Karnataka Weather Report: ಕರ್ನಾಟಕದಲ್ಲಿ ಸಣ್ಣ ಚಳಿ ಜೊತೆ ಒಣ ಹವೆ: ನಿಮ್ಮ ನಗರದ ಹವಾಮಾನ ವರದಿ ಇಲ್ಲಿದೆ

ರಾಜ್ಯದಲ್ಲಿ ಚಳಿಯ (Cold) ಪ್ರಮಾಣ ತಗ್ಗಿದ್ದು, ಮಧ್ಯಾಹ್ನದ ವೇಳೆಗೆ ಸೂರ್ಯ ಪ್ರಖರವಾಗಿ ಪ್ರಕಾಶಿಸಲಿದ್ದಾನೆ. ನವೆಂಬರ್ ಅಂತ್ಯಕ್ಕೆ ಆರಂಭವಾದ ಚಳಿ ಸದ್ಯ ತಗ್ಗುತ್ತಿದೆ. ಆದ್ರೆ ಕೆಲ ಭಾಗಗಳಲ್ಲಿ ವಾತಾವಾರಣ ದಿನದಿಂದ ದಿನಕ್ಕೆ ವ್ಯತ್ಯಾಸ ಆಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Weather Report Jan 22, 2022: ರಾಜ್ಯದಲ್ಲಿ ಚಳಿಯ (Cold) ಪ್ರಮಾಣ ತಗ್ಗಿದ್ದು, ಮಧ್ಯಾಹ್ನದ ವೇಳೆಗೆ ಸೂರ್ಯ ಪ್ರಖರವಾಗಿ ಪ್ರಕಾಶಿಸಲಿದ್ದಾನೆ. ನವೆಂಬರ್ ಅಂತ್ಯಕ್ಕೆ ಆರಂಭವಾದ ಚಳಿ ಸದ್ಯ ತಗ್ಗುತ್ತಿದೆ. ಆದ್ರೆ ಕೆಲ ಭಾಗಗಳಲ್ಲಿ ವಾತಾವಾರಣ ದಿನದಿಂದ ದಿನಕ್ಕೆ ವ್ಯತ್ಯಾಸ ಆಗುತ್ತಿದೆ. ಇನ್ನು ದಕ್ಷಿಣ ಕರ್ನಾಟಕ, ಮಲೆನಾಡು ಭಾಗದಲ್ಲಿ ಚಳಿ ಎಂದಿನಂತೆ ಮುಂದುವರಿದಿದ್ದು, ಕರಾವಳಿ ಜಿಲ್ಲೆಗಳಲ್ಲಿ ಗರಿಷ್ಠ 30 ರಿಂದ 31 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಇತ್ತ ಉತ್ತರ ಭಾರತದಲ್ಲಿ (North India Weather) ಹವಾಮಾನ ತದ್ವಿರುದ್ಧವಾಗಿದ್ದು, ಹಿಮಪಾತ (Snowfall) ಮತ್ತು ಮಳೆ(Rainfall)ಯಾಗುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿ ವ್ಯಾಪ್ತಿಯಲ್ಲಿ ಮಳೆಯಾಗುತ್ತಿರುವ ವರದಿಗಳು ಸಹ ಬರುತ್ತಿವೆ. ಇನ್ನೂ ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಗರಿಷ್ಠ 30 ಮತ್ತು ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ಇರಲಿದೆ.

ರಾಜ್ಯದ ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ ಗಳಲ್ಲಿ)

ಬೆಂಗಳೂರು 30-16, ಮೈಸೂರು 32-17, ಚಾಮರಾಜನಗರ 32-18, ರಾಮನಗರ 32-16, ಮಂಡ್ಯ 32-17, ಬೆಂಗಳೂರು ಗ್ರಾಮಾಂತರ 30-16, ಚಿಕ್ಕಬಳ್ಳಾಪುರ 31-16, ಕೋಲಾರ 31-16, ಹಾಸನ 31-15, ಚಿಕ್ಕಮಗಳೂರು 30-14, ದಾವಣಗೆರೆ 33-16, ಶಿವಮೊಗ್ಗ 33-16, ಕೊಡಗು 29-14, ತುಮಕೂರು 31-16, ಉಡುಪಿ 31-21

ಮಂಗಳೂರು 31-22, ಉತ್ತರ ಕನ್ನಡ 32-16, ಧಾರವಾಡ 32-15, ಹಾವೇರಿ 33-16, ಹುಬ್ಬಳ್ಳಿ 32-16, ಬೆಳಗಾವಿ 30-16, ಗದಗ 32-16, ಕೊಪ್ಪಳ 33-17, ವಿಜಯಪುರ 33-17, ಬಾಗಲಕೋಟ 34-17, ಕಲಬುರಗಿ 33-17, ಬೀದರ್ 31-16, ಯಾದಗಿರಿ 33-17, ರಾಯಚೂರ 34-18, ಬಳ್ಳಾರಿ 34-18

ಇದನ್ನೂ ಓದಿ: ಈ 31 ಲಕ್ಷ ಜನರಿಗೆ ಉಡುಗೊರೆ ನೀಡಲು ಸಿದ್ಧವಾಗಿದೆ Modi Government: ಶೀಘ್ರದಲ್ಲೇ ಘೋಷಣೆ ಸಾಧ್ಯತೆ

ಅಕಾಲಿಕ ಮಳೆಯ ಅವಾಂತರ

ಈ ವರ್ಷ ಹೆಚ್ಚು ಅಕಾಲಿಕ ಮಳೆ(Unseasonal Rain)ಯನ್ನು ಕಂಡಿದ್ದು, ಈ ವಾತಾವರಣದ ಏರಿಳಿತಕ್ಕೆ ಕಾರಣವಾಗಿದೆ. ಸದ್ಯ ಅಕಾಲಿಕ ಮಳೆ ನಿಂತಿದ್ದು, ರಾಜ್ಯದ ಜಲಾಶಯಗಳು (Karnataka Dams) ಇಂದಿಗೂ ಭಾಗಶಃ ಭರ್ತಿಯಾಗಿವೆ. ಅಕಾಲಿಕ ಮಳೆ ರೈತರ (Farmers) ಬೆಳೆಯನ್ನು (Crops) ನಾಶಗೊಳಿಸಿದ ಪರಿಣಾಮ ತರಕಾರಿ ಬೆಲೆ (Vegetable Price hike) ಗಗನಕ್ಕೇರಿತ್ತು. ಈ ಫೆಬ್ರವರಿ ಅಂತ್ಯದವರೆಗೂ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉತ್ತರ ಕರ್ನಾಟಕದ (North Karnataka) ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ (Cloudy Weather) ಇರಲಿದ್ದು, ಸಣ್ಣ ಸುಳಿಗಾಳಿ (Cold Wave) ಹಿರಿಯ ಜನರನ್ನು ಮನೆಯಲ್ಲಿ ಕೂರುವಂತೆ ಮಾಡಿದೆ.

ರಾಜ್ಯಗಳಲ್ಲಿ ದಟ್ಟವಾದ ಮಂಜು

ಪಂಜಾಬ್, ಹರಿಯಾಣ, ದೆಹಲಿ ಮತ್ತು ಉತ್ತರ ಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ ಶೀತ ದಿನದ ಪರಿಸ್ಥಿತಿಗಳನ್ನು ಮುನ್ಸೂಚಿಸಲಾಗಿದೆ. ಉತ್ತರ ಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ ದಟ್ಟವಾದ ಮಂಜು ನಿರೀಕ್ಷಿಸಲಾಗಿದೆ. ಪಂಜಾಬ್, ಹರಿಯಾಣ, ದೆಹಲಿ, ಬಿಹಾರ ಮತ್ತು ಸಿಕ್ಕಿಂನ ಪ್ರತ್ಯೇಕ ಸ್ಥಳಗಳಲ್ಲಿ ದಟ್ಟವಾದ ಮಂಜು ಇರುವ ಸಾಧ್ಯತೆಯಿದೆ.

ಜಮ್ಮುವಿನಲ್ಲಿ ತುಂತುರು ಮಳೆ ಮತ್ತು ಹಿಮ

ಕಾಶ್ಮೀರದಲ್ಲಿ ನಿರಂತರ ಹಿಮಪಾತದಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಜಮ್ಮುವಿನ ಕೆಲ ಭಾಗಗಳಲ್ಲಿ ಚಳಿ ಹೆಚ್ಚಿದೆ. ಇಲ್ಲಿ ದಿನದ ತಾಪಮಾನವು ಸಾಮಾನ್ಯಕ್ಕಿಂತ 7 ರಿಂದ 8 ಡಿಗ್ರಿಗಳಷ್ಟು ಕುಸಿದಿದೆ. ವಾರಾಂತ್ಯದಲ್ಲಿ ಲಘು ಮಳೆ ಮತ್ತು ಹಿಮದ ಮುನ್ಸೂಚನೆ ನೀಡಿದೆ. ಜನವರಿ 22 ಮತ್ತು 23 ರಂದು ಲಘು ಮಳೆ ಹಾಗೂ ಹಿಮ ಬೀಳುವ ಸಾಧ್ಯತೆ ಇದೆ.

ಇದನ್ನೂ ಓದಿ:  ರೀ ಹೇಳಿದ್ದೆ ಜನ ಸೇರಿಸ್ಬೇಡಿ ಅಂತ, ಬುದ್ದಿಗಿದ್ದಿ ಇದ್ಯಾ ನಿಮ್ಗೆ? ಪೊಲೀಸರಿಗೆ CM Basavaraj Bommai ಫುಲ್ ಕ್ಲಾಸ್!

ಜನವರಿ 23ರವರೆಗೆ ದೆಹಲಿ, ಉತ್ತರ ಪ್ರದೇಶ, ಉತ್ತರ ರಾಜಸ್ಥಾನ, ಕೇರಳ, ಆಂಧ್ರಪ್ರದೇಶ, ತಮಿಳುನಾಡು, ಪಂಜಾಬ್, ಹರಿಯಾಣ, ಚಂಡೀಗಢ ಮತ್ತು ಮಧ್ಯಪ್ರದೇಶದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಡಿಸೆಂಬರ್ ನಲ್ಲಿ ತಮಿಳುನಾಡು ಅಕಾಲಿಕ ಮಳೆಗೆ ಮುಳುಗಡೆಯಾಗಿತ್ತು, ನಿರಂತರ ಮಳೆಯಿಂದಾಗಿ ಚೆನ್ನೈ ಮಹಾನಗರದ ವಸತಿ ಪ್ರದೇಶಗಳಿಗೆ ನೀರು ನುಗ್ಗಿತ್ತು. ಅಲ್ಲದೇ 15ಕ್ಕೂ ಹೆಚ್ಚು ಜನರು ಸಹ ಸಾವನ್ನಪ್ಪಿದ್ದರು,
Published by:Mahmadrafik K
First published: