HOME » NEWS » State » BENGALURU URBAN KARNATAKA CM BS YEDIYURAPPA LAUNCH FREE VACCINE DRIVE FOR ABOVE 18 YEARS FREE VACCNATION FOR ALL SCT

Free Vaccine For All: ಡಿಸೆಂಬರ್​ ಅಂತ್ಯದೊಳಗೆ ರಾಜ್ಯದೆಲ್ಲರಿಗೂ ಕೊರೋನಾ ಲಸಿಕೆ; ಲಸಿಕಾ ಮೇಳಕ್ಕೆ ಸಿಎಂ ಯಡಿಯೂರಪ್ಪ ಚಾಲನೆ

Karnataka Free Vaccine Drive: ರಾಜ್ಯದಲ್ಲಿ ಇಂದು 7 ಲಕ್ಷ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಈಗಾಗಲೇ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಲಸಿಕೆ ಸರಬರಾಜು ಮಾಡಲಾಗಿದೆ.

news18-kannada
Updated:June 21, 2021, 11:41 AM IST
Free Vaccine For All: ಡಿಸೆಂಬರ್​ ಅಂತ್ಯದೊಳಗೆ ರಾಜ್ಯದೆಲ್ಲರಿಗೂ ಕೊರೋನಾ ಲಸಿಕೆ; ಲಸಿಕಾ ಮೇಳಕ್ಕೆ ಸಿಎಂ ಯಡಿಯೂರಪ್ಪ ಚಾಲನೆ
ಸಿಎಂ ಬಿಎಸ್​ ಯಡಿಯೂರಪ್ಪ
  • Share this:
ಬೆಂಗಳೂರು (ಜೂನ್ 21): ದೇಶದ 18 ವರ್ಷ ಮೇಲ್ಪಟ್ಟವರೆಲ್ಲರಿಗೂ ಉಚಿತವಾಗಿ ಕೊರೋನಾ ಲಸಿಕೆ ನೀಡುವ ಲಸಿಕಾ ಮೇಳಕ್ಕೆ ಇಂದು ಚಾಲನೆ ನೀಡಲಾಗಿದೆ. ಈ ಲಸಿಕಾ ಮಹಾ ಅಭಿಯಾನಕ್ಕೆ ಬೆಂಗಳೂರಿನಲ್ಲಿ ಚಾಲನೆ ನೀಡಿದ ಸಿಎಂ ಬಿ.ಎಸ್. ಯಡಿಯೂರಪ್ಪ, ಕರ್ನಾಟಕದಲ್ಲಿ ಇಂದು ಒಂದೇ ದಿನ 7 ಲಕ್ಷ ಜನರಿಗೆ ಕೊರೋನಾ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದಿದ್ದಾರೆ.

18 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ ಕೇಂದ್ರದ ಮೂಲಕ ಕೋವಿಡ್ ಲಸಿಕೆ ನೀಡುತ್ತಿರುವುದು ಸಂತೋಷದ ವಿಷಯ. ರಾಜ್ಯದಲ್ಲಿ ಇಂದು 7 ಲಕ್ಷ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಈಗಾಗಲೇ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಲಸಿಕೆ ಸರಬರಾಜು ಮಾಡಲಾಗಿದೆ. ಈ ಅವಕಾಶವನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು. ಆದಷ್ಟು ಬೇಗ ಕೊವೀಡ್ ಕೊನೆಯಾಗಿ ಜನರು ನೆಮ್ಮದಿಯಿಂದ ಬದುಕಲಿ ಎಂದು ದೇವರಲ್ಲಿ ನಾನು ಪ್ರಾರ್ಥನೆ ಮಾಡಿಕೊಳ್ಳುತ್ತೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.




ನಾವು ನಿರೀಕ್ಷೆಗೆ ತಕ್ಕಂತೆ ಲಾಕ್ ಡೌನ್ ಸಡಿಲಿಕೆ ಮಾಡಿ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದೇವೆ. ನಾವು ಎಷ್ಟೇ ಅನುಕೂಲ ಮಾಡಿಕೊಟ್ಟರೂ ಜನರು ಎಚ್ಚರಿಕೆಯಿಂದ ಇರಬೇಕು. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಎಲ್ಲರೂ ಕೊರೋನಾ ಲಸಿಕೆಯನ್ನು ಪಡೆಯಬೇಕು. ಇದಕ್ಕಾಗಿ ಇಂದು ದೇಶಾದ್ಯಂತ ಕೋವಿಡ್ ಲಸಿಕಾ ಅಭಿಯಾನ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.ಇದನ್ನೂ ಓದಿ: Free Vaccine: 18 ವರ್ಷ ಮೇಲ್ಪಟ್ಟವರೆಲ್ಲರಿಗೂ ಇಂದಿನಿಂದ ಉಚಿತ ಕೊರೋನಾ ಲಸಿಕೆ; ಯೋಗ ದಿನಕ್ಕೆ ಮೋದಿ ಕೊಡುಗೆ

ಇದೇ ವೇಳೆ ಮಾತನಾಡಿದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ದಿನವಾಗಿರುವ ಇಂದು ಲಸಿಕಾ ಮೇಳದ ಮೂಲಕ ದೇಶದೆಲ್ಲರಿಗೂ ಉಚಿತ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಕರ್ನಾಟಕದಲ್ಲಿ ಇಂದು ಒಂದೇ ದಿನ 7 ಲಕ್ಷ ಕೊರೋನಾ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. 18 ವರ್ಷ ಮೇಲ್ಪಟ್ಟವರು ಮೊದಲ ಡೋಸ್, 45 ವರ್ಷ ಮೇಲ್ಪಟ್ಟವರು ಎರಡನೇ ಡೋಸ್ ಲಸಿಕೆ ಪಡೆಯಬೇಕು. ಡಿಸೆಂಬರ್ ಅಂತ್ಯದೊಳಗೆ ಎಲ್ಲರಿಗೂ ಕೊರೋನಾ ಲಸಿಕೆ ನೀಡಿ, ಕೋವಿಡ್​ನಿಂದ ಮುಕ್ತರನ್ನಾಗಿಸುವ ಗುರಿ ನಮ್ಮ ಸರ್ಕಾರದ್ದು ಎಂದು ಹೇಳಿದ್ದಾರೆ.

ಇಂದಿನಿಂದ ಭಾರತದ 18 ವರ್ಷ ಮೇಲ್ಪಟ್ಟವರೆಲ್ಲರಿಗೂ ಉಚಿತವಾಗಿ ಕೊರೋನಾ ಲಸಿಕೆ ನೀಡಲಾಗುತ್ತದೆ. ಈ ಮೂಲಕ ರಾಜ್ಯ ಸರ್ಕಾರಗಳ ಮೇಲಿದ್ದ ಲಸಿಕೆಯ ಖರ್ಚಿನ ಹೊರೆಯನ್ನು ಕೇಂದ್ರ ಸರ್ಕಾರ ಇಳಿಸಿದೆ. ಇಂದಿನಿಂದ ಯಾವ ರಾಜ್ಯ ಸರ್ಕಾರವೂ ಕೊರೋನಾ ಲಸಿಕೆಗಾಗಿ ಖರ್ಚು ಮಾಡಬೇಕಾಗಿಲ್ಲ. ಈ ಮೊದಲು 45 ವರ್ಷ ಮೇಲ್ಪಟ್ಟವರು ಉಚಿತ ಲಸಿಕೆಗಳನ್ನು ಪಡೆಯುತ್ತಿದ್ದರು. ಇನ್ನು 18 ವರ್ಷ ಮೇಲ್ಪಟ್ಟವರಿಗೂ ಅದು ಅನ್ವಯವಾಗಲಿದೆ.



ಮೇ 1ರಿಂದ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಕೊರೋನಾ ಲಸಿಕಾ ನೀತಿಯ ಅನುಸಾರ ಶೇ. 50ರಷ್ಟು ಲಸಿಕೆಗಳನ್ನು ಕೇಂದ್ರ ಸರ್ಕಾರ ಖರೀದಿಸಿ ನೀಡುತ್ತಿತ್ತು. ಈ ಲಸಿಕೆಗಳನ್ನು 45 ವರ್ಷ ಮೇಲ್ಪಟ್ಟವರಿಗೆ, ಹೆಲ್ತ್​ ಕೇರ್, ಫ್ರಂಟ್​ಲೈನ್ ವರ್ಕರ್​ಗಳಿಗೆ ನೀಡಲಾಗುತ್ತಿತ್ತು. ಈ ವಲಯದವರು ಉಚಿತವಾಗಿ ಕೊರೋನಾ ಲಸಿಕೆ ಪಡೆಯಬಹುದಾಗಿತ್ತು. ಹಾಗೇ, ಉಳಿದ ಶೇ.50ರಷ್ಟು ಲಸಿಕೆಗಳಲ್ಲಿ ಶೇ. 25ರಷ್ಟು ಲಸಿಕೆಗಳನ್ನು ಉತ್ಪಾದನಾ ಸಂಸ್ಥೆಗಳು ನೇರವಾಗಿ ರಾಜ್ಯ ಸರ್ಕಾರಗಳಿಗೆ ಹಾಗೂ ಇನ್ನುಳಿದ ಶೇ. 25ರಷ್ಟು ಲಸಿಕೆಗಳನ್ನು ಖಾಸಗಿಯವರಿಗೆ ನೀಡಬಹುದಾಗಿತ್ತು.

ಆದರೆ, ಹೊಸ ಲಸಿಕಾ ನೀತಿಯ ಪ್ರಕಾರ ಕೇಂದ್ರ ಸರ್ಕಾರವೇ ಇನ್ನುಮುಂದೆ ರಾಜ್ಯ ಸರ್ಕಾರಗಳಿಗೆ ಕೊರೋನಾ ಲಸಿಕೆಗಳನ್ನು ಪೂರೈಕೆ ಮಾಡಲಿದೆ. ಇದರಿಂದ ರಾಜ್ಯ ಸರ್ಕಾರಗಳ ಮೇಲಿನ ಲಸಿಕಾ ವೆಚ್ಚದ ಹೊರೆ ಇಳಿದಂತಾಗಿದೆ. ಜೊತೆಗೆ, ಶೇ. 25ರಷ್ಟು ಲಸಿಕೆಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರವೇ ಪೂರೈಕೆ ಮಾಡುತ್ತದೆ. ಆ ಆಸ್ಪತ್ರೆಗಳು ನಿಗದಿತ ಹಣಕ್ಕಿಂತ ಹೆಚ್ಚು ದರವನ್ನು ಪಡೆಯುವಂತಿಲ್ಲ.
Youtube Video

ಕೇಂದ್ರ ಸರ್ಕಾರ ಜಾರಿಗೆ ತರಲಿರುವ ಹೊಸ ಲಸಿಕಾ ನೀತಿಯ ಪ್ರಕಾರ, ಭಾರತದ ಶೇ. 75ರಷ್ಟು ಜನರ ಕೊರೋನಾ ಲಸಿಕೆಗಳ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ವಹಿಸಿಕೊಳ್ಳಲಿದೆ. ಲಸಿಕೆ ಉತ್ಪಾದನಾ ಸಂಸ್ಥೆಗಳು ಉತ್ಪಾದಿಸುವ ಶೇ. 75ರಷ್ಟು ಲಸಿಕೆಗಳನ್ನು ಕೇಂದ್ರ ಸರ್ಕಾರವೇ ಖರೀದಿಸಿ ಅದನ್ನು ರಾಜ್ಯ ಸರ್ಕಾರಗಳಿಗೆ ಕಳುಹಿಸಲಿದೆ.
Published by: Sushma Chakre
First published: June 21, 2021, 11:35 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories