HOME » NEWS » State » BENGALURU URBAN KARNATAKA LOCKDOWN EXTENDED HERE IS FULL DETAILS OF NEW LOCKDOWN GUIDELINES LG

Lockdown Unlock: ಮದುವೆಗೆ 40 ಜನ, ಅಂತ್ಯಕ್ರಿಯೆಗೆ 5 ಮಂದಿ; ಮುಂದುವರಿದ ಲಾಕ್​ಡೌನ್​ನಲ್ಲಿ ಏನಿದೆ? ಏನಿಲ್ಲ? ಫುಲ್ ಡೀಟೆಲ್ಸ್

Karnataka lockdown unlock: ವೀಕೆಂಡ್ ಕರ್ಫ್ಯೂನಲ್ಲೂ ಬೆಳಗ್ಗೆ 6ರಿಂದ ಮಧ್ಯಾಹ್ನ 2 ಗಂಟೆಯವರೆಗೂ ಅಗತ್ಯ ವಸ್ತುಗಳು, ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ.

news18-kannada
Updated:June 11, 2021, 2:54 PM IST
Lockdown Unlock: ಮದುವೆಗೆ 40 ಜನ, ಅಂತ್ಯಕ್ರಿಯೆಗೆ 5 ಮಂದಿ; ಮುಂದುವರಿದ ಲಾಕ್​ಡೌನ್​ನಲ್ಲಿ ಏನಿದೆ? ಏನಿಲ್ಲ? ಫುಲ್ ಡೀಟೆಲ್ಸ್
ಲಾಕ್​ಡೌನ್
  • Share this:
ಬೆಂಗಳೂರು(ಜೂ.11): ಕೊರೋನಾ ಪಾಸಿಟಿವಿಟಿ ಹೆಚ್ಚಾಗಿರುವ 11 ಜಿಲ್ಲೆಗಳಲ್ಲಿ ಇನ್ನೂ ಒಂದು ವಾರ ಕಾಲ ಲಾಕ್​ಡೌನ್​ ಮುಂದುವರಿಯಲಿದೆ.  ಅಂದರೆ ಜೂನ್​ 14ರಿಂದ 21ರವರೆಗೆ ಮತ್ತೆ ಒಂದು ವಾರ ಲಾಕ್​ಡೌನ್​ ವಿಸ್ತರಣೆ ಮಾಡಿ ಸಿಎಂ ಬಿಎಸ್​ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ. ರಾಜ್ಯದಲ್ಲಿ ಸೋಂಕು ಪ್ರಮಾಣ ಹೆಚ್ಚಿರುವ ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು, ಚಾಮರಾಜನಗರ, ಹಾಸನ, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಬೆಳಗಾವಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಲಾಕ್​ಡೌನ್ ಮುಂದುವರೆಯಲಿದೆ.

ಈಗಾಗಲೇ ಜಾರಿಯಲ್ಲಿರುವ ಲಾಕ್​ಡೌನ್ ನಿಯಮಗಳ ಮಾರ್ಗಸೂಚಿಗಳು ಈ 11 ಜಿಲ್ಲೆಗಳಿಗೆ ಅನ್ವಯವಾಗಲಿವೆ. ಅಗತ್ಯವಿದ್ದರೆ ಇನ್ನೂ ಕಠಿಣ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಈ 11 ಜಿಲ್ಲೆಗಳಲ್ಲಿ ಜೂನ್ 21ರವರೆಗೆ ಲಾಕ್​ಡೌನ್ ಮುಂದುವರೆಯಲಿದ್ದು, ಉಳಿದ ಜಿಲ್ಲೆಗಳಲ್ಲಿ ಸೆಮಿ ಲಾಕ್​ಡೌನ್ ಘೋಷಣೆ ಮಾಡಲಾಗಿದೆ. ಅಂದರೆ, ಅನ್​ಲಾಕ್ ಆದರೂ ಕೆಲವು ವಲಯಗಳಿಗೆ ಮಾತ್ರ ಅನುಮತಿ ನೀಡಲಾಗಿದ್ದು, ಕೆಲವು ನಿರ್ಬಂಧಗಳನ್ನೂ ವಿಧಿಸಲಾಗಿದೆ. ಅನ್​ಲಾಕ್​ ಇರುವ ಜಿಲ್ಲೆಗಳ ಪರಿಷ್ಕೃತ ಮಾರ್ಗಸೂಚಿಗಳು ಜೂನ್ 14ರ ಬೆಳಿಗ್ಗೆ 6 ಗಂಟೆಯಿಂದ ದಿನಾಂಕ ಜೂನ್ 21ರ ಬೆಳಿಗ್ಗೆ 6 ಗಂಟೆಯವರೆಗೆ ಜಾರಿಯಲ್ಲಿರುತ್ತದೆ.

ಜೂನ್​ 14ರಿಂದ 21ರವರೆಗೆ ಇರಲಿರುವ ಲಾಕ್​ಡೌನ್​ನಲ್ಲಿ ಕೆಲವು ವಿನಾಯಿತಿಗಳನ್ನೂ ನೀಡಲಾಗಿದೆ.

ಇದನ್ನೂ ಓದಿ:BS Yediyurappa: ಮುಂದಿನ 2 ವರ್ಷ ನಾನೇ ಸಿಎಂ; ಎಲ್ಲಾ ವದಂತಿಗಳಿಗೆ ತೆರೆ ಎಳೆದ ಬಿ.ಎಸ್.ಯಡಿಯೂರಪ್ಪ



  • ಎಲ್ಲಾ ಅಗತ್ಯ ಪದಾರ್ಥ ಖರೀದಿಸುವುದಕ್ಕೆ ಅನುವು ಮಾಡಿಕೊಡಲು ಅಂಗಡಿಗಳನ್ನು ಈಗಿರುವ ಸಮಯ ಬೆಳಿಗ್ಗೆ 6 ರಿಂದ 10 ಗಂಟೆಯನ್ನು ವಿಸ್ತರಿಸಿ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ

  • ಪಾರ್ಕ್​ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಬೆಳಿಗ್ಗೆ 5 ರಿಂದ 10 ಗಂಟೆಯವರೆಗೆ ತೆರೆಯಲು ಅವಕಾಶ. ಆದರೆ ಪಾರ್ಕ್​ಗಳಲ್ಲಿ ಗುಂಪು ಚಟುವಟಿಕೆಗಳಿಗೆ ಅವಕಾಶ ಇಲ್ಲ. ವಾಕಿಂಗ್​ ಮತ್ತು ಜಾಗಿಂಗ್​ಗೆ ಮಾತ್ರ ಅವಕಾಶ ಇರುತ್ತದೆ. ಕುಳಿತುಕೊಳ್ಳುವಂತಿಲ್ಲ.
  • ವೀಕೆಂಡ್ ಕರ್ಫ್ಯೂನಲ್ಲಿ ತುರ್ತು ಸೇವೆಯ ಕೈಗಾರಿಕೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಜೊತೆಗೆ ಬೀದಿ ಬದಿ ವ್ಯಾಪಾರಿಗಳಿಗೂ ಅವಕಾಶ ಕೊಡಲಾಗಿದೆ.

  • ವೀಕೆಂಡ್ ಕರ್ಫ್ಯೂನಲ್ಲೂ ಬೆಳಗ್ಗೆ 6ರಿಂದ ಮಧ್ಯಾಹ್ನ 2 ಗಂಟೆಯವರೆಗೂ ಅಗತ್ಯ ವಸ್ತುಗಳು, ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ.

  • ಕೃಷಿ, ಪಿಡಬ್ಲ್ಯುಡಿ, ವಸತಿ, ಕಂದಾಯ , ಆರ್ ಟಿ ಒ, ಸಹಕಾರ ಇಲಾಖೆಗಳು ತೆರೆದಿರುತ್ತವೆ. ಆದರೆ  ಎಲ್ಲಾ ಸರ್ಕಾರಿ ಕಚೇರಿಗಳು ತೆರೆದಿರುವುದಿಲ್ಲ.  ಅಗತ್ಯ ಇರುವ ಇಲಾಖೆಗಳು ಮಾತ್ರ ತೆರೆದಿರುತ್ತವೆ.

  • ಜೂನ್​ 14ರಿಂದ 21ರವರೆಗಿನ ಲಾಕ್​ಡೌನ್​ ಅವಧಿಯಲ್ಲಿ ಮದುವೆ ಸಮಾರಂಭಗಳಿಗೆ 40 ಜನ ಸೇರಲು ಅವಕಾಶ ನೀಡಲಾಗಿದೆ. ಅಂತ್ಯಕ್ರಿಯೆಗೆ 5 ಮಂದಿ ಮಾತ್ರ ಸೇರಲು ಅವಕಾಶವಿದೆ.

  • ಎಲ್ಲಾ ಕಾರ್ಖಾನೆಗಳಲ್ಲಿ ಶೇ. 50 ರಷ್ಟು ಸಿಬ್ಬಂದಿಯ ಹಾಜರಿಯೊಂದಿಗೆ ಕಾರ್ಯ ನಿರ್ವಹಿಸಲು ಅನುಮತಿ

  • ಗಾರ್ಮೆಂಟ್ಸ್​​​ ಕೈಗಾರಿಕೆಗಳಿಗೆ ಮಾತ್ರ ಶೇ. 30ರಷ್ಟು ಸಿಬ್ಬಂದಿಯ ಹಾಜರಿಯೊಂದಿಗೆ ಕಾರ್ಯ ನಿರ್ವಹಿಸಲು ಅನುಮತಿ.

  • ಆಟೋ ಮತ್ತು ಟ್ಯಾಕ್ಸಿಗಳಲ್ಲಿ ಇಬ್ಬರು ಪ್ರಯಾಣಿಕರಿಗೆ ಸಂಚರಿಸಲು ಅವಕಾಶ


ಇದನ್ನೂ ಓದಿ:ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ನಡುವೆ ಮಠಾಧೀಶರನ್ನು ಭೇಟಿಯಾದ ಡಿಸಿಎಂ ಅಶ್ವತ್ಥ ನಾರಾಯಣ

ಈ ಬಗ್ಗೆ ಮಾತನಾಡಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ,  ಜೂನ್​ 14ರಿಂದ  ಕೆಲವು ಆರ್ಥಿಕ ಚಟುವಟಿಕೆಗಳಿಗೆ ಅವಕಾಶ, ಕೆಲವು ರಿಯಾಯಿತಿ ನೀಡಲಾಗಿದೆ.  ಎಲ್ಲಾ ಇಂಡಸ್ಟ್ರಿಗೆ ಶೇ. 50 ಅವಕಾಶ ನೀಡಲಾಗಿದೆ.  ಅವರೇ ಸಾರಿಗೆ ವ್ಯವಸ್ಥೆ ಮಾಡಿಕೊಳ್ಳಬೇಕು, ಸಾಧ್ಯವಾದಷ್ಟು ವ್ಯಾಕ್ಸಿನೇಷನ್ ಮಾಡಿಸಬೇಕು. 10 ಗಂಟೆಯಿಂದ 2 ಗಂಟೆಗೆ ವಿಸ್ತರಿಸಲಾಗಿದೆ. ಜನರು ಮತ್ತು ಮತ್ತು ವ್ಯಾಪಾರಸ್ಥರಿಗೆ ಅನುಕೂಲ ಆಗಲಿದೆ. ಆದರೆ ಧಾರ್ಮಿಕ ಚಟುವಟಿಕೆಗಳಿಗೂ, ಮದುವೆ  ಸಮಾರಂಭಗಳಿಗೂ ಹಳೆಯ ಮಾದರಿಯ ಕಠಿಣ ನಿಯಮಗಳಿರುತ್ತವೆ ಎಂದು ಹೇಳಿದರು.
Youtube Video

ಜೂನ್​ 14ರಿಂದ ಸಡಿಲಿಕೆ ಆಗುತ್ತೆ, ಆದ್ರೆ ಕೆಲ ಜನರು ಇವತ್ತಿನಿಂದನೇ ರಸ್ತೆಗೆ ಬರ್ತಿದ್ದಾರೆ. ಇವತ್ತಿನಿಂದಲೇ ಅವಕಾಶ ಇದೆ ಅಂತಾ ಬರೋದು ಸರಿಯಲ್ಲ. 14ನೇ ತಾರೀಖಿನವರೆಗೂ ನಿಯಮಗಳನ್ನ ಪಾಲಿಸಬೇಕು. ಜನರು ಸಹಕಾರ ನೀಡಬೇಕು, ಪೊಲೀಸ್ ಪೋರ್ಸ್ ಬಳಸುವಂತೆ ಮಾಡಬಾರದು. ಜೂನ್​ 21ರವರೆಗೂ ನೈಟ್ ಕರ್ಪ್ಯೂ ಇರುತ್ತೆ, ಆನಂತರ ಕೋವಿಡ್ ಪರಿಸ್ಥಿತಿಯನ್ನ ಅವಲೋಕಿಸಿ ಮುಂದುವರೆಸುವ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ಹೇಳಿದರು.
Published by: Latha CG
First published: June 11, 2021, 2:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories