ಲಸಿಕೆಗಾಗಿ ಕಾಂಗ್ರೆಸ್​ ನೀಡಿದ್ದ ₹100 ಕೋಟಿಯನ್ನು ನಿರಾಕರಿಸಿ ಸರ್ಕಾರ: ಕಾರಣವನ್ನೂ ನೀಡಿದೆ

ನಿಮ್ಮ ನಿಲುವು ಸ್ವಾಗತಾರ್ಹವಾದುದು, ಆದರೆ ಕೇಂದ್ರವೇ ಎಲ್ಲರಿಗು ಉಚಿತವಾಗಿ ಲಸಿಕೆ ನೀಡಲಿದೆ. ಹಾಗಾಗಿ ನಿಮ್ಮ ಹಣ ಬೇಡ ಎಂದು ಕಾಂಗ್ರೆಸ್​ಗೆ ರಾಜ್ಯ ಸರ್ಕಾರ ಉತ್ತರಿಸಿದೆ.

ಸಿದ್ದರಾಮಯ್ಯ, ಬಿ.ಎಸ್​.ಯಡಿಯೂರಪ್ಪ

ಸಿದ್ದರಾಮಯ್ಯ, ಬಿ.ಎಸ್​.ಯಡಿಯೂರಪ್ಪ

  • Share this:
ಬೆಂಗಳೂರು: ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆಯಲು ಅರ್ಹರು ಎಂದು ಘೋಷಿಸಿದ ಬಳಿಕ ವ್ಯಾಕ್ಸಿನ್​ಗಾಗಿ ಜನ ಮುಂದಾಗಿದ್ದರು. ಆದರೆ ರಾಜ್ಯದಲ್ಲಿ ಲಸಿಕೆ ಕೊರತೆಯಿಂದ ಯೋಜನೆ ಸೂಕ್ತ ರೀತಿಯಲ್ಲಿ ಅನುಷ್ಠಾನಗೊಂಡಿರಲಿಲ್ಲ. ಸಕಾಲಕ್ಕೆ ಲಸಿಕೆ ನೀಡದ ಬಿ.ಎಸ್​.ಯಡಿಯೂಪರಪ್ಪ ಸರ್ಕಾರದ ವಿರುದ್ಧ ವಿಪಕ್ಷಗಳ ಮುಗಿಬಿದ್ದಿದ್ದವು. ಮೋದಿ ಸರ್ಕಾರ ವಿದೇಶಗಳಿಗೆ ಲಸಿಕೆ ಕಳುಹಿದ್ದರಿಂದಲೇ ನಮಗೆ ಲಸಿಕೆ ಕೊರತೆ ಉಂಟಾಗಿದೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ರಾಜ್ಯ ಕಾಂಗ್ರೆಸ್​ ಒಂದು ಹೆಜ್ಜೆ ಮುಂದೆ ಹೋಗಿ ಜನರಿಗೆ ನಾವೇ ಲಸಿಕೆ ಕೊಡುತ್ತೇವೆ ಎಂದು ಘೋಷಿಸಿತ್ತು.

ರಾಜ್ಯದ ಜನತೆಗೆ ಲಸಿಕೆ ವಿತರಿಸಲು 100 ಕೋಟಿ ನೀಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​​, ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಘೋಷಿಸಿದ್ದರು. ಕಾಂಗ್ರೆಸ್​ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯ 100 ಕೋಟಿ ರೂಪಾಯಿಗಳಲ್ಲಿ ಕೊರೋನಾ ಲಸಿಕೆಗೆ ನೀಡಲಾಗಿತ್ತು. ಆದರೆ ರಾಜ್ಯ ಸರ್ಕಾರ ಕಾಂಗ್ರೆಸ್​ನ 100 ಕೋಟಿ ರೂಪಾಯಿಯನ್ನು ನಿರಾಕರಿಸಿದೆ. ಕಾಂಗ್ರೆಸ್ ನ ೧೦೦ ಕೋಟಿ ಹಣ ಬಳಕೆಗೆ ಅನುಮತಿ ನೀಡಿಲ್ಲ. ಕಾಂಗ್ರೆಸ್ ಪಕ್ಷ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದೆ.

ನಿಮ್ಮ ನಿಲುವು ಸ್ವಾಗತಾರ್ಹವಾದುದು, ಆದರೆ ಕೇಂದ್ರವೇ ಎಲ್ಲರಿಗು ಉಚಿತವಾಗಿ ಲಸಿಕೆ ನೀಡಲಿದೆ. ಲಸಿಕೆಗೆ ಧನ ಸಹಾಯ ಮಾಡಲು ಹಲವು ಸಂಸ್ಥೆಗಳು ಮುಂದೆ ಬಂದಿವೆ. ಅಲ್ಲದೆ ಈಗಾಗಲೇ ಎಲ್ಲಾ ಶಾಸಕರ ಶೇ.೨೫ ರಷ್ಟು ಅನುದಾನ ಬಳಕೆ ಮಾಡಲಾಗಿದೆ. ಆ ಹಣ ಕೋವಿಡ್ ಕಾರ್ಯಕ್ರಮಗಳಿಗೆ ಬಳಕೆಯಾಗಿದೆ. ಉಳಿದ ಶೇ.೭೫ ರಷ್ಟು ಹಣ ಕ್ಷೇತ್ರಾವಾರು ಅಭಿವೃದ್ಧಿ ಯೋಜನೆಗಳಿಗೆ ಬಳಸಿಕೊಳ್ಳಿ. ಒಂದು ವೇಳೆ ನಿಮ್ಮ ಸ್ವಂತ ಹಣ ನೀಡುವುದಾದರೆ, ಅದನ್ನ ಸಂಘ ಸಂಸ್ಥೆಗಳಿಗೆ ನೀಡಿ ಎಂದು ಸರ್ಕಾರ ಕಾಂಗ್ರೆಸ್​ ಮನವಿಗೆ ಮರುತ್ತರ ನೀಡಿದೆ.

ಇದನ್ನೂ ಓದಿ: Wife Swapping: ನಾನು ಗೆಳೆಯನ ಹೆಂಡತಿ ಜೊತೆ ಸೆಕ್ಸ್ ಮಾಡ್ತೀನಿ, ನೀನು ಗೆಳೆಯನ ಜೊತೆ ಮಾಡು ಎಂದು ಗಂಡನ ಟಾರ್ಚರ್!

ಇದಕ್ಕೂ ಮುನ್ನ ಕಾಂಗ್ರೆಸ್​ ವಾಕ್ಸಿನೇಟ್​​ ಕರ್ನಾಟಕ ಎಂಬ ಘೋಷವಾಖ್ಯದಡಿ ಅಭಿಯಾನ ಶುರು ಮಾಡಿತ್ತು. ಕಾಂಗ್ರೆಸ್​ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯ 100 ಕೋಟಿ ರೂಪಾಯಿಗಳಲ್ಲಿ ಕೊರೋನಾ ಲಸಿಕೆ ಖರೀದಿಸಿ ಜನರಿಗೆ ನೀಡಲಿದೆ. ಇದಕ್ಕೆ ರಾಜ್ಯ ಸರ್ಕಾರ ಸಹಕರಿಸಬೇಕು ಎಂದು  ಸಿದ್ದರಾಮಯ್ಯ ಟ್ವೀಟ್​ ಮಾಡಿದ್ದರು. ಲಸಿಕೆ ಪಡೆದು ಸೋಂಕಿನಿಂದ ಸುರಕ್ಷಿತವಾಗಿರಬಹುದು ಎಂದು ತಜ್ಞರು ಹೇಳಿದ್ದಾರೆ. ಲಸಿಕೆ ಪಡೆದವರಲ್ಲಿ ರೋಗ ಹರಡುವಿಕೆ, ಮರಣ ಪ್ರಮಾಣ ಕಡಿಮೆ ಎಂದು ಸಾಬೀತಾಗಿದೆ. ಪ್ರತಿಯೊಬ್ಬರಿಗೂ ಲಸಿಕೆ ನೀಡುವುದು ಸರ್ಕಾರದ ಕರ್ತವ್ಯ. ರಾಜ್ಯದಲ್ಲಿ ಲಸಿಕೆ ಇಲ್ಲದೆ ವಿಷಮಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ರಾಜ್ಯ ಕಾಂಗ್ರೆಸ್​ ಲಸಿಕೆ ಖರೀದಿಸಿ ಕೊಡಲು ನಿರ್ಧರಿಸಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದ್ದರು.

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 92 ಸಾವಿರದ,596 ಕೋವಿಡ್-19 ಪ್ರಕರಣಗಳು ದಾಖಲಾಗಿದ್ದು, ದೇಶದ ಸಕ್ರಿಯ ಕೇಸ್‌ಲೋಡ್ ಸಂಖ್ಯೆ 12 ಲಕ್ಷ, 31 ಸಾವಿರದ, 415ಕ್ಕೆ ಬಂದು ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ 1 ಲಕ್ಷ, 62 ಸಾವಿರದ, 664 ಜನರು ದೇಶದ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ. ಕಳೆದ 24 ಗಂಟೆಗಳಲ್ಲಿ 2,219 ಜನರು ಈ ಮಾರಕ ವೈರಾಣುವಿಗೆ ಬಲಿಯಾಗಿದ್ದು, ದೇಶದ ಒಟ್ಟು ಸಾವಿನ ಸಂಖ್ಯೆ 3 ಲಕ್ಷ, 53 ಸಾವಿರದ, 528 ಕ್ಕೆ ಲುಪಿದೆ. ಇದೇ ವೇಳೆ ದೇಶಾದ್ಯಂತ ಒಟ್ಟು 23 ಕೋಟಿ, 90 ಲಕ್ಷ, 58 ಸಾವಿರದ 360 ಕೊರೊನಾ ಲಸಿಕೆ ನೀಡಲಾಗಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: