Karnataka Weather Report: ದಟ್ಟವಾದ ಮಂಜಿನ ಜೊತೆ ಇಬ್ಬನಿ; ಇನ್ನುಳಿದ ಭಾಗಗಳಲ್ಲಿ ಒಣ ಹವೆ

ರಾಜ್ಯದಲ್ಲಿಯ ಹವಾಮಾನ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಮಲೆನಾಡು ಮತ್ತು ದಕ್ಷಿಣ ಒಳನಾಡು ಭಾಗಗಳಲ್ಲಿ ದಟ್ಟವಾದ ಮಂಜು ಮತ್ತು ಬೆಳಗಿನ ಜಾವ ಇಬ್ಬನಿ ಸಹ ಬೀಳುತ್ತಿದೆ. ಇದರ ನಡುವೆ ಬೆಂಗಳೂರು (Bengaluru Weather) ಸೇರಿದಂತೆ ಮೈಸೂರು ಭಾಗದ ಕೆಲವು ಕಡೆ ಮೋಡ ಕವಿದ ವಾತಾವರಣದ (Cloudy Weather) ಜೊತೆ ಚಳಿ (Winter) ಸಹ ಇದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Weather Report: ರಾಜ್ಯದಲ್ಲಿಯ ಹವಾಮಾನ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಮಲೆನಾಡು ಮತ್ತು ದಕ್ಷಿಣ ಒಳನಾಡು ಭಾಗಗಳಲ್ಲಿ ದಟ್ಟವಾದ ಮಂಜು ಮತ್ತು ಬೆಳಗಿನ ಜಾವ ಇಬ್ಬನಿ ಸಹ ಬೀಳುತ್ತಿದೆ. ಇದರ ನಡುವೆ ಬೆಂಗಳೂರು (Bengaluru Weather) ಸೇರಿದಂತೆ ಮೈಸೂರು ಭಾಗದ ಕೆಲವು ಕಡೆ ಮೋಡ ಕವಿದ ವಾತಾವರಣದ (Cloudy Weather) ಜೊತೆ ಚಳಿ (Winter) ಸಹ ಇದೆ. ಇನ್ನು ಉತ್ತರ ಕರ್ನಾಟಕದ ಬೀದರ್, ಕಲಬುರಗಿ, ಬೀದರ್, ಯಾದಗಿರಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಶುಷ್ಕ ಹವಾಮಾನ ಇರಲಿದೆ. ಎಂದಿನಂತೆ ಬೆಳಗ್ಗೆ ಚಳಿ(Cold)ಯಿಂದ ಕೂಡಿದ ವಾತಾವರಣ ಇರಲಿದೆ. ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ 28 ಮತ್ತು ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi Weather)ವಾತಾವರಣ 10 ಡಿಗ್ರಿ ಸೆಲ್ಸಿಯಸ್ ಗಿಂತಲೂ ಕಡಿಮೆ ದಾಖಲಾಗುತ್ತಿದ್ದು, ದಟ್ಟವಾದ ಮಂಜು ಬೆಳಗ್ಗೆ ಟ್ರಾಫಿಕ್​ ಸಮಸ್ಯೆಗೆ ಕಾರಣವಾಗುತ್ತಿದೆ.

ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ರಾಜ್ಯದ ಹವಾಮಾನದಲ್ಲಿ ವೈಪರೀತ್ಯ ಉಂಟಾಗಿದೆ. ಅಕಾಲಿಕ ಮಳೆಯಿಂದಾಗಿ ತರಕಾರಿ ಬೆಲೆ ಏರಿಕೆಯಾಗಿದ್ದು, ಜನಸಾಮಾನ್ಯರ ಜೇಬು ಸುಡುತ್ತಿದೆ. ಇನ್ನು ಡಿಸೆಂಬರ್ ನಲ್ಲಿ ದಟ್ಟವಾದ ಮಂಜು ಬಿದ್ದ ಪರಿಣಾಮ ಮಾವು ಹೂ ಬಿಡುವ ಪ್ರಕ್ರಿಯೆಯಲ್ಲಿ ತೊಡಕು ಉಂಟಾಗಿತ್ತು.

ಇದನ್ನೂ ಓದಿ:  Congress Padayatra: ಸದ್ಯಕ್ಕೆ ಪಾದಯಾತ್ರೆ ಕೈ ಬಿಡೋಣ: ಕೊರೋನಾ ಕಡಿಮೆ ಆದ್ಮೇಲೆ ಇಲ್ಲಿಂದಲೇ ಶುರು ಮಾಡೋಣ ಎಂದ ಸಿದ್ದು!

ರಾಜ್ಯದ ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ ಗಳಲ್ಲಿ)

ಬೆಂಗಳೂರು 28-18, ಮೈಸೂರು 31-17, ಚಾಮರಾಜನಗರ 31-18, ರಾಮನಗರ 30-18, ಮಂಡ್ಯ 31-17, ಬೆಂಗಳೂರು ಗ್ರಾಮಾಂತರ 28-18, ಚಿಕ್ಕಬಳ್ಳಾಪುರ 29-17, ಕೋಲಾರ 28-18, ಹಾಸನ 28-14, ಚಿಕ್ಕಮಗಳೂರು 28-13, ದಾವಣಗೆರೆ 31-15, ಶಿವಮೊಗ್ಗ 31-14, ಕೊಡಗು 28-14

ತುಮಕೂರು 29-17, ಉಡುಪಿ 31-21, ಮಂಗಳೂರು 29-21 , ಉತ್ತರ ಕನ್ನಡ 29-14, ಧಾರವಾಡ 28-13, ಹಾವೇರಿ 30-14, ಹುಬ್ಬಳ್ಳಿ 28-14, ಬೆಳಗಾವಿ 27-13, ಗದಗ 29-14, ಕೊಪ್ಪಳ 29-16, ವಿಜಯಪುರ 28-16, ಬಾಗಲಕೋಟ 29-16, ಕಲಬುರಗಿ 29-17, ಬೀದರ್ 27-17, ಯಾದಗಿರಿ 31-18, ರಾಯಚೂರ 31-19, ಬಳ್ಳಾರಿ 31-18

ಈ ಭಾಗಗಳಲ್ಲಿ ದಟ್ಟವಾದ ಮಂಜು, ಶೀತ ಗಾಳಿ

ಮುಂದಿನ 2 ದಿನಗಳಲ್ಲಿ ಪಶ್ಚಿಮ ಹಿಮಾಲಯ ಪ್ರದೇಶ, ಈಶಾನ್ಯ ಭಾರತದ ಭಾಗಗಳಲ್ಲಿ ರಾತ್ರಿ/ಬೆಳಿಗ್ಗೆ ಪ್ರತ್ಯೇಕ ಭಾಗಗಳಲ್ಲಿ ದಟ್ಟವಾದ/ಅತಿ ದಟ್ಟವಾದ ಮಂಜು ಆವರಿಸಲಿದೆ. ಮುಂದಿನ 3 ದಿನಗಳಲ್ಲಿ ಪಂಜಾಬ್, ಹರಿಯಾಣ, ಚಂಡೀಗಢ ಮತ್ತು ದೆಹಲಿ, ಉತ್ತರ ರಾಜಸ್ಥಾನ ಮತ್ತು ಮುಂದಿನ 5 ದಿನ ಯುಪಿ, ಬಿಹಾರ ಮತ್ತು ಉಪ-ಹಿಮಾಲಯನ್ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ದಟ್ಟವಾದ ಮಂಜು ಆವರಿಸಲಿದೆ.

ಇದನ್ನೂ ಓದಿ:  ಲಾಠಿಚಾರ್ಚ್ ಮಾಡಿಸೋದು ದೊಡ್ಡ ವಿಚಾರವಲ್ಲ, ಆದರೆ CM Bommai ಮುತ್ಸದ್ದಿತನ ಮೆರೆದರು: ಸಚಿವ ಸುಧಾಕರ್

ಮುಂದಿನ 3 ದಿನ ಈಶಾನ್ಯ ರಾಜಸ್ಥಾನ, ಪಶ್ಚಿಮ ಉತ್ತರ ಪ್ರದೇಶ, ಪಂಜಾಬ್ ಮತ್ತು ಪಶ್ಚಿಮ ಮಧ್ಯಪ್ರದೇಶದ ವಿವಿಧ ಭಾಗಗಳಲ್ಲಿ ಶೀತ ಅಲೆ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.

ಒಡಿಶಾ & ತೆಲಂಗಾಣದಲ್ಲಿ ಇಂದು ಮಳೆ

ಒಡಿಶಾ ಮತ್ತು ತೆಲಂಗಾಣದಲ್ಲಿ ಇಂದು ಸಹ ಭಾರೀ ಮಳೆಯಾಗುವ ಬಗ್ಗೆ ಎಚ್ಚರಿಕೆ ನೀಡಿದೆ. ಇಂದು ಒಡಿಶಾ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಛತ್ತೀಸ್‌ಗಢದಲ್ಲಿ ಮಿಂಚು, ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ರಾಜ್ಯದ ಜಲಾಶಯಗಳು ಭರ್ತಿ

ಇಂದು ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ(IMD) ಮುನ್ಸೂಚನೆ ನೀಡಿದೆ. ಇನ್ನೂ 3 ದಿನ ಕರ್ನಾಟಕದ ಉತ್ತರ ಒಳನಾಡು(NIK) ಮತ್ತು ದಕ್ಷಿಣ ಒಳನಾಡಿನಲ್ಲಿ(SIK) ಮಳೆಯಾಗಲಿದೆ. ಅದರಲ್ಲೂ ಇಂದು ಮತ್ತು ನಾಳೆ ಸಿಲಿಕಾನ್​ ಸಿಟಿ ಬೆಂಗಳೂರು(Bengaluru) ಸೇರಿದಂತೆ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು IMD ಹೇಳಿದೆ.

ಬೀದರ್, ಕಲಬುರಗಿ, ಯಾದಗಿರಿ, ಚಿಕ್ಕಬಳ್ಳಾಪುರ, ರಾಯಚೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರದಲ್ಲಿಯೂ ಮಳೆಯ(Rainfall) ಪ್ರಮಾಣ ಹೆಚ್ಚಾಗಲಿದೆ ಎಂದು ತಿಳಿದು ಬಂದಿದೆ. ಅಕಾಲಿಕ ಮಳೆಗೆ ರಾಜ್ಯದ ಪ್ರಮುಖ ಜಲಾಶಯಗಳು ಬಹುತೇಕ ಭರ್ತಿಯಾಗಿವೆ.
Published by:Mahmadrafik K
First published: