ಹೈಕೋರ್ಟ್ ತರಾಟೆ ಬಳಿಕ ಎಚ್ಚೆತ್ತ ರಾಜ್ಯ ಸರ್ಕಾರ.. Mekedatu ಪಾದಯಾತ್ರೆ ತಡೆಯುವಂತೆ ಆದೇಶ

ಹೈಕೋರ್ಟ್​​ ಚಾಟಿ ಬೀಸಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಸರ್ಕಾರ ಪಾದಯಾತ್ರೆ ನಿಲ್ಲಿಸುವಂತೆ ರಾಮನಗರ ಜಿಲ್ಲಾಡಳಿತಕ್ಕೆ ಆದೇಶಿಸಿದೆ. ರಾಮನಗರದಲ್ಲಿ ಪಾದಯಾತ್ರೆಗೆ ನಿರ್ಬಂಧವೇರಿ, ಆದೇಶ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಿ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮೇಕೆದಾಟು ಪಾದಯಾತ್ರೆ

ಮೇಕೆದಾಟು ಪಾದಯಾತ್ರೆ

  • Share this:
ಬೆಂಗಳೂರು: ಕೊರೊನಾ (Corona) ಹೆಚ್ಚಳದ ಮಧ್ಯೆಯೂ ಕಾಂಗ್ರೆಸ್​​ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆಯನ್ನು (Mekedatu Padayatra) ಏಕೆ ತಡೆಯಲಿಲ್ಲ ಎಂದು ರಾಜ್ಯ ಸರ್ಕಾರಕ್ಕೆ (Karnataka Govt) ಇಂದು ಹೈಕೋರ್ಟ್​​(High Court) ತರಾಟೆಗೆ ತೆಗೆದುಕೊಂಡಿತು. ಹೈಕೋರ್ಟ್​​ ಚಾಟಿ ಬೀಸಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಸರ್ಕಾರ ಪಾದಯಾತ್ರೆ ನಿಲ್ಲಿಸುವಂತೆ ರಾಮನಗರ ಜಿಲ್ಲಾಡಳಿತಕ್ಕೆ ಆದೇಶಿಸಿದೆ. ರಾಮನಗರದಲ್ಲಿ ಪಾದಯಾತ್ರೆಗೆ ನಿರ್ಬಂಧವೇರಿ, ಆದೇಶ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಿ. ತಕ್ಷಣವೇ ಪಾದಯಾತ್ರೆ ನಿಲ್ಲಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ. ರಾಮನಗರ ಎಸ್ ಪಿ ಹಾಗೂ ಜಿಲ್ಲಾಧಿಕಾರಿಗೆ ಸರ್ಕಾರ ಖಡಕ್​ ಸೂಚನೆ ನೀಡಿದೆ.

ಆದೇಶ ಮೀರಿದ್ರೆ ಬಂಧನ

ಸರ್ಕಾರದ ಆದೇಶ ಹಿನ್ನೆಲೆಯಲ್ಲಿ ಇಂದೇ ಪಾದಯಾತ್ರೆ ನಿಲ್ಲುವ ಸಾಧ್ಯತೆಗಳಿವೆ. ಈಗಾಗಲೇ ಪಾದಯಾತ್ರೆ ನಿಲ್ಲಿಸಲು ಸ್ಥಳಕ್ಕೆ ಎಡಿಜಿಪಿ ಹಾಗೂ ಎಸ್ಪಿ ಗಿರೀಶ್ ಆಗಮಿಸುತ್ತಿರುವ ಮಾಹಿತಿ ಇದೆ. ಆದೇಶದ ನಡುವೆಯೂ ಪಾದಯಾತ್ರೆಗೆ ಮುಂದಾದವರನ್ನು ಬಂಧಿಸಿ ಎಂದು ಆದೇಶಿಲಾಗಿದೆ. ರಾಮನಗರಕ್ಕೆ ಹೆಚ್ಚುವರಿ ಪೊಲೀಸ್  ನಿಯೋಜನೆಗೆ ಸರ್ಕಾರ ನಿರ್ಧರಿಸಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವಂತೆ ರಾಮನಗರ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಪಾದಯಾತ್ರೆಯಲ್ಲಿರೋ 64 ಕಾಂಗ್ರೆಸ್ ನ ನಾಯಕರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಪಾದಯಾತ್ರೆ ಮಾಡುತ್ತಿರುವ ನಾಯಕರ ಲಿಸ್ಟ್  ಮಾಡಿಕೊಂಡಿರೋ ಪೊಲೀಸ್ ಇಲಾಖೆ ಫುಲ್​ ಅಲರ್ಟ್​​ ಆಗಿದೆ.

ಇದನ್ನೂ ಓದಿ: High Court ತರಾಟೆ.. ಕಾಂಗ್ರೆಸ್-ಸರ್ಕಾರ ಎರಡಕ್ಕೂ ಬಿಸಿ ತುಪ್ಪವಾದ ‘ಪಾದಯಾತ್ರೆ’..ಮುಂದೇನಾಗುತ್ತೆ?

ಕಾಂಗ್ರೆಸ್​​ ನಾಯಕರ ಸಮಾಲೋಚನೆ

ಸರ್ಕಾರದ ಆದೇಶ ಹಿನ್ನೆಲೆ ವಿಪಕ್ಷ ನಾಯಕ ಸಿದ್ದರಾಮಯ್ಯ ಜೊತೆ ಚರ್ಚೆಗೆ ಡಿ ಕೆ ಶಿವಕುಮಾರ್ ಮುಂದಾಗಿದ್ದಾರೆ. ದೂರವಾಣಿ ಮೂಲಕ ಮಾತನಾಡಿರುವ ನಾಯಕರು ಪಾದಯಾತ್ರೆ ಮುಂದುವರೆಸಬೇಕೆ, ಬೇಡವೇ ಎಂಬುದರ ಬಗ್ಗೆ ಸಮಾಲೋಚನೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಇಂದು ಹೈಕೋರ್ಟ್​ ಹೇಳಿದ್ದೇನೆ

ಮೇಕೆದಾಟು ಪಾದಯಾತ್ರೆ ಪ್ರಶ್ನಿಸಿ ಸಲ್ಲಿಸಿದ್ದ PIL ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್​​, ರಾಜ್ಯ ಬಿಜೆಪಿ ಸರ್ಕಾರಕ್ಕೆ ಚಾಟಿ ಬೀಸಿದೆ. ಕೋವಿಡ್ ಹೆಚ್ಚುತ್ತಿರುವ ವೇಳೆ ರ್ಯಾಲಿ ನಡೆಸಿದ್ದೀರಾ, ರ್ಯಾಲಿಗೆ ಮುನ್ನ ನೀವು ಅನುಮತಿ ಪಡೆದಿದ್ದೀರಾ ಎಂದು ಕೆಪಿಸಿಸಿಗೆ ಹೈಕೋರ್ಟ್ ವಿಭಾಗೀಯ ಪೀಠ ಪ್ರಶ್ನಿಸಿದೆ. ಈ ಬಗ್ಗೆ ಉತ್ತರಿಸಲು ನಾಳೆವರೆಗೆ ಕಾಲಾವಕಾಶವನ್ನು ಕೋರ್ಟ್ ನೀಡಿದೆ. ಈಗಾಗಲೇ ಪಾದಯಾತ್ರೆ ನಡೆಸುವವರ ಮೇಲೆ ಮೂರು ಎಫ್ಐಆರ್ ದಾಖಲಿಸಿರುವುದಾಗಿ ಕೋರ್ಟ್​ಗೆ ಎಎಜಿ ಮಾಹಿತಿ ನೀಡಿದರು. ಸರ್ಕಾರ ರ್ಯಾಲಿ ತಡೆಯಲು ಅಸಮರ್ಥವಾಗಿದೆಯೇ. ಅನುಮತಿ ಕೊಟ್ಟಿಲ್ಲವಾದರೆ  ಪಾದಯಾತ್ರೆ ತಡೆಯಲು ಯಾರಿಗಾಗಿ ಕಾಯುತ್ತಿದ್ದೀರಿ. ಸರ್ಕಾರ ಸಂಪೂರ್ಣ ಅಸಮರ್ಥವಾಗಿದೆಯೇ ಎಂದು ರಾಜ್ಯ ಸರ್ಕಾರವನ್ನೂ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತು.

ಇದನ್ನೂ ಓದಿ: ಗಂಡಸ್ತನ ತೋರಿಸೋದಕ್ಕೆ ಹೋಗಿ ಮೇಕೆದಾಟನ್ನು ಮಸಣ ಮಾಡಬೇಡಿ: HD Kumaraswamy ಮಾತಿನೇಟು

ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಿದ್ದರೂ ಹೇಗೆ ಸುಮ್ಮನಿದ್ದೀರಿ. ಹೈಕೋರ್ಟ್ ಆದೇಶದವರೆಗೆ ನೀವು ಕ್ರಮ ಕೈಗೊಳ್ಳುವುದಿಲ್ಲವೇ. ಕರ್ನಾಟಕ ಈಗಾಗಲೇ ಕೋವಿಡ್ ನಿಂದ ತತ್ತರಿಸುತ್ತಿದೆ. ಹೀಗಿರುವಾಗ ಪಾದಯಾತ್ರೆಗೆ ಹೇಗೆ ಅನುಮತಿ ನೀಡಿದ್ದೀರಿ ಎಂದು ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್ ವಿಭಾಗೀಯ ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಸರ್ಕಾರದ ಮಾರ್ಗಸೂಚಿ ಪಾಲಿಸಲು ಕೆಪಿಸಿಸಿ ಏನು ಕ್ರಮ ಕೈಗೊಂಡಿದೆ. ಈ ಬಗ್ಗೆಯೂ ಮಾಹಿತಿ ನೀಡಲು ಕೆಪಿಸಿಸಿಗೆ ಹೈಕೋರ್ಟ್ ಸೂಚನೆ ನೀಡಿದೆ. ಎಸ್ಒಪಿ ಜಾರಿಗೊಳಿಸಲು ಯಾವ ಕ್ರಮ ಕೈಗೊಳ್ಳಲಾಗಿದೆ. ಕೋವಿಡ್ ಬಿಗಡಾಯಿಸಿರುವ ವೇಳೆ ಪಾದಯಾತ್ರೆಗೆ ಅವಕಾಶ ಏಕೆ ಎಂದು ಉತ್ತರಿಸಲು ಸರ್ಕಾರಕ್ಕೆ ಹೈಕೋರ್ಟ್​​ ತಾಕೀತು ಮಾಡಿದೆ. ವಿಚಾರಣೆಯನ್ನು ಜ.14 ಕ್ಕೆ ಮುಂದೂಡಲಾಗಿದೆ.

ಜನರ ಜೀವದ ಜತೆ ಚೆಲ್ಲಾಟ ಆಡುವುದು ಸರಿಯಲ್ಲ. ಕಾಂಗ್ರೆಸ್ ಒಂದು ಜವಾಬ್ದಾರಿಯುತ ಪಕ್ಷವಾಗಿದ್ದರೆ,ತಕ್ಷಣ ಪಾದಯಾತ್ರೆ ನಿಲ್ಲಿಸಲಿ. ಗಂಡಸ್ತನ ತೋರಿಸುವುದಕ್ಕೆ ಹೋಗಿ ಮೇಕೆದಾಟನ್ನು ಮಸಣ ಮಾಡುವುದು ಬೇಡ ಎಂದು ಕಟುವಾದ ಪದಗಳಿಂದಲೇ HDK ಟ್ವೀಟಿಸಿದ್ದಾರೆ.
Published by:Kavya V
First published: