Home Isolationನಲ್ಲಿರೋ ಸೋಂಕಿತರಿಗೆ ಸರ್ಕಾರ ನೀಡಲಿರುವ 6 ರೀತಿಯ ಮಾತ್ರೆಗಳು ಇವೆ ನೋಡಿ..

ತಜ್ಞ ವೈದ್ಯರು ಹೋಂ ಐಸೋಲೇಷನ್‌ನಲ್ಲಿರುವವರಿಗೆ 6 ಔಷಧಿಗಳನ್ನು ಸೂಚಿಸಿದ್ದಾರೆ. ಮೆಡಿಕಲ್​ ಕಿಟ್​ನಲ್ಲಿ 5 ರೀತಿಯ ಮಾತ್ರೆಗಳು ಹಾಗೂ ಒಂದು ಸಿರಪ್ ಇರಲಿದೆ.

ಮೆಡಿಕಲ್​ ಕಿಟ್​

ಮೆಡಿಕಲ್​ ಕಿಟ್​

  • Share this:
ಕೊರೋನಾ ಕೇಸ್‌ಗಳು (Corona Cases) ಹೆಚ್ಚಾಗ್ತಿದ್ದು, ಕಡಿಮೆ ರೋಗ ಲಕ್ಷಣಗಳಿರುವವರು ಮನೆಯಲ್ಲೇ ಐಸೋಲೇಷನ್​​ (Home Isolation) ಆಗುತ್ತಿದ್ದಾರೆ. ಅನೇಕರು ಆಸ್ಪತ್ರೆಗಳಿಗೆ (Hospitals) ಹೋಗೋದನ್ನ ಕಡಿಮೆ ಮಾಡಿದ್ದಾರೆ. ಮೊದಲನೆ ಹಾಗೂ ಎರಡನೇ ಅಲೆಗೆ ಹೋಲಿಸಿರೆ ಈ ಮೂರನೇ ಅಲೆಯ ಆರಂಭದಲ್ಲೇ ಅನೇಕ ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯೋದಕ್ಕೆ ಹಿಂದೇಟು ಹಾಕ್ತಿದ್ದಾರೆ. ಶೇ.80 ರಷ್ಟು ರೋಗಿಗಳು ಮನೆಯಲ್ಲೇ ಚಿಕಿತ್ಸೆ ಪಡೆಯಲು ಮುಂದಾಗಿದ್ದಾರೆ.  ಆದ್ರೆ ಮನೆಯಲ್ಲಿ ಯಾವ ಮೆಡಿಸನ್ ತಗೊಳ್ಬೇಕು? ಹೇಗೆ ಆರೋಗ್ಯ ಕಾಪಾಡಿಕೊಳ್ಳೋದು ಅನ್ನೋದು ಗೊತ್ತಾಗುತ್ತಿಲ್ಲ. ಯಾವ ಮೆಡಿಸನ್ ತಗೋಬೇಕು, ತಗೋಬಾರ್ದು ಅನ್ನೋ ಗೊಂದಲದಲ್ಲಿದ್ದಾರೆ. ಹೀಗಾಗಿಯೇ ಆರೋಗ್ಯ ಇಲಾಖೆ ಹೊಸ ಯೋಜನೆ ರೂಪಿಸೋಕೆ ಮುಂದಾಗಿದೆ.

2 ರೀತಿಯ ಮೆಡಿಸನ್ ಕಿಟ್

ಹೋಂ ಐಸೋಲೇಷನ್‌ನಲ್ಲಿರೋ ರೋಗಿಗಳಿಗೆ ಅಂತಾನೆ ಹೊಸ ಐಸೋಲೇಷನ್ ಕಿಟ್ ಕಾನ್ಸೆಪ್ಟ್‌ ಅನ್ನು ಆರೋಗ್ಯ ಇಲಾಖೆ ತಂದಿದೆ. ಅನೇಕರು ಮೆಡಿಕಲ್‌ ಶಾಪ್‌‌ಗಳಲ್ಲಿ ಹೋಗಿ ಬೇರೆ ಬೇರೆ ಮೆಡಿಸನ್ ಬಳಕೆ ಮಾಡಿ ಸೈಡ್ ಎಫೆಕ್ಟ್ ಆಗೋದನ್ನ ತಡೆಯೋದಕ್ಕೆ ಈ ಕ್ರಮ ಕೈಗೊಳ್ಳಲಾಗ್ತಿದೆ. ಮಕ್ಕಳಿಗೆ ಹಾಗೂ ವಯಸ್ಕರಿಗೆ ಎರಡು ರೀತಿಯ ಕಿಟ್‌ಗಳನ್ನು ತಯಾರು ಮಾಡ್ತಿದ್ದು, ಆದಷ್ಟು ಬೇಗ ಗುಣಮುಖರಾಗಲು ಇದು ಸಹಾಯ ಮಾಡಲಿದೆ. ಹೀಗಾಗಿಯೇ ರೋಗಿಗಳ ಆರೋಗ್ಯದ ದೃಷ್ಟಿಯಿಂದ ಇಲಾಖೆ ಈ ಯೋಜನೆ ರೂಪಿಸ್ತಿದೆ. ನಿನ್ನೆ ನಡೆದ ಸಿಎಂ ನೇತೃತ್ವದ ಕೋವಿಡ್ ಸಭೆಯಲ್ಲಿ ಮೆಡಿಸನ್ ಕಿಟ್‌ಗಳನ್ನು ನೀಡುವ ಕುರಿತು ಗ್ರೀನ್ ಸಿಗ್ನಲ್ ಸಿಕ್ಕಿದೆ. ಆದರೆ ಇದರಲ್ಲಿ ಏನೆಲ್ಲಾ ಔಷಧಿಗಳು ಇರಬೇಕು ಅನ್ನೋದರ ಕುರಿತು ನುರಿತ ತಜ್ಞ ವೈದ್ಯರನ್ನೊಳಗೊಂಡ ಸಮಿತಿಯಿಂದ ಸಲಹೆ ಪಡೆಯಲಾಗಿದೆ.

ಇದನ್ನೂ ಓದಿ: ಮಾಸ್ಕ್ ಕಡ್ಡಾಯವಲ್ಲ ಎಂದ ಸಚಿವ Umesh Katti.. ಮತ್ಯಾಕೆ ಜನಸಾಮಾನ್ಯರಿಗೆ ದಂಡ ಹಾಕುತ್ತಿದ್ದೀರಿ..?

5 ತರದ ಮಾತ್ರೆಗಳು,  1 ಸಿರಪ್​

ಈಗಾಗಲೇ ತಜ್ಞ ವೈದ್ಯರು ಹೋಂ ಐಸೋಲೇಷನ್‌ನಲ್ಲಿರುವವರಿಗೆ ಅಂತಾನೇ 6 ಔಷಧಿಗಳನ್ನು ಸೂಚಿಸಿದ್ದಾರೆ. ಇತ್ತೀಚೆಗೆ ಕೋವಿಡ್ ರೋಗಲಕ್ಷಣದಲ್ಲಿ ಹೆಚ್ಚು ಕಫ, ಕೆಮ್ಮು ಕಂಡು ಬರ್ತಿದೆ.‌ ಜೊತೆಗೆ ಕಡಿಮೆ ಪ್ರಮಾಣದ ಜ್ವರ ಕೂಡ ಕಾಣಿಸಿಕೊಳ್ಳುತ್ತಿದೆ. ಈ ಎಲ್ಲಾ ರೋಗಲಕ್ಷಣಗಳನ್ನು ಗಮನದಲ್ಲಿಟ್ಟುಕೊಂಡು 5 ಉತ್ತಮವಾದ ಮಾತ್ರೆಗಳು ಹಾಗೂ ಒಂದು ಸಿರಪ್‌ನ್ನು ಕೂಡಾ ಕಿಟ್‌ನಲ್ಲಿ ಇಡಬೇಕು, ಜೊತೆಗೆ ಮೂರು ಪದರವನ್ನೊಳಗೊಂಡ ಮಾಸ್ಕ್ ಹಾಗೂ ಸ್ಯಾನಿಟೈಸರ್ ಕಡ್ಡಾಯವಾಗಿ ಇರಬೇಕು ಅಂತ ಸಲಹೆ ನೀಡಿದ್ದಾರೆ. ಹಾಗಾದ್ರೆ ಆ ಔಷಧಗಳು ಯಾವ್ದು ಎಷ್ಟು ಪ್ರಮಾಣದಲ್ಲಿ ತಗೋಳೋದಕ್ಕೆ ತಜ್ಞರು ಹೇಳಿದ್ದಾರೆ ಅಂತ ನೋಡೋದಾದ್ರೆ‌..

ತಜ್ಞರು ಸೂಚಿಸಿರೋ ಆ 6 ಔಷಧಗಳು ಯಾವುದು..?

  • 1. ಪ್ಯಾರಸಿಟಮಾಲ್ 500mg ಮಾತ್ರೆಗಳು

  • 2. ವಿಟಮಿನ್ ಸಿ 500mg ಮಾತ್ರೆಗಳು

  • 3. ಝಿಂಕ್ ಸಲ್ಫೈಟ್ 50mg ಮಾತ್ರೆಗಳು

  • 4. ಲೆವೋಟ್ರೈಸೈನ್ 10mg ಮಾತ್ರೆಗಳು

  • 5. ಪಾಂಟಪ್ರೋಝೋಲ್ 40mg ಮಾತ್ರೆಗಳು

  • 6. ಆ್ಯಂಟಿ ಟುಸಿವ್ ಕಾಫ್ ಸಿರಪ್


ಇನ್ನು ಕಿಟ್‌ಗಳನ್ನು ನೀಡಲು ಸದ್ಯದಲ್ಲೇ ಟೆಂಡರ್ ಪ್ರಕ್ರಿಯೆ ಆರಂಭಿಸಿ ಒಂದು ವಾರದಲ್ಲಿ ಇದನ್ನು ಮುಗಿಸಲು ಆರೋಗ್ಯ ಇಲಾಖೆ ತಯಾರಿ ಮಾಡ್ತಿದೆ. ಹೀಗಾಗಿ ಆದಷ್ಟು ಬೇಗ‌ ಹೋಂ ಐಸೋಲೇಷನ್‌ನಲ್ಲಿರೋವ್ರಿಗೆ ಈ ಕಿಟ್‌ಗಳನ್ನು ನೀಡಲು ಸಿದ್ಧತೆಯಲ್ಲಿದೆ. ಹೋಂ ಐಸೋಲೇಷನ್‌ನಲ್ಲಿರೋವ್ರ ಸಂಖ್ಯೆ ಹೆಚ್ಚಾದ ಬೆನ್ನಲ್ಲೇ ಇಲಾಖೆಯು ಕಿಟ್‌ಗಳನ್ನು ನೀಡೋಕೆ ತಯಾರಿ ಮಾಡಿದ್ದು ಎರಡು ವಾರದಲ್ಲೇ ಕಿಟ್ ಹಂಚಿಕೆಗೆ ಪ್ಲಾನ್ ಮಾಡಿದೆ.

ಇದನ್ನೂ ಓದಿ: 15 ದಿನಗಳ ಕಾಲ ಶಾಲಾ-ಕಾಲೇಜುಗಳನ್ನು ಬಂದ್ ಮಾಡೋದೇ ಒಳಿತು: HD Kumaraswamy ಸಲಹೆ

ರಾಜ್ಯದಲ್ಲಿ ಇಂದು 41,475 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇಂದು ರಾಜ್ಯದಲ್ಲಿ 20 ಜನ ಕೊರೋನಾಗೆ ಬಲಿಯಾಗಿದ್ದಾರೆ. 8353 ಮಂದಿ ಇಂದು ಗುಣಮುಖರಾಗಿದ್ದಾರೆ.  ಬೆಂಗಳೂರಿನಲ್ಲಿ ಇಂದು 25595 ಕೇಸ್ ಪತ್ತೆಯಾಗಿದ್ದು, 7 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇಂದು ಪಾಸಿಟಿವಿಟ್ 22.30 %, ಇಂದು ಸಾವಿನ ಪ್ರಮಾಣ 0.04 % ಇದೆ.  ರಾಜ್ಯದಲ್ಲಿ ಸದ್ಯ ಜನವರಿ 31ರವರೆಗೆ ವೀಕೆಂಡ್​ ಕರ್ಫ್ಯೂ ಹಾಗೂ ನೈಟ್​ ಕರ್ಫ್ಯೂ ಜಾರಿಯಲ್ಲಿದೆ.
Published by:Kavya V
First published: