ಇಂದು ನಾಡಪ್ರಭು ಕೆಂಪೇಗೌಡರ 512ನೇ ಜಯಂತಿ; ಕೋವಿಡ್​ ಹಿನ್ನೆಲೆ ಸರಳವಾಗಿ ಜಯಂತಿ ಆಚರಣೆ

ಮುಖ್ಯಮಂತ್ರಿಗಳ ಆಶೀರ್ವಾದದೊಂದಿಗೆ ಕಂಚಿನ ಪುತ್ಥಳಿ ರೆಡಿಯಾಗುತ್ತಿದೆ. 23 ಎಕರೆ ಜಾಗದಲ್ಲಿ ನಿರ್ಮಾಣ ಮಾಡಲು ನಿರ್ಧಾರ ಮಾಡಿದ್ದಾರೆ. ಮುಂದಿನ ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ಇದರ ಲೋಕಾರ್ಪಣೆ ಆಗಲಿದೆ ಎಂದು ಡಿಸಿಎಂ ಅಶ್ವತ್ಥ್​ ನಾರಾಯಣ ಹೇಳಿದರು.

ನಾಡಪ್ರಭು ಕೆಂಪೇಗೌಡ

ನಾಡಪ್ರಭು ಕೆಂಪೇಗೌಡ

 • Share this:
  ಬೆಂಗಳೂರು(ಜೂ.27):  ಇಂದು ನಾಡಪ್ರಭು ಕೆಂಪೇಗೌಡರ 512ನೇ ಜಯಂತಿ ಹಿನ್ನೆಲೆ, ಸಿಎಂ ಬಿಎಸ್​ ಯಡಿಯೂರಪ್ಪ ಪೋಸ್ಟಲ್​ ಸ್ಟ್ಯಾಂಪ್​ ಬಿಡುಗಡೆ ಮಾಡಿದ್ದಾರೆ. ಜೊತೆಗೆ ಕೆಂಪೇಗೌಡ ಕೇಂದ್ರ ಕಟ್ಟಡದ ಕಾಮಗಾರಿಗೆ ಚಾಲನೆ ನೀಡಿದರು. ವಿಧಾನಸೌಧದ ಬ್ಯಾಂಕ್ವೇಟ್ ಹಾಲ್ ನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ  ಸಿಎಂ ಯಡಿಯೂರಪ್ಪ ಡಿಸಿಎಂ ಅಶ್ವಥ್ ನಾರಾಯಣ, ಸಚಿವ ಗೋಪಾಲಯ್ಯ, ಶಾಸಕ ಮುನಿರತ್ನ, ಸಂಸದ ಪಿಸಿ ಶಾಸಕ ಮಂಜುನಾಥ್ ಸಂಸದ ಪಿಸಿ ಮೋಹನ್,  ಡಿಸಿಎಂ ಗೋವಿಂದ್ ಕಾರಜೋಳ , ಶಾಸಕ ರಿಜ್ವಾನ್ ಅರ್ಷದ್, ಹೆಚ್ ಆರ್ ವಿಶ್ವನಾಥ್, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಗುರುಗುಂಡ ಬ್ರಹ್ಮೇಶ್ವರ ಮಠ ನಂಜಾವಧೂತ ಸ್ವಾಮೀಜಿ ಭಾಗಿಯಾಗಿದ್ದರು.

  ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್,  ಇಂದು ನಾಡಪ್ರಭು ಕೆಂಪೇಗೌಡರ ಜಯಂತಿ. ಬಹಳ ಸಂತೋಷದಿಂದ ಈ ಕಾರ್ಯಕ್ರಮ ಮಾಡಲಾಗುತ್ತಿದೆ. ಮುಖ್ಯಮಂತ್ರಿಗಳ ಆಶೀರ್ವಾದದೊಂದಿಗೆ ಕಂಚಿನ ಪುತ್ಥಳಿ ರೆಡಿಯಾಗುತ್ತಿದೆ. ಬಹಳ ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುತ್ತಿದೆ. 2008 ರಲ್ಲಿ ಹಾಗೂ 2019 ರಲ್ಲಿ ಅಧಿಕಾರ ವಹಿಸಿದಾಗಲೂ ಪಾರಂಪರಿಕ ಕಟ್ಟಡಗಳನ್ನು ಅಭಿವೃದ್ಧಿಗೊಳಿಸಲು ನಿರ್ಧಾರ ಮಾಡಿದ್ದಾರೆ.  2019 ರಲ್ಲಿ ಅಧಿಕಾರ ವಹಿಸಿದಾಗ ಮೊದಲು ಮಾಡಿದ ಕೆಲಸ ಅವರ ಪುತ್ಥಳಿ ನಿರ್ಮಾಣ ಕಾರ್ಯ. 23 ಎಕರೆ ಜಾಗದಲ್ಲಿ ನಿರ್ಮಾಣ ಮಾಡಲು ನಿರ್ಧಾರ ಮಾಡಿದ್ದಾರೆ. ಮುಂದಿನ ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ಇದರ ಲೋಕಾರ್ಪಣೆ ಆಗಲಿದೆ ಎಂದು ಹೇಳಿದರು.

  ಇದನ್ನೂ ಓದಿ:Karnataka Weather Today: ಕರಾವಳಿಯಲ್ಲಿ ಇಂದಿನಿಂದ 3 ದಿನ ಯಲ್ಲೋ ಅಲರ್ಟ್​; ಉ.ಕ.ದಲ್ಲಿ ಮಳೆಯ ಅಬ್ಬರ, ಮನೆಗಳಿಗೆ ನುಗ್ಗಿದ ನೀರು

  ಮುಂದುವರೆದ ಅವರು,  ಕೆಂಪಾಪುರದಲ್ಲೂ ಕೆಂಪೇಗೌಡರ ವೀರ ಸಮಾಧಿಯನ್ನು ಅಭಿವೃದ್ಧಿ ಮಾಡಲು ಕ್ರಮ ಕೈಗೊಳ್ಳಲಾಗಿದೆ.  ಬೆಂಗಳೂರು ಬೇರೆ ಬೇರೆ ಹೆಸರು ಪಡೆದಿದೆ. ಕೆಂಪೇಗೌಡ ಜಯಂತಿಯನ್ನ ಬೆಂಗಳೂರು ಹಬ್ಬವಾಗಿ ಆಚರಣೆ ಮಾಡಬೇಕು. ಈ ಹಬ್ಬ ಮಾಡಲು ಕಳೆದ ಎರಡು ವರ್ಷಗಳ ಹಿಂದೆಯೇ ಚಿಂತನೆ ನಡೆದಿತ್ತು. ಆದರೆ ಕೊರೋನಾದಿಂದಾಗಿ ತಡೆಯಲಾಗಿತ್ತು. ಮುಂದಿನ ದಿನಗಳಲ್ಲಿ ಸೋಂಕು ಕಡಿಮೆಯಾದ ನಂತರ ಆಚರಣೆ ಮಾಡಬೇಕು. ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದಿಂದ ಹಲವಾರು ಕೆಲಸಗಳನ್ನು ಮಾಡಲಾಗುತ್ತಿದೆ ಎಂದರು.

  ಇನ್ನು, ನಮ್ಮ‌ಮೆಟ್ರೋ ಹೆಸರನ್ನು ನಮ್ಮ ಕೆಂಪೇಗೌಡ ಮೆಟ್ರೋ ಅಥವಾ ಕೆಂಪೇಗೌಡ ಮೆಟ್ರೋ ಎಂದಾದರೂ ಬದಲಿಸಿ ಎಂದು ನಂಜಾವಧೂತ ಸ್ವಾಮೀಜಿ ಸಿಎಂ ಯಡಿಯೂರಪ್ಪನವರಿಗೆ ಮನವಿ ಮಾಡಿದರು. ವಿಧಾನಸೌಧದಲ್ಲೂ ಒಂದು ಕೆಂಪೇಗೌಡ ಪ್ರತಿಮೆ ಸ್ಥಾಪನೆ ಮಾಡುವಂತೆಯೂ ಯಡಿಯೂರಪ್ಪನವರಿಗೆ ಮನವಿ ಮಾಡಿಕೊಂಡರು. ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಕ್ಕೂ ಅತ್ಯುತ್ತಮ ಅಧ್ಯಕ್ಷರ ನೇಮಕ ಮಾಡಿ ಎಂದು ನಂಜಾವಧೂತ ಸ್ವಾಮೀಜಿ ಹೇಳಿದರು.

  ಇದನ್ನೂ ಓದಿ:Petrol Price Today: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್​-ಡೀಸೆಲ್ ಬೆಲೆ ಇಂತಿದೆ

  ಇನ್ನು, ನಾಡಪ್ರಭು ಕೆಂಪೇಗೌಡರ 512ನೇ ಜಯಂತಿ ಹಿನ್ನೆಲೆ,  ಬಿಬಿಎಂಪಿ ಕೇಂದ್ರ ಕಚೇರಿ ಎದುರುಗಡೆ ಇರುವ ಕೆಂಪೇಗೌಡ ಪ್ರತಿಮೆ ಹಾಗೂ ಕೆಂಪೇಗೌಡರ ಸೊಸೆ ಮಹಾತ್ಯಾಗಿ ಲಕ್ಷೀದೇವಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.  ಕೋವಿಡ್ ಹಿನ್ನಲೆಯಲ್ಲಿ ಸರಳವಾಗ ಕೆಂಪೇಗೌಡರ ಜಯಂತಿ ಆಚರಣೆ ಮಾಡಲಾಯಿತು. ರಾಕೇಶ್ ಸಿಂಗ್ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮಾಲಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಇನ್ನಿತರ ಅಧಿಕಾರಿಗಳು ಭಾಗಿಯಾಗಿದ್ದರು.
  Published by:Latha CG
  First published: