ಯಾವುದೇ ಆತಂಕವಿಲ್ಲ, ರಾಜೀನಾಮೆ ನೀಡಲ್ಲ ಎಂದ ಬಿಜೆಪಿ ವಲಸಿಗ ನಾಯಕರು

ನಾವು ರಾಜೀನಾಮೆ ನೀಡುವ ಪ್ರಸಂಗ ಇಲ್ಲ. ಸಿಎಂ ಸ್ಥಾನ ಬದಲಾಗುವುದರಿಂದ ತಮಗೆ ಯಾವುದೇ ಆತಂಕವಿಲ್ಲ. ನಾವು ರಾಜೀನಾಮೆ ನೀಡಲು ಹೋಗಿಲ್ಲ

ನಾವು ರಾಜೀನಾಮೆ ನೀಡುವ ಪ್ರಸಂಗ ಇಲ್ಲ. ಸಿಎಂ ಸ್ಥಾನ ಬದಲಾಗುವುದರಿಂದ ತಮಗೆ ಯಾವುದೇ ಆತಂಕವಿಲ್ಲ. ನಾವು ರಾಜೀನಾಮೆ ನೀಡಲು ಹೋಗಿಲ್ಲ

ನಾವು ರಾಜೀನಾಮೆ ನೀಡುವ ಪ್ರಸಂಗ ಇಲ್ಲ. ಸಿಎಂ ಸ್ಥಾನ ಬದಲಾಗುವುದರಿಂದ ತಮಗೆ ಯಾವುದೇ ಆತಂಕವಿಲ್ಲ. ನಾವು ರಾಜೀನಾಮೆ ನೀಡಲು ಹೋಗಿಲ್ಲ

 • Share this:
  ಬೆಂಗಳೂರು (ಜು. 22): ಬಿಎಸ್​ ಯಡಿಯೂರಪ್ಪ ನಾಯಕತ್ವ ಬದಲಾವಣೆ ಬೆನ್ನಲ್ಲೇ ಮೈತ್ರಿ ಸರ್ಕಾರ ಬೀಳಿಸಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾದ ವಲಸಿಗರು ಕೂಡ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿತ್ತು. ಇದಕ್ಕೆ ಪೂರಕ ಎನ್ನುವಂತೆ ಸಚಿವ ಸಂಪುಟ ಸಭೆ ಬೆನ್ನಲ್ಲೇ ವಲಸಿಗ ನಾಯಕರಾರ ಶಿವರಾಮ್​ ಹೆಬ್ಬಾರ್​, ಡಾ.ಕೆ.ಸುಧಾಕರ್, ಬಿ.ಸಿ. ಪಾಟೀಲ್, ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜ್ ಸಿಎಂ ಅವರ ಭೇಟಿಯಾಗಲು ಮುಂದಾಗಿದ್ದರು. ಬಿಎಸ್​ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿದರೆ ಪಕ್ಷದಲ್ಲಿ ತಮ್ಮ ಮುಂದಿನ ಸ್ಥಿತಿ ಏನಾಗಲಿದೆ ಎಂಬ ಲೆಕ್ಕಾಚಾರದಲ್ಲಿ ವಲಸಿಗ ನಾಯಕರು ತೊಡಗಿದ್ದಾರೆ. ಇದೇ ಹಿನ್ನಲೆ ವಲಸಿಗ ಬಿಜೆಪಿ ನಾಯಕರು ಕೂಡ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿತ್ತು. ಈ ಎಲ್ಲಾ ಕುರಿತು ವಲಸಿಗ ನಾಯಕರು ಸ್ಪಷ್ಟನೆ ನೀಡಿದ್ದು, ತಾವು ರಾಜೀನಾಮೆ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.

  ಈ ಕುರಿತು ಮಾತನಾಡಿದ ಸಚಿವ ಡಾ. ಕೆ ಸುಧಾಕರ್​, ನಾವು ರಾಜೀನಾಮೆ ನೀಡುವ ಪ್ರಸಂಗ ಇಲ್ಲ. ಸಿಎಂ ಸ್ಥಾನ ಬದಲಾಗುವುದರಿಂದ ತಮಗೆ ಯಾವುದೇ ಆತಂಕವಿಲ್ಲ. ನಾವು ರಾಜೀನಾಮೆ ನೀಡಲು ಹೋಗಿಲ್ಲ. ಕೆಲ ಇಲಾಖೆಗಳ ಕೆಲಸ ಸಂಬಂಧ ಚರ್ಚೆ ಮಾಡಲು ಹೋಗಿದ್ದೇವು. ನಾವು ಬಿಜೆಪಿ ತತ್ವ ಸಿದ್ದಾಂತ ಒಪ್ಪಿ ಬಂದಿದ್ದೇವೆ. ಶಾಸಕರಾಗಿ ಸಚಿವರಾಗಿ‌ ಕೆಲಸ ಮಾಡುತ್ತಿದ್ದೇವೆ. ಹೈಕಮಾಂಡ್ ಸೂಚನೆಯನ್ನು ನಾವು ಪಾಲಿಸುತ್ತೇವೆ ಎಂದಿದ್ದಾರೆ.

  ಇದೇ ವೇಳೆ ಸಿಎಂ ಸ್ಥಾನಕ್ಕೆ ಬಿಎಸ್​ ವೈ ರಾಜೀನಾಮೆ ನೀಡುವ ಕುರಿತು ಕೇಳಿದೆ. ಅವರು ಹೈ ಕಮಾಂಡ್​ ಸೂಚನೆ ಪಾಲಿಸುವುದಾಗಿ ಹೇಳಿದ್ದಾರೆ ಎಂದರು.

  ಮತ್ತೊಬ್ಬ ಸಚಿವ ಎಂಟಿಬಿ ನಾಗರಾಜ್​ ಮಾತನಾಡಿ, ಯಾವುದೇ ರಾಜೀನಾಮೆ‌ ನೀಡಲು ಹೋಗಿಲ್ಲ. ಸಿಎಂ ಬಳಿ ವರ್ಗಾವಣೆ, ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿದ್ದೇವೆ. ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಹೈ ಕಮಾಂಡ್ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ. ಹೈ ಕಮಾಂಡ್ ಕೇಳಿದರೆ ನಾವೂ ರಾಜೀನಾಮೆ ಕೊಡುತ್ತೇವೆ. ಹೈ ಕಮಾಂಡ್ ಗಿಂತ ನಾವು ದೊಡ್ಡವರಲ್ಲ ಎಂದು ಸ್ಪಷ್ಟಪಡಿಸಿದರು.

  ಇದನ್ನು ಓದಿ: ಹೈ ಕಮಾಂಡ್ ನಿರ್ಧಾರಕ್ಕಾಗಿ ಕಾಯುತ್ತಿರುವ ನಡುವೆಯೇ ನಾಳೆ ಸಿಎಂ ಸಿಟಿ ರೌಂಡ್ಸ್​

  ತಮಗೆ ಸರ್ಕಾರ ರಚನೆ ಮಾಡುವಲ್ಲಿ ಸಹಾಯ ಮಾಡಿದ ವಿಶೇಷ ಕಾಳಜಿ ವಲಸಿಗ ಬಿಜೆಪಿ ನಾಯಕರ ಮೇಲೆ ಸಿಎಂ ಬಿಎಸ್​ ಯಡಿಯೂರಪ್ಪಗೆ ಇದೆ. ಇದೇ ಕಾರಣದಿಂದ ಪಕ್ಷದಲ್ಲಿ ವಲಸಿಗ ನಾಯರ ವಿರುದ್ಧ ಮೂಲ ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಿದಾಗಲೂ ಸಿಎಂ ಅವರ ಪರ ನಿಂತು, ಅವರಿಗೆ ಸಚಿವ ಸ್ಥಾನ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಈಗ ತಮ್ಮ ಪರ ನಿಂತಿದ್ದ ಯಡಿಯೂರಪ್ಪ ಅವರೇ ಸಿಎಂ ಸ್ಥಾನದಿಂದ ಕಳೆಗಿಳಿದರೆ, ತಮ್ಮ ಸ್ಥಾನ ಉಳಿಯದೆಯಾ ಎಂಬ ಅನುಮಾನ ವಲಸಿಗ ಬಿಜೆಪಿ ನಾಯಕರಲ್ಲಿದೆ. ಇದೇ ಕಾರಣದಿಂದ ಅವರಲ್ಲಿ ಆತಂಕ ಹೆಚ್ಚಿದೆ ಎಂಬ ಮಾತುಗಳು ಕೂಡ ಕೇಳಿ ಬಂದಿವೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
  Published by:Seema R
  First published: