• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Koramanagala Accident: ಏಳು ಮಂದಿ ಸಾವಿಗೆ ಕಾರಣವಾಯ್ತಾ ಒಂದು ನೀರಿನ ಬಾಟಲ್? ಕೋರಮಂಗಲ ಅಪಘಾತ ಪ್ರಕರಣದಲ್ಲೊಂದು ಅನುಮಾನ

Koramanagala Accident: ಏಳು ಮಂದಿ ಸಾವಿಗೆ ಕಾರಣವಾಯ್ತಾ ಒಂದು ನೀರಿನ ಬಾಟಲ್? ಕೋರಮಂಗಲ ಅಪಘಾತ ಪ್ರಕರಣದಲ್ಲೊಂದು ಅನುಮಾನ

ಕೋರಮಂಗಲದಲ್ಲಿ ಅಪಘಾತಕ್ಕೊಳಗಾದ ಇಬ್ಬರು ಯುವತಿಯರು ತಮ್ಮ ಪಿಜಿ ಬಳಿ ನಡೆದುಕೊಂಡು ಹೋಗುತ್ತಿರುವ ಒಂದು ಚಿತ್ರ

ಕೋರಮಂಗಲದಲ್ಲಿ ಅಪಘಾತಕ್ಕೊಳಗಾದ ಇಬ್ಬರು ಯುವತಿಯರು ತಮ್ಮ ಪಿಜಿ ಬಳಿ ನಡೆದುಕೊಂಡು ಹೋಗುತ್ತಿರುವ ಒಂದು ಚಿತ್ರ

Koramangala Accident Case- ಕೋರಮಂಗಲದಲ್ಲಿ ಅಪಘಾತವಾದ ಆಡಿ ಕಾರಿನ ಬ್ರೇಕ್ ಲಿವರ್​ನ ಕೆಳಗೆ ನೀರಿನ ಬಾಟಲ್ ಪತ್ತೆಯಾಗಿದೆ. ಈ ನೀರಿನ ಬಾಟಲ್ ಇದ್ದಿದ್ದರಿಂದ ಬ್ರೇಕ್ ಒತ್ತಲಾಗದೇ ಕಾರು ಅಪಘಾತವಾಗಿರಬಹುದು ಎಂಬ ಶಂಕೆ ಇದೆ.

  • Share this:

ಬೆಂಗಳೂರು (ಸೆ. 01): ಕೋರಮಂಗಲದಲ್ಲಿ ಮೊನ್ನೆ ರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ (Koramangala Audi Car Accident Case) ಏಳು ಮಂದಿ ಮೃತಪಟ್ಟಿರುವ ಪ್ರಕರಣದಲ್ಲಿ ಕೆಲವಿಷ್ಟು ಕುತೂಹಲಕಾರಿ ಸಂಗತಿಗಳು ಹೊರಬೀಳುತ್ತಿವೆ. ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ. ಕಾರ್ ಅಪಘಾತವಾಗಲು ಕಾರಣವೇನೆಂಬ ಸಂಗತಿಯನ್ನ ತಿಳಿದುಕೊಳ್ಳುವ ಪ್ರಯತ್ನವೂ ನಡೆದಿದೆ. ಈ ವೇಳೆ ಒಂದು ಅಂಶ ಗಮನ ಸೆಳೆದಿದೆ. ಕಾರಿನ ಬ್ರೇಕ್ ಕೆಳಗೆ ನೀರಿನ ಬಾಟಲ್ (Water Bottle) ಇರುವುದನ್ನು ಪೊಲೀಸರು ಗಮನಿಸಿದ್ದಾರೆ. ಅಪಘಾತಕ್ಕೆ ಈ ನೀರಿನ ಬಾಟಲ್ಲೇ ಕಾರಣವಾಯಿತಾ ಎಂಬ ಅನುಮಾನವಂತೂ ಬರದೇ ಇರದು. ಅಪಘಾತಕ್ಕೆ ಮುಂಚೆಯೇ ನೀರಿನ ಬಾಟಲ್ ಇತ್ತಾ, ಅಥವಾ ಅಪಘಾತದ ರಭಸಕ್ಕೆ ಬೇರೆ ಜಾಗದಿಂದ ಹಾರಿ ಬಂದು ಅಲ್ಲಿಗೆ ಬಿತ್ತಾ ಎಂಬುದು ಗೊತ್ತಾಗಬೇಕಿದೆ. ಹಾಗೊಂದು ವೇಳೆ ಅಪಘಾತಕ್ಕೆ ಮುಂಚೆಯೇ ತುಂಬಿದ ನೀರಿನ ಬಾಟಲ್ ಬ್ರೇಕ್​ನ ಕೆಳಗೆ ಬಿದ್ದಿದ್ದರೆ ಅಪಘಾತಕ್ಕೆ ಅದೇ ಕಾರಣವಾಗಿರುವ ಸಾಧ್ಯತೆ ಇದೆ.


ಬ್ರೇಕ್ ಕೆಳಭಾಗದಲ್ಲಿ ನೀರಿನ ಬಾಟಲ್ ಇದ್ದು, ಕಾರು ಬಹಳ ಸ್ಪೀಡಾಗಿ ಹೋಗುತ್ತಿದ್ದರೆ ಬ್ರೇಕ್ ಹಾಕಲು ಸಾಧ್ಯವಾಗುವುದಿಲ್ಲ. ಕೋರಮಂಗಲದಲ್ಲಿ ಆಡಿ ಕಾರು ಅಪಘಾತಕ್ಕೆ ಇದೇ ಕಾರಣವಾ ಎಂಬ ಅನುಮಾನ ಇನ್ನೂ ದೃಢಪಡಬೇಕಿದೆ. ಅದೇನೇ ಇದ್ದರೂ ಈ ಸಂಗತಿಯಂತೂ ಎಲ್ಲರಿಗೂ ಎಚ್ಚರಿಕೆಯ ಕರೆಗಂಟೆಯೇ ಸರಿ. ಕಾರಿನಲ್ಲಿ ನೀರಿನ ಬಾಟಲ್​ಗಳನ್ನ ತೆಗೆದುಕೊಂಡು ಹೋಗುವುದು ಸಾಮಾನ್ಯ. ಡ್ರೈವರ್ ಸೀಟಿನ ಪಕ್ಕದಲ್ಲಿ ಬಾಟಲ್​ಗಳನ್ನೂ ಇಡುತ್ತೇವೆ. ಅಕಸ್ಮಾತ್ ಆಗಿ ಬಾಟಲ್ ಕೆಳಗುರುಳಿ ಬ್ರೇಕ್ ಲಿವರ್​ನ ಕೆಳಗೆ ಹೋಗಿಬಿಟ್ಟರೆ ಜವರಾಯನಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ.


ಇದನ್ನೂ ಓದಿ: ಶೂಟೌಟ್ ಪ್ರಕರಣ: ರಾಜಸ್ಥಾನದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನ ಹುಡುಕಿ ಹಿಡಿದ ಚಿತ್ರದುರ್ಗ ಪೊಲೀಸರು


ಒಂದೇ ಪಿಜಿಯಲ್ಲಿದ್ದ ಐವರು:


ಹೊಸೂರಿನ ಡಿಎಂಕೆ ಶಾಸಕ ವೈ ಪ್ರಕಾಶ್ ಅವರ ಮಗ ಕರುಣಾಸಾಗರ್, ಆತನ ಸಂಬಂಧಿ ಹಾಗೂ ಗೆಳತಿ ಬಿಂದು, ವೈದ್ಯೆ ಇಷಿತಾ, ಉತ್ಸವ್, ಧನುಷಾ, ಅಕ್ಷಯ್ ಗೋಯಲ್ ಮತ್ತು ಧಾರವಾಡದ ಅಕ್ಷಯ್ ಅವರು ಮೊನ್ನೆಯ ಅಪಘಾತದಲ್ಲಿ ಮೃತಪಟ್ಟವರು. ಉತ್ಸವ್ ಮತ್ತು ಕರುಣಾ ಸಾಗರ್ ಹೊರತುಪಡಿಸಿ ಉಳಿದವರೆಲ್ಲರೂ ಒಂದೇ ಪಿಜಿಯಲ್ಲಿ ಇದ್ದರು. ಕೋರಮಂಗಲದ 6ನೇ ಬ್ಲಾಕ್​ನಲ್ಲಿರುವ ಜೋಲೊ ಪಿಜಿಯಲ್ಲಿ ಬಿಂದು, ಇಷಿತಾ, ಧನುಷಾ, ರೋಹಿತ್ ಮತ್ತು ಅಕ್ಷಯ್ ಅವರು ವಾಸವಿದ್ದರು.


ಅಪಘಾತಕ್ಕೆ ಮುಂಚೆ ಬಾರ್​ನಲ್ಲಿ ಮದ್ಯ ಖರೀದಿಸಿದ್ದ ಯುವತಿಯರು:


ಅಪಘಾತಕ್ಕೆ ಮುಂಚೆ ಏಳು ಮಂದಿ ಏನೇನು ಚಟುವಟಿಕೆಯಲ್ಲಿ ನಿರತರಾಗಿದ್ದರು ಎಂಬ ಮಾಹಿತಿಯನ್ನು ಪೊಲೀಸರು ಜಾಲಾಡುತ್ತಿದ್ದಾರೆ. ಅವರೆಲ್ಲರೂ ಚಲನವಲನಗಳನ್ನ ವಿವಿಧ ಪ್ರದೇಶಗಳಲ್ಲಿನ ಸಿಸಿಟಿವಿಗಳ ಮೂಲಕ ಪತ್ತೆಹಚ್ಚುತ್ತಿದ್ದಾರೆ. ಇಷಿತಾ ಮತ್ತು ಬಿಂದು ಅವರು ಪಿಜಿಯಿಂದ ಹೊರಟು ಆ ಕಾರ್ ಹತ್ತುವವರೆಗೆ ಏನೇನು ಮಾಡಿದರೆಂಬುದು ಸದ್ಯ ಗೊತ್ತಾಗಿದೆ. ಕೋರಮಂಗಲ ಆರನೇ ಬ್ಲಾಕ್​ನ ಐದನೇ ಕ್ರಾಸ್​ನಲ್ಲಿರುವ ಜೋಲೋ ಪಿಜಿಯಿಂದ ಈ ಇಬ್ಬರು ಯುವತಿಯರು ರಾತ್ರಿ 8:29ಕ್ಕೆ ಹೊರಗೆ ಕಾಲಿಟ್ಟಿದ್ದು, 200 ಮೀಟರ್ ದೂರದವರೆಗೆ ನಡೆದೇ ಹೋಗಿದ್ದಾರೆ. ರಸ್ತೆ ಎಂಡ್​ನಲ್ಲಿ ಎಡಕ್ಕೆ ಹೋಗಿ ಅಲ್ಲಿನ ಪ್ರತಿಷ್ಠಿತ ಬಾರ್​ವೊಂದಕ್ಕೆ ಹೋಗಿದ್ದಾರೆ. 8:40ರಿಂದ 8:44ರವರೆಗೂ ಮದ್ಯದಂಗಡಿಯಲ್ಲಿದ್ದ ಇವರು ಕೆಲ ಬಾಟಲ್​ಗಳನ್ನ ತಮ್ಮ ಬ್ಯಾಗ್​ಗೆ ಹಾಕಿಕೊಂಡು ಬಂದಿದ್ದಾರೆ. ಪಕ್ಕದಲ್ಲಿದ್ದ ಒಂದು ಪಬ್​ಗೆ ಹೋಗಿದ್ದಾರೆ. ಅಲ್ಲಿ ರಿನೋವೇಶನ್ ಕೆಲಸ ನಡೆಯುತ್ತಿದ್ದರಿಂದ ವಾಪಸ್ ಬಂದಿದ್ದಾರೆ. ಮಾರ್ಗಮಧ್ಯೆಯ ಒಂದು ಸ್ಥಳದಲ್ಲಿ ಕರುಣಾ ಸಾಗರ್ ಸಿಗುತ್ತಾನೆ. ಕಾರ್ ಪಾರ್ಕ್ ಮಾಡಿ ಕುಡಿದಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.


ವರದಿ: ಮಂಜುನಾಥ್ ಚಂದ್ರ

top videos
    First published: