ನವದೆಹಲಿ (ಜೂ. 21) ಕೇಂದ್ರದ ಹೊಸ ಲಸಿಕೆಯ ಪರಿಷ್ಕೃತ ನೀತಿಯ ಮೊದಲ ದಿನವೇ ದೇಶ ದಾಖಲೆ ಬರೆದಿದೆ. ಒಂದೇ ದಿನದಲ್ಲಿ ದೇಶಾದ್ಯಂತ ಸುಮಾರು 80 ಲಕ್ಷದ 96 ಸಾವಿರ ಲಸಿಕೆಗಳನ್ನು ದೇಶದ ಜನರಿಗೆ ನೀಡಲಾಗಿದೆ. ಒಂದೇ ದಿನದಲ್ಲಿ ಇಷ್ಟು ಪ್ರಮಾಣದ ಲಸಿಕೆ ವಿತರಣೆ ನಡೆದಿರುವ ವಿಶ್ವದಲ್ಲಿಯೇ ಮೊದಲು ಎಂದು ಕೂಡ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಗಳಲ್ಲಿ ಇಂದಿನಿಂದ ಎಲ್ಲಾ ವಯೋಮಾನದವರಿಗೆ ಉಚಿತ ಲಸಿಕೆ ವಿತರಣೆ ಆರಂಭಿಸಿದೆ. ದಾಖಲೆ ಮಟ್ಟದ ಲಸಿಕೆ ವಿತರಣೆ ನಡೆದಿರುವ ಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಸಂತಸ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ಕೋವಿಡ್ 19 ವಿರುದ್ಧ ಹೋರಾಡಲು ಇರುವ ಪ್ರಬಲ ಅಸ್ತ್ರ ಎಂದರೆ ಅದು ಲಸಿಕೆ ಆಗಿದೆ. ಲಸಿಕೆ ಪಡೆದವರಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.
Today’s record-breaking vaccination numbers are gladdening. The vaccine remains our strongest weapon to fight COVID-19. Congratulations to those who got vaccinated and kudos to all the front-line warriors working hard to ensure so many citizens got the vaccine.
Well done India!
— Narendra Modi (@narendramodi) June 21, 2021
ಅದರಲ್ಲೂ ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶ, ಕರ್ನಾಟಕ, ಉತ್ತರ ಪ್ರದೇಶ, ಗುಜರಾತ್ ಮತ್ತು ಹರಿಯಾಣದಲ್ಲಿ ವಿಶೇಷ ಲಸಿಕೆ ವಿತರಣಾ ಕಾರ್ಯ ನಡೆಸಲಾಗದೆ. ಇದರಿಂದ ಶೇ. 50ಕ್ಕೂ ಹೆಚ್ಚು ಕೊಡುಗೆ ಈ ರಾಜ್ಯಗಳಿಂದ ಸಿಕ್ಕಿದೆ.
ಲಸಿಕೆ ವಿತರಣೆಯಲ್ಲಿ ಕರ್ನಾಟಕ ಎರಡನೇ ಸ್ಥಾನ
ಉಚಿತ ಲಸಿಕೆ ವಿತರಣೆಯಲ್ಲಿ ಹೆಚ್ಚು ಪ್ರಗತಿ ಸಾಧಿಸಿದ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನ ಪಡೆದಿದೆ. ಮಧ್ಯಪ್ರದೇಶ ಮೊದಲ ಸ್ಥಾನ ಪಡೆದಿದ್ದು, ಒಂದೇ ದಿನದಲ್ಲಿ 15 ಲಕ್ಷ ಲಸಿಕೆಯನ್ನು ರಾಜ್ಯದ ಜನರಿಗೆ ನೀಡಲಾಗಿದೆ. ಇದರ ನಂತರದ ಸ್ಥಾನದಲ್ಲಿ ಕರ್ನಾಟಕವಿದೆ.
📢 Karnataka stood second in the entire country in the nationwide Vaccine Maha Abhiyan today. The State administered 10.36 lakh doses in a single day today (till 7 pm). Total doses administered in the State to date are 1.96 Crore.@narendramodi @drharshvardhan @BSYBJP pic.twitter.com/opbtnQ16Ru
— Dr Sudhakar K (@mla_sudhakar) June 21, 2021
ಮೂರನೇ ಸ್ಥಾನದಲ್ಲಿ ಉತ್ತರ ಪ್ರದೇಶ, ನಂತರದ ಕ್ರಮವಾಗಿ ಗುಜರಾತ್ ಮತ್ತು ಹರ್ಯಾಣ ನಾಲ್ಕು, ಐದನೇ ಸ್ಥಾನ ಪಡೆದಿದೆ
ಇದನ್ನು ಓದಿ: ಇಂಟರ್ನೆಟ್ ಸಮಸ್ಯೆ; ಪಿ.ಎಂ.ವಾಣಿ ಸಾರ್ವಜನಿಕ ವೈ ಫೈ ವ್ಯವಸ್ಥೆಯಿಂದ ಗ್ರಾಮದ ಜನರು ಖುಷ್
ದೇಶದಲ್ಲಿ ಇಂದು 68 ಸಾವಿರ ಲಸಿಕಾ ವಿತರಣಾ ಕೇಂದ್ರಗಳು ಕಾರ್ಯನಿರ್ವಹಿಸಿದ್ದು, ಮಧ್ಯಪ್ರದೇಶದಲ್ಲಿ ಹಾಗೂ ಕರ್ನಾಟಕದಲ್ಲಿ 8000 ಲಸಿಕಾ ಕೇಂದ್ರಗಳು ತೆರೆಯಲಾಗಿತ್ತು
2.5 ಲಕ್ಷ ಲಸಿಕೆ ಗುರಿ ನಿಗದಿಸಿದ್ದ ಹರಿಯಾಣದಲ್ಲಿ ಇಂದು 4.7 ಲಕ್ಷ ಜನರಿಗೆ ಲಸಿಕೆ ವಿತರಣೆಯಾಗಿದ್ದರೆ, ಗುಜರಾತ್ನಲ್ಲಿ 5 ಲಕ್ಷ ಲಸಿಕೆ ವಿತರಣೆ ಮಾಡಲಾಗಿದೆ.
ಪಂಜಾಬ್, ಜಾರ್ಖಂಡ್ ಛತ್ತೀಸ್ಗಢ ಮತ್ತು ದೆಹಲಿಯಲ್ಲಿ 1 ಲಕ್ಷ ಲಸಿಕೆಯ ಗುರಿಯನ್ನು ಸಹ ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ