APJ Abdul Kalam: ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಗುಜರಿ ವಸ್ತುಗಳಿಂದ ನಿರ್ಮಾಣವಾಗಿದೆ ಅಬ್ದುಲ್ ಕಲಾಂ ಪ್ರತಿಮೆ...!

7.8 ಅಡಿ ಎತ್ತರವಿರುವ ಕಲಾಂ ಅವರ ಪ್ರತಿಮೆಯ ಚಿತ್ರಗಳನ್ನು ಭಾರತೀಯ ರೈಲ್ವೆ ಇಲಾಖೆ ಟ್ವಿಟರ್​​ನಲ್ಲಿ ಶೇರ್ ಮಾಡಿಕೊಂಡಿದೆ. ಪ್ರತಿಮೆಯು ಸುಮಾರು 800 ಕೆ.ಜಿ ತೂಕವಿದೆ.

ಅಬ್ದುಲ್ ಕಲಾಂ ಪ್ರತಿಮೆ

ಅಬ್ದುಲ್ ಕಲಾಂ ಪ್ರತಿಮೆ

  • Share this:
    ಬೆಂಗಳೂರು(ಜು.27): ಇಂದು ಭಾರತದ ಮಾಜಿ ರಾಷ್ಟ್ರಪತಿ ಹಾಗೂ ಕ್ಷಿಪಣಿ ಪಿತಾಮಹ ಎಂದೇ ಖ್ಯಾತಿ ಪಡೆದಿದ್ದ ಭಾರತ ರತ್ನ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಪುಣ್ಯತಿಥಿ. ಅವರಿಗೆ ಗೌರವ ಸಮರ್ಪಣೆ ಮಾಡಲು ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಭಾರತೀಯ ನೈರುತ್ಯ ರೈಲ್ವೆ ವಿಭಾಗವು ಅಬ್ದುಲ್ ಕಲಾಂ ಅವರ ಪ್ರತಿಮೆಯನ್ನು ನಿರ್ಮಾಣ ಮಾಡಿದೆ. ಅದು ಸಾಮಾನ್ಯ ಪ್ರತಿಮೆ ಅಲ್ಲ. ರೈಲ್ವೆ ನಿಲ್ದಾಣದ ಗುಜರಿ  ವಸ್ತುಗಳನ್ನು ಬಳಸಿ ಅದ್ಭುತ ಪ್ರತಿಮೆಯನ್ನು ನಿರ್ಮಿಸಲಾಗಿದೆ. 

    7.8 ಅಡಿ ಎತ್ತರವಿರುವ ಕಲಾಂ ಅವರ ಪ್ರತಿಮೆಯ ಚಿತ್ರಗಳನ್ನು ಭಾರತೀಯ ರೈಲ್ವೆ ಇಲಾಖೆ ಟ್ವಿಟರ್​​ನಲ್ಲಿ ಶೇರ್ ಮಾಡಿಕೊಂಡಿದೆ. ಪ್ರತಿಮೆಯು ಸುಮಾರು 800 ಕೆ.ಜಿ ತೂಕವಿದ್ದು, ರೈಲ್ವೆ ಇಲಾಖೆಯ ಗುಜರಿ ವಸ್ತುಗಳಾದ ನಟ್ಸ್​, ಬೋಲ್ಟ್ಸ್​, ವೈಯರ್ ರೋಪ್ಸ್​, ಸೋಪ್ ಕಂಟೈನರ್ಸ್​ ಮತ್ತು ಡ್ಯಾಂಪರ್ ಪೀಸ್​​ಗಳನ್ನು ಬಳಸಿ ನಿರ್ಮಿಸಲಾಗಿದೆ.


    ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಮೂರ್ತಿಯನ್ನು ನಿರ್ಮಿಸಲು ಸುಮಾರು 45 ದಿನಗಳನ್ನು ತೆಗೆದುಕೊಳ್ಳಲಾಗಿದೆ. ಇಂಜಿನಿಯರ್​ ಸಿಪಿ ಶ್ರೀಧರ್ ಮತ್ತು ಶ್ರೀನಿವಾಸ್ ರಾಜು ನೇತೃತ್ವದಲ್ಲಿ ಗುಜರಿ ವಸ್ತುಗಳಿಂದ ಮೂರ್ತಿಯನ್ನು ನಿರ್ಮಿಸಲಾಗಿದೆ. ಕೇವಲ 3,000 ರೂಪಾಯಿಯಲ್ಲಿ ಅಬ್ದುಲ್ ಕಲಾಂ ಅವರ ಪ್ರತಿಮೆಯನ್ನು ನಿರ್ಮಿಸಲಾಗಿದೆ ಎಂದು ಡಿಪೋ ಅಧಿಕಾರಿ ವಿಕಾಸ್ ಗುರ್ವಾನಿ ಹೇಳಿದ್ದಾರೆ.

    ಇದನ್ನೂ ಓದಿ:Karnataka CM: ಇಂದೇ ಹೊಸ ಸಿಎಂ ಆಯ್ಕೆ; ಸಂಜೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನ

    ಈ ಪ್ರತಿಮೆ ಜೊತೆಗೆ, ಸ್ವಾಮಿ ವಿವೇಕಾನಂದ ಮತ್ತು ‘ಮೇಕ್​ ಇನ್ ಇಂಡಿಯಾ‘ ಲಯನ್​ ಪ್ರತಿಮೆಗಳನ್ನು ಯಶವಂತಪುರ ಕೋಚಿಂಗ್ ಡಿಪೋ ತಂಡ ಸಿದ್ಧಪಡಿಸಿದೆ.



    ನಮ್ಮ ಇಲಾಖೆಯ ಸಿಬ್ಬಂದಿ ಅವರ ಕೆಲಸದ ಹೊರತಾಗಿಯೂ, ಈ ವಿಶಿಷ್ಟ ಪ್ರತಿಮೆಯನ್ನು ರಚಿಸಲು ಬಿಡುವು ಮಾಡಿಕೊಂಡಿದ್ದಾರೆ. ಸೃಜನಶೀಲತೆ ಒಂದೇ ವಿಷಯವನ್ನು ವಿಭಿನ್ನವಾಗಿ ನೋಡುತ್ತದೆ ಎಂದು ಕಲಾಂ ಸರ್ ಒಮ್ಮೆ ಹೇಳಿದ್ದರು. ಹೀಗಾಗಿ ನಾವು ಭಾರತದ ಕ್ಷಿಪಣಿ ಪಿತಾಮಹನಿಗೆ ಅತ್ಯಂತ ಸೃಜನಶೀಲ ಗೌರವವನ್ನು ನೀಡಲು ಬಯಸಿದ್ದೇವೆ ಎಂದು ಗುರ್ವಾನಿ ಹೇಳಿದರು.

    ಇದನ್ನೂ ಓದಿ: Gold Price Today: ಚಿನ್ನ ಖರೀದಿಸಲು ಇದೇ ಸರಿಯಾದ ಸಮಯ; 3 ದಿನದಿಂದ ಬೆಲೆ ಏರಿಕೆಯಾಗಿಲ್ಲ..!

    ಈ ರೀತಿಯ ಕಾರ್ಯಗಳಿಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕೆಲಸದಲ್ಲಿ ಪಾಲ್ಗೊಂಡ ಎಲ್ಲರಿಗೂ ಕೃತಜ್ಞತೆ ಸಲ್ಲಿಸಲಾಗುತ್ತಿದೆ. ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ತಿಳಿಸಿದ್ದಾರೆ. ಈ ಮೂರ್ತಿ ಎಲ್ಲರಿಗೂ ಕಾಣುವಂತೆ ಕೇಂದ್ರ ರೈಲ್ವೇ ನಿಲ್ದಾಣದಲ್ಲಿ ಇಡಬೇಕು ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.

    ಯಶವಂತಪುರ ರೈಲ್ವೆ ನಿಲ್ದಾಣದಿಂದ ತುಮಕೂರು ಕಡೆಗೆ ಸಂಚರಿಸುವ ಪ್ರಯಾಣಿಕರು ಈ ಪ್ರತಿಮೆಯನ್ನು ನೋಡಬಹುದಾಗಿದೆ.
    Published by:Latha CG
    First published: