Karnataka Next CM: ಇವತ್ತಿಂದ ಬಿಜೆಪಿ ಅವನತಿ ಆರಂಭ, ಪಕ್ಷ ಸರ್ವನಾಶ: ರುದ್ರಮುನಿ ಸ್ವಾಮೀಜಿ

Rudramuni Seer on BS Yediyurappa Resignation: ಅವರ ನಿರ್ಗಮನವನ್ನು ನೋಡಿದೆವು, ಅದು ಗೌರವಯುತವಾದ ನಿರ್ಗಮನವಾಗಿರಲಿಲ್ಲ. ಯಾವುದೇ ಪಕ್ಷವಾಗಲಿ, ಅದು ಕಾಂಗ್ರೆಸ್, ಜೆಡಿಎಸ್​ ಆಗಲಿ ಪಕ್ಷ ಕಟ್ಟಿ ಬೆಳೆಸಿದವರನ್ನು ಒಳ್ಳೆಯ ರೀತಿಯಲ್ಲಿ ನಡೆಸಿಕೊಳ್ಳಬೇಕು. ಆಗಲೇ ಅದೊಂದು ಘನತೆ ಎಂದರು.

ರುದ್ರಮುನಿ ಸ್ವಾಮೀಜಿ

ರುದ್ರಮುನಿ ಸ್ವಾಮೀಜಿ

  • Share this:
ಬೆಂಗಳೂರು: ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ವೀರಶೈವ- ಲಿಂಗಾಯತ ನಾಯಕ ಯಡಿಯೂರಪ್ಪ ಅವರನ್ನು ಬಿಜೆಪಿ ಹೈಕಮಾಂಡ್​​ ಮುಂದುವರಿಸಬೇಕು. ಈಗ ಪಡೆದಿರುವ ರಾಜಿನಾಮೆಯನ್ನು ವಾಪಸ್​ ಪಡೆಯಬೇಕು ಎಂದು ರುದ್ರಮುನಿ ಸ್ವಾಮೀಜಿ ಮಂಗಳವಾರ ಬಿಜೆಪಿಯ ಹೈಕಮಾಂಡ್​ ವಿರುದ್ದ ಗುಡುಗಿದ್ದಾರೆ.

ಮುಖ್ಯಮಂತ್ರಿಸ್ಥಾನದಿಂದ ಬಿಎಸ್​ ಯಡಿಯೂರಪ್ಪ ಅವರನ್ನು ಇಳಿಸಿ ಇಡೀ ರಾಜ್ಯದಲ್ಲೇ ಅತ್ಯಂತ ಪ್ರಬಲ ಸಮುದಾಯವನ್ನು ಎದುರು ಹಾಕಿಕೊಳ್ಳಲಾಗಿದೆ. ಈ ಕಾರಣದಿಂದ ಪಕ್ಷಕ್ಕೆ ನಷ್ಟವಾಗುತ್ತದೆ ಎಂದು ಹೇಳಿದರು.

ಯಡಿಯೂರಪ್ಪ ಅವರು ಕೇವಲ ಲಿಂಗಾಯತರ ನಾಯಕರಾಗಿ ಮಾತ್ರ ಇರಲಿಲ್ಲ, ಅವರು ಎಲ್ಲಾ ಸಮುದಾಯದವರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಶಕ್ತಿ ಇದೆ ಆದ ಕಾರಣ ಯಡಿಯೂರಪ್ಪ ಅಂದ್ರೆ ಅವರು ವ್ಯಕ್ತಿ ಅಲ್ಲ, ಅದು ಒಂದು ಶಕ್ತಿ. ಕರ್ನಾಟಕದಲ್ಲಿ ಬಿಜೆಪಿ ಇಷ್ಟು ಎತ್ತರಕ್ಕೆ ಬೆಳೆದು ಸರ್ಕಾರ ನಡೆಸಿದೆ ಎಂದರೆ ಅದಕ್ಕೆಲ್ಲಾ ಯಡಿಯೂರಪ್ಪ ಅವರ ಶ್ರಮ, ನಿಷ್ಟೆ ಕಾರಣ ಹೊರತು ಬೇರೆನೂ ಅಲ್ಲ ಎಂದಿದ್ದಾರೆ

ಯಡಿಯೂರಪ್ಪ ಅವರು ಪಕ್ಷದ ಸಂಘಟನೆಗೆ ನಿಂತಾಗ ಬಿಜೆಪಿ ಹೊಂದಿದ್ದ ಸ್ಥಾನಗಳು ಕೇವಲ ಎರಡು. ಆಗ ಇಡೀ ಹಳ್ಳಿ- ಹಳ್ಳಿಗಳನ್ನು ಸುತ್ತಾಡಿ ಪಕ್ಷವನ್ನ ಏಕಾಂಗಿಯಾಗಿ ಸಂಘಟಿಸಿದ್ದು ಇದೇ ಯಡಿಯೂರಪ್ಪ ಅವರು, ಅವರನ್ನು ಪಕ್ಷವು ಗೌರವಯುತವಾಗಿ ನಡೆಸಿಕೊಳ್ಳಬೇಕಿತ್ತು ಆದರೆ ಅವರಿಗೆ ಅವಮಾನ ಮಾಡಿದೆ. ದಕ್ಷಿಣ ಭಾರತದಲ್ಲಿ ಏನಾದರೂ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದಾದರೆ ಅದಕ್ಕೆ ಯಡಿಯೂರಪ್ಪ ಅವರೇ ಕಾರಣ.

ನಿನ್ನೆ ಅವರ ನಿರ್ಗಮನವನ್ನು ನೋಡಿದೆವು, ಅದು ಗೌರವಯುತವಾದ ನಿರ್ಗಮನವಾಗಿರಲಿಲ್ಲ. ಯಾವುದೇ ಪಕ್ಷವಾಗಲಿ, ಅದು ಕಾಂಗ್ರೆಸ್, ಜೆಡಿಎಸ್​ ಆಗಲಿ ಪಕ್ಷ ಕಟ್ಟಿ ಬೆಳೆಸಿದವರನ್ನು ಒಳ್ಳೆಯ ರೀತಿಯಲ್ಲಿ ನಡೆಸಿಕೊಳ್ಳಬೇಕು. ಆಗಲೇ ಅದೊಂದು ಘನತೆ ಎಂದರು.

ಕೊರೊನ ಮೂರನೇ ಅಲೆ ಪ್ರಾರಂಭವಾಗುತ್ತದೆ ಎನ್ನುವ ಮುನ್ಸೂಚನೆ ಇದೆ. ಮೆಡಿಸಿನ್ , ಟ್ಯಾಬ್ಲೆಟ್​ ಕೊಡುವುದಕ್ಕೆ ಮತ್ತೊಬ್ಬ ಮುಖ್ಯಮಂತ್ರಿಯನ್ನು ಮಾಡಿದಂತಾಗುತ್ತದೆ. ಹೊಸಬರಿಗೆ ಆಡಳಿತ ತಿಳಿದುಕೊಳ್ಳುವಷ್ಟರಲ್ಲೇ ಎಲ್ಲಾ ಮುಗಿದು ಹೋಗಿರುತ್ತದೆ.

ಯಡಿಯೂರಪ್ಪ ಅವರ ರಾಜಿನಾಮೆ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಸರಿಯಾಗಿ ನಡೆದುಕೊಳ್ಳಲಿಲ್ಲ ಇವತ್ತಿನಿಂದ ಬಿಜೆಪಿಯ ಅವನತಿ ಪ್ರಾರಂಭವಾಗುತ್ತಿದೆ, ಬಿಜೆಪಿ ಸಂಪೂರ್ಣವಾಗಿ ಇಡೀ ರಾಜ್ಯದಲ್ಲಿ ಸರ್ವನಾಶವಾಗುತ್ತದೆ ಎಂದು ರುದ್ರಮುನಿ ಸ್ವಾಮೀಜಿ ಕಿಡಿಕಾರಿದರು.

ಇಡೀ ಕರ್ನಾಟಕದಲ್ಲಿ ಯಡಿಯೂರಪ್ಪ ಅವರು ಬಿಜೆಪಿ ಜೊತೆ ಇಲ್ಲದಿದ್ದರೆ ಪಕ್ಷ ಇರುವುದಿಲ್ಲ , ಅವರು ಇದ್ದರೆ ಅವರ ಜೊತೆ ಯಾರಾದರೂ ಇರುತ್ತಾರೆ, ಇಲ್ಲದಿದ್ದರೆ ಯಾರು ಇರುತ್ತಾರೆ ಎಂದು ಪರೋಕ್ಷವಾಗಿ ಹೈಕಮಾಂಡ್​ ವಿರುದ್ದ ಹರಿಹಾಯ್ದರು.

ಯಡಿಯೂರಪ್ಪ ಅವರು ತಮ್ಮ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡುತ್ತಾರೆ ಎಂದು ವದಂತಿ ಹಬ್ಬಿದಾಗ ಸಾಕಷ್ಟು ಜನ ಸ್ವಾಮೀಜಿಗಳು ಬಿಎಸ್​ವೈ ಪರವಾಗಿ ದನಿ ಎತ್ತಿದ್ದರು ಅಲ್ಲದೇ, 500 ಮಠಾಧೀಶರು ಸೇರಿ ಬೃಹತ್​​ ಸಮಾವೇಶ ನಡೆಸಿದ್ದರು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:HR Ramesh
First published: