HOME » NEWS » State » BENGALURU URBAN JAGADISH SHETTER EMERGENCY MEETING ON OXYGEN CRISIS IN KARNATAKA SESR

ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಆಕ್ಸಿಜನ್​ ಬಳಕೆಗೆ ಕೇಂದ್ರಕ್ಕೆ ಮನವಿ; ಜಗದೀಶ್ ಶೆಟ್ಟರ್​

ಈ ಕುರಿತು ಕೇಂದ್ರ ಸಚಿವ ಪಿಯೂಶ್​ ಗೊಯಲ್​ ಜೊತೆ ದೂರವಾಣಿ ಮೂಲಕ ಮಾತನಾಡಲಾಗಿದೆ. ಇಂದು ಸಂಜೆ ಕೇಂದ್ರದಿಂದ ಉತ್ತರ ಸಿಗುವ ಸಾಧ್ಯತೆ ಇದೆ

news18-kannada
Updated:May 5, 2021, 3:59 PM IST
ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಆಕ್ಸಿಜನ್​ ಬಳಕೆಗೆ ಕೇಂದ್ರಕ್ಕೆ ಮನವಿ; ಜಗದೀಶ್ ಶೆಟ್ಟರ್​
ಜಗದೀಶ್ ಶೆಟ್ಟರ್.
  • Share this:
ಬೆಂಗಳೂರು (ಮೇ. 5): ಚಾಮರಾಜನಗರ ಪ್ರಕರಣದ ಮೂಲಕ ರಾಜ್ಯದಲ್ಲಿ ಕೂಡ ಆಕ್ಸಿಜನ್ ಬಿಕ್ಕಟ್ಟು ಉಂಟಾಗಿದೆ ಎಂಬುದು ಬೆಳಕಿಗೆ ಬಂದಿದೆ. ಈ ಪ್ರಕರಣದ ಬೆನ್ನಲ್ಲೆ ನಿನ್ನೆ ವಿವಿಧೆಡೆ ಆಮ್ಲಜನಕರ ಸಮಸ್ಯೆಯಿಂದ 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ನಡುವೆ ಆಕ್ಸಿಜನ್​ ಸಮಸ್ಯೆ ಸೇರಿದಂತೆ ಕೋವಿಡ್​ ನಿರ್ವಹಣೆಗೆ ಸಿಎಂ ಸಚಿವರಿಗೆ ಉಸ್ತುವಾರಿ ವಹಿಸಿದ್ದು, ಈ ಬಗ್ಗೆ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸುವಂತೆ ಸೂಚಿಸಿದ್ದಾರೆ. ಈ ಬೆನ್ನಲ್ಲೆ ಇಂದು ಆಕ್ಸಿಜನ್​ ಸಮಸ್ಯೆ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಸಚಿವ ಜಗದೀಶ್​ ಶೆಟ್ಟರ್​ ಸಭೆ ನಡೆಸಿದ್ದು, ಈ ಕುರಿತು ಪರಿಶೀಲನೆ ನಡೆಸಿದರು. ಸಭೆ ಬಳಿಕ ಮಾತನಾಡಿರುವ ಅವರು ನಮ್ಮ ರಾಜ್ಯದಲ್ಲಿ ಆಕ್ಸಿಜನ್ ಉತ್ಪಾದನೆ ಆಗುತ್ತಿದೆ. ಅದರ ಬಳಕೆಗೆ ನಮಗೆ ಅವಕಾಶ ಮಾಡಿಕೊಡಿ ಎಂದು ಕೇಂದ್ರದ ಬಳಿ ಮನವಿ ಮಾಡಿಕೊಂಡಿದ್ದೇವೆ. ಈ ಕುರಿತು ಕೇಂದ್ರ ಸಚಿವ ಪಿಯೂಶ್​ ಗೊಯಲ್​ ಜೊತೆ ದೂರವಾಣಿ ಮೂಲಕ ಮಾತನಾಡಲಾಗಿದೆ. ಇಂದು ಸಂಜೆ ಕೇಂದ್ರದಿಂದ ಉತ್ತರ ಸಿಗುವ ಸಾಧ್ಯತೆ ಇದೆ ಎಂದರು.

ಆಕ್ಸಿಜನ್​ ಪೂರೈಕೆ ಸಮನ್ವಯತೆ ಜವಾಬ್ದಾರಿ ಹೊತ್ತಿರುವ ಬೆನ್ನಲ್ಲೆ ಈ  ಕುರಿತು ಇಂದು ಬೆಳಗ್ಗೆ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ಅವರು, ರಾಜ್ಯದಲ್ಲಿನ ಆಕ್ಸಿಜನ್​ ಬಿಕ್ಕಟ್ಟಿನ ಬಗ್ಗೆ ಚರ್ಚೆ ನಡೆಸಿದ್ದಾರೆ. ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಅವರು, ಇನ್ನು ಆಕ್ಸಿಜನ್ ಟ್ರಾನ್ಸ್‌ಪೋರ್ಟ್‌ ಸಮಸ್ಯೆ ವಿಚಾರ ಕುರಿತು ತಿಳಿಸಿದ ಅವರು, ಆಮ್ಲಜನಕವನ್ನು ಟ್ಯಾಂಕರ್‌ ಮೂಲಕ ಕಳಿಸುವ ಕೆಲಸ ಮಾಡುತ್ತಿದ್ದೇವೆ. ಪ್ರತಿ ದಿನ ಕೆಲಸ ಮಾಡಿ ಸಮಸ್ಯೆ ಸರಿಪಡಿಸಬೇಕು, ನಾಲ್ಕು ದಿನ ಎಂದು ಹೇಳಿದರೆ ಸಮಸ್ಯೆ ಬಗೆಹರಿಯಲ್ಲ. ಪ್ರಾಮಾಣಿಕ ಕೆಲಸ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನು ಓದಿ : ಚೀಪ್​ ಪಬ್ಲಿಸಿಟಿಗಾಗಿ ತೇಜಸ್ವಿ ಸೂರ್ಯಯಿಂದ ಬೆಡ್ ಬ್ಲಾಕಿಂಗ್​​ ದಂಧೆ ಪ್ರಹಸನ; ಕಾಂಗ್ರೆಸ್​ ವಾಗ್ದಾಳಿ

ದೇಶಕ್ಕೆ ಅರಬ್​​ನಿಂದ 80 ಮೆಟ್ರಿಕ್ ಟನ್ ಆಕ್ಸಿಜನ್ ಬರುಲಿದ್ದು, ಅದರಲ್ಲಿ ನಮ್ಮ ರಾಜ್ಯಕ್ಕೂ ಆಕ್ಸಿಜನ್ ಸಿಗಲಿದೆ. ಬೇರೆ ರಾಜ್ಯದಿಂದ ಬರಬೇಕಿರುವ ಆಕ್ಸಿಜನ್ ತರಲು ಟ್ರಾನ್ಸ್‌ಪೋರ್ಟ್‌ ಚಾರ್ಜ್ ಹೆಚ್ಚಳವಾಗಲಿದೆ. ಬೆಂಗಳೂರುನ ಹೊಸರು ಸೇರಿದಂತೆ ಹಲವು ಭಾಗದಿಂದ ತರಿಸಲಾಗುವುದು. ಮುಂದಿನ ದಿನಗಳಲ್ಲಿ 1,500 ಟನ್ ಆಕ್ಸಿಜನ್ ಲಭ್ಯವಾಗಲಿದೆ ಎಂದರು

ಇನ್ನು ಸಿಎಂ ಕೋವಿಡ್​ ಉಸ್ತುವಾರಿ ಜವಾಬ್ದಾರಿ ವಹಿಸಿದ ಬೆನ್ನಲ್ಲೇ ಎಲ್ಲಾ ಸಚಿವರು ಆಲರ್ಟ್​ ಆಗಿದ್ದಾರೆ. ಇಂದು ಬಿಬಿಎಂಪಿ ಅಧಿಕಾರಿಗಳ ಜೊತೆ ಅರವಿಂದ ಲಿಂಬಾವಳಿ ಸಭೆ ನಡೆಸಿದರು, ಈ ವೇಳೆ ವಾರ್​ ರೂಂ ಕಾರ್ಯಚಟುವಟಿಕೆ ಕುರಿತು ಚರ್ಚೆ ನಡೆಸಲಾಯಿತು. ವಾರ್​ ರೂಂಗೆ ಬರುವ ಬೆಡ್​, ಆಕ್ಸಿಜನ್​ನಂತಹ ಯಾವುದೇ ಸಮಸ್ಯೆಗಳ ಕುರಿತು ತಮಗೆ ಕರೆ ಮಾಡಿ ಮಾಹಿತಿ ನೀಡುವಂತೆ ತಿಳಿಸಿದರು. ಇನ್ನು ಈ ಸಭೆಯಲ್ಲಿ ಇಂಧನ ಸಚಿವ ಆರ್​ ಅಶೋಕ್, ಗೃಹ ಸಚಿವರಾದ ಬಸವಾರಜ್​ ಬೊಮ್ಮಯಿ ಕೂಡ ಹಾಜರಿದ್ದು, ಜಂಟಿಯಾಗಿ ಸಭೆ ನಡೆಸಿದರು.
Published by: Seema R
First published: May 5, 2021, 3:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories