ಎರಡನೇ ವಾರದ Weekend Curfew ; ಬೆಂಗಳೂರಿನಲ್ಲಿ ಮಾರುಕಟ್ಟೆ ಸ್ಥಳಾಂತರದ ಮಾಹಿತಿ ಇಲ್ಲಿದೆ

ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಮಹಾಮಾರಿ ಕೊರೊನಾ ಮತ್ತು ಓಮೈಕ್ರಾನ್ (Corona Virus And Omicron) ನಿಯಂತ್ರಣಕ್ಕೆ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ (Weekend Curfew) ಅಸ್ತ್ರ ಪ್ರಯೋಗಿಸಿದೆ. ಶುಕ್ರವಾರ ರಾತ್ರಿ 10 ಗಂಟೆಯಿಂದಲೇ ರಾಜ್ಯ ಸ್ತಬ್ಧವಾಗಿದ್ದು, ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಮಹಾಮಾರಿ ಕೊರೊನಾ ಮತ್ತು ಓಮೈಕ್ರಾನ್ (Corona Virus And Omicron) ನಿಯಂತ್ರಣಕ್ಕೆ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ (Weekend Curfew) ಅಸ್ತ್ರ ಪ್ರಯೋಗಿಸಿದೆ. ಶುಕ್ರವಾರ ರಾತ್ರಿ 10 ಗಂಟೆಯಿಂದಲೇ ರಾಜ್ಯ ಸ್ತಬ್ಧವಾಗಿದ್ದು, ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ . ಕೇವಲ ಅಗತ್ಯ ವಸ್ತು, ತರಕಾರಿ ಖರೀದಿಗೆ ಮಾತ್ರ ಅವಕಾಶ ನೀಡಲಾಗಿದೆ. ಬೆಂಗಳೂರಿನ ರಸ್ತೆಗಳು ಬಿಕೋ ಎನ್ನುತ್ತಿದ್ದು, ತುರ್ತು ಸೇವೆಗಳಿಗೆ BMTC ಬಸ್ ಗಳು ಕಾರ್ಯಾಚರಣೆ ನಡೆಸಲಿವೆ. ಪ್ರಯಾಣಿಕರನ್ನು (Passengers) ಗಮನಿಸಿ ಬಸ್ ಗಳನ್ನು ರಸ್ತೆಗೆ ಇಳಿಸಲು ಬಿಎಂಟಿಸಿ ಪ್ಲಾನ್ ಮಾಡಿಕೊಂಡಿದೆ. ಮತ್ತೊಂದು ಕಡೆ ಜನದಟ್ಟಣೆ ಕಡಿಮೆ ಮಾಡುವ ಹಿನ್ನೆಲೆ ಬೆಂಗಳೂರಿನ ಮಾರುಕಟ್ಟೆಗಳನ್ನು ಸ್ಥಳಾಂತರ ಮಾಡಲಾಗಿದೆ.

ಎರಡನೇ ವಾರದ ಲಾಕ್ ಡೌನ್ ಶುರುವಾಗಿದೆ. ಮೊದಲನೆ ವಾರ ವೀಕೆಂಡ್ ಕರ್ಫ್ಯೂಗೆ ಜನರ ಸಹಕಾರವಿತ್ತು. ಈ ವಾರ ಇಂದು, ನಾಳೆ ಬ್ಯಾರಿಕೇಡ್ ಹಾಕಿ ಚೆಕ್ ಮಾಡಲಾಗುತ್ತಿದೆ. ಪೊಲೀಸರು ಪ್ರಮುಖ ರಸ್ತೆಗಳಲ್ಲಿ ಪರಿಶೀಲನೆ ಮುಂದುವರೆಸಿದ್ದಾರೆ. ಬಿಬಿಎಂಪಿ ಸೂಚನೆ ಹಿನ್ನೆಲೆ ಮಾರುಕಟ್ಟೆ ಸ್ಥಳಾಂತರಕ್ಕೆ ನಿನ್ನೆ ಸಭೆ ನಡೆಸಿ ಮಾಹಿತಿ ನೀಡಲಾಗಿದೆ. ಅದಕ್ಕೆ ವರ್ತಕರು ಇಂದು ಸಹಕಾರ ನೀಡಿದ್ದಾರೆ ಸಂಕ್ರಾಂತಿ ಹಬ್ಬ ಇರುವ ಕಾರಣ ದೇವಾಲಯದ ಹೊರಗಡೆ ಪೊಲೀಸರ ಗಸ್ತು ಇರುತ್ತೆ ಎಂದು ಪಶ್ಚಿಮ ವಲಯದ ಡಿಸಿಪಿ ಡಾ ಸಂಜೀವ್ ಪಾಟೀಲ್ ನ್ಯೂಸ್ 18 ಕನ್ನಡಕ್ಕೆ ಹೇಳಿದ್ದಾರೆ.

ಇದನ್ನೂ ಓದಿ:  Bengaluru ಶಾಪಿಂಗ್ ಮಾಲ್ ನಲ್ಲಿ ಅಗ್ನಿ ಅವಘಡ: Weekend Curfewನಿಂದಾಗಿ ಉಳಿದ ಜೀವಗಳು!

ಮಾರುಕಟ್ಟೆ ಎಲ್ಲಿ ಸ್ಥಳಾಂತರ?

>> ಕೆ.ಆರ್.ಮಾರ್ಕೆಟ್ ಹೂವಿನ ಮಾರುಕಟ್ಟೆ- ಬಿನ್ನಿಪೇಟೆಯ ಎಪಿಎಂಸಿ ಮಾರುಕಟ್ಟೆಗೆ ಸ್ಥಳಾಂತರ

>> ಕೆ.ಆರ್.ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರ ಎನ್.ಟಿ.ಪೇಟೆ ಮುಖ್ಯರಸ್ತೆ ಶಿಫ್ಟ್

>> ಹಣ್ಣು ಮಾರುಕಟ್ಟೆಯ ಬೀದಿ ಬದಿ ವ್ಯಾಪಾರ - ಗುಂಡಪ್ಪರಸ್ತೆ, ಅವೆನ್ಯೂ ಮುಖ್ಯ ರಸ್ತೆಗೆ ಶಿಫ್ಟ್

>> ಕಲಾಸಿಪ್ಯಾಳದ ಜಯಚಾಮರಾಜೇಂದ್ರ ತರಕಾರಿ ಮಾರುಕಟ್ಟೆ- ಸಿಲ್ವರ್ ಜ್ಯೂಬಿಲಿ ಪಾರ್ಕ್ ರಸ್ತೆಗೆ ಸ್ಥಳಾಂತರ

>> ಕಡ್ಡಾಯವಾಗಿ ತಳ್ಳು ಗಾಡಿಯಲ್ಲಿ ವ್ಯಾಪಾರ ಮಾಡಲು ಸೂಚನೆ ನೀಡಲಾಗಿದೆ.

>> ಬೆಳಗ್ಗೆ 3 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ.

ವೀಕೆಂಡ್ ಕರ್ಫ್ಯೂ ವೇಳೆ ಏನಿರುತ್ತೆ..? ಏನಿರಲ್ಲಾ..?

ಬೆಂಗಳೂರಿನಲ್ಲಿ ಎರಡು ದಿನ ಶೇ.10ರಷ್ಟು  BMTC ಬಸ್ ಗಳು ಸಂಚರಿಸಲಿವೆ

- ವೀಕೆಂಡ್ ಕರ್ಫ್ಯೂ ವೇಳೆ ಸಾರ್ವಜನಿಕ ಸೇವೆ ಇರುವುದಿಲ್ಲ

- ಶೇ10 ರಷ್ಟು ಮಾತ್ರ ಬಸ್ ಗಳು ರಸ್ತೆಗೆ ಇಳಿಯಲಿದೆ

- ಆರೋಗ್ಯ ಕಾರ್ಯಕರ್ತರು, ಪೊಲೀಸ್ ಸಿಬ್ಬಂದಿಗಳು, ಇತರೆ ಮುಂಚೂಣಿ ಕಾರ್ಯಕರ್ತರಿಗೆ ಮಾತ್ರ ಅವಕಾಶ

- ಏರ್ಪೋರ್ಟ್ ಪ್ರಯಾಣದ ಬಸ್ ನಲ್ಲಿ ಯಾವುದೇ ತೊಡಕು ಇಲ್ಲ

-ಜನ ದಟ್ಟಣೆಗೆ ಅನುಸಾರವಾಗಿ KSRTC ಸೇವೆ

-ಜನ ದಟ್ಟಣೆಗೆ ಅನುಸಾರವಾಗಿ ವೀಕೆಂಡ್ನಲ್ಲಿ KSRTC ಸೇವೆ

-ರಾಜಧಾನಿ ಬೆಂಗಳೂರು ಸೇರಿ ರಾಜ್ಯ ಹಾಗೂ ಅಂತರಾಜ್ಯ ಬಸ್ ಓಡಾಡಲಿವೆ

-ಗೋವಾ, ಮಹಾರಾಷ್ಟ್ರ, ಕೇರಳ ಸೇರಿದಂತೆ ಹೊರ ರಾಜ್ಯದ ಪ್ರಯಾಣಿಕರಿಗೆ ಟಫ್ ರೂಲ್ಸ್

-RTPCR ನೆಗೆಟಿವ್ ವರದಿ ಇಲ್ಲದಿದ್ದರೆ  ಬಸ್ ಗೆ ಪ್ರವೇಶ ಇರುವುದಿಲ್ಲ

-ಕೋವಿಡ್ ರೂಲ್ಸ್ ಫಾಲೋ ಮಾಡಿ KSRTC ಬಸ್ ಸಂಚಾರ ನಡೆಸಲಿದೆ

-ವೀಕೆಂಡ್ ನಲ್ಲಿ 20 ನಿಮಿಷಕ್ಕೊಂದು ಮೆಟ್ರೋ

-ಕರ್ಫ್ಯೂ ವೇಳೆ  ಮೆಟ್ರೋ ಎಂದಿನಂತೆ ಸಂಚಾರ ಇರಲಿದೆ

-ಶನಿವಾರ ಹಾಗೂ ಭಾನುವಾರ 20 ನಿಮಿಷಗಳಿಗೊಮ್ಮೆ ಮೆಟ್ರೋ ಓಡಾಡಲಿದೆ

-ವೀಕೆಂಡ್ ಕರ್ಫ್ಯೂ ವೇಳೆ ಬೆಳಗ್ಗೆ 8 ರಿಂದ  ರಾತ್ರಿ 9 ರವರೆಗೆ ಕಾರ್ಯಾಚರಣೆ+

ಇದನ್ನೂ ಓದಿ:  Vijayapura: ಆಟೋ ಚಾಲಕನ ಬರ್ಬರ ಹತ್ಯೆ: 24 ಗಂಟೆಯಲ್ಲಿಯೇ ಆರೋಪಿಗಳ ಬಂಧನ: ಕೊಲೆ ನಡೆದಿದ್ಯಾಕೆ?

ಆಟೋ, ಓಲಾ ಊಬರ್ ಓಡಾಟಕ್ಕಿಲ್ಲ ಅನುಮತಿ

-ಕರ್ಫ್ಯೂ ವೇಳೆ  ಆಟೋ, ಕ್ಯಾಬ್ ಸಂಚಾರಕ್ಕೆ ಅವಕಾಶ ಇಲ್ಲ

-ಜನರು KSRTC ಬಸ್ನಲ್ಲಿ ಬಂದಿಳಿದರೂ ಮುಂದೆ ಹೋಗೋಕೆ ಬಿಎಂಟಿಸಿ ಬಸ್ಸೂ ಇಲ್ಲ

-ದೂರದಿಂದ ಬರುವ ಪ್ರಯಾಣಿಕರಿಗೆ ತೊಂದರೆ ಸಾಧ್ಯತೆ

-ಹೀಗಾಗಿ ಪರಿಸ್ಥಿತಿ ಅವಲೋಕಿಸಿ ಜನರು ಪ್ರಯಾಣ ಕೈಗೊಳ್ಳುವುದು ಉತ್ತಮ

ಹೋಟೆಲ್, ರೆಸ್ಟೋರೆಂಟ್, ಬಾರ್, ಪಬ್ ಬಂದ್

-ವೀಕೆಂಡ್ ಕರ್ಫ್ಯೂ ವೇಳೆ ಹೋಟೆಲ್, ರೆಸ್ಟೋರೆಂಟ್, ಬಾರ್, ಪಬ್ ಬಂದ್

-ಪಾಸಿಟಿವಿಟಿ ದರ ಕಡಿಮೆ ಇರುವ ಜಿಲ್ಲೆಗಳಲ್ಲಿ ನಿರ್ಧಾರ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳು ಸ್ವತಂತ್ರರು

-ಪಾರ್ಸಲ್ ಗೂ ಅವಕಾಶ

- ಹಾಲು, ಮೊಟ್ಟೆ, ಮಾಂಸ, ತರಕಾರಿ ಅಗತ್ಯ ಸೇವೆಗಳಿಗೆ ತೊಡಕಿಲ್ಲ

ಏನೇನು ಸಿಗುತ್ತೆ?

-ಹಾಲು, ಮೊಟ್ಟೆ, ಮಾಂಸ, ತರಕಾರಿ ಸಿಗುತ್ತೆ

-ದಿನ ಬಳಕೆಯ ಎಲ್ಲ ವಸ್ತುಗಳು ಸಿಗಲಿದೆ

-ತರಕಾರಿ, ಸೊಪ್ಪು, ಹಣ್ಣು ಇರಲಿದೆ

-ಚಿಕನ್, ಮಟನ್, ಮೊಟ್ಟೆ ದೊರಕಲಿದೆ
Published by:Mahmadrafik K
First published: