Hijab High Court Hearing: ಹಿಜಾಬ್ ಇಸ್ಲಾಂನ ಅತ್ಯಗತ್ಯ ಆಚರಣೆಯಲ್ಲ: ಹೈಕೋರ್ಟ್​ನಲ್ಲಿ ಎಜಿ ವಾದ

ಹಿಜಾಬ್ ಬಗ್ಗೆ ನಿಮ್ಮ ನಿಲುವನ್ನು ಸ್ಪಷ್ಟಪಡಿಸಿಲ್ಲ. ಸರ್ಕಾರಿ ಆದೇಶದಲ್ಲಿ ನೇರವಾಗಿ ಹೇಳಿಲ್ಲ ಎಂದು ಸರ್ಕಾರಕ್ಕೆ ನ್ಯಾ.ಕೃಷ್ಣ ದೀಕ್ಷಿತ್ ಪ್ರಶ್ನಿಸಿದರು.

 ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು: ಹಿಜಾಬ್​ ಪ್ರಕರಣ (Hijab Row) ಸಂಬಂಧ ಸತತ 6ನೇ ದಿನ ಹೈಕೋರ್ಟ್​​ನ (High Court) ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಿತು. ವಾದ-ಪ್ರತಿವಾದವನ್ನು ಆಲಿಸಿದ ಕೋರ್ಟ್​​​ ಮುಂದಿನ ವಿಚಾರಣೆಯನ್ನು ಫೆ.21 ಸೋಮವಾರಕ್ಕೆ ಮುಂದೂಡಿತು. ಇಂದು ಪೀಠದ ಎದುರು ಸರ್ಕಾರದ (Karnataka Govt) ಪರ ಎಜಿ ನಾವದಗಿ ವಾದ ಮಂಡಿಸಿದರು. ಸರ್ಕಾರದ ಫೆ.5ರ ಸಮವಸ್ತ್ರ ಅಧಿಸೂಚನೆಯನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ. ಹಿಜಾಬ್ ಇಸ್ಲಾಂನ ಅತ್ಯಗತ್ಯ ಆಚರಣೆಯಲ್ಲ, ಇದು ಸರ್ಕಾರದ ನಿಲುವು. ಶಿಕ್ಷಣ ಕಾಯ್ದೆಯಡಿ ಈ ಆದೇಶವನ್ನು ಸರ್ಕಾರ ಹೊರಡಿಸಿದೆ. ಹಿಜಾಬ್ ನಿರ್ಬಂಧ ಅಭಿವ್ಯಕ್ತಿ ಸ್ವಾತಂತ್ರ್ಯ ಉಲ್ಲಂಘನೆ ಆಗುವುದಿಲ್ಲ. ಹಿಜಾಬ್ ಧರ್ಮದ ಗುರುತು ಅಲ್ಲ ಎಂದು ಎಜಿ ವಾದಿಸಿದರು. ಶಬರಿ ಮಲೆ, ಶಾಯಿರಾ ಬಾನು ಕೇಸ್ ನ ಆಧಾರದಲ್ಲಿ ನಿರ್ಧರಿಸಬೇಕು. ಹಿಜಾಬ್ ಅತ್ಯಗತ್ಯವೇ ಅಲ್ಲವೇ ಎಂಬುದನ್ನು ನಿರ್ಧರಿಸಬೇಕು. ಸರ್ಕಾರದ ಆದೇಶದ ಹಿಂದಿನ ಉದ್ದೇಶವೇನು ನ್ಯಾಯಮೂರ್ತಿಗಳು ಪ್ರಶ್ನಿಸಿದರು. 19.3.2013 ರಲ್ಲೇ ಸಮವಸ್ತ್ರದ ಬಗ್ಗೆ ನಿರ್ಣಯ ಅಂಗೀಕರಿಸಲಾಗಿದೆ. ಕಾಲೇಜು ಅಭಿವೃದ್ದಿ ಸಮಿತಿ 2013 ರಲ್ಲೇ ನಿರ್ಣಯ ಅಂಗೀಕರಿಸಿದೆ. ಉಡುಪಿ ಕಾಲೇಜಿನ ಸಭೆಯ ನಿರ್ಣಯವನ್ನು ಎಜಿ ತಿಳಿಸಿದರು.

ಇದನ್ನೂ ಓದಿ: Hijab Controversy: ಈ ಎರಡು ದಿನಗಳಾದ್ರೂ ಹಿಜಾಬ್‌ಗೆ ಅವಕಾಶ ಕೊಡಿ ಎಂದ ವಕೀಲರು, ಹೈಕೋರ್ಟ್ ಹೇಳಿದ್ದೇನು?

ಕಾಲೇಜು ಅಭಿವೃದ್ದಿ ಸಮಿತಿಗೆ ಕಾನೂನಿನ ಮಾನ್ಯತೆ ಇದೆ

ಎಜಿ ನಾವದಗಿ ವಾದ ಮುಂದುವರೆಸಿ, ಕಾಲೇಜು ಅಭಿವೃದ್ದಿ ಸಮಿತಿಗೆ ಕಾನೂನಿನ ಮಾನ್ಯತೆ ಇದೆ. ಸರ್ಕಾರ ಫೆ.5 ರ ಆದೇಶ ಹೊರಡಿಸುವ ಕಾರಣ ವಿವರಿಸುತ್ತೇನೆ. ಕಮಿಟಿಯ ಮೆಂಬರ್ಸ್, ಎಂಎಲ್ಎ,  ಪೋಷಕರ ಪರವಾಗಿ ಒಬ್ಬರು, ಮಹಿಳೆಯರ ಪರವಾಗಿ ಒಬ್ಬರು, ವಿದ್ಯಾರ್ಥಿಯ ಪರ ಒಬ್ಬರು, ಕಾಲೇಜು ಪ್ರಿನ್ಸಿಪಾಲ್, ಸಿನಿಯರ್ ಪ್ರೋಫೆಸರ್ ಇದ್ದಾರೆ.  ಶಾಸಕರಲ್ಲದೇ, ಉಪನ್ಯಾಸಕರು, ವಿದ್ಯಾರ್ಥಿಗಳು, ಪರಿಶಿಷ್ಟ ಜಾತಿ ಪಂಗಡಗಳ ಸದಸ್ಯರು ಈ ಸಮಿತಿಯಲ್ಲಿರುತ್ತಾರೆ ಎಂದು ಕಮಿಟಿಯಲ್ಲಿನ ಸಮವಸ್ತ್ರ ಧರಿಸುವ ರೀತಿಯನ್ನು ವಿವರಿಸಿದರು.

1985 ನಿಂದಲೂ ಕಾಲೇಜಿನಲ್ಲಿ ಯುನಿಫಾರ್ಮ್ ಇದೆ

ಡಿ. 31 ರಂದು ಒಂದು ನಿರ್ಧಿಷ್ಟ ವಿದ್ಯಾರ್ಥಿನಿಯರ ಗುಂಪು ಬಂದಿದೆ. ಹಿಜಾಬ್ ಧರಿಸಿಕೊಂಡು ಕಾಲೇಜಿಗೆ ಬರ್ತಾರೆ. ಅಂದಿನಿಂದ ಈ ಹಿಜಾಬ್ ಬಗ್ಗೆ ವಿವಾದ ಶುರುವಾಗಿದೆ. ಆ ಗುಂಪು ಹಿಜಬ್ ಅನುಮತಿ ನೀಡುವಂತೆ ಬಂದಿದ್ದಾರೆ. ಉಡುಪಿಯ ಪಿಯು ಕಾಲೇಜು ವಿದ್ಯಾರ್ಥಿನಿಯರ ಕಾಲೇಜಾಗಿದೆ. 1985 ನಿಂದಲೂ ಕಾಲೇಜಿನಲ್ಲಿ ಯುನಿಫಾರ್ಮ್ ಧರಿಸಿ ಬರ್ತಿದ್ದಾರೆ. ಸಹೋದರತ್ವ ಭಾವನೆಯಿಂದ ಇರಬೇಕೆಂದು ಸಮವಸ್ತ್ರ ನಿಗದಿಯಾಗಿದೆ. 956 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದು 8ನೇ ತರಗತಿಯಿಂದ 2nd ಪಿಯಸಿ ವರೆಗೂ ವಿದ್ಯಾಭ್ಯಾಸ ನೀಡಲಾಗುತ್ತಿದೆ.

ಅರ್ಜಿದಾರರ ಹಕ್ಕಿಗೆ ಧಕ್ಕೆಯಾಗಿಲ್ಲ

ಈ ಬೆಳವಣಿಗೆಯ ಬಗ್ಗೆ CDC ಪರಿಶೀಲಿಸಲು ಮುಂದಾಗುತ್ತೆ. ಆಗ ವಿದ್ಯಾರ್ಥಿಯರ ಪೋಷಕರು ಬಂದು ಹಿಜಾಬ್ ಧರಿಸಲು ಅನುಮತಿ ಕೇಳಿದ್ದಾರೆ. ಆದರಂತೆ ಜ.1 2022 ರಂದು ಸಭೆಯನ್ನು ಸಹ ಮಾಡಲಾಗಿತ್ತು. ಶಾಸಕರ ನೇತೃತ್ವದ  ಸಿಡಿಸಿ ಕಮಿಟಿ ಅದು. 6 ಸದಸ್ಯರ ಉನ್ನತ ಸಭೆ ಪರಿಶೀಲನೆ ನಡೆಸಬೇಕು. ಆ ಸಮಿತಿಯ ವರದಿ ಬರುವತನಕ ಯಾಥಾಸ್ಥಿತಿ ಮುಂದುವರೆಸಲು ಸರ್ಕಾರ ನಿರ್ಧರಿಸಿತ್ತು‌. ಆಗಾಗಿ ಈ ಕೇಸ್ ನಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡಬೇಕಾಗಿತ್ತು. ಒಂದು ಕಮಿಟಿ ರಚಿಸಿ ಅದರ ವರದಿ ಪಡೆಯಲು ಸರ್ಕಾರ ನಿರ್ಧಾರ ಮಾಡಲಾಗಿತ್ತು. ಸರ್ಕಾರ ಆದೇಶ ನೀಡುವಷ್ಟರಲ್ಲಿ ಇದು ಸಾಕಷ್ಟು ವ್ಯಾಪಕತೆ ಪಡೆದುಕೊಂಡಿತು. ಹೀಗಾಗಿ ಸರ್ಕಾರ ಫೆ.5 ರಂದು ಈ ಆದೇಶ ಹೊರಡಿಸಬೇಕಾಯಿತು. ಫೆ.5 ರ ಸರ್ಕಾರಿ ಆದೇಶದಿಂದ ಅರ್ಜಿದಾರರ ಹಕ್ಕಿಗೆ ಧಕ್ಕೆಯಾಗಿಲ್ಲ ಎಂದು ಎಜಿ ಶಿಕ್ಷಣ ಕಾಯ್ದೆ ಬಗ್ಗೆ ಕೋರ್ಟ್ ಗಮನಕ್ಕೆ ತಂದರು.

ಎಜಿಗೆ ನ್ಯಾಯಮೂರ್ತಿಗಳ ಪ್ರಶ್ನೆ

ಸರ್ಕಾರದ ಫೆ.5 ರ ಆದೇಶದಲ್ಲಿ ತೀರ್ಪುಗಳನ್ನು ಉಲ್ಲೇಖಿಸಲಾಗಿದೆ, ಹಿಜಾಬ್ ಕಡ್ಡಾಯವಲ್ಲವೆಂದು ಏಕೆ ಹೇಳಿದ್ದೀರಿ ಎಂದು ಸಿಜೆ ಪ್ರಶ್ನಿಸಿದರು. ಸರ್ಕಾರದ ಆದೇಶದಲ್ಲಿ ಇದನ್ನು ಹೇಳುವ ಅಗತ್ಯವೇನಿತ್ತು . ಯಾವುದಾದ್ರೂ ಕಾಲೇಜಿನ ಕಮಿಟಿ ಹಿಜಾಬ್ ಗೆ ಅನುಮತಿ ನೀಡಿದ್ರೆ ನಿಮ್ಮ ಅಭಿಪ್ರಾಯವೇನು. ಸಾವಿರಾರು ಅರ್ಜಿಗಳು ದಾಖಲಾಗಬೇಕೆಂದು ಬಯಸುತ್ತೀರಾ ಎಂದು ಸರ್ಕಾರಕ್ಕೆ ನ್ಯಾ.ಕೃಷ್ಣ ದೀಕ್ಷಿತ್ ಪ್ರಶ್ನಿಸಿದರು. ಹಿಜಾಬ್ ಬಗ್ಗೆ ನಿಮ್ಮ ನಿಲುವನ್ನು ಸ್ಪಷ್ಟಪಡಿಸಿಲ್ಲ. ಸರ್ಕಾರಿ ಆದೇಶದಲ್ಲಿ ನೇರವಾಗಿ ಹೇಳಿಲ್ಲ ಎಂದು ನ್ಯಾಯಮೂರ್ತಿ ಕೇಳಿದರು.

ಇದನ್ನೂ ಓದಿ: Hijab Row: ಉಡುಪಿಯ MGM ಕಾಲೇಜಿನ PUC ಪ್ರಾಯೋಗಿಕ ಪರೀಕ್ಷೆ ಮುಂದೂಡಿಕೆ; ನಿಲ್ಲದ ಹಿಜಾಬ್ ಗೊಂದಲ

ಇದಕ್ಕೆ ಉತ್ತರಿಸಿದ ಎಜಿ ಸರ್ಕಾರ ಧಾರ್ಮಿಕ ವಿಚಾರದಲ್ಲಿ ಮಧ್ಯಪ್ರವೇಶಿಸಲು ಬಯಸಿರಲಿಲ್ಲ ಎಂದರು. ಸರ್ಕಾರದ ಆದೇಶದಲ್ಲಿರುವ ವಿವರಣೆ ಆಪೇಕ್ಷಿಸಿ ಸಮಿತಿ ನಿರ್ಧರಿಸಬಹುದೇ ಎಂದು ಸರ್ಕಾರಕ್ಕೆ ನ್ಯಾ.ಕೃಷ್ಣ ದೀಕ್ಷಿತ್ ಪ್ರಶ್ನಿಸಿದರು. ಆರ್ಟಿಕಲ್ 25 ಅಡಿ ಉಲ್ಲಂಘನೆ ಅಗಲ್ಲ ಅಂತ ಸರ್ಕಾರ ಹೇಳಿದ್ದರ ಬಗ್ಗೆ ಎಜಿ ಉತ್ತರಿಸಿದರು. ನಾವು ಆ ತೀರ್ಪುಗಳ ಬಗ್ಗೆ ಉಲ್ಲೇಖ ಮಾಡಬಾರದಿತ್ತು. ಈ ಘಟನೆ ದಿನೇ ದಿನೇ ಬೇರೆ ಬೇರೆ ಆಯಾಮ ಪಡೆದಿಕೊಂಡಿತ್ತು.  ಹೀಗಾಗಿ ಸರ್ಕಾರ ಈ ಜಿಓ ಬಿಡುಗಡೆ ಮಾಡಬೇಕಾಗಿತ್ತು ಎಂದು ಕೋರ್ಟ್​ಗೆ ವಿವರಿಸಿದರು.

ಆದೇಶವನ್ನು ಅದರಲ್ಲಿ ಹೇಳಿರುವಂತೆ ಅರ್ಥ ಮಾಡಿಕೊಳ್ಳಬೇಕು, ಅದನ್ನ ಬಿಟ್ಟು ನಂತರ ಸುಧಾರಿಸಲು ಸಾಧ್ಯವಿಲ್ಲ ಅಲ್ಲವೇ ಎಂದು ನ್ಯಾ. ಕೃಷ್ಣ ಎಸ್ ದೀಕ್ಷಿತ್ ಪ್ರಶ್ನಿಸಿದರು. ಮೊದಲಿಗೆ ಸರ್ಕಾರಕ್ಕೆ ಸಮವಸ್ತ್ರ ಸಂಹಿತೆ ತರುವ ಉದ್ದೇಶವಿರಲಿಲ್ಲ.  ಶಿಕ್ಷಣ ಕಾಯ್ದೆಯನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತರಲಾಗಿದೆ ಎಂದು ಎಜಿ ಉತ್ತರಿಸಿದರು.

ಶಾಸಕರು ಪ್ರಭಾವ ಬೀರೋದಿಲ್ಲವೇ?

ಶಾಸಕರು, ವಿದ್ಯಾರ್ಥಿಗಳು ಪೋಷಕರು , ಶಿಕ್ಷಕರು ಸೇರಿದಂತೆ ಎಲ್ಲರು ಕಾಲೇಜಿನ ಸಮಿತಿಯಲ್ಲಿರ್ತಾರೆ. ಒಂದು ಬಾರಿ ಒಂದೊಂದು ಪಕ್ಷದವರು ಶಾಸಕರಾಗಿ ಆಯ್ಕೆಯಾಗುತ್ತಾರೆ. ಶಾಸಕರಾದವರನ್ನು ಸಮಿತಿ ಅಧ್ಯಕ್ಷರಾಗಿ ಮಾಡಬಹುದೇ. ಅವರ ರಾಜಕೀಯ ಚಿಂತನೆಗಳು ಶಿಕ್ಷಣ ಸಂಸ್ಥೆಗಳ ಮೇಲೆ ಪರಿಣಾಮ ಬೀರುವುದಿಲ್ಲವೇ ಎಂದು ರಾಜ್ಯ ಸರ್ಕಾರಕ್ಕೆ ಪ್ರಶ್ನಿಸಿದ ನ್ಯಾ.ಕೃಷ್ಣ ದೀಕ್ಷಿತ್ , ಇದು ಅರ್ಜಿದಾರರ ಪ್ರಶ್ನೆ ನನ್ನದಲ್ಲ ಎಂದರು. ಅಲ್ಲದೇ ಉಪಾದ್ಯಕ್ಷನನ್ನು ಆಯ್ಕೆ ಅಧಿಕಾರವು ಅವರ ಬಳಿಯೇ ಇದೆ. ಹೀಗಿದ್ದಾಗ ಹೇಗೆ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಕೋರ್ಟ್​ ಪ್ರಶ್ನಿಸಿರು. ಇದನ್ನ ಎಂಎಲ್ಎ ನಿರ್ಧಾರ ಮಾಡ್ತಾ ಇಲ್ಲ ಎಂದು ಎಜಿ ವಿವರಿಸಿದರು. ಹಿಜಾಬ್ ಧಾರಣೆ ಆತ್ಯಗತ್ಯ ಆಚರಣೆ ಅಲ್ಲಾ ಎನ್ನುವುದಕ್ಕೆ ನಾನು ಸೋಮವಾರ ವಾದಿಸುತ್ತೇನೆ ಎಂದು ಕೋರ್ಟ್​​ಗೆ ಹೇಳಿದರು.
Published by:Kavya V
First published: