• Home
  • »
  • News
  • »
  • state
  • »
  • ಪದವಿ ವಿದ್ಯಾರ್ಥಿಗಳಿಗೆ ಕನ್ನಡ ಅಧ್ಯಯನ ಕಡ್ಡಾಯದ ವಿರುದ್ಧ PIL; ಕೇಂದ್ರಕ್ಕೆ High Court ಮಹತ್ವದ ಸೂಚನೆ

ಪದವಿ ವಿದ್ಯಾರ್ಥಿಗಳಿಗೆ ಕನ್ನಡ ಅಧ್ಯಯನ ಕಡ್ಡಾಯದ ವಿರುದ್ಧ PIL; ಕೇಂದ್ರಕ್ಕೆ High Court ಮಹತ್ವದ ಸೂಚನೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಪಿಯು ಹಂತದವರೆಗೆ ಭಾಷೆಯನ್ನು ಕಲಿಯದ ವಿದ್ಯಾರ್ಥಿಗಳಿಗೆ ಕ್ರಿಯಾತ್ಮಕ ಕನ್ನಡವನ್ನು ಮಾತ್ರ ನಿಗದಿಪಡಿಸಲಾಗಿದೆ ಎಂದು ಅವರು ಪ್ರತಿಪಾದಿಸಿದರು. ಇದರಿಂದ ವ್ಯವಹಾರಗಳಿಗೆ ಸಹಾಯ ಮಾಡುತ್ತದೆ ಎಂದು ಹೇಳಿದರು.

  • Share this:

ಬೆಂಗಳೂರು: ಪದವಿ ವಿದ್ಯಾರ್ಥಿಗಳಿಗೆ (Degree Students) ಕನ್ನಡವನ್ನು ಒಂದು ವಿಷಯವಾಗಿ ಅಧ್ಯಯನ ಮಾಡುವುದನ್ನು ಕಡ್ಡಾಯಗೊಳಿಸಿದ (compulsory subject) ಸರ್ಕಾರದ ಎರಡು ಆದೇಶಗಳನ್ನು ಪ್ರಶ್ನಿಸಿ PIL ಸಲ್ಲಿಸಲಾಗಿತ್ತು. ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತು ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ಹೈಕೋರ್ಟ್ (High Court) ಕೇಂದ್ರಕ್ಕೆ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ನೇತೃತ್ವದ ವಿಭಾಗೀಯ ಪೀಠವು ಮುಂದಿನ ವಿಚಾರಣೆಯ ದಿನಾಂಕವಾದ ನವೆಂಬರ್ 30 ರೊಳಗೆ ಈ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿದೆ. ಸಂಸ್ಕೃತ ಭಾರತಿ (ಕರ್ನಾಟಕ) ಟ್ರಸ್ಟ್, ಬೆಂಗಳೂರು ಮತ್ತು ಸಂಸ್ಕೃತ ಪ್ರಚಾರಕ್ಕೆ ಸಂಬಂಧಿಸಿದ ಇತರ ಮೂರು ಸಂಸ್ಥೆಗಳು ಈ ಅರ್ಜಿಯನ್ನು ಸಲ್ಲಿಸಿವೆ.


ಸರ್ಕಾರಿ ಆದೇಶಗಳ ಸಿಂಧುತ್ವದ ಬಗ್ಗೆ ಪ್ರಶ್ನೆ


ಕನ್ನಡವನ್ನು ಕಡ್ಡಾಯ ವಿಷಯವನ್ನಾಗಿ ಮಾಡುವಲ್ಲಿ ಆಗಸ್ಟ್ 7, 2021 ಮತ್ತು ಸೆಪ್ಟೆಂಬರ್ 15, 2021 ರ ದಿನಾಂಕದ ಸರ್ಕಾರಿ ಆದೇಶಗಳ ಸಿಂಧುತ್ವವನ್ನು ಪ್ರಶ್ನಿಸಿ, ಹಾಗೂ ಇದು ರಾಷ್ಟ್ರೀಯ ಶಿಕ್ಷಣ ನೀತಿ (NEP) ವಿರುದ್ಧವಾಗಿದೆ ಅರ್ಜಿ ಸಲ್ಲಿಸಲಾಗಿದೆ. ಇದಕ್ಕೂ ಮುನ್ನ ಮಾತನಾಡಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ ನಾವಡಗಿ, ಶಿಕ್ಷಣದಲ್ಲಿ ಕನ್ನಡಕ್ಕೆ ಪ್ರಾಧಾನ್ಯತೆ ನೀಡಲು ವಿಕೆ ಗೋಕಾಕ್ ಸಮಿತಿಯ ವರದಿಯ ಶಿಫಾರಸುಗಳಿಗೆ ಅನುಗುಣವಾಗಿ ಕನ್ನಡ ವಿಷಯ ಕಡ್ಡಾಯ ನೀತಿ ನಿರ್ಧಾರವಾಗಿದೆ, ಇದನ್ನು ರಾಜ್ಯ ಸರ್ಕಾರವು ಏಪ್ರಿಲ್ 1982 ರಲ್ಲಿ ಅಂಗೀಕರಿಸಿತು.


ರಾಷ್ಟ್ರೀಯ ಶಿಕ್ಷಣ ನೀತಿ ಅಡ್ಡಿಯಾಗುತ್ತದೆಯೇ?


ಪಿಯು ಹಂತದವರೆಗೆ ಭಾಷೆಯನ್ನು ಕಲಿಯದ ವಿದ್ಯಾರ್ಥಿಗಳಿಗೆ ಕ್ರಿಯಾತ್ಮಕ ಕನ್ನಡವನ್ನು ಮಾತ್ರ ನಿಗದಿಪಡಿಸಲಾಗಿದೆ ಎಂದು ಅವರು ಪ್ರತಿಪಾದಿಸಿದರು. ಇದರಿಂದ ವ್ಯವಹಾರಗಳಿಗೆ ಸಹಾಯ ಮಾಡುತ್ತದೆ ಎಂದು ಹೇಳಿದರು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಕೂಡ ರಾಜ್ಯ ಸರ್ಕಾರದ ನಿರ್ಧಾರವನ್ನು ಬೆಂಬಲಿಸುತ್ತದೆ ಎಂದು ಅವರು ವಾದಿಸಿದರು.


ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ವಾದ


ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಎಸ್‌ಎಸ್‌ ನಾಗಾನಂದ್‌, ‘ರಾಜ್ಯ ಸರ್ಕಾರವು ಕನ್ನಡ ಕಲಿಯುವಂತೆ ಇತರ ರಾಜ್ಯಗಳ ವಿದ್ಯಾರ್ಥಿಗಳನ್ನು ಒತ್ತಾಯಿಸಬಹುದು ಎಂದು ಎನ್‌ಇಪಿ ಹೇಳುವುದಿಲ್ಲ. ಅರ್ಜಿದಾರರ ಪ್ರಕಾರ, ಎರಡು ಸರ್ಕಾರಿ ಆದೇಶಗಳು ಅಲ್ಪಸಂಖ್ಯಾತ ಸಂಸ್ಥೆಗಳು, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಪ್ರವೇಶ ಮತ್ತು ಹಕ್ಕುಗಳಿಗೆ ಅಡ್ಡಿಯಾಗುತ್ತವೆ. ಏಕೆಂದರೆ ಈಗ ಭಾಷೆಯನ್ನು ಆಯ್ಕೆ ಮಾಡುವ ಆಯ್ಕೆಗಳನ್ನು ನಿರ್ಬಂಧಿಸಲಾಗಿದೆ. ಉನ್ನತ ಶಿಕ್ಷಣಕ್ಕಾಗಿ ಪಠ್ಯಕ್ರಮದ ಭಾಗವಾಗಿ ಯಾವುದೇ ನಿರ್ದಿಷ್ಟ ಭಾಷೆಯನ್ನು ಆಯ್ಕೆ ಮಾಡಲು ವಿದ್ಯಾರ್ಥಿಯ ಮೇಲೆ NEP-2020 ಯಾವುದೇ ನಿರ್ಬಂಧವನ್ನು ವಿಧಿಸುವುದಿಲ್ಲ ಎಂಬುದಕ್ಕೆ ಅವರು ಘೋಷಣೆಯನ್ನು ಕೋರಿದ್ದಾರೆ. ಸಂಸ್ಕೃತ (600), ಹಿಂದಿ (3,000), ಉರ್ದು (300 ಮತ್ತು ಇತರ ಭಾಷೆಗಳು (100) ಬೋಧಿಸುತ್ತಿದ್ದ ಅಂದಾಜು 1,32,300 ವಿದ್ಯಾರ್ಥಿಗಳು ಮತ್ತು 4,000 ಶಿಕ್ಷಕರ ಮೇಲೆ ರಾಜ್ಯ ಸರ್ಕಾರದ ಪರಿಣಾಮ ಬೀರಲಿದೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: Government School: ಪುತ್ತೂರಿನ ಈ ಸರಕಾರಿ ಶಾಲೆಯ ಕ್ಲಾಸ್ ರೂಂ ಫುಲ್ ಕೂಲ್ ಕೂಲ್; ಯಾಕೆ ಗೊತ್ತಾ?


ಕೊರೊನಾ ಮೂರನೇ ಅಲೆ ಭೀತಿ ಹಿನ್ನೆಲೆ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಭಾರೀ ಬದಲಾವಣೆ ತರಲಾಗಿದೆ. ಸಿಬಿಎಸ್ ಸಿ, ಐಸಿಎಸ್ ಇ ರೀತಿ ಪರೀಕ್ಷೆ ನಡೆಸಲು ಪಿಯು ಬೋರ್ಡ್ ಮುಂದಾಗಿದೆ. ವಾರ್ಷಿಕ ಪರೀಕ್ಷೆ ರೀತಿ ಮಧ್ಯವಾರ್ಷಿಕ ಪರೀಕ್ಷೆ ಆಯೋಜನೆ ಮಾಡಲು ಪಿಯು ಬೋರ್ಡ್ ದಿಢೀರ್ ನಿರ್ಧಾರ ತೆಗೆದುಕೊಂಡಿದೆ. ನವೆಂಬರ್ 29 ರಿಂದ ಡಿಸೆಂಬರ್ 10ರವರೆಗೆ ಪಿಯು ಮಧ್ಯ ವಾರ್ಷಿಕ ಪರೀಕ್ಷೆಗಳು ನಡೆಯಲಿವೆ.ಈ ಮೊದಲು ಮಧ್ಯ ವಾರ್ಷಿಕ ಪರೀಕ್ಷೆ ಜಿಲ್ಲಾ ಮಟ್ಟದಲ್ಲಿ ಪ್ರಶ್ನೆಪತ್ರಿಕೆ ತಯಾರಿ ಆಗುತ್ತಿತ್ತು. ಕಾಲೇಜು ಮಟ್ಟದಲ್ಲಿ ಪರೀಕ್ಷೆಯ ಮೌಲ್ಯಮಾಪನ ನಡೆಯುತ್ತಿತ್ತು. ಹೀಗಾಗಿ ಜಿಲ್ಲೆಗಳಲ್ಲಿ ಪರೀಕ್ಷಾ ದಿನಾಂಕವೂ ಬೇರೆ ಬೇರೆ ಆಗುತ್ತಿತ್ತು.

Published by:Kavya V
First published: