ಬೆಂಗಳೂರು: ಕೊರೊನಾದ (Corona) ಹೊಸ ರೂಪಾಂತರಿ ತಳಿ ಓಮಿಕ್ರಾನ್ (Omicron) ಭೀತಿ ಹಿನ್ನೆಲೆಯಲ್ಲಿ ಇಂದು ಆರೋಗ್ಯ ಸಚಿವ ಕೆ.ಸುಧಾಕರ್ (Karnataka Health Minister Dr K Sudhakar) ನೇತೃತ್ವದಲ್ಲಿ ಕೋವಿಡ್ ತಾಂತ್ರಿಕ ಸಲಹೆ ಸಮಿತಿಯ (Covid Technical Advisory Committee) ಸಭೆ ನಡೆಯಿತು. ನಂತರ ಸಭೆಯಲ್ಲಿ ಕೈಗೊಂಡ ಮಹತ್ವದ ನಿರ್ಧಾರಗಳ ಬಳಿಕ ಸಚಿವರು ತಿಳಿಸಿದರು. ಸಿಎಂ ಬಸವರಾಜ ಬೊಮ್ಮಾಯಿ ಸಲಹೆ, ಸೂಚನೆ ನೀಡಿದ್ದಾರೆ. ವಿದೇಶದಿಂದ ಬರುವವರಿಗೆ RTPCR ಟೆಸ್ಟ್ ಕಡ್ಡಾಯಗೊಳಿಸಲಾಗಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರು ಒಂದು ವಾರ ಮನೆಯಲ್ಲಿ ಕ್ವಾರಂಟೈನ್ ಮಾಡಬೇಕಿದೆ. ಪ್ರತಿದಿನ ಸುಮಾರು ಎರಡುವರೆ ಸಾವಿರ ಪ್ರಯಾಣಿಕರು ವಿದೇಶದಿಂದ ಆಗಮಿಸ್ತಾರೆ. ಕೊರೊನಾ ಗುಣಲಕ್ಷಣಗಳಿದ್ದರೆ ಐದನೇ ದಿನ ಮತ್ತೊಂದು ಆರ್ ಟಿಪಿಸಿಆರ್ ಟೆಸ್ಟ್ ಮಾಡಿಸಲಾಗುವುದು. ಏಳನೇ ದಿನ ಟೆಸ್ಟ್ ಮಾಡಿ ನೆಗೆಟಿವ್ ಬಂದರೆ ಹೊರಗಡೆ ಹೋಗಬಹುದು. ಟೆಲಿ ಮಿಡಿಸಿನ್, ಆಪ್ ಮೂಲಕ ಕ್ವಾರಂಟೈನ್ ಮೇಲ್ವಿಚಾರಣೆ ಮಾಡಲಾಗುವುದು ಎಂದು ತಿಳಿಸಿದರು.
ಕ್ವಾರಂಟೈನ್ ಆಪ್
ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಇಂದು ಸಭೆ ನಡೆಸಿದ್ದೇವೆ. ಸಿಎಂ ಎರಡು ದಿನದ ಹಿಂದೆ ಸಭೆ ನಡೆಸಿದ್ದರು, ಅದರ ಪೂರಕವಾಗಿ ಸಭೆ ನಡೆಸಲಾಗಿದೆ. ಓಮಿಕ್ರಾನ್ ನಿಯಂತ್ರಣ ಮಾಡುವ ಕುರಿತು ಚರ್ಚೆ ಮಾಡಿದ್ದೇವೆ. ಆ ವೈರಸ್ ಬಂದರೆ ಯಾವ ರೀತಿ ಸಿದ್ದತೆ ಮಾಡಿಕೊಳ್ಳಬೇಕು ಎಂದು ಚರ್ಚೆ ಮಾಡಿದ್ದೇವೆ. ಅನೇಕ ತಂತ್ರಜ್ಞಾನ ಬಳಸಿ ಅನೇಕ ಆಪ್ ಮಾಡಿದ್ದೇವೆ, ಕ್ವಾರಂಟೈನ್ ಆಪ್ ಮಾಡಿದ್ದೇವೆ. ಪ್ರತಿಯೊಬ್ಬ ವಿದೇಶಿ ಪ್ರಯಾಣಿಕರಿಗೆ ಆರ್ ಟಿಪಿಸಿಆರ್ ಟೆಸ್ಟ್ ಮಾಡಲಾಗುತ್ತದೆ.
ಟೆಲಿ ಮೆಡಿಸಿನ್, ಟೆಲಿ ಕೌನ್ಸಲಿಂಗ್
ದಿನನಿತ್ಯ ವಿದೇಶದಿಂದ ಬರುವ 2500 ಪ್ರಯಾಣಿಕರಿಗೆ ಟೆಸ್ಟ್ ಮಾಡಿಸಲಾಗುವುದು. ನೆಗೆಟಿವ್ ಬಂದವರಿಗೆ ಮನೆಯಲ್ಲಿ ಕ್ವಾರಂಟೈನ್ ಮಾಡಲಾಗುವುದು. ನೆಗಟಿವ್ ಬಂದೂ ರೋಗ ಲಕ್ಷಣ ಇರುವವರಿಗೆ 5ನೇ ದಿನಕ್ಕೆ ಟೆಸ್ಟ್ ಮಾಡಿಸುತ್ತೇವೆ. ರೋಗ ಲಕ್ಷಣ ಇಲ್ಲದೇ ಇರುವವರಿಗೆ ಏಳನೇ ದಿನ ಟೆಸ್ಟ್. ಟೆಲಿ ಮೆಡಿಸಿನ್, ಟೆಲಿ ಕೌನ್ಸಲಿಂಗ್ ಕೂಡ ಕಾರ್ಯಾರಂಭ ಆಗಲಿದೆ ಎಂದರು.
ಮಾರ್ಗಸೂಚಿ ಸಮಿತಿ ಸಲಹೆಗಳನ್ನು ನೀಡಲಿದೆ
ಪ್ರೋಟೋಕಾಲ್ ಸಮಿತಿಗೆ ಅಧ್ಯಕ್ಷರಾಗಿ ಡಾ.ರವಿ ನೇಮಕ ಮಾಡಲಾಗಿದೆ. ಈ ಸಮಿತಿ ಹೊಸ ಪ್ರಬೇಧದಲ್ಲಿ ಇನ್ಫೆಕ್ಟ್ ಆದವರಿಗೆ ಯಾವ ಚಿಕಿತ್ಸೆ ನೀಡಬೇಕು ಎಂಬ ಪ್ರೋಟೋಕಾಲ್ ನೀಡುತ್ತಾರೆ. ಇಡೀ ರಾಜ್ಯದಲ್ಲಿ ಆ ಪ್ರೋಪೋಕಾಲ್ ಇರುತ್ತದೆ. ಇದಕ್ಕೆ ಯಾವ ಔಷಧಿ ಬೇಕು ಎಂಬುದನ್ನು ಕೂಡ ಹೇಳಲಾಗುತ್ತದೆ. ಪ್ರತಿ ಜಿಲ್ಲೆಯಲ್ಲಿ ಹೆಚ್ಚು ಹೆಚ್ಚು ಲಸಿಕೆ ನೀಡಬೇಕಿದೆ, ಎಲ್ಲರಿಗೂ ಲಸಿಕೆ ನೀಡಬೇಕಿದೆ. ಈ ತಳಿ ಹರಡುವಿಕೆ ಹೆಚ್ಚಾಗಿದೆ, ತೀವ್ರತೆ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಜನ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ಮನವಿ ಮಾಡಿಕೊಂಡರು.
ಇದನ್ನೂ ಓದಿ: Omicron: ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿದ್ದೇನು?
ಕೆಲವು ದೇಶದಿಂದ ಬರುವವರಿಗೆ ಕೆಲವು ನಿರ್ಬಂಧ ವಿಧಿಸಬೇಕು ಎಂದು ಅಭಿಪ್ರಾಯ ಇದೆ. ಸಿಎಂ ಕೂಡ ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ ಚರ್ಚೆ ಮಾಡಿ ಕ್ರಮ ತೆಗದುಕೊಳ್ತೀವಿ. ಲಸಿಕೆಗೆ ಕಾನೂನು ತರಬೇಕು ಹಾಕಬೇಕು ಅನ್ನೋದು ಇಲ್ಲ. ದಂಡ ವಿಧಿಸಿ ಲಸಿಕೆ ಹಾಕಿಸಬೇಕು ಅನ್ನೋದು ಸರಿಯಲ್ಲ. ತಾಂತ್ರಿಕ ಸಲಹಾ ಸಮಿತಿ ಒಂದಿಷ್ಟು ಸಲಹೆ ನೀಡಿದ್ದಾರೆ. ಆದರೆ ಜನರೇ ಸ್ವಯಂ ಪ್ರೇರಿತರಾಗಿ ಲಸಿಕೆ ಪಡೆಯಬೇಕು. ಸಮಿತಿ ಸಲಹೆಯನ್ನೂ ಸಿಎಂ ಬಳಿ ಚರ್ಚೆ ಮಾಡ್ತೀನಿ. ವ್ಯಾಕ್ಸಿನ್ ಪೂರ್ಣ ಆಗೋ ನಿಟ್ಟಿನಲ್ಲಿ ಕ್ರಮ ತಗೆದುಕೊಳ್ತೀವಿ ಎಂದರು.
ಬೆಳಗಾವಿ ಅಧಿವೇಶ ಬೇಡ ಎನ್ನಲು ಸಾಧ್ಯವಿಲ್ಲ
ಇನ್ನು ಓಮಿಕ್ರಾನ್ ಭೀತಿಯ ಮಧ್ಯೆ ಬೆಳಗಾವಿ ಅಧಿವೇಶನ ರದ್ದು ಮಾಡಬೇಕು ಎಂಬ ಕೂಗು ಕೇಳಿ ಬಂದಿದೆ. ದೆಹಲಿಯಲ್ಲಿಯೇ ಸಂಸತ್ ಅಧಿವೇಶನ ನಡೆಯುತ್ತಿದೆ, ಬೆಳಗಾವಿ ಅಧಿವೇಶನ ಬೇಡ ಎಂದು ನಾನು ಹೇಳಲಿಕ್ಕಾಗುವುದಿಲ್ಲ. ಇಂದು ಆ ಬಗ್ಗೆ ಚರ್ಚೆ ಮಾಡಿದ್ದೀವಿ, ಈ ಬಗ್ಗೆ ಸಿಎಂ ಬಳಿ ಮಾತಾಡ್ತೀವಿ. ತಾಂತ್ರಿಕ ಸಲಹಾ ಸಮಿತಿ ಸಿಎಂ ಬಳಿ ಚರ್ಚೆ ಮಾಡುತ್ತೆ.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ