ಬೆಂಗಳೂರು (ಮೇ 5): ಈಗಾಗಲೇ ದಿನಬಳಕೆ ವಸ್ತುಗಳು ಗಗನಕ್ಕೇರಿದೆ. ಅಂಗಡಿಯಲ್ಲಿ ಯಾವ ವಸ್ತುಗಳ ಬೆಲೆ ಕೇಳಿದ್ರು ಜಾಸ್ತಿನೇ ಹೇಳ್ತಾರೆ. ಪೆಟ್ರೋಲ್(Petrol), ಡೀಸೆಲ್ (Diesel) ನಿಂದ ಹಿಡಿದು, ಬೆಂಕಿಪಟ್ಟಣದವರೆಗೂ ಎಲ್ಲ ಬೆಲೆಗಳು ಏರಿಕೆಯಾಗಿದೆ (Prices Rise). ಇತ್ತೀಚಿಗಷ್ಟೆ ವಿದ್ಯುತ್ ದರ (Power Rate) ಕೂಡ ಹೆಚ್ಚಾಗಿದೆ. ಇನ್ನು ಹಾಲಿನ ರೇಟ್ ಕೂಡ ಹೆಚ್ಚಾಗುತ್ತೆ ಎಂದು ಹೇಳಲಾಗ್ತಿದೆ. ಇವುಗಳ ನಡುವೆ ಕುಡಿಯೋ ನೀರಿನ ಬಿಲ್ (Water Bill) ಕೂಡ ಹೆಚ್ಚಾಗೋ ಎಲ್ಲಾ ಸಾಧ್ಯತೆಗಳು ಇವೆ. ಕುಡಿಯೋ ನೀರಿನ ದರ ಹೆಚ್ಚಿಸುವಂತೆ ಸರ್ಕಾರಕ್ಕೆ ಈಗಾಗಲೇ ಜಲಮಂಡಳಿ ನೀರಿನ ದರ ಪರಿಷ್ಕರಣೆಗೆ ಪ್ರಸ್ತಾವನೆ ಕೂಡ ಸಲ್ಲಿಕೆ ಮಾಡಲಾಗಿದೆ.
ಬೆಂಗಳೂರು ಜನರಿಗೆ ಕಾವೇರಿ ನೀರಿನ ಶಾಕ್!?
ದರ ಏರಿಕೆ ಜನ ಸಾಮಾನ್ಯರಿಗೆ ಶಾಕ್ ಕೊಟ್ಟಿದೆ. ಕರೆಂಟ್ ದರವೂ ಹೆಚ್ಚಾಗಿ ಜನರ ಮೇಲೆ ಹೊರೆಯಾಗಿದೆ. ಇದೀಗ ದುಬಾರಿ ದುನಿಯಾದಲ್ಲಿ ಮತ್ತೊಂದು ದರ ಏರಿಕೆ ಶಾಕ್ಗೆ ರೆಡಿಯಾಗಬೇಕಿದೆ. ಬೆಂಗಳೂರಿನಲ್ಲಿ ಕಾವೇರಿ ನೀರಿನ ದರ ಏರಿಕೆ ಆಗುತ್ತಾ ಅನ್ನೋ ಪ್ರಶ್ನೆ ಮೂಡಿದೆ. ಕಾರಣ, ಬೆಂಗಳೂರು ಜಲಮಂಡಳಿಯು ನೀರಿನ ದರ ಪರಿಷ್ಕರಣೆಗೆ ಮತ್ತೆ ಪ್ರಸ್ತಾವನೆ ಸಲ್ಲಿಸಿದೆ. 8 ವರ್ಷದ ಬಳಿಕ ಕಾವೇರಿ ನೀರಿನ ದರ ಪರಿಷ್ಕರಣೆಗೆ ಸರ್ಕಾರ ಅಸ್ತು ಅನ್ನುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಗೃಹ ಬಳಕೆ ನೀರಿಗೆ ಶೇ.16 ರಷ್ಟು ದರ ಏರಿಕೆ ಪ್ರಸ್ತಾವನೆ
ಗೃಹ ಬಳಕೆಯ ನೀರಿಗೆ ಶೇ.16 ರಷ್ಟು ಹಾಗೂ ವಾಣಿಜ್ಯ ಬಳಕೆಗೆ ಶೇ.21 ರಷ್ಟು ದರ ಹೆಚ್ಚಳಕ್ಕೆ ಪ್ರಸ್ತಾವನೆ ಹೋಗಿದೆ. ಕರೆಂಟ್ ಬಿಲ್ ಹೆಚ್ಚಳ ಬೆನ್ನಲ್ಲೇ ನೀರಿನ ದರ ಹೆಚ್ಚಳ ಮಾಡುವಂತೆ ಮನವಿ ಮಾಡಲಾಗಿದೆ. ಜಲಮಂಡಳಿ ನಿರ್ವಹಣೆ ವೆಚ್ಚ ಅಧಿಕವಾದ ಕಾರಣದಿಂದ ಆದ ನಷ್ಟವನ್ನು ಸರಿದೂಗಿಸಲು ನೀರಿನ ದರ ಪ್ರಸ್ತಾವನೆ ಮಾಡಲಾಗಿದೆ.
ಇದನ್ನೂ ಓದಿ; Kaveri Water: 2030ಕ್ಕೆ ಬೆಂಗಳೂರಲ್ಲಿ ನೀರಿಗೆ ಹಾಹಾಕಾರ; ಎಚ್ಚೆತ್ತುಕೊಳ್ಳದಿದ್ದರೆ ಕಾದಿದೆ ಗಂಡಾಂತರ!
8 ಬಾರಿ ಕರೆಂಟ್ ದರ ಪರಿಷ್ಕರಣೆ
ಬೆಂಗಳೂರಿನಲ್ಲಿ 2014ರಿಂದ ನೀರಿನ ದರ ಏರಿಕೆ ಮಾಡಿಲ್ಲ. 8 ವರ್ಷದಲ್ಲಿ 8 ಬಾರಿ ಕರೆಂಟ್ ದರ ಪರಿಷ್ಕರಣೆ ಆಗಿದೆ. ಪ್ರತಿ ತಿಂಗಳು 80-90 ಕೋಟಿ ಕರೆಂಟ್ ಬಿಲ್ ಅನ್ನು ಬೆಸ್ಕಾಂಗೆ ಜಲಮಂಡಳಿ ಪಾವತಿ ಮಾಡಬೇಕು. ನಿರ್ವಹಣೆ ಸವಾಲು ಆಗಿರೋದರಿಂದ ನೀರಿನ ದರ ಪರಿಷ್ಕರಣೆ ಅನಿವಾರ್ಯ ಅಂತಾ ಮಂಡಳಿ ಹೇಳಿಕೊಂಡಿದೆ.
ಜನಸಾಮಾನ್ಯರ ಜೇಬಿಗೆ ಬೀಳುತ್ತೆ ಕತ್ತರಿ
ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟರೆ ಬೆಂಗಳೂರಿನಲ್ಲಿ ಕಾವೇರಿ ನೀರಿನ ದರ ಪರಿಷ್ಕರಣೆ ಆಗೋದು ಗ್ಯಾರೆಂಟಿ. ಈಗಾಗಲೇ ನಾಲೈದು ಬಾರಿ ದರ ಪರಿಷ್ಕರಣೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿತ್ತು. ಇದೀಗ 5ನೇ ಬಾರಿ ದರ ಪರಿಷ್ಕರಣೆ ಮಾಡುವಂತೆ ಪ್ರಸ್ತಾಪ ಸಲ್ಲಿಸಿದ್ದು, ಸರ್ಕಾರ ಅಸ್ತು ಎಂದರೆ ಜನರು ಮತ್ತೊಂದು ದರ ಏರಿಕೆ ಹೊರೆಯನ್ನು ಅನುಭವಿಸಬೇಕಿದೆ.
ಮಕ್ಕಳ ಪ್ರಯಾಣ ದರದಲ್ಲಿ ಏರಿಕೆ ಇಲ್ಲ
ಕೆಎಸ್ಆರ್ಟಿಸಿ ಬಸ್ನಲ್ಲಿ ಮಕ್ಕಳ ಪ್ರಯಾಣ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಕೆಲ ವದಂತಿಗಳು ಹರಿದಾಡುತ್ತಿದ್ದ ಹಿನ್ನೆಲೆ ಈ ಸಂಬಂಧ ಪ್ರಕಟಣೆ ಹೊರಡಿಸಿದೆ.
ಮಕ್ಕಳಿಗೆ ಪ್ರಯಾಣ ದರ ವಿಧಿಸುವಾಗ 6 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರಯಾಣ. 6-12 ವರುಷದೊಳಗಿನ ಮಕ್ಕಳಿಗೆ ಆಫ್ ಟಿಕೆಟ್, 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಪುಲ್ ಟಿಕೆಟ್ ದರವನ್ನು ವಿಧಿಸಲಾಗುತ್ತಿದೆ.
ಕೆಲ ಸಂದರ್ಭಗಳಲ್ಲಿ ಮಕ್ಕಳು 4-5 ವರುಷ ಆಗಿದ್ದಾಗ, 6 ವರುಷವಾಗಿರುವ ಮಕ್ಕಳಂತೆ, ಅದೇ ರೀತಿ 11-12 ವರುಷದ ಮಕ್ಕಳು 13 ವರುಷದ ಮಕ್ಕಳಂತೆ ಕಾಣುವ ಸಂದರ್ಭಗಳಿವೆ.ಈ ವೇಳೆ ಮಕ್ಕಳ ಪಾಲಕರು/ಪೋಷಕರು ಹಾಗೂ ಬಸ್ ಚಾಲನಾ ಸಿಬ್ಬಂದಿ ನಡುವೆ ಟಿಕೆಟ್ ಪಡೆಯುವಂತೆ ಗಲಾಟೆಗಳು ವರದಿಯಾಗುತ್ತಿವೆ. ಇದನ್ನ ಮನಗಂಡು ಅಕ್ಟೋಬರ್ 2021ರಲ್ಲಿ ಸ್ಪಷ್ಟ ಸುತ್ತೋಲೆಯನ್ನು ಸಹ ಹೊರಡಿಸಲಾಗಿತ್ತು ಎಂದು ಸಂಸ್ಥೆ ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ