Janata Jaladhare: 180 ವಿಧಾನಸಭಾ ಕ್ಷೇತ್ರಗಳ ಪ್ರವಾಸದ ಬಳಿಕ ಜನತಾ ಜಲಧಾರೆ ಯಾತ್ರೆಯ ಸಮಾರೋಪ

ಧರ್ಮ ದಂಗಲ್ ಹೆಸರಿನಲ್ಲಿ ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಅಶಾಂತಿ ಸೃಷ್ಟಿಸಲಾಗುತ್ತದೆ. ನಮ್ಮ ರಾಜ್ಯವನ್ನು ಉತ್ತರ ಪ್ರದೇಶ ಮತ್ತು ಗುಜರಾತವನ್ನಾಗಲು ಬಿಡಲ್ಲ ಎಂದು ಹೇಳಿದರು. ನೆಲಮಂಗಲದ ಮೈದಾನದಿಂದಲೇ 2023ರ ಚುನಾವಣೆ ಪ್ರಚಾರ ಆರಂಭಿಸಲಾಗುವುದು ಎಂದರು.

ಜನತಾ ಜಲಧಾರೆ

ಜನತಾ ಜಲಧಾರೆ

  • Share this:
ಮೇ 13ರಂದು ಬೆಂಗಳೂರು ಹೊರವಲಯದ ನೆಲಮಂಗಲ ಮೈದಾನದಲ್ಲಿ (Nelamamgala Ground) ಜೆಡಿಎಸ್ (JDS) ಪಕ್ಷದ ಜನತಾ ಜಲಧಾರೆ ಯಾತ್ರೆಯ (Janata Jaladhare Yatre) ಸಮಾರೋಪ ಸಮಾರಂಭ ನಡೆಯಲಿದೆ. ಈ ಹಿನ್ನೆಲೆ ಇವತ್ತು ಮೈದಾನಕ್ಕೆ ಭೇಟಿ ನೀಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (Former CM HD Kumaraswamy) ಕಾರ್ಯಕ್ರಮ ಸಿದ್ಧತೆಯನ್ನು ಪರಿಶೀಲನೆ ನಡೆಸಿದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ನೀರಾವರಿ ಯೋಜನೆಗಳ (Irrigation) ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಈ ಯಾತ್ರೆ ಆರಂಭವಾಗಿದೆ. ರಾಜ್ಯದ ಪ್ರಮುಖ ನದಿಗಳ ನೀರು ಸಂಗ್ರಹಿಸಿ, 180 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಲಾಗಿದೆ. ಬೆಂಗಳೂರಿನ (Bengaluru) ಜನತೆಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಹೊರವಲಯದಲ್ಲಿ ಸಮಾರೋಪ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಬೆಂಗಳೂರಿನಿಂದ ಹಾಸನ ಮತ್ತು ಶಿವಮೊಗ್ಗದತ್ತ ಪ್ರಯಾಣ ಬೆಳೆಸುವ ಪ್ರಯಾಣಿಕರಿಗೆ (Passengers) ತೊಂದರೆ ಉಂಟಾಗಬಹುದು. ಆದ್ದರಿಂದ ಸಮಾರೋಪದ ದಿನ ಪ್ರಯಾಣಿಕರು ಪರ್ಯಾಗ ಮಾರ್ಗ ಬಳಸಬೇಕು ಎಂದು ಕುಮಾರಸ್ವಾಮಿ ಅವರು ಜನರಲ್ಲಿ ಮನವಿ ಮಾಡಿಕೊಂಡರು.

ರಾಜ್ಯದಲ್ಲಿಯ ನೀರಿನ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿಲ್ಲ. ನೀರಾವರಿ ಯೋಜನೆ, ಕೆರೆಗಳ ಪುನಶ್ಚೇತನ ಕಾರ್ಯಕ್ಕೂ ಸರ್ಕಾರ ಮುಂದಾಗಿಲ್ಲ. ಕೇವಲ ಅರ್ಕಾವತಿ ನದಿ ಪುನಶ್ವೇತನ ಮಾಡೋದಾಗಿ ಹೇಳಿ ಮರೆತಿದ್ದಾರೆ. ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಈ ಎಲ್ಲ ಕಾರಣಗಳಿಂದ ಈ ಯಾತ್ರೆ ಆರಂಭವಾಗಿದೆ ಎಂದರು.

ಇದನ್ನೂ ಓದಿ:  JDS ಭದ್ರಕೋಟೆಯಲ್ಲಿ Operation Lotus; ಇತ್ತ BSY ಅಖಾಡದಲ್ಲಿ ಡಿಕೆಶಿ ಅಬ್ಬರ

ನೀರು ಬಳಕೆಯ ಸಂಕಲ್ಪ

ನಮ್ಮ ರಾಜ್ಯದಲ್ಲಿ ಯಾವುದೂ ಅಸಾಧ್ಯವಿಲ್ಲ. ಸಮಪರ್ಕವಾಗಿ ನದಿಯ ನೀರು ಬಳಕೆ ಮಾಡುವ ಕುರಿತು ಸಂಕಲ್ಪ ಮಾಡಬೇಕಿದೆ. ನಮ್ಮ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದ್ರೆ ಐದು ವರ್ಷದ ಆಡಳಿತಾವಧಿಯಲ್ಲಿ ಎಲ್ಲಾ ನದಿಯ ನೀರನ್ನು ಸಮರ್ಪಕವಾಗಿ ಬಳಕೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ವಿಶೇಷ ಗಂಗಾರತಿ

ಶುಕ್ರವಾರದ ಸಮಾರೋಪ ಕಾರ್ಯಕ್ರಮದಲ್ಲಿ ಗಂಗಾ ಆರತಿ ನಡೆಯಲಿದೆ. 20 ಜನರ ತಂಡ ವಾರಾಣಾಸಿಯಿಂದ ಬೆಂಗಳೂರಿಗೆ ಬರಲಿದ್ದಾರೆ. ರಾಜ್ಯದಲ್ಲಿಯ ನೀರನ್ನು ಸಮಪರ್ಕವಾಗಿ ಬಳಕೆ ಮಾಡಲು ಗಂಗಾ ತಾಯಿಯ ಆಶೀರ್ವಾದ ಅಗತ್ಯ. ಹಾಗಾಗಿ ಗಂಗಾರತಿ ನಡೆಯಲಿದೆ ಎಂದು ತಿಳಿಸಿದರು.

ಧರ್ಮ ದಂಗಲ್ ಹೆಸರಿನಲ್ಲಿ ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಅಶಾಂತಿ ಸೃಷ್ಟಿಸಲಾಗುತ್ತದೆ. ನಮ್ಮ ರಾಜ್ಯವನ್ನು ಉತ್ತರ ಪ್ರದೇಶ ಮತ್ತು ಗುಜರಾತವನ್ನಾಗಲು ಬಿಡಲ್ಲ ಎಂದು ಹೇಳಿದರು. ನೆಲಮಂಗಲದ ಮೈದಾನದಿಂದಲೇ 2023ರ ಚುನಾವಣೆ ಪ್ರಚಾರ ಆರಂಭಿಸಲಾಗುವುದು ಎಂದರು.

Janata jaladhare closing ceremony may 13 at nelamangala ground
ಜನತಾ ಜಲಧಾರೆ


51 ಸ್ಥಳಗಳಿಂದ ನದಿಯ ನೀರು ಸಂಗ್ರಹಣೆ

ಹಾಸನದಲ್ಲಿ ಜೆಡಿಎಸ್ ಸಂಸದೀಯ ಮಂಡಲಿ‌ ಅಧ್ಯಕ್ಷ & ಶಾಸಕ ಹೆಚ್.ಕೆ.ಕುಮಾರಸ್ವಾಮಿ ಮಾತನಾಡಿ, ಮೇ 13 ರ ಶುಕ್ರವಾರ ಬೆಂಗಳೂರಿನ‌ ನೆಲಮಂಗಲ ಬಳಿ ಜನತಾ ಜಲಧಾರೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ರಾಜ್ಯದ 51 ಸ್ಥಳಗಳಿಂದ ನದಿಯಿಂದ ನೀರನ್ನು ಸಂಗ್ರಹಿಸಲಾಗಿದೆ ಎಂದರು.

ಕಾರ್ಯಕ್ರಮಕ್ಕೆ 180 ವಿಧಾನಸಭಾ ಕ್ಷೇತ್ರದಿಂದ ಜನ ಆಗಮಿಸಲಿದ್ದಾರೆ. 6 ರಿಂದ 8 ಲಕ್ಷ ಜನ ಸೇರುವ ಸಾಧ್ಯತೆಯಿದೆ. ಹಾಸನ ಜಿಲ್ಲೆಯಿಂದ‌ 30 ಸಾವಿರ ಜನ ತೆರಳಿದ್ದಾರೆ.

ಮರಿತಿಬ್ಬೇಗೌಡ ಹೇಳಿಕೆಗೆ ಪ್ರತಿಕ್ರಿಯೆ

ಜೆಡಿಎಸ್‌ನಲ್ಲಿ ದುಡ್ಡು ಇದ್ದವರಿಗೆ ಟಿಕೆಟ್ ಕೊಡ್ತಾರೆ, ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್.ಕೆ.ಕುಮಾರಸ್ವಾಮಿ, ಮರಿತಿಬ್ಬೇಗೌಡರು ಜಯರಾಂ ಎಂಬುವವರಿಗೆ ಟಿಕೆಟ್ ‌ಕೇಳಿದ್ದರು. ಶ್ರೀಕಂಠೇಗೌಡರು, ನಾಲ್ಕು ಜಿಲ್ಲೆಗಳ ಸ್ಥಳೀಯ ಜನಪ್ರತಿನಿಧಿಗಳು ರಾಮು ಅವರನ್ನು ಸೂಚಿಸಿದ್ದರು. ರಾಮು ಅವರಿಗೆ ಟಿಕೆಟ್ ಕೊಟ್ಟಿದ್ದು ಮರಿತಿಬ್ಬೇಗೌಡರಿಗೆ ಇಷ್ಟ ಇರಲಿಲ್ಲ. ಹಾಗಾಗಿ ಅಸಮಾಧಾನ ಹೊರ ಹಾಕಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

ಇದನ್ನೂ ಓದಿ:  Karnataka Assembly Election: ಅವಧಿಗೂ ಮೊದಲೇ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ? ಆಯೋಗದಿಂದ ಪೂರ್ವ ಸಿದ್ಧತೆಯ ಪ್ಲಾನ್ !

ಇನ್ನೂ ಒಂದುವರೆ ವರ್ಷ ಅವರ ಅವಧಿ ಇದೆ. ಮರಿತಿಬ್ಬೇಗೌಡರ ಜೊತೆ ಕುಳಿತು ಮಾತನಾಡುತ್ತೇನೆ. ಮರಿತಿಬ್ಬೇಗೌಡ ಅವರು ಒಳ್ಳೆಯ ಎಂ.ಎಲ್.ಸಿ, ವೈಯುಕ್ತಿಕವಾಗಿ ಸ್ವಲ್ಪ ಬೇಸರವಾಗಿದೆ ಎಂದು ತಮ್ಮ ಅಸಮಧಾನ ಹೊರ ಹಾಕಿದರು.
Published by:Mahmadrafik K
First published: