HOME » NEWS » State » BENGALURU URBAN KARNATAKA GOVT SC ACCEPTED THE VACCINE SHORTAGE AND EXPRESS HELPLESSNESS KVD

ಎಲ್ಲರಿಗೂ ಕೊಡಲು ನಮ್ಮ ಬಳಿ ವ್ಯಾಕ್ಸಿನ್ ಇಲ್ಲ; ಅಸಹಾಯಕತೆ ವ್ಯಕ್ತಪಡಿಸಿದ ಸರ್ಕಾರದ ಮುಖ್ಯಕಾರ್ಯದರ್ಶಿ!

 ರಾಜ್ಯದಲ್ಲಿ 45 ವರ್ಷ ಮೇಲಿನ 86 ಲಕ್ಷ ಜನರಿಗೆ ಫಸ್ಟ್ ಡೋಸ್ ಕೊಡಲಾಗಿದೆ. ಅದರಲ್ಲಿ 22 ಲಕ್ಷ ಜನರಿಗೆ ಸೆಕೆಂಡ್ ಡೋಸ್ ಹಾಕಿದ್ದೇವೆ. ಇನ್ನೂ  65 ಲಕ್ಷ  ಮಂದಿಗೆ 2ನೇ ಡೋಸ್ ಹಾಕಬೇಕಿದೆ.

Kavya V | news18-kannada
Updated:May 12, 2021, 2:36 PM IST
ಎಲ್ಲರಿಗೂ ಕೊಡಲು ನಮ್ಮ ಬಳಿ ವ್ಯಾಕ್ಸಿನ್ ಇಲ್ಲ; ಅಸಹಾಯಕತೆ ವ್ಯಕ್ತಪಡಿಸಿದ ಸರ್ಕಾರದ ಮುಖ್ಯಕಾರ್ಯದರ್ಶಿ!
ಸಿಎಸ್​​ ರವಿಕುಮಾರ್​
  • Share this:
ಬೆಂಗಳೂರು : ಆಸ್ಪತ್ರೆಗಳಲ್ಲಿ ಬೆಡ್​​, ಆಕ್ಸಿಜನ್​, ಸ್ಮಶಾಣದಲ್ಲಿ ಸರತಿ ಸಾಲು ಬೆನ್ನಲ್ಲೇ ಈಗ ಕರ್ನಾಟಕದ ಜನತೆ ಕೊರೋನಾ ಲಸಿಕೆಗಾಗಿ ಪರದಾಡುತ್ತಿದ್ದಾರೆ. 18 ವರ್ಷ ಮೇಲ್ಪಟ್ಟವರೆಲ್ಲಾ ಲಸಿಕೆ ಪಡೆಯಬಹುದು ಎಂದು ಕೇಂದ್ರ ಸರ್ಕಾರ ಘೋಷಿಸಿದ್ದರು, ಲಸಿಕೆ ನೀಡಲು ರಾಜ್ಯ ಸರ್ಕಾರ ಸಂಪೂರ್ಣವಾಗಿ ತಯಾರಿಲ್ಲ. ರಾಜ್ಯ ಸರ್ಕಾರ ಭಾರೀ ಪ್ರಮಾಣದ ಲಸಿಕೆ ಕೊರತೆ ಎದುರಿಸುತ್ತಿದ್ದು, ಸರ್ಕಾರದ ಮುಖ್ಯ ಕಾರ್ಯದರ್ಶಿ ಈ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. 3 ಕೋಟಿ ಡೋಸ್​ ಬೇಡಿಕೆ ಸಲ್ಲಿಸಿದ್ದ ನಮಗೆ ಈವರೆಗೆ 7 ಲಕ್ಷ ಡೋಸ್​ ವ್ಯಾಕ್ಸಿನ್​ ತಲುಪಿದೆ. ಮೊದಲ ಡೋಸ್​ ಪಡೆದವರಿಗೆ 2ನೇ ಡೋಸ್​ ಕೊಡುವುದು ನಮ್ಮ ಆದ್ಯತೆ ಆಗಿದೆ ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ಸಿ.ಎಸ್ ರವಿಕುಮಾರ್ ತಿಳಿಸಿದರು.

ವ್ಯಾಕ್ಸಿನೇಷನ್​ ಎರಡು ಹಂತಗಳಲ್ಲಿ ನಡೆಯುತ್ತಿದೆ. ಒಂದು 45 ವರ್ಷದ ಮೇಲಿನವರಿಗೆ ಭಾರತ ಸರ್ಕಾರದಿಂದ ಉಚಿತವಾಗಿ ಲಸಿಕೆ ಬರುತ್ತಿದೆ. ಎರಡನೆಯದ್ದು 18 ರಿಂದ 45 ವರ್ಷದವರಿಗೆ ರಾಜ್ಯ ಸರ್ಕಾರ ಹಾಗೂ ಪ್ರೈವೇಟ್ ಆಸ್ಪತ್ರೆಯವರು ಕೊಡಬೇಕು. 45 ವರ್ಷ ಮೇಲ್ಪಟ್ಟವರಿಗೆ ನೀಡಲು ಕೇಂದ್ರ ಸರ್ಕಾರ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆ ಬರುತ್ತಿವೆ. ಈ ತಿಂಗಳು 13  ಲಕ್ಷ  ಕೋವಿಶಿಲ್ಡ್ ಹಾಗೂ ಒಂದು ಲಕ್ಷ ಡೋಸ್​​ ಕೋವ್ಯಾಕ್ಸಿನ್ ಬಂದಿದ್ದು ರಾಜ್ಯಾದ್ಯಂತ ವಿತರಿಸಲಾಗಿದೆ. ಫಸ್ಟ್ ಡೋಸ್ ಕೊಟ್ಟು ಎರಡನೇ ಡೋಸ್ ಕೊಡಬೇಕು. ಹೀಗಾಗಿ ಎರಡನೇ ಡೋಸ್ ನವರಿಗೆ ಮಾತ್ರ ಕೊಡತ್ತಿದ್ದೇವೆ ಎಂದು ತಿಳಿಸಿದರು.

ರಾಜ್ಯದಲ್ಲಿ 45 ವರ್ಷ ಮೇಲಿನ 86 ಲಕ್ಷ ಜನರಿಗೆ ಫಸ್ಟ್ ಡೋಸ್ ಕೊಡಲಾಗಿದೆ. ಅದರಲ್ಲಿ 22 ಲಕ್ಷದವರಿಗೆ ಸೆಕೆಂಡ್ ಡೋಸ್ ಹಾಕಿದ್ದೇವೆ. ಇನ್ನೂ  65 ಲಕ್ಷ  ಮಂದಿಗೆ 2ನೇ ಡೋಸ್ ಹಾಕಬೇಕಿದೆ. ಲಸಿಕೆ ಯಾವಗ ಬರ್ತದೆ ರಾಜ್ಯಕ್ಕೆ ಬರುತ್ತೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಅಸಹಾಯಕತೆ ತೋರಿದ ಸರ್ಕಾರದ ಮುಖ್ಯ ಕಾರ್ಯದರ್ಶಿ. ನಾವು ಆರ್ಡರ್ ಮಾಡಿದ್ದೇವೆ, ಉತ್ಪಾದಿಸುವವರು ನಮಗೆ ಕೊಡಬೇಕು ಮೂರು ಕೋಟಿ  ಲಸಿಕೆ ಬರಲು ದಿನ ಅಲ್ಲ, ತಿಂಗಳು ಗಟ್ಟಲೆ ಆಗಬಹುದು. ನಾವು ಕಾಯುತ್ತಿದ್ದೇವೆ. ಜನವರಿ 16 ರಿಂದ ಲಸಿಕೆ ಅಭಿಯಾನ ಶುರುವಾಗಿದ್ದು, 4 ತಿಂಗಳ ಅವಧಿಯಲ್ಲಿ ಒಂದು ಕೋಟಿ ಡೋಸ್ ಬಂದಿದೆ.

ರಾಜ್ಯದಲ್ಲಿ ಎಲ್ಲರಿಗೂ 2 ಡೋಸ್​ ಲಸಿಕೆ ಹಾಕಲು ಆರುವರೆ ಕೋಟಿ ಡೋಸ್ ಬೇಕು. ಇದು ಯಾವಾಗ ಬರ್ತದೆ  ಎಂದು ನಾನಂತು ಹೇಳೋಕೆ ಆಗಲ್ಲ. ಇದು ಉತ್ಪಾದನೆ ಮೇಲೆ ಅವಲಂಬಿತವಾಗಿದೆ. ನಮ್ಮ ಕೈಯಲ್ಲಿ ಏನಿದೆ ಆದಷ್ಟು ಪ್ರಯತ್ನ ಮಾಡುತ್ತಿದ್ದೇವೆ. ಎರಡು ಕಂಪನಿಗಳು ವ್ಯಾಕ್ಸಿನ್ ಉತ್ಪಾದನೆ ಮಾಡ್ತೀವೆ. ಗ್ಲೋಬಲ್ ಟೆಂಡರ್ ಸಹ ಕರೆದಿದ್ದೇವೆ. ಹದಿನೈದು ದಿನಗಳಲ್ಲಿ ಗ್ಲೋಬಲ್ ಟೆಂಡರ್ ಅಂತಿಮ ಆಗುತ್ತ್ತೆ. ಆಗ ಶೀಘ್ರವಾಗಿ ಲಸಿಕೆ ಲಭ್ಯವಾಗಿ ಯುವಕರಿಗೆ ವ್ಯಾಕ್ಸಿನ್​ ನೀಡಲು ನೆರವಾಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ರಷ್ಯಾದ ಸ್ಪುಡ್ನಿಕ್​​ ಲಸಿಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ. ಕೇವಲ ಪ್ರಾಯೋಗಿಕ ಅಂತಷ್ಟೇ ಹೇಳಿದೆ. ಇನ್ನು ರಾಜ್ಯದಲ್ಲಿ ಆಕ್ಸಿಜನ್ ಸಪ್ಲೈ ಸಮಸ್ಯೆ ಇಲ್ಲ ಎಂದು ಹೇಳಲ್ಲ. ಕೇಂದ್ರ ಸರ್ಕಾರ ಸಹಾಯ ಮಾಡಿದೆ. ಆದರೆ ಇನ್ನಷ್ಟು ಆಕ್ಸಿಜನ್ ಬೇಕು. ಇರೋದರಲ್ಲಿ ಮ್ಯಾನೇಜ್ ಮಾಡ್ತಿದ್ದೇವೆ. ಆಕ್ಸಿಜನ್ ಕಂಟೈನರ್ ಗಳನ್ನ ಕೇಂದ್ರ ನಮಗೆ ಕಳಿಸಿಕೊಟ್ಟಿದೆ. ಕೋಲಾರ ಮತ್ತು ಕಲಬುರಗಿಯಲ್ಲಿ ಇದನ್ನ ಉಪಯೋಗಿಸಿಕೊಳ್ಳುತ್ತಿದ್ದೇವೆ. ಜಿಲ್ಲೆಗಳಲ್ಲಿ ಹೆಚ್ಚುವರಿ ಆಕ್ಸಿಜನ್ ಬೆಡ್ ನಿರ್ಮಾಣ ವಿಚಾರವಾಗಿ ಪ್ರತಿಕ್ರಿಯಿಸಿದ ರವಿಕುಮಾರ್​ ಅವರು ಆಕ್ಸಿಜನ್ ಇಲ್ಲದೇ ವೆಂಟಿಲೇಟರ್ ಸೌಲಭ್ಯ ಇಲ್ಲದೇ ಆಕ್ಸಿಜನ್ ಬೆಡ್ ಎಂದು ಹೇಳಬೇಡಿ ಎಂದು ಹೇಳಿದ್ದೇನೆ. ಆಕ್ಸಿಜನ್ ಸೇರಿದಂತೆ ಸಂಪೂರ್ಣ ಸೌಲಭ್ಯ ಇದ್ರೆ ಮಾತ್ರ ಆಕ್ಸಿಜನ್ ಬೆಡ್ ಆಗುತ್ತೆ. ನಾರ್ಮಲ್ ಬೆಡ್ ಗೆ ಆಕ್ಸಿಜನ್ ಕೊಟ್ಟು ಅದನ್ನ ಆಕ್ಸಿಜನ್ ಬೆಡ್ ಎಂದು ಹೇಳಕ್ಕೆ ಆಗಲ್ಲ ಎಂದು ಸ್ಪಷ್ಟಪಡಿಸಿದರು.
Published by: Kavya V
First published: May 12, 2021, 2:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories