• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • SSLC Result: ದಾಖಲೆ ಬರೆದ ಎಸ್​ಎಸ್​ಎಲ್​ಸಿ ಫಲಿತಾಂಶ; ಒಬ್ಬ ವಿದ್ಯಾರ್ಥಿ ಮಾತ್ರ ಫೇಲ್​​

SSLC Result: ದಾಖಲೆ ಬರೆದ ಎಸ್​ಎಸ್​ಎಲ್​ಸಿ ಫಲಿತಾಂಶ; ಒಬ್ಬ ವಿದ್ಯಾರ್ಥಿ ಮಾತ್ರ ಫೇಲ್​​

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇನ್ನು ಈ ಫಲಿತಾಂಶದ ಬಗ್ಗೆ ವಿದ್ಯಾರ್ಥಿಗಳಿಗೆ ಅಸಮಾಧಾನ ಇದ್ದು, ಇದನ್ನು ಒಪ್ಪದೇ ಇದ್ದರೆ ಅವರು ಮತ್ತೊಮ್ಮೆ ಪರೀಕ್ಷೆ ಬರೆಯುವ ಅವಕಾಶವನ್ನು ನೀಡಲಾಗಿದೆ. 

  • Share this:

ಬೆಂಗಳೂರು (ಆ. 9): ಇಂದು ರಾಜ್ಯದ ಎಸ್​ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಕೊರೋನಾ ಸಂಕಷ್ಟ ಕಾಲದಲ್ಲಿ ನಡೆದ ಪರೀಕ್ಷೆಯ ಫಲಿತಾಂಶ ಶೇ. 100ಕ್ಕೆ 100 ಬರಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಒಬ್ಬ ವಿದ್ಯಾರ್ಥಿ ಯಿಂದಾಗಿ ಫಲಿತಾಂಶ ಶೇ 99.9 ಬಂದಿದೆ. ತಾನು ಪರೀಕ್ಷೆ ಬರೆಯುವ ಬದಲಿ ಬೇರೆಯವರಿಂದ ಪರೀಕ್ಷೆ ಬರೆಸಿದ ಕಾರಣ ಈ ವಿದ್ಯಾರ್ಥಿಯನ್ನು ಫೇಲ್​ ಮಾಡಲಾಗಿದೆ ಎಂದು ನೂತನ ಶಿಕ್ಷಣ ಸಚಿವ ಬಿಸಿ ನಾಗೇಶ್ ತಿಳಿಸಿದ್ದಾರೆ. ಇನ್ನು ಈ ವಿದ್ಯಾರ್ಥಿ ಕುರಿತು ಯಾವುದೇ ಮಾಹಿತಿ ಬಿಟ್ಟು ಕೊಡದ ಶಿಕ್ಷಣ ಇಲಾಖೆ, ಮರು ಪರೀಕ್ಷೆ ಬರೆದ ವಿದ್ಯಾರ್ಥಿ ಎಂಬ ಸುಳಿವನ್ನು ನೀಡಿದೆ. ಇದರ ಹೊರತಾಗಿ 13 ವಿದ್ಯಾರ್ಥಿಗಳಿಗೆ ವಿಷಯವೊಂದಕ್ಕೆ ಗರಿಷ್ಟ 28 ಕೃಪಾಂಕ ನೀಡಿ ಪಾಸ್​ ಮಾಡಲಾಗಿದೆ.


ದಾಖಲೆ ಬರೆದ ಫಲಿತಾಂಶ
ಈ ಹಿಂದೆ ಎಲ್ಲಾ ಅಬ್ಬಾಬ್ಬ ಎಂದರೆ 625ಕ್ಕೆ 625 ಅಂಕಗಳನ್ನು ಮೂವರು ನಾಲ್ವರು ಪಡೆಯುತ್ತಿದ್ದರು. ಈ ಬಾರಿ 157 ಮಕ್ಕಳು 625 ಕ್ಕೆ 625 ಅಂಕ ಪಡೆದಿದ್ದಾರೆ, 289 ವಿದ್ಯಾರ್ಥಿಗಳು 625ಕ್ಕೆ 623 ಅಂಕ ಪಡೆದಿದ್ದರೆ, ಇಬ್ಬರಿಗೆ 622 ಅಂಕ ಸಿಕ್ಕಿದೆ. 621 ಅಂಕ 449 ವಿದ್ಯಾರ್ಥಿಗಳು ಅಂಕ ಪಡೆದಿದ್ದಾರೆ. 28 ವಿದ್ಯಾರ್ಥಿಗಳು 620 ಅಂಕ ಪಡೆದಿದ್ದಾರೆ
ಪ್ರಥಮ ಭಾಷೆ ಕನ್ನಡದಲ್ಲಿ 25,702 ಮಕ್ಕಳು 125ಕ್ಕೆ 125ಕ್ಕೆ ಅಂಕ ಪಡೆದಿದ್ದಾರೆ. ದ್ವಿತೀಯ 36,628 ವಿದ್ಯಾರ್ಥಿಗಳು, ತೃತೀಯ ಭಾಷೆ 36,776, ಗಣಿತ 6,321, ವಿಜ್ಞಾನ 3,649, ಸಮಾಜ ವಿಜ್ಞಾನ 9,367 ವಿದ್ಯಾರ್ಥಿಗಳು 100ಕ್ಕೆ 100 ಅಂಕ ಪಡೆದು ದಾಖಲೆ ನಿರ್ಮಿಸಿದ್ದಾರೆ.


ಕೆಪಿಎಸ್​ಸಿ ಮಾದರಿಯಲ್ಲಿ ನಡೆದ ಈ ಪರೀಕ್ಷೆಯಲ್ಲಿ ಎ ಪ್ಲಸ್​​ ಗ್ರೇಡ್​ನಲ್ಲಿ 1, 28, 931 ವಿದ್ಯಾರ್ಥಿಗಳು ಪಾಸಾಗಿದ್ದರೆ, ಎ ಗ್ರೇಡ್​ನಲ್ಲಿ 2,50,317 ಲಕ್ಷ ಪಾಸಾಗಿದ್ದಾರೆ. ಬಿ ಅಲ್ಲಿ 2,87,684 ಲಕ್ಷ ವಿದ್ಯಾರ್ಥಿಗಳು, ಸಿ ಗ್ರೇಡ್​ನಲ್ಲಿ 1,13,610 ಲಕ್ಷ ವಿದ್ಯಾರ್ಥಿಗಳು ಪಾಸಾಗಿದ್ದಾರೆ.


ರಿಸಲ್ಟ್​ ಒಪ್ಪದೇ ಇದ್ರ ಮತ್ತೊಮ್ಮೆ ಪರೀಕ್ಷೆ


ಇನ್ನು ಈ ಫಲಿತಾಂಶದ ಬಗ್ಗೆ ವಿದ್ಯಾರ್ಥಿಗಳಿಗೆ ಅಸಮಾಧಾನ ಇದ್ದು, ಇದನ್ನು ಒಪ್ಪದೇ ಇದ್ದರೆ ಅವರು ಮತ್ತೊಮ್ಮೆ ಪರೀಕ್ಷೆ ಬರೆಯುವ ಅವಕಾಶವನ್ನು ನೀಡಲಾಗಿದೆ.


ಎಸ್​ಎಸ್​ಎಲ್​ಸಿ ಫಲಿತಾಂಶವನ್ನು ನೀವು kseeb.kar.nic.in ಅಥವಾ karresults.nic.in. ವೆಬ್​ಸೈಟ್​ನಲ್ಲಿ ವೀಕ್ಷಿಸಬಹುದು. ಇದಷ್ಟೇ ಅಲ್ಲದೆ, examresults.net ಮತ್ತು indiaresults.com ವೆಬ್​ಸೈಟ್​ನಲ್ಲಿ ಕೂಡ ರಿಸಲ್ಟ್​ ನೋಡಬಹುದು.


https://sslc.karnataka.gov.in ಅಥವಾ karresults.nic.in    ಈ ಲಿಂಕ್​ ಮೇಲೆ ಕ್ಲಿಕ್​ ಮಾಡಿ ಬಳಿಕ  ವೆಬ್​ಸೈಟ್​ನಲ್ಲಿ ರಿಸಲ್ಟ್​ ವೀಕ್ಷಿಸಲು ಹೀಗೆ ಮಾಡಿ.



  • ವೆಬ್​ಸೈಟ್​ ಓಪನ್ ಮಾಡಿ ನಂತರ ಹೋಂ ಪೇಜ್​ನಲ್ಲಿ ಎಸ್​ಎಸ್​ಎಲ್​ಸಿ ರಿಸಲ್ಟ್​ ಎಂಬ ಆಯ್ಕೆಯನ್ನು ಒತ್ತಿ.

  • ನಿಮ್ಮ ಪರೀಕ್ಷೆಯ ರೋಲ್ ನಂಬರ್ ಮತ್ತು ಪೇಜ್​ನಲ್ಲಿ ಕೇಳುವ ಮಾಹಿತಿಯನ್ನು ಭರ್ತಿ ಮಾಡಿ.

  • ಹಾಲ್​ ಟಿಕೆಟ್​ನ ಮಾಹಿತಿಯನ್ನು ವೆಬ್​ಸೈಟ್​ನಲ್ಲಿ ವೇರಿಫೈ ಮಾಡಿಕೊಳ್ಳಿ. ಆಗ ನಿಮ್ಮ ಪರೀಕ್ಷೆ ಫಲಿತಾಂಶ ಸಿಗುತ್ತದೆ.

  • ನಂತರ ಆ ಫಲಿತಾಂಶವನ್ನು ಪಿಡಿಎಫ್​ ಫಾರ್ಮಾಟ್​ನಲ್ಲಿಯೇ ಡೌನ್​ಲೋಡ್ ಮಾಡಿಕೊಳ್ಳಿ. ಹಾಗೇ, ಒಂದು ಕಾಪಿಯನ್ನು ಪ್ರಿಂಟ್ ತೆಗೆದಿಟ್ಟುಕೊಳ್ಳಿ



ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.


First published: