ಸಾಕು ನಾಯಿ ಜೊತೆ ಕಬ್ಬನ್ ಪಾರ್ಕಿಗೆ ವಾಕ್ ಹೋಗ್ತೀರಾ? ಹಾಗಾದ್ರೆ ಈ ಸುದ್ದಿ ಓದಿ

ಬೆಂಗಳೂರಿನ (Bengaluru) ಜನತೆಗೆ ಬೆಳಗ್ಗೆ ತಮ್ಮ ಸಾಕು ನಾಯಿಗಳ (Pets) ಜೊತೆ ವಾಕ್ (Morning Walk) ಬರೋದು ಅಭ್ಯಾಸ.  ಈ ರೀತಿ ನಿವೇನಾದ್ರೂ ಸಾಕು ನಾಯಿ ಜೊತೆ ಈ ಸುದ್ದಿ ಓದಲೇಬೇಕು. ಇನ್ನುಂದೆ ಕಬ್ಬನ್ ಪಾರ್ಕ್ (Cubbon Park) ಒಳಗೆ ಸಾರ್ವಜನಿಕರು ಸಾಕು ನಾಯಿ ಜೊತೆ ಪ್ರವೇಶಿಸುವಂತಿಲ್ಲ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರಿನ (Bengaluru) ಜನತೆಗೆ ಬೆಳಗ್ಗೆ ತಮ್ಮ ಸಾಕು ನಾಯಿಗಳ (Pets) ಜೊತೆ ವಾಕ್ (Morning Walk) ಬರೋದು ಅಭ್ಯಾಸ.  ಈ ರೀತಿ ನಿವೇನಾದ್ರೂ ಸಾಕು ನಾಯಿ ಜೊತೆ ಈ ಸುದ್ದಿ ಓದಲೇಬೇಕು. ಇನ್ನುಂದೆ ಕಬ್ಬನ್ ಪಾರ್ಕ್ (Cubbon Park) ಒಳಗೆ ಸಾರ್ವಜನಿಕರು ಸಾಕು ನಾಯಿ ಜೊತೆ ಪ್ರವೇಶಿಸುವಂತಿಲ್ಲ. ಕಬ್ಬನ್ ಪಾರ್ಕ್ ಒಳಗೆ ಬೀದಿನಾಯಿಗಳು (Dogs) ಪ್ರವೇಶ ಮಾಡದಂತೆ ಬಿಬಿಎಂಪಿ ಸಿದ್ಧತೆ ನಡೆಸಿದೆ. ಕಬ್ಬನ್ ಪಾರ್ಕ್‌ನಲ್ಲಿ ನಾಯಿ ಮತ್ತು ದನಗಳ ಹಾವಳಿಯ ಸಮಸ್ಯೆಯನ್ನು ಪರಿಶೀಲಿಸುವಂತೆ ಕರ್ನಾಟಕ ಹೈಕೋರ್ಟ್ (Karnatak Highcourt) ಬುಧವಾರ ರಾಜ್ಯ ಸರ್ಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ BBMP) ಗೆ ಸೂಚಿಸಿದೆ.

ವರದಿ ಸಲ್ಲಿಸಲು ಬಿಬಿಎಂಪಿಗೆ ಸೂಚನೆ

ಕಬ್ಬನ್ ಉದ್ಯಾನವನದಲ್ಲಿ ಬೀದಿ ನಾಯಿಗಳ ಹಾವಳಿ ಕುರಿತ ಅರ್ಜಿ ವಿಚಾರಣೆ ನಡಸಿದ ಮುಖ್ಯ ನ್ಯಾ. ರಿತುರಾಜ್ ಅವಸ್ಥಿ, ಕಬ್ಬನ್ ಪಾರ್ಕ್ ಒಳಗೆ ಕೆಲವರು ಸಾಕು ನಾಯಿಗಳನ್ನು ತಂದು ಮಲ ಮೂತ್ರ ವಿಸರ್ಜನೆ ಮಾಡಿಸುತ್ತಾರೆ. ಸಾಕು ನಾಯಿ ನೋಡಿ ಬೀದಿ ನಾಯಿಗಳು ಕಬ್ಬನ್ ಪಾರ್ಕ್ ಒಳಗೆ ಬರುತ್ತಿವೆ. ಇದರಿಂದ ಸಾರ್ವಜನಿಕರು ಓಡಾಡುವುದು ಕಷ್ಟ. ಕಬ್ಬನ್ ಪಾರ್ಕ್ ಒಳಗೆ ಬೀದಿ ನಾಯಿಗಳು ಪ್ರವೇಶಿಸದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕ್ರಮ ಜರುಗಿಸಿ ವರದಿಯನ್ನು ನ್ಯಾಯಾಯಲಕ್ಕೆ ಸಲ್ಲಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಇನ್ನು ಕೆಲವರು ಬೀದಿ ನಾಯಿಗಳಿಗೆ ಆಹಾರ ತಂದು ಹಾಕುತ್ತಾರೆ. ಇದರಿಂದ ಪಾರ್ಕ್ ನಲ್ಲಿ ನಾಯಿಗಳ ಸಂಖ್ಯೆ ಏರಿಕೆಯಾಗಿದ್ದು, ಆಹಾರ ಸಿಗದಿದ್ದಾಗ ಸಾರ್ವಜನಿಕರ ಮೇಲೆ ದಾಳಿ ನಡೆಸುವ ಸಾಧ್ಯತೆಗಳಿವೆ. ಇದರಿಂದ ನಿರ್ಭಿತಿಯಾಗಿ ಜನರಿಗೆ ಸಂಚರಿಸಲು ಅಥವಾ ವಾಕ್ ಮಾಡಲು ಸಾಧ್ಯವಾಗುತ್ತಿಲ್ಲ.

ಇದನ್ನೂ ಓದಿ:  Karnataka Weather Report: ದಕ್ಷಿಣ ಒಳನಾಡಿನಲ್ಲಿ ತುಂತುರು ಮಳೆ ಜೊತೆ ಚಳಿ

ಜಾನುವಾರುಗಳಿಗೆ ಮೇಯಲು ಅವಕಾಶ

ಉದ್ಯಾನದೊಳಗೆ ಜಾನುವಾರುಗಳಿಗೆ ಮೇಯಲು ಅವಕಾಶವಿದೆ ಎಂದು ಕೆಲವು ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು. ಈ ಹಂತದಲ್ಲಿ ಸರಕಾರವನ್ನು ಪ್ರತಿನಿಧಿಸಿದ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿರುವ ವಿಷಯಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳುತ್ತಾರೆ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದರು.

ಪ್ರವೇಶದ್ವಾರಗಳಲ್ಲಿ ನಾಯಿಗಳು ಪ್ರವೇಶಿಸದಂತೆ ಬಿಬಿಎಂಪಿ ಎಚ್ಚರಿಕೆ

ಹೈಕೋರ್ಟ್ ಚಾಟಿ ಬೆನ್ನಲ್ಲೇ ಎಚ್ಛೆತ್ತಿರುವ ಕಬ್ಬನ್ ಪಾರ್ಕ್ ಗೆ ಸಂಪರ್ಕ ಕಲ್ಪಿಸುವ ಪ್ರವೇಶ ದ್ವಾರಗಳಲ್ಲಿ ಬೀದಿ ನಾಯಿಗಳು ಬರದಂತೆ ತಯಾರಿ ನಡೆಸುತ್ತಿದೆ. . ಕಾರ್ಪೋರೇಷನ್ ವೃತ್ತ, ಕೆ.ಆರ್. ಸರ್ಕಲ್ ವೃತ್ತ, ಹೈಕೋರ್ಟ್ ಮುಖ್ಯ ದ್ವಾರ, ಪ್ರೆಸ್ ಕ್ಲಬ್ ದ್ವಾರ, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ದ್ವಾರ, ವೆಂಕಟಪ್ಪ ಆರ್ಟ್ ಗ್ಯಾಲರಿ ಸೇರಿದಂತೆ ಕಬ್ಬನ್ ಪಾರ್ಕ್ ಪ್ರವೇಶಕ್ಕೆ ಹಲವು ದಾರಿಗಳಿವೆ.

ಇದನ್ನೂ ಓದಿ:  ಹಬ್ಬದ ದಿನ ಹಸುವಿಗೆ ಚಿನ್ನದ ಸರ ತೊಡಿಸಿ ಫಜೀತಿ ತಂದಿಟ್ಟುಕೊಂಡ ಕುಟುಂಬ.. ಅರಿಯದ ಗೋವಿಗೆ ನೋವು!

ಬೀದಿ ನಾಯಿಗಳ ಮೇಲೆ ಕಲ್ಲು ಎಸಿದ್ದೀರಿ ಜೋಕೆ..?

ಶ್ವಾನಗಳು (Dogs) ಮಾನವರಿಗೆ ಅತ್ಯಂತ ಆತ್ಮೀಯವಾಗಿರುವ ಪ್ರಾಣಿ. ಎಷ್ಟೋ ಮನೆಗಳಲ್ಲಿ ಸಾಕು ನಾಯಿಗಳನ್ನು ಅವರ ಕುಟುಂಬದ ಸದಸ್ಯರಂತೆ ಟ್ರೀಟ್ ಮಾಡುತ್ತಾರೆ. ನಾಯಿಗಳನ್ನೇ ಮಕ್ಕಳಂತೆ ಸಾಕುವವರೂ ನಮ್ಮ ಮಧ್ಯೆ ಇದ್ದಾರೆ. ಆದರೆ ಬೀದಿನಾಯಿಗಳ ಮೇಲೆ ಈ ರೀತಿಯ ಅಕ್ಕರೆ ಅಪರೂಪ. ಹಾಗಂತ ಬೀದಿ ನಾಯಿಗಳ ಮೇಲೆ ತಮಾಷೆಗೆ ಕಲ್ಲು ಎಸೆದರೂ ಸಂಕಷ್ಟ ಎದುರಿಸಬೇಕಾಗುತ್ತೆ.

ಹೌದು ಬೆಂಗಳೂರಿನಲ್ಲಿ ಬೀದಿ ನಾಯಿಗಳ ಮೇಲೆ ಕಲ್ಲು ಎಸೆದ ಆರೋಪಡಿ ವ್ಯಕ್ತಿಯೊಬ್ಬರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಗರದ ಅಶೋಕನಗರದಲ್ಲಿ 58 ವರ್ಷದ ವೈದ್ಯರೊಬ್ಬರು ಮೇಲೆ ಪಕ್ಕದ ಮನೆಯ ಭದ್ರತಾ ಸಿಬ್ಬಂದಿ ವಿರುದ್ಧ ದೂರು ದಾಖಲಿಸಿದ್ದಾರೆ.

ನಮ್ಮ ಮನೆಯ ಎದುರು ಬಂದಿದ್ದ ನಾಯಿಗಳ ಮೇಲೆ ಸೆಕ್ಯೂರಿಟಿ ಗಾರ್ಡ್ ಕಲ್ಲು ಎಸೆದಿದ್ದಾನೆ. ಇದರಿಂದ ಎರಡು ನಾಯಿಗಳು ಗಾಯಗೊಂಡಿವೆ. ಸೆಕ್ಯೂರಿಟಿ ಗಾರ್ಡ್ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ವೈದ್ಯರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
Published by:Mahmadrafik K
First published: