HOME » NEWS » State » BENGALURU URBAN KARNATAKA BJP IN CHARGE ARUN SINGH WARNS PARTY WILL TAKE ACTION WHO GIVES ANTI PARTY STATEMENTS SESR

ಪಕ್ಷ ವಿರೋಧಿ ಹೇಳಿಕೆಗಳನ್ನು ನೀಡಿದರೆ ಕ್ರಮ; ಬಂಡಾಯ ನಾಯಕರಿಗೆ ಅರುಣ್​ಸಿಂಗ್​ ಎಚ್ಚರಿಕೆ

ಪಕ್ಷಕ್ಕೆ ಮುಜುಗರವಾಗುವಂತಹ  ಹೇಳಿಕೆಗಳನ್ನು ಯಾರು ನೀಡಬಾರದು.  ಪಕ್ಷಕ್ಕೆ ನಷ್ಟ ಉಂಟಾಗುವಂತಹ ಹೇಳಿಕೆ ನೀಡದರೆ ಕ್ರಮ ಜರುಗಿಸಲಾಗುವುದು

news18-kannada
Updated:June 17, 2021, 8:35 PM IST
ಪಕ್ಷ ವಿರೋಧಿ ಹೇಳಿಕೆಗಳನ್ನು ನೀಡಿದರೆ ಕ್ರಮ; ಬಂಡಾಯ ನಾಯಕರಿಗೆ ಅರುಣ್​ಸಿಂಗ್​ ಎಚ್ಚರಿಕೆ
ಅರುಣ್​ ಸಿಂಗ್​
  • Share this:
ಬೆಂಗಳೂರು (ಜೂ. 17): ಯಡಿಯೂರಪ್ಪ ನಾಯಕತ್ವದ ವಿರುದ್ಧ ಪಕ್ಷದ ನಾಯಕರು ಪರ ಹಾಗೂ ವಿರೋಧ ಹೇಳಿಕೆ ನೀಡಿದರೆ ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಲಾಗುವುದು ಎಂದು ರಾಜ್ಯ ಉಸ್ತುವಾರಿ ಅರುಣ್​ ಸಿಂಗ್​ ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿ ಉದ್ಭವಿಸಿದ್ದ ನಾಯಕಟ್ಟಿನ ಬಿಕ್ಕಟ್ಟು ನಿವಾರಣೆಗೆ ಬಂದಿದ್ದ ಅವರು, ಇಂದು ಹಲವರು ಶಾಸಕರ ಅಭಿಪ್ರಾಯ ಸಂಗ್ರಹಿಸಿದರು. ಈ ವೇಳೆ ಅನೇಕರು ಯಡಿಯೂರಪ್ಪ ಪರವಾಗಿ ಮಾತನಾಡಿದರೆ, ವಿಧಾನಪರಿಷತ್​ ಸದಸ್ಯ ಎಚ್​ ವಿಶ್ವನಾಥ್​ ಸೇರಿದಂತೆ ಕೆಲವರು ಸಿಎಂ ಬದಲಾವಣೆಗೆ ಆಗ್ರಹಿಸಿದ್ದಾರೆ. ಶಾಸಕರಿಂದ ಅಭಿಪ್ರಾಯ ಸಂಗ್ರಹದ ಬಳಿಕ ಮಾತನಾಡಿದ ಅವರು, ನಾನು ಎಲ್ಲರ ಜೊತೆಯಲ್ಲೂ ಮಾತನಾಡಿದ್ದೇನೆ. ಪಕ್ಷದಲ್ಲಿ ಕೆಲವರು ಅಸಮಾಧಾನ ಹೊರ ಹಾಕಿರಬಹುದು. ಆದರೆ, ನಾವು ಪಕ್ಷದ ತತ್ವ ಸಿದ್ಧಾಂತಗಳಂತೆ ನಡೆದು ಕೊಳ್ಳಬೇಕು ಎಂದು ಎಚ್ಚರಿಸಿದ್ದಾರೆ.

ಅಷ್ಟೇ ಅಲ್ಲದೇ, ಕೇವಲ ಇಬ್ಬರು ಮೂವರು ಮಾತ್ರ ವಿರೋಧವಾಗಿ ಮಾತನಾಡಿದ್ದಾರೆ. ಇದರ ಬಗ್ಗೆ ನಾವು ಗಮನ ಹರಿಸಿದ್ದೇವೆ. ಈ ಎಲ್ಲ ಹೇಳಿಕೆಗಳನ್ನು ಪಕ್ಷದ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​ ಕೂಡ ಗಮನಿಸುತ್ತಿದ್ದಾರೆ. ಇಂತಹ ಹೇಳಿಕೆಗಳು ಕಾರ್ಯಕರ್ತರಿಗೆ ಸಮಸ್ಯೆಯಾಗುತ್ತಿದೆ. ಇದರ ಬಗ್ಗೆ ಗಂಭೀರವಾಗಿ ಗಮನಹರಿಸುತ್ತಿದ್ದೇವೆ. ಪಕ್ಷಕ್ಕೆ ಮುಜುಗರವಾಗುವಂತಹ  ಹೇಳಿಕೆಗಳನ್ನು ಯಾರು ನೀಡಬಾರದು.  ಪಕ್ಷಕ್ಕೆ ನಷ್ಟ ಉಂಟಾಗುವಂತಹ ಹೇಳಿಕೆ ನೀಡದರೆ ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಶಿಸ್ತು ಕ್ರಮಕ್ಕೆ ಮುಂದಾದ ಪಕ್ಷ
ಮುಖ್ಯಮಂತ್ರಿ ವಿರುದ್ಧದ ಬಹಿರಂಗ ಹೇಳಿಕೆ ನೀಡುವುದರಿಂದ ಪಕ್ಷ ರಾಜ್ಯ ಮಟ್ಟದಲ್ಲಿ ಮಾತ್ರವಲ್ಲದೇ ರಾಷ್ಟ್ರ ಮಟ್ಟದಲ್ಲಿ ಮುಜುಗರಕ್ಕೆ ಒಳಗಾಗುತ್ತದೆ. ಇದೇ ಹಿನ್ನಲೆ ಇನ್ನು ಮುಂದೆ ಯಾವುದೇ ಕಾರಣಕ್ಕೂ ಈ ರೀತಿಯ ಹೇಳಿಕೆ ನೀಡಬಾರದು. ಒಂದು ವೇಳೆ ಈ ಘಟನೆ ನಡೆದರೆ ರಾಜ್ಯ ಶಿಸ್ತು ಸಮಿತಿ ಕೇಂದ್ರದ ಶಿಸ್ತು ಸಮಿತಿಗೆ ಶಿಫಾರಸು ಮಾಡಿ ಕ್ರಮಕ್ಕೆ ಆಗ್ರಹಿಸಲಿದೆ.

ಇದನ್ನು ಓದಿ: ಈಗ ಪ್ರಧಾನಿ ಮೋದಿ ಎಷ್ಟು ಇಂಚಿನ ಎದೆ ಹೊಂದಿದ್ದಾರೆ ಎಂದು ಹೇಳಲಿ : ಸಿದ್ದರಾಮಯ್ಯ ವ್ಯಂಗ್ಯ

ಈಗಾಗಲೇ ಕಳೆದ ಒಂದುವರೆ ತಿಂಗಳಿನಿಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಎಂ.ಪಿ.ರೇಣುಕಾಚಾರ್ಯ, ಅರವಿಂದ್ ಬೆಲ್ಲದ, ಸಚಿವ ಸಿ ಪಿ ಯೋಗೇಶ್ವರ್, ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ, ಅವರ ವಿರುದ್ಧ ಕ್ರಮಕ್ಕೆ ಮುಂದಾಗುವಂತೆ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್​ ಪಾಟೀಲ್​ ಕೂಡ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ದೆಹಲಿಗೆ ಯತ್ನಾಳ್​​, ಬೆಲ್ಲದ ಭೇಟಿಸಿಎಂ ಯಡಿಯೂರಪ್ಪ ನಾಯಕತ್ವದ ಬಗ್ಗೆ ಅಪಸ್ವರ ಎತ್ತಿದವರಲ್ಲಿ ಸಿಪಿ ಯೋಗೇಶ್ವರ್​ ಹಾಗೂ ಎಚ್​ ವಿಶ್ವನಾಥ್​ ತಮ್ಮ ಅಭಿಪ್ರಾಯವನ್ನು ರಾಜ್ಯ ಉಸ್ತುವಾರಿ ಅರುಣ್​ ಸಿಂಗ್​ ಬಳಿ ತಿಳಿಸಿದರು. ಈ ವೇಳೆ ಅವರು ಯಡಿಯೂರಪ್ಪ ಸಿಎಂ ಆಗಿ ಮುಂದುವರೆಯ ಬಾರದು ಎಂಬುದಕ್ಕೆ ಕಾರಣ ಸಮೇತ ವಿವರಣೆ ನೀಡಿದರು ಎನ್ನಲಾಗಿದೆ.

ಇನ್ನು ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಮತ್ತು ಅರವಿಂದ ಬೆಲ್ಲದ ಮಾತ್ರ ಅವರ ಭೇಟಿಯಾಗಿಲ್ಲ. ತಮ್ಮ ಫೋನ್​ ಟ್ಯಾಪಿಂಗ್​ ಆಗಿದೆ ಎಂದು ಗಂಭೀರ ಆರೋಪ ನಡೆಸಿದ ಅವರು ಭೇಟಿ ವೇಳೆ ವಿವಿಧ ವಿಚಾರಗಳು ಪ್ರಸ್ತಾಪವಾಗಬಹುದು ಎಂಬ ಕಾರಣಕ್ಕೆ ಕಚೇರಿಗೆ ಮುಖ ಮಾಡಿಲ್ಲ ಎನ್ನಲಾಗಿದೆ.  ಇನ್ನು ಬಸನಗೌಡ ಪಾಟೀಲ್​ ಯತ್ನಾಳ ಗೆ ಈಗಾಗಲೇ ಪಕ್ಷದಿಂದ ನೋಟಿಸ್ ಜಾರಿಗೊಳಿಸಲಾಗಿದ್ದು, ಅವರು ಇದಕ್ಕೆ ಉತ್ತರಿಸುವ ವರೆಗೂ ಯಾವುದೇ ಪ್ರಮುಖ ವಿಚಾರಗಳ ಚರ್ಚೆಗೆ ಅವರನ್ನು ಆಹ್ವಾನಿಸದಿರಲು ತೀರ್ಮಾನ ನಡೆಸಲಾಗಿದ್ದು, ಈ ಹಿನ್ನಲೆ ಈ ಇಬ್ಬರು ದೆಹಲಿಗೆ ತೆರಳಿ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.
Published by: Seema R
First published: June 17, 2021, 8:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories