• Home
 • »
 • News
 • »
 • state
 • »
 • SSLC Exam Date: ಶಾಲಾ-ಕಾಲೇಜು ಆರಂಭದ ಬಗ್ಗೆ ಇಂದು ಮಹತ್ವದ ಸಭೆ; ಇಂದೇ ಎಸ್ಎಸ್ಎಲ್​ಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ

SSLC Exam Date: ಶಾಲಾ-ಕಾಲೇಜು ಆರಂಭದ ಬಗ್ಗೆ ಇಂದು ಮಹತ್ವದ ಸಭೆ; ಇಂದೇ ಎಸ್ಎಸ್ಎಲ್​ಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಸಚಿವ ಸುರೇಶ್​ ಕುಮಾರ್

ಸಚಿವ ಸುರೇಶ್​ ಕುಮಾರ್

Karnataka SSLC Exam Date | ಇಂದು ಮಧ್ಯಾಹ್ನ ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದ್ದು, ಶಾಲಾ- ಕಾಲೇಜುಗಳ ಆರಂಭ ಮತ್ತು SSLC ಪರೀಕ್ಷೆಯ ವೇಳಾಪಟ್ಟಿ ಬಗ್ಗೆ ನಿರ್ಧಾರ ಪ್ರಕಟವಾಗಲಿದೆ.

 • Share this:

  ಬೆಂಗಳೂರು (ಜೂ. 28): ಕೊರೋನಾದಿಂದ ಕಳೆದ ವರ್ಷದಿಂದ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದೆ. ಆನ್​ಲೈನ್ ಕ್ಲಾಸ್ (Online Class) ಮೂಲಕ ವಿದ್ಯಾರ್ಥಿಗಳಿಗೆ ಪಾಠ ಕಲಿಸಲಾಗುತ್ತಿದೆ. ಈಗಾಗಲೇ ಜುಲೈ 3ನೇ ವಾರದಲ್ಲಿ ಎಸ್ಎಸ್ಎಲ್​ಸಿ ಪರೀಕ್ಷೆ (SSLC Exam) ನಡೆಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದ್ದು, ಶಾಲಾ- ಕಾಲೇಜುಗಳ ಆರಂಭ ಮತ್ತು SSLC ಪರೀಕ್ಷೆಯ ವೇಳಾಪಟ್ಟಿ ಬಗ್ಗೆ ನಿರ್ಧಾರ ಪ್ರಕಟವಾಗಲಿದೆ.


  ಈ ಬಗ್ಗೆ ಮಾಹಿತಿ ನೀಡಿರುವ ಸಚಿವ ಸುರೇಶ್ ಕುಮಾರ್, ಇಂದು ಎಸ್ ಎಸ್ ಎಲ್‌ಸಿ‌ ಪರೀಕ್ಷೆ ದಿನಾಂಕ ಪ್ರಕಟ ಮಾಡಲಿದ್ದೇವೆ. ಪರೀಕ್ಷೆ ವಿಚಾರವಾಗಿ ಇಂದು ಮಧ್ಯಾಹ್ನ ಸುದ್ದಿಗೋಷ್ಟಿಯಲ್ಲಿ ಘೋಷಣೆ ಮಾಡಲಾಗುವುದು. ಶಾಲೆ ಆರಂಭ ಹಾಗೂ ಪರೀಕ್ಷೆ ಪೂರ್ವ ತಯಾರಿ ಕುರಿತು ವಿಕಾಸಸೌಧದಲ್ಲಿಂದು ಸಭೆ ನಡೆಯಲಿದೆ. ರಾಜ್ಯದ ಜಿಲ್ಲಾಧಿಕಾರಿ, ಸಿಇಓ ಅಧಿಕಾರಿಗಳ ಜೊತೆ ವೀಡಿಯೋ ಕಾನ್ಫರೆನ್ಸ್ ಇದೆ. ಸಭೆ ಬಳಿಕ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಶಾಲೆ ಆರಂಭ ಕುರಿತು ಮಾಹಿತಿ ಹಂಚಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.


  ಕರ್ನಾಟಕದಲ್ಲಿ ಶಾಲೆ- ಕಾಲೇಜುಗಳನ್ನು ಓಪನ್ ಮಾಡಲು (Schools and Colleges Reopen) ಕೌಂಟ್ ಡೌನ್ ಶುರುವಾಗಿದೆ. ರಾಜ್ಯದಲ್ಲಿ ಶಾಲಾ ಕಾಲೇಜು ತೆರೆಯುವ ಕುರಿತು ಇಂದು ಮಹತ್ವದ ಸಭೆ ನಡೆಯಲಿದೆ. ಸಭೆಯಲ್ಲಿ ಶಾಲಾ ಕಾಲೇಜು ತೆರೆಯುವ ಕುರಿತು ಸಚಿವ ಸುರೇಶ್ ಕುಮಾರ್ ನಿರ್ಧಾರ ಕೈಗೊಳ್ಳುತ್ತಾರಾ? ಎಂಬ ಕುತೂಹಲ ಉಂಟಾಗಿದೆ. ಇಂದು  ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆ ಸಚಿವ ಸುರೇಶ್ ಕುಮಾರ್ ವಿಡಿಯೋ ಕಾನ್ಪೆರೆನ್ಸ್ ನಡೆಸಲಿದ್ದಾರೆ.


  ಕಳೆದ 15 ತಿಂಗಳಿನಿಂದ ಕರ್ನಾಟಕದಲ್ಲಿ ಶಾಲಾ ಕಾಲೇಜುಗಳು ಸಂಪೂರ್ಣವಾಗಿ ಬಂದ್ ಆಗಿದ್ದವು. ಕೊರೋನಾದಿಂದ ಬಂದ್ ಆಗಿದ್ದ ಶಾಲಾ ಕಾಲೇಜುಗಳನ್ನು ಓಪನ್ ಮಾಡಲು ಈಗಾಗಲೇ ತಜ್ಞರು ಕೆಲವು ಸಲಹೆಗಳನ್ನ ಕೊಟ್ಟಿದ್ದಾರೆ. ಶಾಲೆ ಪ್ರಾರಂಭಿಸುವುದಾದರೆ ಮಕ್ಕಳು ಮತ್ತು ಪೋಷಕರಿಗೆ ಕಡ್ಡಾಯವಾಗಿ ಕೊರೋನಾ ಲಸಿಕೆ ಹಾಕಿಸಬೇಕು, ಕೊರೋನಾ ಮಾರ್ಗಸೂಚಿ ಅಳವಡಿಸಿಕೊಂಡು ಶಾಲೆ ಪ್ರಾರಂಭಿಸಬಹುದು ಎಂದು ಸೂಚಿಸಲಾಗಿದೆ.


  ಇದನ್ನೂ ಓದಿ: Karnataka Weather Today: ಕರಾವಳಿ, ಹೈದರಾಬಾದ್ ಕರ್ನಾಟಕ, ಮಲೆನಾಡಿನಲ್ಲಿ ಇಂದಿನಿಂದ ಜುಲೈ 1ರವರೆಗೆ ಭಾರೀ ಮಳೆ


  ಪೋಷಕ ಸಮನ್ವಯ ಸಮಿತಿಯಿಂದ ಭೌತಿಕ ತರಗತಿ ಪ್ರಾರಂಭಕ್ಕೆ ವಿರೋಧ ವ್ಯಕ್ತವಾಗಿದೆ. ನಗರ ಪ್ರದೇಶದ ಶಾಲೆಗಳನ್ನು ತೆರೆಯಲು ವಿರೋಧ ವ್ಯಕ್ತವಾಗಿದ್ದು, ಗ್ರಾಮೀಣ ಭಾಗದ ಶಾಲೆಗಳ ಓಪನ್ ಮಾಡಲು ಒಪ್ಪಿಗೆ ನೀಡಲಾಗಿದೆ. ಅದರಲ್ಲೂ ಕಡಿಮೆ ಸಂಖ್ಯೆ ಶಾಲೆಗಳ ತೆರೆಯಲು ಪೋಷಕರು ಒಪ್ಪಿಗೆ ನೀಡಲಾಗಿದೆ. ಶಾಲೆಗಳನ್ನು ಪ್ರಾರಂಭಿಸುವಂತೆ ಖಾಸಗಿ ಶಾಲಾ ಒಕ್ಕೂಟಗಳಿಂದ ಒತ್ತಾಯ ಮಾಡಲಾಗಿದೆ.


  ಇಂದಿನ ಸಭೆಯಲ್ಲಿ ಚರ್ಚೆಯಾಗುವ ಪ್ರಮುಖ ವಿಷಯಗಳು ಇಲ್ಲಿವೆ...
  - ಶಾಲೆ ಪ್ರಾರಂಭಿಸುವಂತೆ ಡಾ. ದೇವಿಶೆಟ್ಟಿ ಸಮಿತಿ ಸರ್ಕಾರಕ್ಕೆ ಶಿಫಾರಸು
  - ಸಮಿತಿ ಕೊಟ್ಟಿರುವ ಅಂಶಗಳ ಕುರಿತು ಸಭೆಯಲ್ಲಿ ಚರ್ಚೆ
  - ಒಂದು ವೇಳೆ ಶಾಲೆ ಪ್ರಾರಂಭ ಮಾಡಿದರೆ ಮೊದಲು ಯಾವ ತರಗತಿಗಳನ್ನ ಪ್ರಾರಂಭಿಸಬೇಕು? ಎಂಬ ಬಗ್ಗೆ ಚರ್ಚೆಯಾಗುವ ಸಾಧ್ಯತೆಯಿದೆ.


  ಎರಡು ಹಂತಗಳಲ್ಲಿ ಭೌತಿಕ ತರಗತಿಗಳನ್ನು ನಡೆಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಮೊದಲ ಹಂತದಲ್ಲಿ 8 ರಿಂದ 12ನೇ ತರಗತಿ, ಎರಡನೇ ಹಂತದಲ್ಲಿ 1 ರಿಂದ 7ನೇ ತರಗತಿ ತೆರೆಯಲು ಚಿಂತನೆ ನಡೆಸಲಾಗಿದೆ. ಪಾಳಿ ಪದ್ಧತಿಯಲ್ಲಿ ಭೌತಿಕ ತರಗತಿಗಳ ಪ್ರಾರಂಭಿಸಲು ಚರ್ಚೆ ನಡೆಸಲಾಗಿದೆ. ಬೆಸ -ಸಮ ಸಂಖ್ಯೆ ಆಧಾರದ ಮೇಲೆ ಶಾಲೆ ತೆರೆಯಲು ಚರ್ಚೆ ನಡೆಸಲಾಗಿದೆ. ಇನ್ನು, ಗ್ರಾಮೀಣ ಭಾಗದ ಪ್ರದೇಶಗಳಲ್ಲಿ ಶೇ. 50ಕ್ಕಿಂತ ಕಡಿಮೆ ಇರುವ ಶಾಲೆಗಳು ಓಪನ್ ಆಗಲಿವೆ. ಶೇ. 50ಕ್ಕಿಂತ ಹೆಚ್ಚು ಮಕ್ಕಳು ಇರುವ ಶಾಲೆಗಳಲ್ಲಿ ವಿದ್ಯಾಗಮ ಜಾರಿಗೆ ಚಿಂತನೆ ನಡೆಸಲಾಗಿದೆ. ಇಂದು ನಡೆಯುವ ಸಭೆಯಲ್ಲಿ ಅಂತಿಮವಾಗಿ ವಿದ್ಯಾಗಮ, ಭೌತಿಕ ತರಗತಿಗಳ ಪ್ರಾರಂಭಕ್ಕೆ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆಯಿದೆ.


  ಇದರ ಜೊತೆಗೆ ಎಸ್ಎಸ್ಎಲ್ಸಿ ಪರೀಕ್ಷೆಯ ವೇಳಾಪಟ್ಟಿ ಬಗ್ಗೆಯೂ ಇಂದು ನಿರ್ಧಾರವಾಗುವ ಸಾಧ್ಯತೆಯಿದೆ. ಕೊರೋನಾ ಆತಂಕದ ನಡುವೆ ಯಾವ ರೀತಿಯ ಮುನ್ನೆಚ್ಚೆರಿಕಾ ಕ್ರಮಗಳನ್ನು ಕೈಗೊಂಡು ಪರೀಕ್ಷೆ ನಡೆಸಬೇಕು ಎಂಬ ಬಗ್ಗೆ ಚರ್ಚೆಯಾಗುವ ಸಾಧ್ಯತೆಯಿದೆ. ಇಂದು ಜಿಲ್ಲಾಧಿಕಾರಿಗಳ ಜೊತೆಯೂ ಸಚಿವ ಸುರೇಶ್ ಕುಮಾರ್ ಸಭೆ ನಡೆಸಲಿದ್ದಾರೆ.

  Published by:Sushma Chakre
  First published: