HOME » NEWS » State » BENGALURU URBAN KARNATAKA LOCKDOWN UPDATES POLICE ARE CLOSING BANGALORE FLYOVERS AND ROADS SESR

ಇನ್ನು 15 ದಿನ ರಾಜ್ಯ ಸ್ತಬ್ದ: ಕೊನೆ ಕ್ಷಣದವರೆಗೂ ಊರು ಸೇರುವ ತವಕದಲ್ಲಿ ಜನರು

ರಾಜ್ಯದಲ್ಲಿಂದು 31, 830 ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಸೋಂಕಿನಿಂದ 180 ಮಂದಿ ಸಾವನ್ನಪ್ಪಿದ್ದಾರೆ

news18-kannada
Updated:April 27, 2021, 9:37 PM IST
ಇನ್ನು 15 ದಿನ ರಾಜ್ಯ ಸ್ತಬ್ದ: ಕೊನೆ ಕ್ಷಣದವರೆಗೂ ಊರು ಸೇರುವ ತವಕದಲ್ಲಿ ಜನರು
ಪ್ರಯಾಣಿಕರು
  • Share this:
ಬೆಂಗಳೂರು (ಏ. 27): ರಾಜ್ಯದಲ್ಲಿ ಕೊರೋನಾ ಲಾಕ್​ಡೌನ್​ಗೆ ಕ್ಷಣಗಣನೆಯ ಶುರುವಾಗಿದೆ. ಈ ಕ್ಷಣದಿಂದ ಮೇ 12ರವರೆಗೆ ರಾಜ್ಯದಲ್ಲಿ ಅಗತ್ಯ ಸೇವೆ ಹೊರತು ಪಡಿಸಿ ಎಲ್ಲವೂ ಬಂದ್​ ಆಗಲಿದೆ. ಇನ್ನು ಲಾಕ್​ಡೌನ್​ಗೆ ಕ್ಷಣಗಣನೆ ಶುರುವಾಗಿದ್ದರೂ, ಊರಿನತ್ತ ವಲಸೆ ಹೋಗಲು ಜನರು ಮೆಜೆಸ್ಟಿಕ್​ನತ್ತ ದಾಪುಗಾಲಿಡುತ್ತಲೇ ಇರುವ ದೃಶ್ಯಗಳು ಕಂಡು ಬಂದಿದೆ. ರಾಜಧಾನಿಯಲ್ಲಿ ಎಲ್ಲಾ ಫ್ಲೈ ಒವರ್​ ಹಾಗೂ ಪ್ರಮುಖ ರಸ್ತೆಗಳನ್ನು ಪೊಲೀಸರು ಬಂದ್​ ಮಾಡುತ್ತಿದ್ದು, ಹಲವೆಡೆ ಬ್ಯಾರಿಕೇಡ್​ಗಳನನ್ನು ಹಾಕಿದ್ದಾರೆ. ಮೆಟ್ರೋ ಸೇವೆ ಸೇರಿದಂತೆ ಬಿಎಂಟಿಸಿ ಬಸ್​ ಸೇವೆಗಳು ಸ್ತಬ್ಧವಾಗಿದ್ದು, ಬಸ್​ ನಿಲ್ದಾಣದಲ್ಲಿರು ಪ್ರಯಾಣಿಕರಲ್ಲಿ ಆತಂಕ ಮನೆ ಮಾಡಿದೆ. ಇನ್ನು ಈ ನಡುವೆ ರಾಜ್ಯದಲ್ಲಿ ಇಂದು ದಾಖಲೆ ಪ್ರಮಾಣದ ಸೋಂಕು ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿಂದು 31, 830 ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಸೋಂಕಿನಿಂದ 180 ಮಂದಿ ಸಾವನ್ನಪ್ಪಿದ್ದಾರೆ. ರಾಜಧಾನಿಯಲ್ಲಿ ಇಂದು 17, 550 ಮಂದಿ ಸೋಂಕಿಗೆ ತುತ್ತಾಗಿದ್ದು, 97 ಮಂದಿ ಸಾವನ್ನಪ್ಪಿದ್ದಾರೆ.

ರಾಜ್ಯದ ಬಹುತೇಕ ನಗರಗಳಲ್ಲಿಯೂ ಈಗಾಗಲೇ ರಸ್ತೆಗಳು ಜನರಿಲ್ಲದೇ ಬಣಗುಡುತ್ತಿರುವ ದೃಶ್ಯಗಳು ಕಂಡು ಬಂದಿದೆ. ಲಾಕ್​ಡೌನ್​ ಹಿನ್ನಲೆ ಬೆಳಗ್ಗೆ ರಾಜಧಾನಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ, ನಗರಗಳಲ್ಲಿ ವಸ್ತುಗಳನ್ನು ಕೊಳ್ಳಲು, ಊರಿಗೆ ತೆರಳಲು ಮುಗಿ ಬಿದ್ದಿದ್ದರು. ರಾತ್ರಿ 9 ಗಂಟೆಯೊಳಗೆ ಎಲ್ಲಾ ಮನೆ ಸೇರಿದ್ದು, ಎಲ್ಲೆಡೆ ಈಗ ಒಂದು ರೀತಿ ಮೌನ ಆವರಿಸಿದ ಸ್ಥಿತಿ ಕಂಡು ಬಂದಿದೆ.

Youtube Video

ನಾಳೆ ಬೆಳಗ್ಗೆ 6 ರಿಂದ 10 ಗಂಟೆವರೆಗೆ ಅಗತ್ಯ ವಸ್ತುಗಳ ಕೊಳ್ಳಲು ಅವಕಾಶ ನೀಡಿದ್ದು, ಬಳಿಕ ಬಂದ್​ ಮುಂದುವರೆಯಲಿದೆ. ಬೆಂಗಳೂರಿನ ಪ್ರಮುಖ ರಸ್ತೆಗಳನ್ನು ಈಗಾಗಲೇ ಬಂದ್​ ಮಾಡಲಾಗಿದೆ. ಹೆದ್ದಾರಿ ಬಂದ್​ ಮಾಡಲು ಕ್ಷಣಗಣನೆ ಶುರುವಾಗಿದ್ದು, ಅಷ್ಟರಲ್ಲಿ ಬಸ್ಸಿ ಇಡಿದು ಊರಿಗೆ ಸೇರೋಣ ಎಂಬ ತವಕದಲ್ಲಿ ಪ್ರಯಾಣಿಕರಿರುವ ದೃಶ್ಯಗಳು ಕಂಡು ಬಂದಿದೆ. ನಗರಕ್ಕೆ ಪ್ರವೇಶಿಸುವ ಎಂಟನೇ ಮೈಲಿ, ಹೊಸೂರು ರಸ್ತೆ, ಮೈಸೂರು ರಸ್ತೆಗಳಲ್ಲಿ ಜನರು ಹೇಗಾದರೂ ಮಾಡಿ ಊರು ಸೇರಲು ಬಸ್ಸಿಗಾಗಿ ಕಾಯುತ್ತಿರುವ ದೃಶ್ಯಗಳು ಕಂಡು ಬಂದಿದೆ.

ಬಿಎಂಟಿಸಿ ಬಸ್​ ನಿಲ್ದಾಣ ಸಂಪೂರ್ಣವಾಗಿ ಖಾಲಿಯಾಗಿದ್ದು, ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದಲ್ಲಿ ಕೂಡ ಬೆರಳೆಣಿಕೆಯ ಜನರು ಕಡೆಯ ಬಸ್​ ಹತ್ತಲು ಕಾದು ನಿಂತಿದ್ದಾರೆ.
Published by: Seema R
First published: April 27, 2021, 9:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories