ಬೆಂಗಳೂರು(ಜು.31): ರಾಜ್ಯದ ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಕ್ಯಾಬಿನೆಟ್ ನಲ್ಲಿ ಮಂತ್ರಿ ಆಗಲು ಕಸರತ್ತು ನಡೆಸುತ್ತಿರುವ ಸಚಿವ ಸ್ಥಾನದ ಆಕಾಂಕ್ಷಿಗಳು, ಇವಾಗ ಮಾಜಿ ಸಿಎಂ ಯಡಿಯೂರಪ್ಪ ಮನೆ ಸುತ್ತಾ ರೌಂಡ್ ಹಾಕ್ತಿದ್ದಾರೆ.. ಮಾಜಿ ಮುಖ್ಯಮಂತ್ರಿ ಗಳ ಕಾವೇರಿ ನಿವಾಸದ ಬಳಿ ದಿನ ನಿತ್ಯ ಶಾಸಕರು ಬರ್ತಿದ್ದು, ತಮಗೆ ಸಚಿವ ಸ್ಥಾನ ಕೊಡಿಸುವಂತೆ ದುಂಬಾಲು ಬಿದ್ದಿದ್ದಾರೆ.
ಇನ್ನು, ಈಗಾಗಲೇ ಯಡಿಯೂರಪ್ಪ ಕೂಡ ಮಂತ್ರಿ ಮಂಡಲದ ವಿಷಯವಾಗಿ ನಾನು ಮಧ್ಯಪ್ರವೇಶ ಮಾಡಲ್ಲ ಎಂದಿದ್ದಾರೆ. ಜೊತೆಗ ನನ್ನ ಬಳಿಯೂ ಯಾರ ಕೂಡ ಬರಬಾರದು ಎಂದು ಆದೇಶಿಸಿದ್ದಾರೆ. ಇಷ್ಟಾದರೂ ಕೂಡ ಸುಮ್ಮನಾಗದ ಸಚಿವ ಸ್ಥಾನದ ಆಕಾಂಕ್ಷಿಗಳು ಯಡಿಯೂರಪ್ಪ ಭೇಟಿಗೆ ಬರುತ್ತಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದಲೂ ನಿತ್ಯ ಶಾಸಕರು ಕಾವೇರಿ ನಿವಾಸಕ್ಕೆ ಬರುತ್ತಿದ್ದು, ಇವತ್ತು ಬೆಳಿಗ್ಗೆಯಿಂದಲೂ ಒಂದಷ್ಟು ಜನ ಶಾಸಕರು ಕಾವೇರಿ ಗೆ ಬಂದಿದ್ರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಮುರುಗೇಶ್ ನಿರಾಣಿ, ರೇಣುಕಾಚಾರ್ಯ, ಶಿವನಗೌಡ ನಾಯಕ್ ಸೇರಿದಂತೆ ಹಲವು ಶಾಸಕರು ಬಿಎಸ್ವೈ ಭೇಟಿಗೆ ಆಗಮಿಸಿದ್ರು. ಆದರೆ ಯಡಿಯೂರಪ್ಪ ಸ್ನಾನಕ್ಕೆ ತೆರಳಿದ್ದಾರೆಂದು ಆವರ ಆಪ್ತರು ಹೇಳಿದ ನಂತರ ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ಸು ತೆರಳಿದ್ರು. ಎಲ್ಲೋ ಒಂದು ಕಡೆ ಶಾಸಕರ ಭೇಟಿಗೆ ಮಾಜಿ ಸಿಎಂ ಯಡಿಯೂರಪ್ಪ ಇಚ್ಚಿಸುತ್ತಿಲ್ಲ ಎಂದು ಹೇಳಲಾಗ್ತಿದೆ.
ಇದನ್ನೂ ಓದಿ:ಆನ್ಲೈನ್ ಗೇಮ್ ಆಡಿ 40,000 ಹಣ ಕಳೆದುಕೊಂಡ ಹುಡುಗ; ತಾಯಿ ಬೈದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ..!
ಈಗಾಗಲೇ ಅಧಿಕಾರದಿಂದ ಕೆಳಗೆ ಇಳಿದಿರುವ ಮಾಜಿ ಸಿಎಂ ಯಡಿಯೂರಪ್ಪ ಸದ್ಯಕ್ಕೆ ಕಾವೇರಿ ನಿವಾಸದಲ್ಲಿ ಸುಮ್ಮನೆ ಇದ್ದಾರೆ. ಆದರೆ ಬಂದ ಶಾಸಕರ ಭೇಟಿಗೆ ಮಾತ್ರ ಅವರು ಮನಸ್ಸು ಮಾಡುತ್ತಿಲ್ಲ. ಯಾಕೆಂದರೆ ಹೀಗಾಗಲೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯನ್ನು ವಿರೋಧ ಪಕ್ಷಗಳು ರಬ್ಬರ್ ಸ್ಟ್ಯಾಂಪ್ ಸಿಎಂ ಎಂದು ಟೀಕೆ ಮಾಡುತ್ತಿವೆ. ಹೀಗಾಗಿ ಮಂತ್ರಿ ಮಂಡಲ ದಲ್ಲಿ ಏನಾದರೂ ತಾನು ಮಧ್ಯಪ್ರವೇಶ ಮಾಡಿದ್ರೆ ಎಲ್ಲಿ ತಾನು ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಬೇಕಾಗುತ್ತದೆ ಎಂದು ಶಾಸಕರ ಭೇಟಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗ್ತಿದೆ.
ಮಂತ್ರಿ ಮಂಡಲ ಅನ್ನೋದು ಜೇನು ಗೂಡಿಗೆ ಕೈ ಹಾಕಿದಂತಾಗಿದೆ. ಬಿಜೆಪಿ ಸರ್ಕಾರದ ಅವಧಿ ಇನ್ನೂ 21 ತಿಂಗಳು ಮಾತ್ರ. ಹೀಗಾಗಿ ಮಂತ್ರಿ ಸ್ಥಾನ ಪಡೆಯಲು ಹಿರಿಯರು ಸೇರಿದಂತೆ ಕಿರಿಯರು ಪೈಪೋಟಿಗಿಳಿದಿದ್ದಾರೆ. ಇಂತವರನ್ನು ಸಮಾಧಾನ ಪಡಿಸಲು ಸಿಎಂ ಬಸವರಾಜ್ ಬೊಮ್ಮಾಯಿ ಅವ್ರು ಯಾವ ರೀತಿ ತಂತ್ರ ಮಾಡ್ತಾರೆ ಎಂಬುದೇ ಸದ್ಯಕ್ಕೆ ಇರುವ ಕುತೂಹಲ.
ಇದನ್ನೂ ಓದಿ:Karnataka Cabinet Expansion: ಬೊಮ್ಮಾಯಿ ಸಂಪುಟ ಸೇರಲು ಬೆಳಗಾವಿ ಬಿಜೆಪಿ ಶಾಸಕರಲ್ಲಿ ತೀವ್ರ ಪೈಪೋಟಿ; 13 ಮಂದಿ ಪೈಕಿ ಯಾರಿಗೆ ಒಲಿಯಲಿದೆ ಅದೃಷ್ಟ?
ಸದ್ಯ ಮಂತ್ರಿ ಮಂಡಲ ಏನೇ ಇದ್ರು ಸಿಎಂ ಬಸವರಾಜ್ ಬೊಮ್ಮಾಯಿ ಅವ್ರೇ ನೋಡಿಕೊಳ್ಳಬೇಕು ಎಂದು ಮಾಜಿ ಸಿಎಂ ಯಡಿಯೂರಪ್ಪ ಕೂಡ ಸಂದೇಶ ರವಾನೆ ಮಾಡಿದ್ದಾರೆ. ಹೀಗಾಗಿ ಬೊಮ್ಮಾಯಿ ಇದೀಗ ಯಾವ ರೀತಿ ಮಂತ್ರಿ ಮಂಡಲ ಮಾಡೋದು, ಯಾರಿಗೆ ಮಂತ್ರಿ ಮಂಡಲದಲ್ಲಿ ಸ್ಥಾನ ಕೊಡಬೇಕು ಎಂದು ಇಕ್ಕಟ್ಟಿನಲ್ಲಿ ಸಿಲುಕಿರೋದಂತೂ ಸತ್ಯ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ