ಕರ್ನಾಟಕದಲ್ಲಿ ಬಲವಂತದ ಮತಾಂತರಕ್ಕೆ ಬ್ರೇಕ್ ಹಾಕಲು ಕ್ರಮ: ಶೀಘ್ರವೇ ಕ್ರೈಸ್ತ ಮಿಷನರಿಗಳ ಸಮೀಕ್ಷೆ

Christian missionaries survey: ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಪ್ರಕಾರ, ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಶೇಕಡಾ 40 ರಷ್ಟು ಚರ್ಚುಗಳಿಗೆ ಅಧಿಕೃತ ಮಾನ್ಯತೆ ಇಲ್ಲ. "ಈ ನಿಟ್ಟಿನಲ್ಲಿ ಅಂಕಿಅಂಶಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Religious conversions in Karnataka: ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು(Backward Classes and Minorities Welfare Department ) ತನ್ನ ವ್ಯಾಪ್ತಿಯೊಳಗೆ ಕಾರ್ಯನಿರ್ವಹಿಸುತ್ತಿರುವ ಅಧಿಕೃತ ಮತ್ತು ಅಧಿಕೃತವಲ್ಲದ ಕ್ರಿಶ್ಚಿಯನ್ ಮಿಷನರಿಗಳನ್ನು ಸಮೀಕ್ಷೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದೆ. ರಾಜ್ಯದಲ್ಲಿ ಪ್ರಚಲಿತದಲ್ಲಿರುವ ಧಾರ್ಮಿಕ ಮತಾಂತರದ ಚರ್ಚೆಗಳ ಮಧ್ಯೆ ಈ ಆದೇಶವನ್ನು ಹೊರಡಿಸಿರುವುದು ಸಾಕಷ್ಟ ಮಹತ್ವ ಪಡೆದುಕೊಂಡಿದೆ. ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯು ವಿಕಾಸ ಸೌಧದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಶಾಸಕರಾದ ಪುಟ್ಟರಂಗ ಸೆಟ್ಟಿ, ಬಿ.ಎಂ. ಫಾರೂಕ್, ಗೂಳಿಹಟ್ಟಿ ಶೇಖರ್, ಅಶೋಕ್ ನಾಯಕ್, ವಿರುಪಾಕ್ಷಪ್ಪ ಬಳ್ಳಾರಿ ಮತ್ತು ಇತರರು ಸಭೆಯಲ್ಲಿ ಭಾಗವಹಿಸಿದರು. ಸಭೆಯಲ್ಲಿ ಧಾರ್ಮಿ ಮತಾಂತರದ  ವಿಷಯದ ಬಗ್ಗೆ ಚರ್ಚಿಸಿದರು. 

ಶೇಕಡಾ 40 ರಷ್ಟು ಚರ್ಚುಗಳಿಗೆ ಇಲ್ಲ..!?

ಮಿಷನರಿಗಳಿಗೆ ಲಭ್ಯವಿರುವ ಸರ್ಕಾರದ ಸೌಲಭ್ಯಗಳ ಬಗ್ಗೆಯೂ ಚರ್ಚಿಸಲಾಯಿತು. ಸಮಿತಿಯು ಕ್ರಿಶ್ಚಿಯನ್ ಮಿಷನರಿಗಳ ನೋಂದಣಿಯ ಬಗ್ಗೆ ಪ್ರಸ್ತಾಪಿಸಿತು. ಮತಾಂತರಗೊಂಡವರಿಗೆ ಸರ್ಕಾರದ ಸೌಲಭ್ಯಗಳನ್ನು ಹಿಂಪಡೆಯಲು ಸಹ ಪ್ರಸ್ತಾಪಿಸಲಾಯಿತು.  ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಪ್ರಕಾರ, ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಶೇಕಡಾ 40 ರಷ್ಟು ಚರ್ಚುಗಳಿಗೆ ಅಧಿಕೃತ ಮಾನ್ಯತೆ ಇಲ್ಲ. "ಈ ನಿಟ್ಟಿನಲ್ಲಿ ಅಂಕಿಅಂಶಗಳನ್ನು ಸಂಗ್ರಹಿಸಲಾಗುತ್ತಿದೆ. ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅನಧಿಕೃತ ಮಿಷನರಿಗಳ ಬಗ್ಗೆ ಸಮಿತಿಯು ಚರ್ಚಿಸಿದೆ" ಎಂದು ಅವರು ಹೇಳಿದರು.

ಶಾಸಕರ ತಾಯಿಯೂ ಮತಾಂತರವಾಗಿದ್ದಾರೆ

ಗೂಳಿಹಟ್ಟಿ ಶೇಖರ್ ಅವರು ಮಳೆಗಾಲದ ಅಧಿವೇಶನದಲ್ಲಿ ಧಾರ್ಮಿಕ ಮತಾಂತರದ ವಿಷಯವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದರು. ತಮ್ಮ ತಾಯಿ ಮತಾಂತರಗೊಂಡಿರುವ ಬಗ್ಗೆ ಸದನದಲ್ಲಿ ಮಾತನಾಡಿದ್ದರು.  ತಮ್ಮ ತಾಯಿ ಅರಿವಿಲ್ಲದೆ ಮತಾಂತರಗೊಂಡರು ಮತ್ತು ಕ್ರಿಶ್ಚಿಯನ್ ಮಿಷನರಿಗಳು ತಮ್ಮ ಮತಾಂತರ ಚಟುವಟಿಕೆಗಳನ್ನು ಪ್ರಶ್ನಿಸಿದವರ ಮೇಲೆ ಸುಳ್ಳು ದೌರ್ಜನ್ಯ ಮತ್ತು ಅತ್ಯಾಚಾರ ಆರೋಪಗಳನ್ನು ಹೊರಿಸಿದರು.  ಹೊಸದುರ್ಗ ಬಿಜೆಪಿ ಶಾಸಕರು ತಮ್ಮ ತಾಯಿ ತನ್ನ ಮನೆಯಲ್ಲಿ ಹಿಂದೂ ದೇವರನ್ನು ಪೂಜಿಸಲು ಯಾರಿಗೂ ಬಿಡುವುದಿಲ್ಲ ಎಂದು ಹೇಳಿದ್ದರು. ಅವರ ಸೆಲ್ ಫೋನಿನ ರಿಂಗ್‌ಟೋನ್ ಅನ್ನು ಕ್ರಿಶ್ಚಿಯನ್ ಪ್ರಾರ್ಥನೆಗಳಿಗೆ ಬದಲಾಯಿಸಿದ್ದಾರೆ ಎಂದು ತಿಳಿಸಿದ್ದರು.

ಶೀಘ್ರವೇ ಹೊಸ ಮತಾಂತರ ವಿರೋಧಿ ಕಾನೂನು

ಕ್ರೈಸ್ತರು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ಅನುಕೂಲವಾಗುವಂತೆ ಶೇಖರ್ 'ಘರ್ ವಾಪ್ಸಿ' ಉಪಕ್ರಮವನ್ನು ಆರಂಭಿಸಿದ್ದಾರೆ.  ಗಮನಾರ್ಹವಾಗಿ, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೆಪ್ಟೆಂಬರ್‌ನಲ್ಲಿ ರಾಜ್ಯದಲ್ಲಿ ಬಲವಂತದ ಮತಾಂತರವನ್ನು ನಿಷೇಧಿಸಲು ಹೊಸ ಮತಾಂತರ ವಿರೋಧಿ ಕಾನೂನನ್ನು ತರಲಾಗುವುದು ಎಂದು ಹೇಳಿದ್ದರು.  "ರಾಜ್ಯದಲ್ಲಿ ಮತಾಂತರದ ಘಟನೆಗಳು ವರದಿಯಾಗುತ್ತಿವೆ. ನಾವು ಸಮಸ್ಯೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದೇವೆ."  ಬಲವಂತದ ಮತಾಂತರದ ವಿರುದ್ಧ ಕಾನೂನುಗಳನ್ನು ತರುವ ಪ್ರಕ್ರಿಯೆಯು ರಾಜ್ಯದಲ್ಲಿ ಆರಂಭವಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: Ayudha Pooja Special: ಮಲ್ಲಿಗೆ ₹1000, ಕನಕಾಂಬರ ₹1500.. ಆಯುಧ ಪೂಜೆಗೆ ಬೆಲೆಯೇರಿಕೆ ಬಿಸಿ

ಈ ಮಧ್ಯೆ ಬ್ಯಾಡರಹಳ್ಳಿಯಲ್ಲಿ ಬಲವಂತದ ಧಾರ್ಮಿಕ ಮತಾಂತರದ ಪ್ರಕರಣದ ಸಂಬಂಧ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ನಾರಾಯಣಸ್ವಾಮಿ ಎಂಬುವರ ಒಡೆತನದ ಕಟ್ಟಡದೊಳಗೆ 20 ಕ್ಕೂ ಹೆಚ್ಚು ಮಕ್ಕಳನ್ನು ಪ್ರಾರ್ಥನೆಯಲ್ಲಿ ಭಾಗವಹಿಸುವಂತೆ ಒತ್ತಾಯಿಸಲಾಗಿದೆ ಎಂದು ವರದಿಗಳು ಬಂದಿವೆ. ದೂರಿನ ಆಧಾರದ ಮೇಲೆ ನಾರಾಯಣಸ್ವಾಮಿ ಅವರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಇತ್ತೀಚೆಗೆ ಯಾದಗಿರಿಯಲ್ಲಿ ಇದೇ ರೀತಿಯ ಘಟನೆ ವರದಿಯಾಗಿದೆ.

ಇನ್ನು ಇಂದು ನೆರೆಯ ಬಾಂಗ್ಲಾದೇಶ(Bangladesh)ದಲ್ಲಿ ಮತ್ತೆ ಹಿಂದೂ ದೇವಾಲಯದ ಮೇಲಿನ ದಾಳಿ ಪ್ರಕರಣ ಮತ್ತೊಂದು ವರದಿಯಾಗಿದೆ. ಬಾಂಗ್ಲಾದೇಶದ ಪೊಲೀಸರ ಪ್ರಕಾರ, ದುರ್ಗಾ ಪೂಜೆ (Durga Puja) ಹಿನ್ನೆಲೆ ಚಾಂದಪುರ ಜಿಲ್ಲೆಯ ಹಾಜಿಗಂಜ್ ಉಪ ಜಿಲ್ಲೆಯ ಕುಮಿಲ್ಲಾ ದೇವಾಲಯದಲ್ಲಿ ಭಕ್ತರು (Hindu Temple) ಸೇರಿದ್ದರು.
Published by:Kavya V
First published: