೆಚ್​ಡಿಕೆ ಮತ್ತೆ ಸಾಫ್ಟ್ ಕಾರ್ನರ್; ಡಿಕೆಶಿಯನ್ನ ಝಾಡಿಸಿದ ಮಾಜಿ ಸಿಎಂ

ಕ್ರಿಶ್ಚಿಯನ್ ಸಮುದಾಯದ ಕೊಡುಗೆ ಬಹಳಷ್ಟಿದೆ

ಇಡಿ ಪ್ರಪಂಚವೇ ರಾಜ್ಯದಲ್ಲಿ ಇಂತಹಾ ಕೆಲಸ ಆಗ್ತಾ ಇದೆಯಿದೆ ಎಂದು ಉಗಿಯುತ್ತಿದ್ದಾರೆ. ಈ ಕಾಯ್ದೆಯಿಂದ ಅಭಿವೃದ್ಧಿಗೆ ಏನೇನೂ ಆಗುತ್ತೋ. ಹಣ ಹೂಡಿಕೆ ಮಾಡಲು ಎನೇನೂ ಆಗುತ್ತೋ, ಗಾಬರಿಯಾಗುವಂತ ಸನ್ನಿವೇಶ ಆಗುತ್ತಿದೆ. ಅವರು ಖಾಸಗಿ ಮಸೂದೆಯಾದ್ರು ತರಲಿ, ಸರ್ಕಾರವೇ ತರಲಿ. ನಾವು ಆ ಬಿಲ್ ಗೆ ಖಂಡಿತವಾಗಿ ವಿರೋಧ ಮಾಡ್ತೇವೆ. ಎಲೆಕ್ಷನ್ ಬರ್ತಾಯಿದೆ ಎಂದು ಬಿಲ್ ತರೋಕೆ ಹೊರಟಿದ್ದಾರೆ. ಒಂದೊಂದು ಸಮುದಾಯವನ್ನು ಟಾರ್ಗೆಟ್ ಮಾಡಿ, ಹಿಂಸೆ ಮಾಡುತ್ತಿದ್ದಾರೆ. ಕ್ರಿಶ್ಚಿಯನ್ ಸಮುದಾಯದ ಕೊಡುಗೆ ಗೊತ್ತಾ ಅವರಿಗೆ? ಶಿಕ್ಷಣ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಕೊಡುಗೆ ದೊಡ್ಡದಿದೆ. ಸ್ಕೂಲ್ ನಲ್ಲಿ ಶೀಟ್ ಬೇಕಾದ್ರೆ ಹೋಗಿ ಬೆಗ್ ಮಾಡ್ತಾರೆ. ಯಾರ್ಯಾರು ಯಾವ ಸ್ಕೂಲ್ ,ಕಾಲೇಜು ನಲ್ಲಿ ತಮ್ಮ ಮಕ್ಕಳನ್ನು ಸೇರಿಸದ್ದಾರೆ ಎಂದು ದಾಖಲೆ ತೆಗೆಯಿರಿ ಗೊತ್ತಾಗುತ್ತದೆ. ಇದುವರೆಗೆ ಮಕ್ಕಳನ್ನು ನಮ್ಮ ಸ್ಕೂಲ್ ಗೆ ಸೇರಿಸಲ್ಲ ಎಂದು ದೂರು ಬಂದಿದೆಯಾ? ಆಸ್ಪತ್ರೆಯಲ್ಲಿ ರೋಗಿಗಳಿಗೆ ತೊಂದರೆ ಕೊಟ್ಟಿಲ್ಲ.ಕ್ರಿಶ್ಚಿಯನ್ ಸಮುದಾಯದವರು ಮಾನವೀಯತೆಗಾಗಿ ಕೆಲಸ ‌ಮಾಡುತ್ತಿದ್ದಾರೆ ಎಂದರು.ಕ್ರಿಶ್ಚಿಯನ್ ಸಮುದಾಯದವರು ಮಾನವೀಯತೆಗಾಗಿ ಕೆಲಸ ‌ಮಾಡುತ್ತಿದ್ದಾರೆ ಎಂದರು.
Published by:Kavya V
First published: