HOME » NEWS » State » BENGALURU URBAN KARNATAKA LOCKDOWN HEALTH MINISTER DR K SUDHAKAR HINTS COMPLETE LOCKDOWN IN KARNATAKA AFTER JANATA CURFEW SCT

Karnataka Lockdown: ಕರ್ನಾಟಕದಲ್ಲಿ ಜನತಾ ಲಾಕ್​ಡೌನ್ ವಿಫಲ; ಸಂಪೂರ್ಣ ಲಾಕ್​ಡೌನ್​ಗೆ ಸರ್ಕಾರ ನಿರ್ಧಾರ?

Karnataka Coronavirus: ನಾವು ನಿರೀಕ್ಷಿಸಿದಂತೆ ಜನತಾ ಕರ್ಫ್ಯೂ ಆಗುತ್ತಿಲ್ಲ. ಹೀಗಾಗಿ, ಕರ್ನಾಟಕದಲ್ಲಿ ಪೂರ್ಣ ಲಾಕ್ ಡೌನ್ ಬಗ್ಗೆ ಚಿಂತನೆ ಮಾಡುತ್ತಿದ್ದೇವೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳುವ ಮೂಲಕ ಸಂಪೂರ್ಣ ಲಾಕ್​ಡೌನ್​ನ ಸುಳಿವು ನೀಡಿದ್ದಾರೆ.

news18-kannada
Updated:May 6, 2021, 11:30 AM IST
Karnataka Lockdown: ಕರ್ನಾಟಕದಲ್ಲಿ ಜನತಾ ಲಾಕ್​ಡೌನ್ ವಿಫಲ; ಸಂಪೂರ್ಣ ಲಾಕ್​ಡೌನ್​ಗೆ ಸರ್ಕಾರ ನಿರ್ಧಾರ?
ಡಾ.ಕೆ. ಸುಧಾಕರ್.
  • Share this:
ಬೆಂಗಳೂರು (ಮೇ 6): ಕರ್ನಾಟಕದಲ್ಲಿ ಜನತಾ ಲಾಕ್​ಡೌನ್ ವಿಫಲವಾಗಿದೆ. ನಾವು ನಿರೀಕ್ಷೆ ಮಾಡಿದಷ್ಟು ಪ್ರಯೋಜವಾಗಿಲ್ಲ. ಜನತಾ ಲಾಕ್ ಡೌನ್ ಹೇಗಿದೆ ಅಂತ ನೀವೇ ನೋಡಿದ್ದೀರಾ. ಜನರೇ ಇದನ್ನು ಅರ್ಥ ಮಾಡಿಕೊಳ್ಳಬೇಕು. ಜನರು ಸರ್ಕಾರಕ್ಕೆ ಸಹಕಾರ ನೀಡಬೇಕು. ಇಲ್ಲದೆ ಹೋದರೆ ಯಾವುದೇ ಪ್ರಯೋಜನ ಆಗಲ್ಲ. ಚೈನ್ ಲಿಂಕ್ ಕಟ್ ಆಗೋಕೆ ಕನಿಷ್ಠ 14 ದಿನ ಬೇಕು. ಈಗ 7-8 ದಿನ ಆಗಿದೆ. ಮಹಾರಾಷ್ಟ್ರದಲ್ಲಿ ಕಡಿಮೆ ಆಗಿದೆ ಅಂದರೆ ನಮ್ಮಲ್ಲೂ ಆಗುವುದಿಲ್ಲವಾ? ಜನರು ಸಹಕಾರ ನೀಡಬೇಕು. ಹೀಗಾಗಿ, ಕರ್ನಾಟಕದಲ್ಲಿ ಪೂರ್ಣ ಲಾಕ್ ಡೌನ್ ಬಗ್ಗೆ ಚಿಂತನೆ ಮಾಡುತ್ತಿದ್ದೇವೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳುವ ಮೂಲಕ ಸಂಪೂರ್ಣ ಲಾಕ್​ಡೌನ್​ನ ಸುಳಿವು ನೀಡಿದ್ದಾರೆ.

ಮೇ 12ಕ್ಕೆ ಜನತಾ ಲಾಕ್​ಡೌನ್ ಮುಗಿಯುತ್ತದೆ. ಬಳಿಕ ಸಿಎಂ ಯಡಿಯೂರಪ್ಪ ಜೊತೆ ಮಾತಾಡಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎನ್ನುವ ಮೂಲಕ ಸಚಿವ ಡಾ. ಕೆ. ಸುಧಾಕರ್ ಲಾಕ್ ಡೌನ್ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ. ನಮ್ಮ ದೇಶದಲ್ಲಿ ಎರಡು ಲಸಿಕಾ ಕಂಪನಿಗಳು ಇವೆ. ಉತ್ಪಾದನೆ ಕಡಿಮೆ ಆಗುತ್ತಿರುವುದರಿಂದ ಕೊರೋನಾ ಲಸಿಕೆ ನಮಗೆ ಲಭ್ಯವಾಗ್ತಿಲ್ಲ. ಈಗಾಗಲೇ ಎರಡು ಕಂಪನಿಗಳ ಜೊತೆ ಮಾತಾಡಿದ್ದೇವೆ. ನಮಗೆ ಮೊದಲ ಆದ್ಯತೆಯಲ್ಲಿ ಲಸಿಕೆ ಕೊಡಿ ಅಂತ ಕೇಳಿದ್ದೇವೆ. ಮೇ 15 ಅಥವಾ ಮೇ 15 ನಂತರ ಲಸಿಕೆ ಅಭಿಯಾನ ಪ್ರಾರಂಭ ಮಾಡ್ತೀವಿ ಎಂದು ಸಚಿವ ಸುಧಾಕರ್ ಹೇಳಿದ್ದಾರೆ.

ಇದನ್ನೂ ಓದಿ: Bangalore Coronavirus: ಬೆಡ್​ಗಾಗಿ ಸಿಎಂ ಯಡಿಯೂರಪ್ಪರ ಮನೆ ಮುಂದೆ ಪ್ರತಿಭಟಿಸಿ, ಆಸ್ಪತ್ರೆ ಸೇರುವ ಮೊದಲೇ ಪ್ರಾಣ ಬಿಟ್ಟ ಸೋಂಕಿತ!

ಬೇರೆ ಬೇರೆ ಜಿಲ್ಲೆಗಳಿಗೆ ಆಕ್ಸಿಜನ್ ಸರಬರಾಜು ಬಗ್ಗೆ ಎಲ್ಲ ಸಚಿವರು ಸಹಕಾರ ನೀಡ್ತಿದ್ದಾರೆ. ರಾಜ್ಯದ ಎಲ್ಲರಿಗೂ ಉತ್ತಮ ಆರೋಗ್ಯ ನೀಡಲು ಸರ್ಕಾರ ಬದ್ಧವಾಗಿದೆ. ಲಸಿಕೆಗೆ ನಾವು ಪ್ರಯತ್ನ ಮಾಡ್ತಿದ್ದೇವೆ. ಎಲ್ಲಾ ರಾಜ್ಯಗಳಿಗೂ ಒತ್ತಡ ಇದೆ. ಕೇವಲ ಎರಡು ಸಂಸ್ಥೆಗಳು ಮಾತ್ರ ಲಸಿಕೆ ಉತ್ಪಾದನೆ ಮಾಡುತ್ತಿವೆ. ಮೇ 15ರ ನಂತರ ನಮಗೆ ಲಸಿಕೆ ಬರಲಿದೆ. ಸಾವಿನ ಪ್ರಮಾಣ ಕಡಿಮೆ ಮಾಡಲು ನಿರತರಾಗಿದ್ದೇನೆ. ನಾವು ನಿರೀಕ್ಷಿಸಿದಂತೆ ಜನತಾ ಕರ್ಫ್ಯೂ ಆಗುತ್ತಿಲ್ಲ. ಜನ ಸಹಕಾರ ನೀಡಬೇಕು. ಮುಂಬೈನಲ್ಲಿ ಸೋಂಕು ಕಡಿಮೆ ಆಗಿದೆ. ಮೇ 12ರ ವೇಳೆಗೆ ಏನಾಗಲಿದೆ ಎಂದು ಗೊತ್ತಾಗಲಿದೆ. ಕೊರೋನಾ ನಿಯಂತ್ರಣದ ಬಗ್ಗೆ ಸೂಕ್ತ ಕ್ರಮದ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪನವರ ಜೊತೆ ಚರ್ಚೆ ಮಾಡಿದ್ದೇನೆ ಎಂದು ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.

ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ತಮ್ಮದೇ ಸರ್ಕಾರದ ಸಚಿವ ಡಾ. ಕೆ. ಸುಧಾಕರ್ ರಾಜೀನಾಮೆಗೆ ಆಗ್ರಹ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಾ. ಕೆ. ಸುಧಾಕರ್, ಒಂದು ಬಾರಿ ರಾಜೀನಾಮೆ ಕೊಟ್ಟು, ಕಷ್ಟಪಟ್ಟು ಇಲ್ಲಿಗೆ ಬಂದಿದ್ದೇನೆ. ನಮ್ಮ ಸರ್ಕಾರ ಕೂಡ ಅಧಿಕಾರಕ್ಕೆ ಬಂದಿದೆ. ನಾನು ಈಗ ರಾಜಕೀಯ ಮಾತನಾಡಲ್ಲ. ಅವರ ಬಗ್ಗೆ ಅದೇ ಗೌರವ ಇದೆ ಎಂದಿದ್ದಾರೆ.
Youtube Video

ಬೆಡ್, ವಾರ್ ರೂಂ ನಿರ್ವಹಣೆ ಸೇರಿದಂತೆ ಮೂವರು ಸಚಿವರಿಗೆ ಸಿಎಂ ಯಡಿಯೂರಪ್ಪ ಜವಾಬ್ದಾರಿ ನೀಡಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಚಿವ ಡಾ. ಕೆ. ಸುಧಾಕರ್, ಹಿರಿಯ ಸಚಿವರಿಗೆ ಜವಾಬ್ದಾರಿ ಹಂಚಿಕೆ ಇಂದ ನನಗೆ ಆನೆ ಬಲ ಬಂದಿದೆ. ಆ ಬಗ್ಗೆ ನನಗೆ ಯಾವುದೇ ಅಸಮಾಧಾನವಿಲ್ಲ. ನಿನ್ನೆಗೆ 1 ಕೋಟಿ ಲಸಿಕೆ ಹಾಕಿದ್ದೇವೆ. 18-45 ವರ್ಷದವರಿಗೆ ಲಸಿಕೆ ಕೊಡೊ ಬಗ್ಗೆ ನಾವು ಕ್ರಮ ತೆಗೆದುಕೊಳ್ತೀವಿ. ಈ ನಿಟ್ಟಿನಲ್ಲಿ ಕ್ರಮಗಳು ಆಗ್ತಿವೆ. 3ನೇ ಅಲೆ ಬರೋ ಒಳಗೆ ಎಲ್ಲರಿಗೂ ಲಸಿಕೆ ಕೊಡೊ ರೀತಿ ಕ್ರಮ ತೆಗೆದುಕೊಳ್ತೀವಿ ಎಂದಿದ್ದಾರೆ.
Published by: Sushma Chakre
First published: May 6, 2021, 11:27 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories