• Home
  • »
  • News
  • »
  • state
  • »
  • Yatnal- ArunSingh: ನಿಗದಿಯಾಗಿದ್ದ ಯತ್ನಾಳ್​ ಭೇಟಿ ಕೊನೆ ಕ್ಷಣದಲ್ಲಿ ರದ್ದು ಮಾಡಿದ ಅರುಣ್​ಸಿಂಗ್​​

Yatnal- ArunSingh: ನಿಗದಿಯಾಗಿದ್ದ ಯತ್ನಾಳ್​ ಭೇಟಿ ಕೊನೆ ಕ್ಷಣದಲ್ಲಿ ರದ್ದು ಮಾಡಿದ ಅರುಣ್​ಸಿಂಗ್​​

ಬಸನಗೌಡ ಪಾಟೀಲ್ ಯತ್ನಾಳ

ಬಸನಗೌಡ ಪಾಟೀಲ್ ಯತ್ನಾಳ

4.30ಕ್ಕೆ ನಿಗದಿಯಾಗಿದ್ದ ಈ ಭೇಟಿಯನ್ನು ಕಡೆಘಳಿಗೆಯಲ್ಲಿ ಅಂದರೆ, 4.15ಕ್ಕೆ ರದ್ದು ಮಾಡಲಾಗಿದೆ.

  • Share this:

    ಬೆಂಗಳೂರು (ಜೂ. 17): ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ವಿರುದ್ಧ ಎದ್ದಿರುವ ನಾಯಕತ್ವ ಅಪಸ್ವರ ಕುರಿತು ಇಂದು ಹಲವು ನಾಯಕರ  ಅಭಿಪ್ರಾಯವನ್ನು  ರಾಜ್ಯ ಉಸ್ತುವಾರಿ ಅರುಣ್​ ಸಿಂಗ್ ಸಂಗ್ರಹಿಸುತ್ತಿದ್ದಾರೆ. ಇದೇ ವೇಳೇ ​ ಬಸನಗೌಡ ಯತ್ನಾಳ್ ಗೂ ಅವಕಾಶ ನೀಡಲಾಗಿತ್ತು. ಆದರೆ, ಕಡೆ ಕ್ಷಣದಲ್ಲಿ ಅವರ​ ಭೇಟಿಯನ್ನು ನಿರಾಕರಿಸಲಾಗಿದೆ. ಇಂದು ರಾಜ್ಯದ 10ಕ್ಕೂ ಹೆಚ್ಚು ಮಂದಿ ಶಾಸಕರನ್ನು ಭೇಟಿಯಾಗಿ ಈಗಾಗಲೇ ಅಭಿಪ್ರಾಯ ಪಡೆದಿದ್ದಾರೆ. ಇದೇ ವೇಳೆ ಸಂಜೆ 4. 30ಕ್ಕೆ ಕೂಡ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರೊಂದಿಗೆ ಸಭೆಗೆ ಸಮಯ ನಿಗದಿಸಲಾಗಿತ್ತು, ಆದರೆ, ಈ ಭೇಟಿ ಸಮಯವನ್ನು ಅರುಣ್​ ಸಿಂಗ್​ ಅವರು ರದ್ದು ಮಾಡಿ, ಕಡೆಯ ಘಳಿಗೆಯಲ್ಲಿ ಯತ್ನಾಳ್​ಗೆ ಶಾಕ್​ ನೀಡಿದ್ದಾರೆ.  ಆ ಮೂಲಕ ಅವರ ವಿರುದ್ಧ ಪರೋಕ್ಷವಾಗಿ ಅವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.


    ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಸೇರಿದಂತೆ ಉಸ್ತುವಾರಿ ಅರುಣ್​ ಸಿಂಗ್​ ವಿರುದ್ಧ ಈ ಹಿಂದೆ ಯತ್ನಾಳ್​ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದರು. ಬಸನಗೌಡ ಯತ್ನಾಳ್​ ನಡುವಳಿಕೆ ಕುರಿತು ಈಗಾಗಲೇ ಹಿಂದಿನ ಕಾರ್ಯಕಾರಿ ಸಭೆಯಲ್ಲಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್ ಸೇರಿದಂತೆ ರಾಜ್ಯ ನಾಯಕರು​ ಕೂಡ ಈ ಕುರಿತು ಅರುಣ್​ ಸಿಂಗ್​ ಗಮನಕ್ಕೆ ತಂದಿದ್ದರು.


    ಈ ಕುರಿತು ನಿನ್ನೆ ಕೂಡ ಪ್ರತಿಕ್ರಿಯಿಸಿದ್ದ ಉಸ್ತುವಾರಿ ಅರುಣ್​ ಸಿಂಗ್​, ಶಾಸಕ ಯತ್ನಾಳ್ ಪಕ್ಷ ವಿರೋಧಿ ಹೇಳಿಕೆ ಹಿನ್ನೆಲೆ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದರು. ಎರಡು ತಿಂಗಳ ಹಿಂದೆಯೇ ಕ್ರಮ ಕೈಗೊಳ್ಳಲಾಗಿದೆ ಎಂದ ಅವರು, ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಮಾತ್ರ ತಿಳಿಸಿರಲಿಲ್ಲ.


    ಈ ಬೆಳವಣಿಗೆಗಳ ಬಳಿಕವೂ ಇಂದು ವಿವಿಧ ಶಾಸಕರೊಂದಿಗೆ ಅಭಿಪ್ರಾಯ ಸಂಗ್ರಹಿಸುವಾಗ ಬಸನಗೌಡ ಪಾಟೀಲ ಯತ್ನಾಳ ಅವರಿಂದ ಯಡಿಯೂರಪ್ಪ ಕುರಿತು ಅಭಿಪ್ರಾಯ ಸಂಗ್ರಹಿಸಲು ಅವಕಾಶ ನೀಡಲಾಗಿತ್ತು. 4.30ಕ್ಕೆ ನಿಗದಿಯಾಗಿದ್ದ ಈ ಭೇಟಿಯನ್ನು ಕಡೆಘಳಿಗೆಯಲ್ಲಿ ಅಂದರೆ, 4.15ಕ್ಕೆ ರದ್ದು ಮಾಡಲಾಗಿದೆ.


    ಮೂಲಗಳ ಪ್ರಕಾರ, ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಸಿಎಂ ವಿರುದ್ಧ ಬಹಿರಂಗ ಮಾತನಾಡುವ ಮೂಲಕ ವಿಪಕ್ಷಗಳ ಎದುರು ಸರ್ಕಾರಕ್ಕೆ ಸಾಕಷ್ಟು ಮುಜುಗರ ತರುವ ಯತ್ನ ನಡೆಸಿದ್ದಾರೆ. ಇದರಿಂದ ಆಡಳಿತದ ಮೇಲೂ ಕಪ್ಪು ಚುಕ್ಕೆ ಮೂಡಿದೆ. ಈ ಹಿನ್ನಲೆ ಅವರ ಮೇಲೆ ಈಗಾಗಲೇ ಪಕ್ಷದ ಶಿಸ್ತು ಸಮಿತಿ ಕ್ರಮಕ್ಕೆ ಮುಂದಾಗಿದ್ದು, ಅವರ ಅಭಿಪ್ರಾಯವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎನ್ನಲಾಗಿದೆ. ಅಲ್ಲದೇ, ಅವರಿಗೆ ದೆಹಲಿಗೆ ಬಂದು ಹೈ ಕಮಾಂಡ್​ ಮುಂದೆ ಅಭಿಪ್ರಾಯ ತಿಳಿಸುವಂತೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ.


    ಇದನ್ನು ಓದಿ: ಅರುಣ್​ ಸಿಂಗ್​​ ಭೇಟಿ ಮಾಡಿದ ಸಿ.ಪಿ.ಯೋಗೇಶ್ವರ್​; ಸಚಿವರ ಪ್ರತ್ಯೇಕ ಸಭೆಯಲ್ಲಿ ಸಿಪಿವೈ​​​​​​​ ಹೇಳಿದ್ದೇನು?


    ಯತ್ನಾಳ್​ಗೆ ನಿಗದಿಯಾಗಿದ್ದ ಕಾಲಾವಕಾಶದಲ್ಲಿ ಶಾಸಕ ಅರವಿಂದ ಬೆಲ್ಲದ, ಅರುಣ್​ ಸಿಂಗ್​ ಭೇಟಿಯಾಗಿ ಅಭಿಪ್ರಾಯ ಸಲ್ಲಿಸಲಿದ್ದಾರೆ.


    ಇದನ್ನು ಓದಿ: ಮಕ್ಕಳಲ್ಲ, ಕೆಳ ಮಧ್ಯಮ ವರ್ಗದವರ ಮೇಲೆ 3ನೇ ಅಲೆ ಸೋಂಕು ಪರಿಣಾಮಕಾರಿ


    ಇನ್ನು ಬೆಳಗ್ಗಿನಿಂದ ಈಗಾಗಲೇ ಶಾಸಕ ಪ್ರೀತಂ ಗೌಡ, ಎಂಪಿ ರೇಣುಕಾಚಾರ್ಯ, ಎಚ್‌ ವಿಶ್ವನಾಥ್‌, ಮಾಡಾಳು ವಿರೂಪಾಕ್ಷಪ್ಪ, ಅಪ್ಪಚ್ಚು ರಂಜನ್‌, ರಾಜೂಗೌಡ, ಅಭಯ್‌ ಪಾಟೀಲ್‌, ರಾಜ್‌ಕುಮಾರ್‌ ಪಾಟೀಲ್‌ ತೇಲ್ಕೂರ್‌,  ಬೆಳ್ಳಿ ಪ್ರಕಾಶ್‌ ಸೇರಿದಂತೆ ಹಲವು ನಾಯಕರು ಅರುಣ್​ ಸಿಂಗ್​ ಮುಂದೆ ಅಭಿಪ್ರಾಯ ತಿಳಿಸಿದ್ದಾರೆ.


    ಇನ್ನು ಈ ವೇಳೆ ವಿಶ್ವನಾಥ್​ ಸಿಎಂ ಯಡಿಯೂರಪ್ಪ ವಿರುದ್ಧ ಆರು ಅಂಶಗಳನ್ನು ಮಂಡಿಸುವ ಮೂಲಕ ಅವರ ನಾಯಕತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಅವರನ್ನು ಬದಲಾಯಿಸಿದರೆ, ಪಕ್ಷಕ್ಕೆ ಲಾಭಾವಾಗಲಿದೆ ಎಂದು ವಾದ ಮಂಡಿಸಿದ್ದಾರೆ. ಆದರೆ, ಬಿ ಎಸ್​ ಯಡಿಯೂರಪ್ಪ ಅವರ ಆಪ್ತ ಬಣ ಮಾತ್ರ ಸಿಎಂ ಪರ ಬ್ಯಾಟಿಂಗ್​ ನಡೆಸುವ ಮೂಲಕ ವಿಧಾನ ಪರಿಷತ್​ ಸದಸ್ಯ ಎಚ್​ ವಿಶ್ವನಾಥ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


    ಯತ್ನಾಳ್​ ಹೇಳಿದ್ದೇನು?


    ಇನ್ನು ಭೇಟಿ ಸಮಯ ರದ್ದಾದ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​, ಅರುಣ್ ಸಿಂಗ್ ಭೇಟಿ ಮಾಡಲು ನಾನು ಸಮಯ ಕೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರ ಜೊತೆಗೆ ಇಂದು ಅರುಣ್ ಸಿಂಗ್ ಭೇಟಿ ಮಾಡುವವರ ಪಟ್ಟಿಯನ್ನು ಕೂಡ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

    Published by:Seema R
    First published: