MLA Son Accident: ಶಾಸಕರ ಪುತ್ರನ ಅಪಘಾತದಲ್ಲಿ ಡೆಲಿವರಿ ಬಾಯ್, ಪೊಲೀಸ್ ಸ್ವಲ್ಪದರಲ್ಲಿ ಬಚಾವ್!

Koramanagala Accident: ಅಪಘಾತಕ್ಕೂ ಮುನ್ನ ಸೋನಿ ವರ್ಲ್ಡ್ ಸಿಗ್ನಲ್ ಬಳಿ ವೇಗದ ಚಾಲನೆ ಮಾಡುತ್ತಿದ್ದ ಶಾಸಕನ ಪುತ್ರನ ಗ್ಯಾಂಗ್​​ನಿಂದ   ಜೊಮ್ಯಾಟೊ ಡೆಲಿವರಿ‌ ಬಾಯ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದ. ಎನ್ ಜಿವಿ ಸಿಗ್ನಲ್ ಬಳಿ ಕಾರನ್ನು ತಡೆಯಲು ಹೋದ ಪೊಲೀಸರ ಮೇಲೆ ಕಾರು ಹತ್ತಿಸಲು ಮುಂದಾಗಿತ್ತು.

ಅಪಘಾತದಲ್ಲಿ ಶಾಸಕರ ಪುತ್ರನ ಸಾವು

ಅಪಘಾತದಲ್ಲಿ ಶಾಸಕರ ಪುತ್ರನ ಸಾವು

  • Share this:
 ಬೆಂಗಳೂರು:  ರಾಜಧಾನಿಯಲ್ಲಿ ನಿನ್ನೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಡಿಎಂಕೆ ಶಾಸಕ ಪುತ್ರ ಸೇರಿದಂತೆ ಏಳು ಮಂದಿ ಸಾವು ಪ್ರಕರಣ ಸಂಬಂಧ ಆಡುಗೋಡಿ ಸಂಚಾರ ಫೊಲೀಸರ ಜೊತೆಗೆ ಕಾನೂನು ಸುವ್ಯವಸ್ಥೆ ಪೊಲೀಸರು ತನಿಖೆಗೆ ಇಳಿದಿದ್ದಾರೆ. ಅಪಘಾತ ನಡೆಯುವ ಮುನ್ನ ಮೃತರು ಎಲ್ಲೆಲ್ಲಿ ಸುತ್ತಾಡಿದ್ದರು ? ಎಲ್ಲಿ ಪಾರ್ಟಿ ಮಾಡಿದ್ದರು ಎಂಬುದರ ಬಗ್ಗೆ ಕೋರಮಂಗಲ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಮತ್ತೊಂದೆಡೆ ಅವಘಡ ಸಂಭವಿಸುವ ಮುನ್ನ ಗಸ್ತು ಪೊಲೀಸರು ಹಾಗೂ ಡೆಲಿವರಿ ಬಾಯ್ ಅಪಾಯದಿಂದ ಪಾರಾಗಿರುವುದು ತಿಳಿದುಬಂದಿದೆ.

ಡಿಲಿವರಿ ಬಾಯ್, ಪೊಲೀಸ್ ಸ್ವಲ್ಪದರಲ್ಲಿ ಬಚಾವ್!

ಘಟನೆ ನಡೆಯುವ ಮುನ್ನ ಸೋನಿ ವರ್ಲ್ಡ್ ಸಿಗ್ನಲ್ ಬಳಿ ವೇಗದ ಚಾಲನೆ ಮಾಡುತ್ತಿದ್ದ ಶಾಸಕನ ಪುತ್ರನ ಗ್ಯಾಂಗ್​​ನಿಂದ   ಜೊಮ್ಯಾಟೊ ಡೆಲಿವರಿ‌ ಬಾಯ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದ. ಎನ್ ಜಿವಿ ಸಿಗ್ನಲ್ ಬಳಿ ಕಾರನ್ನು ತಡೆಯಲು ಹೋದ ಪೊಲೀಸರ ಮೇಲೆ ಕಾರು ಹತ್ತಿಸಲು ಮುಂದಾಗಿತ್ತು. ಜಿಗ್ ಜ್ಯಾಗ್ ರೀತಿಯಲ್ಲಿ ಯುವಕರ ಗುಂಪು ಕಾರು ಚಾಲನೆ ಮಾಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೂ ಮುನ್ನ ಕೋರಮಂಗಲದಲ್ಲೇ ಸುಮಾರು ಒಂದು ಗಂಟೆ ಕಾಲ ಜಾಲಿ ರೈಡ್ ಸೋಗಿನಲ್ಲಿ ಕಾರಿನಲ್ಲಿ ಸುತ್ತಾಡಿದ್ದಾರೆ. ಕೋರಮಂಗಲ ಚೆಕ್‌ಪೋಸ್ಟ್ ಬಳಿಯೂ ಪೊಲೀಸರು ತಡೆದು ಎಚ್ಚರಿಕೆ ನೀಡಿದರೂ ಅರಿತುಕೊಳ್ಳದೆ ಎನ್ ಜಿವಿ ಸಿಗ್ನಲ್ ಬಳಿ ಗಸ್ತಿನಲ್ಲಿದ್ದ ಪೊಲೀಸರ ಮೇಲೆ ಕಾರು ಹಾರಿಸಲು ಯತ್ನಿಸಿದ್ದಾರೆ. ಅದೃಷ್ಟವಶಾತ್ ಕಾರಿನ ವೇಗ ನೋಡಿ ಸ್ಥಳದಿಂದ ತಪ್ಪಿಸಿಕೊಂಡಿದ್ದೇವು ಎಂದು ಪೊಲೀಸರೊಬ್ಬರು ತಿಳಿಸಿದ್ದಾರೆ‌.

ಇದನ್ನೂ ಓದಿ: Koramanagala Accident: ಏಳು ಮಂದಿ ಸಾವಿಗೆ ಕಾರಣವಾಯ್ತಾ ಒಂದು ನೀರಿನ ಬಾಟಲ್? ಕೋರಮಂಗಲ ಅಪಘಾತ ಪ್ರಕರಣದಲ್ಲೊಂದು ಅನುಮಾನ

ಇನ್ನೊಂದೆಡೆ ಅವಘಡ ಸಂಭವಿಸುವ ಮುನ್ನ ಏಳು ಮಂದಿ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂಬ ಶಂಕೆ ಮೇರೆಗೆ ಕೋರಮಂಗಲದಲ್ಲಿರುವ ಎಲ್ಲಾ ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಪಬ್ ಗಳಿಗೆ ಹೋಗಿ ಪೊಲೀಸರು ಪರಿಶೀಲನೆ ಮಾಡಿದ್ದಾರೆ ಈ ಭಾಗದಲ್ಲಿ ಎಲ್ಲಿಯೂ ಪಾರ್ಟಿ ಮಾಡದಿರುವ ಬಗ್ಗೆ ಖಚಿತಪಡಿಸಿಕೊಂಡಿದ್ದಾರೆ. ಎಂಜಿ ರೋಡ್, ಬಿಗ್ರೇಡ್ ಸುತ್ತಮುತ್ತಲೂ ಪಾರ್ಟಿ ಮಾಡಿರುವ  ಅನುಮಾನ ಹಿನ್ನೆಲೆಯಲ್ಲಿ ಅಲ್ಲಿರುವ ಪಬ್, ಬಾರ್ ಅಂಡ್ ರೆಸ್ಟೋರೆಂಟ್ ಬಳಿ ಹೋಗಿ ಪೊಲೀಸರು ಸಿಸಿ ಕ್ಯಾಮರಾ ಪರಿಶೀಲಿಸುತ್ತಿದ್ದಾರೆ.

ಅಪಘಾತ ಆಗಿರುವ ಕಾರಿನಲ್ಲಿ ಬರೀ 3 ಮೊಬೈಲ್  ಪೋನ್ ಗಳು ಪತ್ತೆಯಾಗಿವೆ. ಇನ್ನೂ ಮೂರು ಮೊಬೈಲ್ ಪೋನ್ ಗಳು ಡಿಸ್ ಪ್ಲೇ ಒಡೆದು ಹೋಗಿದೆ‌. ಹೀಗಾಗಿ  ಮೊಬೈಲ್ ಕರೆ ಮಾಹಿತಿ ಆಧರಿಸಿ ಟವರ್ ಲೊಕೇಷನ್ ಮೂಲಕ ಪಾರ್ಟಿ ನಡೆದ ಸ್ಥಳ ಪತ್ತೆಗೆ ಪೊಲೀಸರ ಶೋಧ ನಡೆಸುತ್ತಿದ್ದಾರೆ.ಅಪಘಾತಕ್ಕೆ ಮದ್ಯ ಸೇವನೆ ಕಾರಣವಾಗಿರಬಹುದಾ ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದು ಈಗಾಗಲೇ ಮೃತರ ರಕ್ತದ ಮಾದರಿ ಸಂಗ್ರಹಿಸಿ ವೈದ್ಯಕೀಯ ಪರೀಕ್ಷೆ ಕಳುಹಿಸಲಾಗಿದ್ದು ಇಂದು ವೈದ್ಯಕೀಯ ವರದಿ ಬಂದ ಬಳಿಕ ಮದ್ಯಪಾನ ಮಾಡಿದ್ದರಾ ಇಲ್ವಾ ಎಂಬುವುದು ಗೊತ್ತಾಗಲಿದೆ‌. ಸದ್ಯ ನಾಳೆ ವರದಿ ಪೊಲೀಸರ ಕೈ ಸೇರಲಿದ್ದು ಡ್ರಗ್ಸ್ ಸೇವನೆ ಮಾಡಿದ್ರಾ ಅಥವಾ ಎಣ್ಣೆ ಸೇವನೆ ಮಾಡಿದ್ರಾ ಅನ್ನೋದು ಗೊತ್ತಾಗಲಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: