Twitter India MD ಮನೀಶ್ ಮಹೇಶ್ವರಿಗೆ ರಿಲೀಫ್: ಯುಪಿ ಪೊಲೀಸ್ ವಿರುದ್ಧ ಕರ್ನಾಟಕ ಹೈಕೋರ್ಟ್ ಗರಂ

Twitter MD Manish Maheshwari : ಟ್ವಿಟ್ಟರ್​ನಲ್ಲಿನ ಕಂಟೆಂಟ್​​ ವಿಷಯ, ಸುಳ್ಳು ಸುದ್ದಿ ಪ್ರಸರಣಕ್ಕೂ ನನ್ನ ಕಕ್ಷಿದಾರರಿಗೂ ಯಾವುದೇ ಸಂಬಂಧವಿಲ್ಲ. ಟ್ವಿಟ್ಟರ್​ ಕಂಟೆಂಟ್​ ಮೇಲೆ ಮನೀಶ್​ ನಿಯಂತ್ರಣವಿರುವುದಿಲ್ಲ. ಹೀಗಾಗಿ ಸಮನ್ಸ್​​​ ರದ್ದುಗೊಳಿಸಬೇಕು ಎಂದು ವಾದ ಮಂಡಿಸಿದ್ದರು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಬೆಂಗಳೂರು: ಯುಪಿ ಪೊಲೀಸರಿಂದ ಬಂಧನ ಭೀತಿ ಎದುರಿಸುತ್ತಿದ್ದ ನಗರದ ನಿವಾಸಿ ಟ್ವಿಟ್ಟರ್​ ಇಂಡಿಯಾದ ಎಂಡಿ ಮನೀಶ್​ ಮಹೇಶ್ವರಿಗೆ ಕರ್ನಾಟಕ ಹೈಕೋರ್ಟ್​​ನಿಂದ ರಿಲೀಫ್​​ ಸಿಕ್ಕಿದೆ. ಉತ್ತರ ಪ್ರದೇಶ ಪೊಲೀಸರು ನೀಡಿದ್ದ ಸಮನ್ಸ್​​​​ ಸಂಬಂಧ ವಿಚಾರಣೆ ನಡೆಸಿದ ಹೈಕೋರ್ಟ್​​​​ ತನಿಖೆ ಸಂಬಂಧ ಪೊಲೀಸರಿಂದ ಕಿರುಕುಳ ಆಗಬಾರದು ಎಂದು ಅಭಿಪ್ರಾಯಪಟ್ಟಿದೆ. ಮನೀಶ್​ ಅವರ ವಿಚಾರಣೆಯನ್ನು ವರ್ಚುವಲ್​ ಮೂಲಕ ಮಾಡಬಹುದು ಎಂದು ಸೂಚಿಸಿದೆ. ವಿಚಾರಣೆ ಹಾಜರಾಗಬೇಕು ಎಂದು ಯುಪಿ ಪೊಲೀಸರು ನೀಡಿದ್ದ ನೋಟಿಸ್​ನ ಕೋರ್ಟ್​ ವಜಾ ಮಾಡಿ ಆದೇಶ ಹೊರಡಿಸಿದೆ.

ಗಾಜಿಯಾಬಾದ್​ನಲ್ಲಿ ಮುಸ್ಲಿಂ ವ್ಯಕ್ತಿ ಮೇಲೆ ಹಲ್ಲೆ ಮಾಡಿ, ಗಡ್ಡ ಬೋಳಿಸಿದ ಘಟನೆ ಸಂಬಂಧ ಟ್ವಿಟ್ಟರ್​ನಲ್ಲಿ ವಿಡಿಯೋ ಶೇರ್​​ ಆಗಿತ್ತು. ಈ ವಿಡಿಯೋಗೆ ಸಂಬಂಧಿದಂತೆ ಟ್ವಿಟ್ಟರ್​ ಇಂಡಿಯಾ ಎಂಡಿ ಮನೀಶ್​ ಮಹೇಶ್ವರಿಗೆ ಗಾಜಿಯಾಬಾದ್​ ಪೊಲೀಸರು ನೋಟಿಸ್​ ನೀಡಿದ್ದರು. ಮನೀಶ್​ ಪರ ವಾದ ಮಂಡಿಸಿದ ವಕೀಲರು, ತನ್ನ ಕಕ್ಷಿದಾರರು ಟ್ವಿಟ್ಟರ್​ ಇಂಡಿಯಾದ ಮಾರ್ಕೆಟಿಂಗ್​, ಸೇಲ್ಸ್​ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಾರೆ. ಮನೀಷ್​ ಟ್ವಿಟ್ಟರ್​ ಇಂಡಿಯಾ ಮುಖ್ಯಸ್ಥರಲ್ಲ. ಟ್ವಿಟ್ಟರ್​ನಲ್ಲಿನ ಕಂಟೆಂಟ್​​ ವಿಷಯ, ಸುಳ್ಳು ಸುದ್ದಿ ಪ್ರಸರಣಕ್ಕೂ ನನ್ನ ಕಕ್ಷಿದಾರರಿಗೂ ಯಾವುದೇ ಸಂಬಂಧವಿಲ್ಲ. ಟ್ವಿಟ್ಟರ್​ ಕಂಟೆಂಟ್​ ಮೇಲೆ ಮನೀಶ್​ ನಿಯಂತ್ರಣವಿರುವುದಿಲ್ಲ. ಹೀಗಾಗಿ ಸಮನ್ಸ್​​​ ರದ್ದುಗೊಳಿಸಬೇಕು ಎಂದು ವಾದ ಮಂಡಿಸಿದ್ದರು.

ವಿಚಾರಣೆ ನಡೆಸುವುದಾದರೆ ವರ್ಚುವಲ್​ ಮೂಲಕ ನಡೆಸಬೇಕು. ಅದನ್ನು ಬಿಟ್ಟು ನೋಟಿಸ್​ ಕೊಟ್ಟು ವಿಚಾರಣೆಗೆ ಹಾಜರಾಗಿ ಎನ್ನುವುದು ಕಿರುಕುಳ ಕೊಟ್ಟಂತೆ ಎಂದು ಕೋರ್ಟ್​​ ಅಭಿಪ್ರಾಯಪಟ್ಟಿದೆ. ಮನೀಶ್​ ಅವರ ವಿರುದ್ಧ ಸಿಆರ್​ಪಿಸಿ 41ಎ ನೋಟಿಸನ್ನು ಸಿಆರ್​ಪಿಸಿ 160ಕ್ಕೆ ಮಾರ್ಪಾಡು ಮಾಡುವಂತೆ ಕೋರ್ಟ್​​ ಸೂಚಿಸಿದೆ. ಇದರಿಂದ ಮನೀಷ್​ ಅವರಿಗೆ ಬಿಗ್​ ರಿಲೀಫ್​​ ಸಿಕ್ಕಂತಾಗಿದೆ.

ಇದನ್ನೂ ಓದಿ : ICSE, ISC Board Results: ನಾಳೆ 10 ಮತ್ತು 12ನೇ ತರಗತಿ ಬೋರ್ಡ್ ಫಲಿತಾಂಶ

ಗಾಜಿಯಾಬಾದ್ ಪೊಲೀಸರು ಜೂನ್ 17ರಂದು ಕ್ರಿಮಿನಲ್ ಪ್ರೊಸೀಜರ್ ಕೋಡ್ ಅನ್ವಯ ನನ್ನನ್ನು ಸಾಕ್ಷಿ ಎಂದು ಉಲ್ಲೇಖಿಸಿ ನೊಟೀಸ್ ಕಳಿಸಿದ್ದರು. ಆದರೆ ಎರಡು ದಿನಗಳ ನಂತರ ಸಿಆರ್ಪಿಸಿ ಸೆಕ್ಷನ್ 41ರ ಪ್ರಕಾರ ಮತ್ತೊಂದು ನೊಟೀಸ್ ಜಾರಿ ಮಾಡಿದರು. ಈ ಸೆಕ್ಷನ್ ಅನ್ವಯ ನೊಟೀಸ್ ಜಾರಿಯಾದರೆ ಸಮನ್ಸ್ ಜಾರಿ ದಾಖಲೆಯಲ್ಲಿರುವ ಹೆಸರಿನವರನ್ನು ಬಂಧಿಸಲು ಅವಕಾಶ ಇರುತ್ತದೆ.

ಬೆಂಗಳೂರು ನಿವಾಸಿ ಮಹೇಶ್ವರಿ ಬುಧವಾರ ಉತ್ತರ ಪ್ರದೇಶ ಪೊಲೀಸರು ಜಾರಿ ಮಾಡಿರುವ ಸಮನ್ಸ್ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಆರೋಪಗಳಿಗೂ ನನಗೂ ಯಾವುದೇ ಸಂಬಂಧವಿಲ್ಲ. ಯಾರೋ ಆರೋಪಿಗಳು ವಿಡಿಯೊ ಅಪ್ಲೋಡ್ ಮಾಡಿದ್ದರೆ, ಅವರು ನನ್ನ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ ಎಂದು ಮಹೇಶ್ವರಿ ಹೇಳಿದ್ದರು.
Published by:Kavya V
First published: