Chandru Murder Case: ಟ್ವಿಸ್ಟ್ ಮೇಲೆ ಟ್ವಿಸ್ಟ್, ದಿಢೀರ್ ಹೇಳಿಕೆ ಬದಲಿಸಿದ ಗೆಳೆಯ ಸೈಮನ್: ಪ್ರಕರಣ CIDಗೆ ವರ್ಗಾವಣೆ

ಎಫ್ಐಆರ್ ನಲ್ಲೂ ಬೈಕ್ ಟಚ್ ಆಗಿದ್ದಕ್ಕೆ ಗಲಾಟೆಯಾಗಿ ಚಾಕುವಿನಿಂದ ಇರಿದು ಕೊಲೆ ಎಂದು ಉಲ್ಲೇಖವಾಗಿದೆ. ಆದ್ರೆ ಇದೀಗ ಇದ್ದಕ್ಕಿದ್ದಂತೆ ನಿನ್ನೆ ಉರ್ದು (Urdu) ಮಾತಾಡ್ಲಿಲ್ಲ ಅಂತಾ ಕೊಲೆ ಮಾಡಿದ್ರು ಅಂತಾ ಸೈಮನ್ ರಾಜ್ ಆರೋಪಿಸಿದ್ದಾನೆ.

ಕೊಲೆಯಾದ ಚಂದ್ರು

ಕೊಲೆಯಾದ ಚಂದ್ರು

  • Share this:
ಜೆಜೆ ನಗರ ಚಂದ್ರು ಕೊಲೆ ಪ್ರಕರಣಕ್ಕೆ(JJ Nagara Chandru Murder Case) ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಚಂದ್ರು ಕೊಲೆ ಪ್ರಕರಣದಲ್ಲಿ ದೂರುದಾರನಾಗಿರುವ ಸ್ನೇಹಿತ ಸೈಮನ್ ರಾಜ್‌‌ ತನ್ನ ಹೇಳಿಕೆಯನ್ನು ಬದಲಿಸಿದ್ದಾರೆ. ಕೊಲೆ ನಡೆದ ಬೆಳಗ್ಗೆ ಜೆಜೆ ನಗರದ ಪೊಲೀಸ್ ಠಾಣೆಗೆ ಆಗಮಿಸಿದ್ದ ಸೈಮನ್ ರಾಜ್ ದೂರು (Complaint) ಸಲ್ಲಿಸಿ ವಿಡಿಯೋ ಹೇಳಿಕೆ ದಾಖಲಿಸಿದ್ದನು. ಈ ದೂರಿನಲ್ಲಿ ಬೈಕ್ ಟಚ್ (Bike Touch) ಆಗಿದ್ದಕ್ಕೆ ಚಂದ್ರು ಕೊಲೆ ನಡೆದಿದೆ ಎಂದು ಹೇಳಿದ್ದನು.ಇದೇ ಸೈಮನ್ ರಾಜ್ ದೂರಿನ ಮೇರೆಗೆ ಎಫ್ಐಆರ್ (FIR) ದಾಖಲಿಸಿಕೊಂಡಿದ್ದ ಪೊಲೀಸರು (police) ತನಿಖೆ ಆರಂಭಿಸಿದ್ದರು. ಎಫ್ಐಆರ್ ನಲ್ಲೂ ಬೈಕ್ ಟಚ್ ಆಗಿದ್ದಕ್ಕೆ ಗಲಾಟೆಯಾಗಿ ಚಾಕುವಿನಿಂದ ಇರಿದು ಕೊಲೆ ಎಂದು ಉಲ್ಲೇಖವಾಗಿದೆ. ಆದ್ರೆ ಇದೀಗ ಇದ್ದಕ್ಕಿದ್ದಂತೆ ನಿನ್ನೆ ಉರ್ದು (Urdu) ಮಾತಾಡ್ಲಿಲ್ಲ ಅಂತಾ ಕೊಲೆ ಮಾಡಿದ್ರು ಅಂತಾ ಸೈಮನ್ ರಾಜ್ ಆರೋಪಿಸಿದ್ದಾನೆ.

ಸೈಮನ್ ಹೇಳಿಕೆ ಬೆನ್ನಲ್ಲೇ ಕಮೀಷನರ್ ಕಮಲ್ ಪಂತ್ ವಿರುದ್ಧ ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ. ಈ ಸಂಬಂಧ ಶನಿವಾರ ಸಂಜೆ ಸಿಎಂ ಬೊಮ್ಮಾಯಿ ಅವರನ್ನು ಭೇಟಿಯಾಗಿ ಪ್ರಕರಣದ ವಾಸ್ತವವನ್ನು ವಿವರಿಸಿದ್ದರು. ಇದರ ಜೊತೆಗೆ ಸೈಮನ್ ನೀಡಿರುವ ವಿಡಿಯೋ ಹೇಳಿಕೆಯನ್ನು ಸಿಎಂಗೆ ತೋರಿಸಿರುವ ಮಾಹಿತಿ ಲಭ್ಯವಾಗಿದೆ.

ಕಮಿಷನರ್ ಜೊತೆಗಿನ ಚರ್ಚೆ ಬಳಿಲ ಸದ್ಯ ಪ್ರಕರಣದಲ್ಲಿ ಗೊಂದಲಬೇಡ ಅಂತಾ ಸಿಐಡಿಗೆ ಕೇಸ್ ವರ್ಗಾವಣೆ ಮಾಡಲು ಸಿಎಂ ಸೂಚನೆ ನೀಡಿದ್ದರು. ಕಮಿಷನರ್ ಮತ್ತು ಡಿಜಿಪಿ ಜೊತೆ ಚರ್ಚಿಸಿ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ.

ಇದನ್ನೂ ಓದಿ:  ಅರಗ ಜ್ಞಾನೇಂದ್ರ ಅಲ್ಲ, ಅರ್ಧ ಜ್ಞಾನಿ; ಕೋಮುವಾದ ಬಿತ್ತಲು ಬಿಜೆಪಿ ಪ್ರಯತ್ನ; Nalpad ವಾಗ್ದಾಳಿ

ಜೆಜೆ ನಗರ ಚಂದ್ರು ಹತ್ಯೆ ಪ್ರಕರಣ ವರ್ಗಾವಣೆ ಹಿನ್ನಲೆ ಮತ್ತೆ ಹೊಸದಾಗಿ ಸಿಐಡಿ ತನಿಖೆ ಆರಂಭಿಸಲಿದೆ.  ಸಿಐಡಿ ತನಿಖೆಗೆ ಹೇಗಿರುತ್ತೆ ಅಂತ ನೋಡೋದಾದ್ರೆ

*ಪ್ರಕರಣದ ಆರೋಪಿಗಳನ್ನ ಪುನಃ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತದೆ.

*ವಿಚಾರಣೆ ನಡೆಸಿ ಘಟನೆ ಬಗ್ಗೆ ಸಂಪೂರ್ಣ ಹೇಳಿಕೆ ಪಡೆದುಕೊಳ್ಳುತ್ತದೆ.

*ಘಟನಾ ಸ್ಥಳಕ್ಕೆ ಭೇಟಿ ನೀಡಿ ಕೂಲಂಕುಷವಾಗಿ ಪರಿಶೀಲನೆ

*ಬಳಿಕ ಘಟನಾ ಸ್ಥಳ ಹಾಗೂ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ.

*ಘಟನೆ ವೇಳೆ ಹಾಜರಿದ್ದ ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಪಡೆಯಲಿರೋ ಸಿಐಡಿ.

*ಘಟನೆ ನಡೆದ ರಸ್ತೆಯಲ್ಲಿದ್ದ ಹೋಟೆಲ್ ನವರಿಂದ ಮಾಹಿತಿ ಸಂಗ್ರಹ.

*ಬಳಿಕ ಮೃತ ಚಂದ್ರು ಜೊತೆಗಿದ್ದ ಸೈಮನ್ ರಾಜ್ ವಿಚಾರಣೆ.

ಪ್ರಕರಣದಲ್ಲಿ ಸೈಮನ್ ರಾಜ್ ದೂರುದಾರ ಸಹ ಆಗಿದ್ದಾನೆ. ಸೈಮನ್ ವಿಚಾರಣೆ ನಡೆಸಿ ಘಟನೆ ಬಗ್ಗೆ ಸಂಪೂರ್ಣ ಹೇಳಿಕೆ ಪಡೆದು ತನಿಖೆ ಆರಂಭಿಸಲಾಗುತ್ತದೆ. ಬಳಿಕ ಮೃತ ಚಂದ್ರು ಕುಟುಂಬದವರನ್ನ ಸಹ ವಿಚಾರಣೆ ನಡೆಸುವ ಸಾಧ್ಯತೆಗಳಿವೆ.

ಗೃಹ ಸಚಿವ ಆರಗ ಜ್ಞಾನೇಂದ್ರ ಮಾಧ್ಯಮ ಪ್ರಕಟಣೆ

ಬೆಂಗಳೂರು ನಗರದ, ಹಳೆಗುಡ್ಡದ ಹಳ್ಳಿ ಪ್ರದೇಶದಲ್ಲಿ ನಡೆದ, ಚಂದ್ರಶೇಖರ್ ಎಂಬ ಯುವಕನ ಬರ್ಬರ ಹತ್ಯೆ ಪ್ರಕರಣವನ್ನು, ರಾಜ್ಯ ಸರಕಾರ , ಸಿಐಡಿ ಗೆ ವಹಿಸಿ, ತನಿಖೆಗೆ, ಆದೇಶಿಸಲಾಗಿದೆ. ಈ ಕುರಿತು ನಿರ್ಧಾರ ತೆಗೆದುಕೊಂಡಿದ್ದು,  ಯುವಕನ ಹತ್ಯೆಗೆ ಸಂಬಂಧಿಸಿದಂತೆ, ಎಲ್ಲಾ ಆಯಾಮಗಳಿಂದ ತನಿಖೆ ನಡೆಸಿ, ಸತ್ಯವನ್ನು ಬಯಲಿಗೆ ಎಳೆಯಬೇಕು ಹಾಗೂ ಹಂತಕರನ್ನು ಶಿಕ್ಷೆಗೆ, ಒಳಪಡಿಸಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ಇದನ್ನೂ ಓದಿ;  ಶ್ರೀರಾಮ ಸೇನೆಯಿಂದ ಮುಸ್ಲಿಂ ವ್ಯಾಪಾರಿಗಳ ಕಲ್ಲಂಗಡಿ ನಾಶ: ಭಯೋತ್ಪಾದಕರಿಗೂ, ಈ ಕಿರಾತಕರಿಗೆ ವ್ಯತ್ಯಾಸವಿಲ್ಲ ಅಂದ್ರು HDK

ನಿಷ್ಪಕ್ಷಪಾತವಾಗಿ ತೆನಿಖೆಯಾಗಲಿ ಸತ್ಯ ಹೊರಗಡೆ ಬರಲಿ

ಯಾರ್ ವಾಗ್ದಾಳಿ ಮಾಡ್ತಾರೋ ಯಾರ್ ಹೇಳಿಕೆ ಕೊಡ್ತಾರೋ ಅದು ಮುಖ್ಯವಲ್ಲ. ಸತ್ಯ ಹೊರಗಡೆ ಬರಬೇಕು ಅಷ್ಟೇ. ಈ ಹಿನ್ನೆಲೆಯಲ್ಲಿ ನಿನ್ನೆ ನಾನು ಕಮಿಷನರ್ ಮತ್ತು ಡಿಜಿಯವರ ಬಳಿ ಮಾತನಾಡಿದ್ದೇನೆ. ಈ ಪ್ರಕರಣವನ್ನ ಸಿಐಡಿಗೆ ಕೊಡಬೇಕು ಎಂದು ತೀರ್ಮಾನ ಮಾಡಿದ್ದೇನೆ.. ನಿಷ್ಪಕ್ಷಪಾತವಾಗಿ ತೆನಿಖೆಯಾಗಲಿ ಸತ್ಯ ಹೊರಗಡೆ ಬರಲಿ. ಮೂರನೇ ಪಾರ್ಟಿಯಿಂದ ತೆನಿಖೆಯಾಗ್ಲಿ..ಸತ್ಯ ಹೊರಗಡೆ ಬರಲಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
Published by:Mahmadrafik K
First published: