• Home
  • »
  • News
  • »
  • state
  • »
  • Kaveri Water: 2030ಕ್ಕೆ ಬೆಂಗಳೂರಲ್ಲಿ ನೀರಿಗೆ ಹಾಹಾಕಾರ; ಎಚ್ಚೆತ್ತುಕೊಳ್ಳದಿದ್ದರೆ ಕಾದಿದೆ ಗಂಡಾಂತರ!

Kaveri Water: 2030ಕ್ಕೆ ಬೆಂಗಳೂರಲ್ಲಿ ನೀರಿಗೆ ಹಾಹಾಕಾರ; ಎಚ್ಚೆತ್ತುಕೊಳ್ಳದಿದ್ದರೆ ಕಾದಿದೆ ಗಂಡಾಂತರ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕುಡಿಯುವ ನೀರಿನ ಸಮಸ್ಯೆ ಆಗದಂತೆ ಕಾವೇರಿ 5ನೇ ಹಂತದಲ್ಲಿ 775 ದಶಲಕ್ಷ ಲೀಟರ್ ನೀರು ತರುವ ಯೋಜನೆ ರೂಪಿಸಲಾಯಿತು. ಈ ಯೋಜನೆಯ ನೀರು 2030ರ ಜನಸಂಖ್ಯೆಗಷ್ಟೇ ಸರಿ ಹೋಗಲಿದೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.

  • Share this:

ಬೆಂಗಳೂರು (ಮೇ 14:) ರಾಜ್ಯ ರಾಜಧಾನಿಗೆ ಕಾವೇರಿ (Kaveri) 5ನೇ ಹಂತದ ಕುಡಿಯುವ ನೀರಿನ ಯೋಜನೆಯಿಂದ 2030 ರವರೆಗೆ ಮಾತ್ರ ನೀರು (Water) ಒದಗಿಸಲು ಸಾಧ್ಯವಿದ್ದು, ಮತ್ತೊಂದು ಹೊಸ ಯೋಜನೆ ಕೈಗೆತ್ತಿಕೊಳ್ಳದಿದ್ದರೆ ನೀರಿನ ಬರ ಆವರಿಸುವುದು ಖಚಿತವಾಗಿದೆ. ದೇಶದ 3ನೇ ದೊಡ್ಡ ನಗರವಾಗಿರುವ ಬೆಂಗಳೂರಿನ (Bengaluru) ಜನತೆಗೆ ನೀರು ಒದಗಿಸಲು ಕಳೆದ 48 ವರ್ಷಗಳಿಂದ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಲೇ ಬಂದಿದೆ. 2011ರ ಜನಗಣತಿಯಂತೆ ನಗರದಲ್ಲಿದ್ದ 85 ಲಕ್ಷ ಜನರಿಗೆ, ಪ್ರಸ್ತುತ ನಿತ್ಯ ಸರಬರಾಜು ಮಾಡುತ್ತಿರುವ 1,450 ದಶ ಲಕ್ಷ  ಲೀಟರ್ ಕುಡಿಯುವ ನೀರು (Drinking Water) ಸಾಕಾಗುತ್ತಿತ್ತು. ಈಗಲೂ ಇಷ್ಟೇ ಪ್ರಮಾಣದ ನೀರನ್ನು ಪೂರೈಸಲಾಗುತ್ತಿದೆ. ಹೀಗಾಗಿ, ನಗರದ 110 ಹಳ್ಳಿ (Village) ವ್ಯಾಪ್ತಿಯಲ್ಲಿ  ಅಂದಾಜು 3.5 ಲಕ್ಷಕ್ಕೂ ಅಧಿಕ ಕುಟುಂಬಗಳು (Family) ನೀರಿಲ್ಲದೇ ಪರದಾಡುತ್ತಿವೆ. 


ಕುಡಿಯೋ ನೀರಿನ ಸಮಸ್ಯೆ ಬಗ್ಗೆ ತಜ್ಞರ ಎಚ್ಚರಿಕೆ


ರಾಜಧಾನಿಗೆ 2040 ರವರೆಗೂ ಕುಡಿಯುವ ನೀರಿನ ಸಮಸ್ಯೆ ಆಗಬಾರದು ಎಂದು ಬೆಂಗಳೂರು ಅಭಿವೃದ್ಧಿಪ್ರಾಧಿಕಾರ ರೂಪಿಸಿದ್ದ 2015ರ ಮಾಸ್ಟರ್‌ಪ್ಲಾನ್ ಆಧರಿಸಿ ಕಾವೇರಿ 5ನೇ ಹಂತದಲ್ಲಿ 775 ದಶಲಕ್ಷ ಲೀಟರ್ ನೀರು ತರುವ ಯೋಜನೆ ರೂಪಿಸಲಾಯಿತು. ಈ ಯೋಜನೆಯ ನೀರು 2030ರ ಜನಸಂಖ್ಯೆಗಷ್ಟೇ ಸರಿ ಹೋಗಲಿದೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.


ಇದನ್ನೂ ಓದಿ: Accused Arrest: ಕೊನೆಗೂ ಸಿಕ್ಕಿಬಿದ್ದ ಆ್ಯಸಿಡ್​ ನಾಗ; ಆಶ್ರಮದಲ್ಲಿ ಸ್ವಾಮೀಜಿ ವೇಷ ಧರಿಸಿ ಅಡಗಿ ಕುಳಿತ್ತಿದ್ದ ಆರೋಪಿ


ಸಮಿತಿಯಿಂದ ಸರ್ಕಾರಕ್ಕೆ ವರದಿ


ರಾಜ್ಯದ ಎಲ್ಲಾ ನದಿ ನೀರಿನ ಮೂಲಗಳಿಂದ ಬೆಂಗಳೂರಿಗೆ ಕುಡಿಯುವ ನೀರಿನ ಯೋಜನೆಗಳನ್ನು ರೂಪಿಸುವಂತೆ ಹಾಗೂ ನೀರಿನ ಪ್ರಮಾಣದ ಬಗ್ಗೆ ವರದಿ ನೀಡುವಂತೆ ಸರ್ಕಾರ ಸಮಿತಿಯೊಂದನ್ನು ರೂಪಿಸಿತ್ತು. ಈ ಸಮಿತಿಯು 2016ರಲ್ಲಿ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಕಾವೇರಿ 5ನೇ ಹಂತದ ಯೋಜನೆ, ಮೇಕೆದಾಟು, ಶರಾವತಿ ಹಿನ್ನೀರು, ಕೃಷ್ಣಾ ಹಾಗೂ ಎತ್ತಿನಹೊಳೆ ಯೋಜನೆಗಳ ಬಗ್ಗೆ ತಿಳಿಸಿತ್ತು. ಇದರಲ್ಲಿ ಕಾವೇರಿ 5ನೇ ಹಂತದ ಯೋಜನೆಯಿಂದ 775 ಎಂಎಲ್‌ಡಿ (10 ಟಿಎಂಸಿ) ನೀರನ್ನು ಜಪಾನ್ ಇಂಟರ್ ನ್ಯಾಷನಲ್ ಕೋ-ಆಪರೇಷನ್ ಏಜೆನ್ಸಿಯಿಂದ (ಜೈಕಾ) ಆರ್ಥಿಕ ನೆರವಿನಿಂದ ತರಲಾಗುತ್ತಿದೆ. ಈ ನೀರು 2023ರ ಮೊದಲ ತ್ರೈಮಾಸಿಕದಲ್ಲಿ 110 ಹಳ್ಳಿಗಳಿಗೆ ಲಭ್ಯವಾಗಲಿದೆ.


ನೀರು ಸರಬರಾಜು ಯೋಜನೆ ದಶಕಕ್ಕಿಂತ ಮೊದಲೇ ಮುಕ್ತಾಯ


ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ 2007ರಲ್ಲಿ ರಚಿಸಲಾಗಿದ್ದ 2015ರ ಮಾಸ್ಟರ್ ಪ್ಲಾನ್ ಅನುಗುಣ ನಗರದ ಜನಸಂಖ್ಯೆಯು 2011ರ ಅವಧಿಯಲ್ಲಿ 85 ಲಕ್ಷಕ್ಕೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿತ್ತು. ಇದು 2021ಕ್ಕೆ 1.05 ಕೋಟಿ  ಹಾಗೂ 2031ಕ್ಕೆ 1.40 ಕೋಟಿ ಜನಸಂಖ್ಯೆಯಾಗಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು.


ಆದರೆ, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮೆಟ್ರೋಪಾಲಿಟನ್ ನಗರವು ಶಿಕ್ಷಣ ಕೇಂದ್ರವಾಗಿ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನದ ನೆಲೆಯಾಗಿ, ಅನೇಕ ಬಹುರಾಷ್ಟ್ರೀಯ ಕಂಪನಿಗಳ ತವರಾಗಿ, ಅತ್ಯಾಧುನಿಕ ಆರೋಗ್ಯ ಸೇವಾ ಕೇಂದ್ರವಾಗಿ ಪ್ರತಿದಿನವೂ ಹೆಚ್ಚು ಜನರನ್ನು ತನ್ನೆಡೆಗೆ‌ ಸೆಳೆಯುತ್ತಲೇ ಇದೆ. ಆದ್ದರಿಂದ 2031ಕ್ಕೆ ಅಂದಾಜಿಸಲಾಗಿದ್ದ ಜನಸಂಖ್ಯೆ ಪ್ರಮಾಣವು 2021ಕ್ಕೆ ತಲುಪಿದೆ. ಈ ಕಾರಣಗಳಿಂದ ನೀರು ಸರಬರಾಜು ಯೋಜನೆ ದಶಕಕ್ಕಿಂತ ಮೊದಲೇ ಮುಕ್ತಾಯ ಆಗಲಿದೆ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.


ಇದನ್ನೂ ಓದಿ: Interim Injunction: ಪೀಠಾರೋಹಣಕ್ಕೆ ಕೋರ್ಟ್ ಬ್ರೇಕ್, ಅಡೆತಡೆಯಿಲ್ಲದೆ ಕಾರ್ಯಕ್ರಮ ನಡೆಯುತ್ತೆ-ಬಿ.ಜೆ ಪುಟ್ಟಸ್ವಾಮಿ


2030ಕ್ಕೆ ಹೊಸ ಯೋಜನೆ ಅತ್ಯಗತ್ಯ


2030ಕ್ಕೆ ಹೊಸ ಯೋಜನೆ ಅಗತ್ಯ ಪ್ರಸ್ತುತ ನಗರದಲ್ಲಿ 10.5 ಲಕ್ಷ ನೀರಿನ ಸಂಪರ್ಕಗಳಿಗೆ 1,450 ಎಂಎಲ್‌ಡಿ ನೀರನ್ನು ಪ್ರತಿನಿತ್ಯ ಸರಬರಾಜು ಮಾಡಲಾಗುತ್ತದೆ. 2023ಕ್ಕೆ ಪೂರ್ಣಗೊಳ್ಳುವ ಕಾವೇರಿ 5ನೇ ಹಂತದಿಂದ 775 ಎಂಎಲ್‌ಡಿ ನೀರನ್ನು ತಂದು 3.5 ಲಕ್ಷ ಕುಟುಂಬಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ಇದರಿಂದ 2023ರ ಅಂತ್ಯಕ್ಕೆ ನೀರು ಸರಬರಾಜು ಸಾಮರ್ಥ್ಯ 2,225 ದಶಲಕ್ಷ ಲೀ.ಗೆ ಏರಿಕೆಯಾಗಲಿದೆ. ಆದರೆ, 2025ಕ್ಕೆ ನಗರದ ಜನತೆಗೆ 1,800 ಎಂಎಲ್‌ಡಿ ನೀರು ಪೂರೈಸಬೇಕಾಗುತ್ತದೆ. ಉಳಿದ 450 ಎಂಎಲ್‌ಡಿ ನೀರನ್ನು 2030ಕ್ಕೆ ಬಳಸಬೇಕಾದ ಅನಿವಾರ್ಯತೆ ಎದುರಾಗಲಿದೆ. ಹೀಗಾಗಿ, ತಕ್ಷಣವೇ ಸರ್ಕಾರ ಎಚ್ಚೆತ್ತುಕೊಂಡು ಹೊಸ ಯೋಜನೆ ರೂಪಿಸಬೇಕಿದೆ.

Published by:Pavana HS
First published: