ಓಮಿಕ್ರಾನ್ ಸೋಂಕಿಗೆ ತುತ್ತಾಗಿರುವ ಡಾಕ್ಟರ್​​ ಸ್ಥಿತಿ ಹೇಗಿದೆ? ಆರೋಗ್ಯ ಸಚಿವ ಸುಧಾಕರ್ ಹೇಳಿದ್ದೇನು?

2ನೇ ಸೋಂಕಿತ ವ್ಯಕ್ತಿ 46 ವರ್ಷದ ವೈದ್ಯರಾಗಿದ್ದಾರೆ. ಅವರು  ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡ್ತಿದ್ದರು, ಅವರ ಸಿಪಿ ವ್ಯಾಲ್ಯೂ ಕಡಿಮೆಯಾಗಿತ್ತು. ಅನುಮಾನದಿಂದ ಜಿನೋಮಿಕ್ ಸೀಕ್ವೆನ್ಸ್ ಗೆ ಕಳಿಸಲಾಗಿತ್ತು. ಇಂದು ಅವರ ಟೆಸ್ಟ್  ರಿಪೋರ್ಟ್​​ ಪಾಸಿಟಿವ್ ಬಂದಿದೆ.

ಆರೋಗ್ಯ ಸಚಿವ ಡಾ.ಕೆ.ಸುಧಾಕರ್

ಆರೋಗ್ಯ ಸಚಿವ ಡಾ.ಕೆ.ಸುಧಾಕರ್

  • Share this:
ಬೆಂಗಳೂರು: ಕೊರೊನಾದ ಬಹು ರೂಪಾಂತರಿ ಓಮಿಕ್ರಾನ್​​ (Omicron) ಸೋಂಕು ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಲ್ಲಿ ಪತ್ತೆಯಾಗಿದೆ. ರಾಜ್ಯ ರಾಜಧಾನಿಯಲ್ಲಿ 2 ಓಮಿಕ್ರಾನ್​ ಪಾಸಿಟಿವ್​ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಕೆ.ಸುಧಾಕರ್​ (Health Minister K Sudhakar) ವಿಧಾನಸೌಧದಲ್ಲಿ ಸುದ್ದಿಗೋಷ್ಠಿ (Press meet ) ನಡೆಸಿದರು. ಎರಡು ಮೂರು ದಿನದಿಂದ ರಿಪೋರ್ಟ್ ಗೆ ವೇಯ್ಟ್ ಮಾಡ್ತಿದ್ದೆವು. ಇಬ್ಬರ ಸ್ಯಾಂಪಲ್ಸ್ ಪಾಸಿಟಿವ್ ಬಂದಿದೆ. ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ವೈರಸ್ಸೇ ಬೆಂಗಳೂರಲ್ಲಿ ಪತ್ತೆಯಾಗಿದೆ. ದೇಶದಲ್ಲೇ ಎರಡು ಪ್ರಕರಣ ನಮ್ಮ ರಾಜ್ಯದಲ್ಲಿ ಪತ್ತೆಯಾಗಿದೆ, ನಮ್ಮ ಅಗ್ರೆಸ್ಸಿವ್ ಟೆಸ್ಟಿಂಗ್ ಆ ರೀತಿಯಿದೆ. ಸೌತ್ ಆಫ್ರಿಕಾ ಮೂಲದ ವ್ಯಕ್ತಿಯನ್ನ ಟೆಸ್ಟ್ ಮಾಡಲಾಗಿತ್ತು, ಅವರಿಗೆ ಯಾವುದೇ ಸಿಕ್ವೇನ್ಸ್ ಇರಲಿಲ್ಲ. ಖಾಸಗಿ ಲ್ಯಾಬ್ ನಲ್ಲಿ ಟೆಸ್ಟ್ ಮಾಡಲಾಗಿತ್ತು, ಆಗಲೂ ಅವರದ್ದು ನೆಗೆಟೀವ್ ಬಂದಿತ್ತು. ಈ ಹಿನ್ನೆಲೆ ಅವರು ನ.27ರಂದು ದುಬೈಗೆ ತೆರಳಿದ್ದರು. ದುಬೈಗೆ ತೆರಳಿದ ವ್ಯಕ್ತಿಯ ಪ್ರೈಮರಿ ಕಾಂಟಾಕ್ಟ್ ಟೆಸ್ಟ್ ಮಾಡಲಾಗಿದೆ ಎಂದು ಯಿಳಿಸಿದರು.  

ಟ್ರಾವೆಲ್​ ಹಿಸ್ಟರಿ ಇಲ್ಲದಿದ್ದರೂ ಸೋಂಕು

ಇನ್ನು 2ನೇ ಸೋಂಕಿತ ವ್ಯಕ್ತಿ 46 ವರ್ಷದ ವೈದ್ಯರಾಗಿದ್ದಾರೆ. ಅವರು  ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡ್ತಿದ್ದರು, ಅವರ ಸಿಪಿ ವ್ಯಾಲ್ಯೂ ಕಡಿಮೆಯಾಗಿತ್ತು. ಅನುಮಾನದಿಂದ ಜಿನೋಮಿಕ್ ಸೀಕ್ವೆನ್ಸ್ ಗೆ ಕಳಿಸಲಾಗಿತ್ತು. ಇಂದು ಅವರ ಟೆಸ್ಟ್  ರಿಪೋರ್ಟ್​​ ಪಾಸಿಟಿವ್ ಬಂದಿದೆ. ಆಫ್ರಿಕಾದಿಂದ ಬಂದವರಿಗೆ ಟ್ರಾವೆಲ್ ಇಸ್ಟರಿ ಇತ್ತು, ಆದರೆ ವೈದ್ಯರಿಗೆ ಟ್ರಾವೆಲ್ ಹಿಸ್ಟರಿ ಇರಲಿಲ್ಲ. ಅವರ ಪ್ರಾಥಮಿ, ದ್ವೀತಿಯ ಸಂಪರ್ಕಿತರನ್ನ ಟೆಸ್ಟ್ ಮಾಡಲಾಗಿದೆ. ಅವರಲ್ಲಿ 5 ಮಂದಿ ಕೊರೊನಾ ಪಾಸಿಟಿವ್ ಬಂದಿದೆ. ಎಲ್ಲರನ್ನ ನಮ್ಮ ಸರ್ಕಾರಿ ಆಸ್ಪತ್ರೆಯಲ್ಲಿಡಲಾಗಿದೆ. ಅವರಲ್ಲಿ ಸೌಮ್ಯ ರೋಗ ಲಕ್ಷಣಗಳು ಕಾಣಿಸಿಕೊಂಡಿದೆ. ಯಾರಲ್ಲೂ ಯಾವುದೇ ಗಂಭೀರ ಲಕ್ಷಣ ಕಂಡಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: Omicron ಸೋಂಕಿತರಿಬ್ಬರೂ 2 ಡೋಸ್ ಲಸಿಕೆ ಪಡೆದಿದ್ದರು; ಬೆಂಗಳೂರಲ್ಲಿ ಸದ್ಯ 1 ಓಮಿಕ್ರಾನ್ ಕೇಸ್ ಮಾತ್ರ ಇರೋದು

ಪಾಸಿಟಿವ್ ಇರುವವರಿಗೆ ಗಂಭೀರ ಲಕ್ಷಣಗಳಿಲ್ಲ

ಇನ್ನು ಓಮಿಕ್ರಾನ್​​ ಸೋಂಕು ಪತ್ತೆ ಹಿನ್ನೆಲೆಯಲ್ಲಿ, ದೊಡ್ಡ ಸಮಾರಂಭಗಳಿಗೆ ಕಡಿವಾಣ ಹಾಕಬೇಕಿದೆ. ಒಳಾಂಗಣ ಕಾರ್ಯಕ್ರಮಕ್ಕೂ ಬ್ರೇಕ್ ಹಾಕಬೇಕಿದೆ. ಎಲ್ಲರು ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು, ಆದರೆ ಈ ಹೊಸ ವೈರಸ್ ಗಂಭೀರತೆಯಿಲ್ಲ. ಪಾಸಿಟಿವ್ ಇರುವವರಿಗೆ ಗಂಭೀರ ಲಕ್ಷಣಗಳಿಲ್ಲ, ಆದರೂ ಇದರ ತೀವ್ರತೆ ಪರಿಶೀಲನೆ ಮಾಡ್ತಿದ್ದೇವೆ. ಮುಂದೆ ಏನು ತೆಗೆದುಕೊಳ್ಳಬೇಕು ಗಮನ ಹರಿಸ್ತೇವೆ ಎಂದರು.

ಸಿಎಂ ಬಂದ ಬಳಿಕ ಮಾರ್ಗಸೂಚಿ

ಸಿಎಂ ಕೂಡ ಕೇಂದ್ರ ಆರೋಗ್ಯ ಸಚಿವರ ಜೊತೆ ಚರ್ಚಿಸಿದ್ದಾರೆ. ನಾಳೆ ರಾಜ್ಯಕ್ಕೆ ವಾಪಾಸಾದ ಮೇಲೆ ಸಭೆ ಮಾಡ್ತಾರೆ. ಆರೋಗ್ಯಾಧಿಕಾರಿಗಳು,ಬಿಬಿಎಂಪಿ ಜೊತೆ ಮಾಡಲಿದ್ದಾರೆ. ಜನರು ಯಾವುದೇ ಆತಂಕ ಪಡುವುದು ಬೇಡ. ನಮ್ಮ ಮುನ್ನೆಚ್ಚರಿಕೆ ನಾವು ತೆಗೆದುಕೊಳ್ಳೋಣ, ಊಹಾಪೋಹಕ್ಕೆ ಒಳಗಾಗುವುದು ಬೇಡ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು. ಬೆಳಗಾವಿ ಅಧಿವೇಶನದ ವಿಚಾರವೂ ಸಿಎಂ ಬಂದ ಮೇಲೆ ಚರ್ಚೆ ಮಾಡ್ತೀವಿ. ಸಿಎಂ ಬಂದ ಬಳಿಕ ನಾಳಿನ ಸಭೆ ಬಗ್ಗೆ  ಗೊತ್ತಾಗಲಿದೆ. ಮಾರ್ಗಸೂಚಿಗಳ ಬಗ್ಗೆ ನಾಳೆ ಸಭೆ ಬಳಿಕ ತೀರ್ಮಾನ ಮಾಡಲಾಗುವುದು ಎಂದರು.

ಇದನ್ನೂ ಓದಿ: ಭಾರತಕ್ಕೆ ಕಾಲಿಟ್ಟೇ ಬಿಡ್ತು ಓಮಿಕ್ರಾನ್ ವೈರಸ್: ಬೆಂಗಳೂರಲ್ಲಿ 2 Omicron ಕೇಸ್​ ದೃಢ

ಇಬ್ಬರು ಓಮಿಕ್ರಾಸ್​​ ಸೋಂಕಿತರು ಎರಡು ಡೋಸ್ ಹಾಕಿಸಿಕೊಂಡಿದ್ದಾರೆ. 11 ದೇಶಗಳಲ್ಲಿ ರಿಪೋರ್ಟ್ ಬರ್ತಿದೆ, ಇದರ ತೀರ್ವತೆ ಕಡಿಮೆ ಇದೆ ಎಂದು ಹೇಳಿದ್ದಾರೆ. ಈಗಲೇ ನಾವು ಅಧಿಕೃತವಾಗಿ ಹೇಳಲಾಗಲ್ಲ. ವಿಶ್ವ ಆರೋಗ್ಯ ಸಂಸ್ಥೆ ಅಧಿಕೃತವಾಗಿ ಹೇಳಬೇಕು ಎಂದರು.

ಬಿಬಿಎಂಪಿ ಫುಲ್​ ಅಲರ್ಟ್​

ಇನ್ನು ಬೆಂಗಳೂರಿಲ್ಲಿ ಓಮಿಕ್ರಾನ್​ ಪತ್ತೆಯಾಗುತ್ತಿದ್ದಂತೆ ಬಿಬಿಎಂಪಿ ಫುಲ್​ ಅಲರ್ಟ್​​ ಆಗಿದೆ. ಸುದ್ದಿಗೋಷ್ಠಿ ನಡೆಸಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಸೋಂಕಿತರನ್ನು ಐಸೋಲೇಟ್​ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಾಥಮಿಕ ಹಾಗೂ ಸೆಕೆಂಡರಿ ಸಂಪರ್ಕಿತರನ್ನು ಹುಡುಕಿ ಐಸೋಲೇಷನ್​ಗೆ ಒಳಪಡಿಸಲಾಗುವುದು ಎಂದು ತಿಳಿಸಿದರು.
Published by:Kavya V
First published: