Wings India Award: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಂಗ್ಸ್ ಇಂಡಿಯಾ 2022 ಪ್ರಶಸ್ತಿ ಪ್ರದಾನ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಂಗ್ಸ್ ಇಂಡಿಯಾ 2022 ಪ್ರಶಸ್ತಿ ನೀಡಲಾಗಿದೆ. ಹೈದಾರಾಬಾದ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯ್ತು

ಬೆಂಗಳೂರು ವಿಮಾನ ನಿಲ್ದಾಣ

ಬೆಂಗಳೂರು ವಿಮಾನ ನಿಲ್ದಾಣ

  • Share this:
ಬೆಂಗಳೂರು (ಮಾ.26): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ( KempeGowda International Airport) ನಿಲ್ದಾಣಕ್ಕೆ ವಿಂಗ್ಸ್ ಇಂಡಿಯಾ (Wings India) 2022 ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಸ್ಮಾರ್ಟ್ ಆವಿಷ್ಕಾರ ಮತ್ತು ಅತ್ಯಾಧುನಿಕ ತಂತ್ರಜ್ಞಾನ (Advanced Technology) ಅಳವಡಿಕೆಗೆ ಪ್ರಶಸ್ತಿ ನೀಡಲಾಗಿದೆ. ಏವಿಯೇಷನ್ ಇನ್ನೋವೇಷನ್ ಸಂಸ್ಥೆ ವತಿಯಿಂದ ಕೆಐಎಬಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಹೈದರಾಬಾದ್​ನ (Hyderabad) ತಾಜ್ ಹೋಟೆಲ್​ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು ಕೆಐಎಬಿ ಸಿಇಒ ಎಂಡಿ ಹರಿ ಮರರ್ ರಿಂದ ಪ್ರಶಸ್ತಿ ಸ್ವೀಕಾರ ಮಾಡಿದ್ದಾರೆ. ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಈ ಗೌರವ ಸಿಕ್ಕಿರೋದು ರಾಜ್ಯಕ್ಕೆ ಸಂತಸದ ವಿಷಯವಾಗಿದೆ.

ಜೋತಿರಾದಿತ್ಯ ಸಿಂದಿಯಾರಿಂದ ಪ್ರದಾನ

ಆರಂಭದಿಂದ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಇದೀಗ ವಿಂಗ್ಸ್ ಇಂಡಿಯಾ ಅವಾರ್ಡ್ಸ್, 2022ರಲ್ಲಿ ಅತ್ಯುತ್ತಮ ವಿಮಾನ ನಿಲ್ದಾಣ ಪುರಸ್ಕಾರ ಹಾಗೂ ಆವಿಷ್ಕಾರದಲ್ಲಿ ಶ್ರೇಷ್ಠತೆಗೆ 'ಏವಿಯೇಷನ್ ಇನ್ನೊವೇಷನ್’ಪುರಸ್ಕಾರಕ್ಕೆ ಪಾತ್ರವಾಗಿದೆ. ಈ ಪ್ರಶಸ್ತಿಗಳನ್ನು ನಾಗರಿಕ ವಿಮಾನಯಾನ ಸಚಿವರಾದ  ಜೋತಿರಾದಿತ್ಯ ಸಿಂದಿಯಾ ಪ್ರದಾನ ಮಾಡಿದರು.

ಅಳವಡಿಕೆಗೆ ವಿಂಗ್ಸ್ ಇಂಡಿಯಾ ಅವಾರ್ಡ್ಸ್ 2022

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ತನ್ನ ಗ್ರಾಹಕ-ಕೇಂದ್ರಿತ ವಿಧಾನಕ್ಕೆ ಪ್ರಶಂಸೆಗೆ ಒಳಗಾಗಿದ್ದು, ಸ್ಮಾರ್ಟ್ ಆವಿಷ್ಕಾರ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಅಳವಡಿಕೆಗೆ ವಿಂಗ್ಸ್ ಇಂಡಿಯಾ ಅವಾರ್ಡ್ಸ್ 2022ರಲ್ಲಿ ಎರಡು ಪ್ರಮುಖ ಪುರಸ್ಕಾರಗಳನ್ನು ತನ್ನದಾಗಿಸಿಕೊಂಡಿದೆ.‌

ಶ್ರೇಷ್ಠ ವಿಮಾನ ನಿಲ್ದಾಣಗಳಲ್ಲಿ ಒಂದು

ಬೆಂಗಳೂರು ವಿಮಾನ ನಿಲ್ದಾಣವು ಸಾಮಾನ್ಯ ವಿಭಾಗದಲ್ಲಿ ಶ್ರೇಷ್ಠ ವಿಮಾನ ನಿಲ್ದಾಣ ಎಂಬ ಪುರಸ್ಕಾರಕ್ಕೆ ಭಾಜನವಾಗಿದೆ ಮತ್ತು 'ಏವಿಯೇಷನ್ ಇನ್ನೊವೇಷನ್ ಪುರಸ್ಕಾರ ಗಳಿಸಿದೆ. ಈ ಮಾನ್ಯತೆಯು ಉದ್ಯಮದ ಅತ್ಯಂತ ಪ್ರತಿಷ್ಠಿತ ಪುರಸ್ಕಾರಗಳಲ್ಲಿ ಒಂದಾಗಿದೆ. ಗ್ರಾಹಕ ಸೇವೆ, ಸೌಲಭ್ಯಗಳು ಮತ್ತು ಆವಿಷ್ಕಾರಗಳ ಮೌಲ್ಯಮಾಪನದ ನಂತರ ಈ ಪ್ರಶಸ್ತಿ ನೀಡಲಾಗುತ್ತದೆ.

ಇದನ್ನೂ ಓದಿ: Hubli-Dharwad ಅವಳಿ ನಗರದಲ್ಲಿ FMCG ಕ್ಲಸ್ಟರ್ ಸ್ಥಾಪನೆ; ಸಚಿವ ಮುರುಗೇಶ್​ ನಿರಾಣಿ ಘೋಷಣೆ

ಹೈದರಾಬಾದ್‍ನ ಹೋಟೆಲ್ ತಾಜ್ ಕೃಷ್ಣಾದಲ್ಲಿ ಪ್ರದಾನ

ಭಾರತ ಸರ್ಕಾರದ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಈ ಪ್ರಶಸ್ತಿಗಳನ್ನು ಮಾರ್ಚ್ 25, 2022ರಂದು ಹೈದರಾಬಾದ್‍ನ ಹೋಟೆಲ್ ತಾಜ್ ಕೃಷ್ಣಾದಲ್ಲಿ ಪ್ರದಾನ ಮಾಡಿದರು.ಈ ವೇಳೆಯಲ್ಲಿ ನಾಗರಿಕ ವಿಮಾನಯಾನ ಸಚಿವಾಲಯದ ಹಿರಿಯ ಅಧಿಕಾರಿಗಳು, ಉದ್ಯಮದ ನಾಯಕರು ಸೇರಿದಂತೆ ಪಾಲುದಾರರು ಉಪಸ್ಥಿತರಿದ್ದರು.

ಭಾರತದ ದಕ್ಷಿಣ ಭಾಗದಲ್ಲಿ ಕರ್ನಾಟಕದ ರಾಜಧಾನಿಯಾದ ಬೆಂಗಳೂರಿಗೆ ಸೇವೆ ಸಲ್ಲಿಸುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇದಾಗಿದೆ. 4,000 ಎಕರೆಗಳಲ್ಲಿ (1,600 ಹೆಕ್ಟೇರ್) ಹರಡಿರುವ ಈ ವಿಮಾನ ನಿಲ್ದಾಣ ನಗರದ ಉತ್ತರಕ್ಕೆ ಸುಮಾರು 30 ಕಿಲೋಮೀಟರ್ (19 ಮೈಲಿ) ದೇವನಹಳ್ಳಿಯ ಉಪನಗರದ ಬಳಿ ಇದೆ. ಇದು ಸಾರ್ವಜನಿಕ-ಖಾಸಗಿ ಒಕ್ಕೂಟವಾದ ಬೆಂಗಳೂರು ಇಂಟರ್​ ನ್ಯಾಷನಲ್ ಏರ್​ ಪೋರ್ಟ್ ಲಿಮಿಟೆಡ್  ಒಡೆತನದಲ್ಲಿ ಕಾರ್ಯ ನಿರ್ವಹಿಸುತ್ತದೆ. ಬೆಂಗಳೂರಿನ ನಿರ್ಮಾತೃ ಎಂದು ಕರೆಸಿಕೊಳ್ಳುವ ಕೆಂಪೇಗೌಡರ ಹೆಸರನ್ನು ಇದಕ್ಕೆ ಇಡಲಾಗಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಕ್ಲೀನ್ಮ್ಯಾಕ್ಸ್ ಸೋಲಾರ್ ಅಭಿವೃದ್ಧಿಪಡಿಸಿದ ಕರ್ನಾಟಕದ ಮೊದಲ ಸಂಪೂರ್ಣ ಸೌರಶಕ್ತಿ ಚಾಲಿತ ವಿಮಾನ ನಿಲ್ದಾಣವಾಗಿದೆ.

ಇದನ್ನು ಓದಿ: Bengaluru: ಜಿಮ್​ನಲ್ಲಿ ವರ್ಕೌಟ್ ಮಾಡ್ತಿದ್ದ ವೇಳೆ ಕುಸಿದು ಬಿದ್ದು ಮಹಿಳೆ ಸಾವು

ಫೆಬ್ರವರಿ 2022 ರಲ್ಲಿ, ಬೆಂಗಳೂರು ವಿಮಾನ ನಿಲ್ದಾಣವು ದಕ್ಷಿಣ ಭಾರತದ ಪ್ರಮುಖ ವರ್ಗಾವಣೆ ಕೇಂದ್ರವೆಂದು ಗುರುತಿಸಲ್ಪಟ್ಟಿದೆ ಮತ್ತು ಭಾರತದ ವಾಯುಯಾನ ಕ್ಷೇತ್ರದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಪ್ರಯಾಣಿಕರ ಸುಗಮ ವರ್ಗಾವಣೆಗಾಗಿ ಹೆಚ್ಚುತ್ತಿರುವ ವರ್ಗಾವಣೆ ಸಂಖ್ಯೆಯನ್ನು ಪೂರೈಸಲು ಬೆಂಗಳೂರು ವಿಮಾನ ನಿಲ್ದಾಣವು ತನ್ನ ಅಸ್ತಿತ್ವದಲ್ಲಿರುವ ಎರಡು ವರ್ಗಾವಣೆ ವಲಯಗಳನ್ನು ಹೆಚ್ಚಿಸಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಈಗ ‘ದಕ್ಷಿಣ ಮತ್ತು ಮಧ್ಯ ಭಾರತದ ಹೆಬ್ಬಾಗಿಲು’ ಆಗಿದೆ. ಬೆಂಗಳೂರಿನ ಭೌಗೋಳಿಕ ಸ್ಥಳ ಮತ್ತು ಬೆಳೆಯುತ್ತಿರುವ ಕರ್ನಾಟಕದ ಆರ್ಥಿಕತೆಯು BLR ಪ್ರಮುಖ ಸಾರಿಗೆ ಕೇಂದ್ರವಾಗಲು ಸಹಾಯ ಮಾಡಿದೆ.
Published by:Pavana HS
First published: